Homeಕರ್ನಾಟಕಕಂಡಕ್ಟರ್ ಮೇಲೆ ಹಲ್ಲೆ ಪ್ರಕರಣ : ಮತ್ತೊಬ್ಬ ಆರೋಪಿಯ ಬಂಧನ ; ಬಸ್ ಸಂಚಾರ ಸ್ಥಗಿತ

ಕಂಡಕ್ಟರ್ ಮೇಲೆ ಹಲ್ಲೆ ಪ್ರಕರಣ : ಮತ್ತೊಬ್ಬ ಆರೋಪಿಯ ಬಂಧನ ; ಬಸ್ ಸಂಚಾರ ಸ್ಥಗಿತ

- Advertisement -
- Advertisement -

ಬೆಳಗಾವಿ ತಾಲೂಕಿನ ಸಣ್ಣ ಬಾಳೇಕುಂದ್ರಿ ಗ್ರಾಮದಲ್ಲಿ ಶುಕ್ರವಾರ (ಫೆ.21) ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ನಿರ್ವಾಹಕನ ಮೇಲೆ ಹಲ್ಲೆ ಪ್ರಕರಣ ಸಂಬಂಧ ಮತ್ತೊಬ್ಬ ಆರೋಪಿಯ ಬಂಧನವಾಗಿದೆ. ಈ ಮೂಲಕ ಬಂಧಿತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.

ಬಾಳೇಕುಂದ್ರಿಯ ಮೋಹನ ಹಂಚಿನಾಳ ಅವರನ್ನು ಮಾರಿಹಾಳ ಪೊಲೀಸರು ಭಾನುವಾರ (ಫೆ.23) ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಕರ್ನಾಟಕ-ಮಹಾರಾಷ್ಟ್ರ ನಡುವೆ ಭಾನುವಾರ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಸೋಮವಾರ (ಫೆ.24) ಕೂಡ ಬಸ್ ಸಂಚಾರ ಸ್ಥಗಿತ ಮುಂದುವರಿದಿದೆ ಎಂದು ವರದಿಯಾಗಿದೆ.

ಭಾನುವಾರ ಬಸ್ ಸಂಚಾರವಿಲ್ಲದ ಕಾರಣ ಪ್ರಯಾಣಿಕರು ಪರದಾಡಿದರು. ಬೆಳಗಾವಿಯಿಂದ ಕೊಲ್ಹಾಪುರ, ಸತಾರಾ, ಮುಂಬೈ ಮತ್ತಿತರ ಕಡೆ ತೆರಳುವವರು ಸಂಕಷ್ಟ ಅನುಭವಿಸಿದರು. ಎರಡೂ ರಾಜ್ಯಗಳ ಸಾರಿಗೆ ಸಂಸ್ಥೆ ಬಸ್‌ಗಳು ತಮ್ಮ ಗಡಿಯವರೆಗೆ ಮಾತ್ರ ಕಾರ್ಯಾಚರಣೆ ನಡೆಸಿದವು.

ಕರ್ನಾಟಕದ ಬಸ್‌ಗೆ ಮಸಿ ; ತೀವ್ರ ಆಕ್ರೋಶ

ಭಾಷಾ ಜಗಳದ ನಡುವೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವೋಲ್ವೋ ಬಸ್‌ಗೆ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಕಪ್ಪು ಮಸಿ ಬಳಿಯಲಾಗಿದೆ. ಬೆಳಗಾವಿಯಿಂದ ನಾಸಿಕ್‌ಗೆ ಹೋಗಿದ್ದ ಬಸ್‌ಗೆ ಮಸಿ ಬಳಿದು ‘ಮನಸೇ ಮರಾಠಿ ಹಾಗೂ ಜೈ ಮಹಾರಾಷ್ಟ್ರ’ ಎಂದು ಬರೆಯಲಾಗಿದೆ.

ಇದನ್ನು ತೀವ್ರವಾಗಿ ಖಂಡಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ಕಠಿಣ ಕ್ರಮಕ್ಕೆ ಆಗ್ರಹಿಸಿದೆ. ಹಲ್ಲೆಗೊಳಗಾಗಿರುವ ಕರ್ನಾಟಕದ ಬಸ್‌ ನಿರ್ವಾಹಕ ಹಾಗೂ ಚಾಲಕನ ಮೇಲೆ ದಾಖಲಿಸಲಾದ ಪೋಕ್ಸೋ ಪ್ರಕರಣ ಹಿಂಪಡೆಯಬೇಕು ಎಂದು ಆಗ್ರಹಿಸಿದೆ. ಅಲ್ಲದೆ, ಹಲ್ಲೆ ಮತ್ತು ಬಸ್‌ಗೆ ಮಸಿ ಬಳಿದ ಘಟನೆ ಖಂಡಿಸಿ ಫೆಬ್ರವರಿ 25ರಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಕಚೇರಿಗೆ ಮುತ್ತಿಗೆ ಹಾಕಿ, ಬಳಿಕ ಸಣ್ಣ ಬಾಳೇಕುಂದ್ರಿಯವರೆಗೆ ಮೆರವಣಿಗೆ ಮಾಡಿ ಪ್ರತಿಭಟಿಸುಲು ಮುಂದಾಗಿದೆ.

ರಾಮಲಿಂಗಾ ರೆಡ್ಡಿ ಭೇಟಿ ಸಾಧ್ಯತೆ

ಮುಧೋಳದಲ್ಲಿ ರನ್ನ ಉತ್ಸವದಲ್ಲಿ ಪಾಲ್ಗೊಳ್ಳಲು ತೆರಳುವ ಮಾರ್ಗ ಮಧ್ಯೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ಹಲ್ಲೆಗೊಳಗಾದ ನಿರ್ವಾಹಕನನ್ನು ಭೇಟಿಯಾಗಿ ಆರೋಗ್ಯ ವಿಚಾರಿಸುವ ಸಾಧ್ಯತೆ ಇದೆ. ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಈಗಾಗಲೇ ನಿರ್ವಾಹಕನನ್ನು ಭೇಟಿಯಾಗಿದ್ದಾರೆ ಎಂದು ವರದಿಯಾಗಿದೆ.

ಪ್ರಯಾಣಿಕನನ್ನು ಕಾಲಿನಿಂದ ಒದ್ದು ಕೆಳಗಿಳಿಸಿದ ಬಸ್ ಕಂಡಕ್ಟರ್! :‌ ವೈರಲ್‌ ವಿಡಿಯೋಗೆ ಸ್ಪಷ್ಟನೆ ನೀಡಿದ ಕೆಎಸ್‌ಆರ್‌ಟಿಸಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಧ್ಯಪ್ರಾಚ್ಯ ಸಂಘರ್ಷ| ಇರಾನ್ ಮೇಲಿನ ದಾಳಿಗೆ ಅಮೆರಿಕಾ ಭಾರತದ ಬಂದರುಗಳನ್ನು ಬಳಸುತ್ತಿದೆ ಎಂಬ ಹೇಳಿಕೆ ವೈರಲ್: ಭಾರತದ ಪ್ರತಿಕ್ರಿಯೆ ಏನು?

ಇರಾನ್ ಮೇಲೆ ನೌಕಾ ದಾಳಿ ನಡೆಸಲು ಅಮೆರಿಕ ಭಾರತದ ಬಂದರುಗಳನ್ನು ಬಳಸುತ್ತಿದೆ ಎಂಬ ವೈರಲ್ ಹೇಳಿಕೆಗಳನ್ನು ಭಾರತ ಬಲವಾಗಿ ತಿರಸ್ಕರಿಸಿದೆ. ಅಲ್ಲದೇ ಈ ಆರೋಪಗಳನ್ನು "ನಕಲಿ"  ಮತ್ತು “ಆಧಾರರಹಿತ” ಎಂದು ಕರೆದಿದೆ. ಬುಧವಾರ ವಿದೇಶಾಂಗ...

ಬಾಬಾ ಬುಡನ್‌ ಗಿರಿಯಲ್ಲಿ ಉರುಸ್ ನಡೆಸಲು ಅನುಮತಿ ನೀಡುವಂತೆ ‘ಪ್ರಗತಿಪರ ಸೌಹಾರ್ದ ಸಂಘಟನೆಗಳ’ ಆಗ್ರಹ

ಚಿಕ್ಕಮಗಳೂರಿನ ಬಾಬಾ ಬುಡನ್‌ ಗಿರಿಯಲ್ಲಿ ಉರುಸ್ ನಡೆಸಲು ಅನುಮತಿ ನೀಡುವಂತೆ ಆಗ್ರಹಿಸಿದ ಕರ್ನಾಟಕ ಸಮಸ್ತ ಪ್ರಗತಿಪರ ಸೌಹಾರ್ದ ಸಂಘಟನೆಗಳ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಬರೆದು ಆಗ್ರಹಿಸಿದ್ದಾರೆ. ಚಿಕ್ಕಮಗಳೂರಿನ ಬಾಬಾ ಬುಡನ್‌...

ಖಮೇನಿ ನಿಧನಕ್ಕೆ ತಡವಾಗಿ ಸಂತಾಪ ಸೂಚಿಸಿದ ಭಾರತ; ಇರಾನ್‌ ರಾಯಭಾರ ಕಚೇರಿಯಲ್ಲಿನ ಪುಸ್ತಕದಲ್ಲಿ ವಿಕ್ರಮ್ ಮಿಶ್ರಿ ಸಹಿ

ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ನಿಧನಕ್ಕೆ ಭಾರತ ತಡವಾಗಿ ಸಂತಾಪ ಸೂಚಿಸಿದೆ. ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಗುರುವಾರ ನವದೆಹಲಿಯ ಇರಾನಿನ ರಾಯಭಾರ ಕಚೇರಿಯಲ್ಲಿ ಸಂತಾಪ ಸೂಚಿಸುವ ಪುಸ್ತಕಕ್ಕೆ...

ಉಕ್ರೇನ್, ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ ತ್ವರಿತವಾಗಿ ಕೊನೆಗೊಳಿಸಲು ಬೆಂಬಲಿಸುತ್ತೇನೆ: ಫಿನ್ಲೆಂಡ್‌ನಲ್ಲಿ ಪ್ರಧಾನಿ ಮೋದಿ

ನವದೆಹಲಿ: ಪಶ್ಚಿಮ ಏಷ್ಯಾ ಮತ್ತು ಉಕ್ರೇನ್‌ನಲ್ಲಿನ ಸಂಘರ್ಷಗಳಿಗೆ "ತ್ವರಿತ ಅಂತ್ಯ" ವನ್ನು ತರಲು ಪ್ರಧಾನಿ ನರೇಂದ್ರ ಮೋದಿ ಗುರುವಾರ ಕರೆ ನೀಡಿದ್ದಾರೆ, ಯಾವುದೇ ಸಮಸ್ಯೆಯನ್ನು ಮಿಲಿಟರಿ ಮುಖಾಮುಖಿಯ ಮೂಲಕ ಪರಿಹರಿಸಲು ಸಾಧ್ಯವಿಲ್ಲ ಎಂದು...

ಮಹಾರಾಷ್ಟ್ರ| ಬಣ್ಣ ಎರಚಿದ ಮೊಮ್ಮಗನ ಮೇಲೆ ಬಿಸಿ ನೀರು ಸುರಿದ ಮಹಿಳೆ; ಬಾಲಕನ ಸ್ಥಿತಿ ಗಂಭೀರ

ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಕೊರಾಡಿ ಪ್ರದೇಶದಲ್ಲಿ ಹೋಲಿ ಆಡುತ್ತಿದ್ದಾಗ ನಾಲ್ಕು ವರ್ಷದ ಮೊಮ್ಮಗ ತನ್ನ ಮೇಲೆ ಬಣ್ಣ ಎರಚಿದ್ದರಿಂದ ಕೋಪಗೊಂಡ ಅಜ್ಜಿ ಮಗುವಿನ ಮೇಲೆ ಕುದಿಯುವ ನೀರನ್ನು ಸುರಿದಿರುವ ವಿಡಿಯೋ ಇದೀಗ ವೈರಲ್...

ಭಾರತದ ಕಾಲ ಬುಡದಲ್ಲಿ ಇರಾನ್ ನೌಕೆ ಮೇಲೆ ಅಮೆರಿಕ ದಾಳಿ : 100ರಷ್ಟು ಸಿಬ್ಬಂದಿ ಸಾವಿಗೀಡಾದರೂ ಮೋದಿ ಸರ್ಕಾರ ಮೌನ!

ಭಾರತದಿಂದ ಕೇವಲ 300 ಕಿಲೋ ಮೀಟರ್ ದೂರದಲ್ಲಿ ಇರಾನ್‌ನ ಅತ್ಯಾಧುನಿಕ ಯುದ್ಧನೌಕೆ 'ಐಆರ್‌ಐಎಸ್ ದೆನಾ' ಮೇಲೆ ಅಮೆರಿಕ ಜಲಾಂತರ್ಗಾಮಿ ಬುಧವಾರ (ಮಾ.4) ಭೀಕರ ದಾಳಿ ನಡೆಸಿದೆ. ಈ ಘಟನೆಯಲ್ಲಿ ಇರಾನ್‌ ನೌಕೆಯಲ್ಲಿದ್ದ 180 ಸಿಬ್ಬಂದಿಯ...

ಹಿಂದೂ ಮಹಾಸಾಗರದಲ್ಲಿ ಇರಾನ್ ನೌಕೆ ಮೇಲೆ ದಾಳಿ: ‘ರಾಜಿ ಮಾಡಿಕೊಂಡ ಪ್ರಧಾನಿ ಕಾರ್ಯತಂತ್ರದ ಸ್ವಾಯತ್ತತೆ ಬಿಟ್ಟುಕೊಟ್ಟರು: ರಾಹುಲ್ ಟೀಕೆ

ಹಿಂದೂ ಮಹಾಸಾಗರದಲ್ಲಿ ಇರಾನ್ ಯುದ್ಧನೌಕೆ ಐರಿಸ್ ದೇನಾದ ಮೇಲೆ ಅಮೆರಿಕಾ ದಾಳಿ ಮಾಡಿದ ಒಂದು ದಿನದ ನಂತರ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಾಗ್ದಾಳಿ...

ಟ್ರಂಪ್ ಬೆದರಿಕೆಗೆ ಹೆದರದ ಸ್ಪೇನ್ ಪ್ರಧಾನಿ; ಇರಾನ್ ಮೇಲಿನ ದಾಳಿಗೆ ಸೇನಾ ನೆಲೆ ಬಳಸಲು ಅನುಮತಿ ನಿರಾಕರಿಸಿದ ಪೆಡ್ರೊ ಸ್ಯಾಂಚೆಜ್

ಇರಾನ್ ಮೇಲೆ ದಾಳಿ ಮಾಡಲು ಅಮೆರಿಕದ ವಿಮಾನಗಳು ತನ್ನ ನೆಲೆಗಳನ್ನು ಬಳಸಲು ಅನುಮತಿಸಲು ಮ್ಯಾಡ್ರಿಡ್ ನಿರಾಕರಿಸಿದ್ದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿದ ಟೀಕೆಗಳಿಗೆ ಬುಧವಾರ ಸ್ಪ್ಯಾನಿಷ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ತಿರುಗೇಟು...

ಭಾರತದಿಂದ ಹಿಂದಿರುಗುತ್ತಿದ್ದ ಯುದ್ಧನೌಕೆ ಮೇಲೆ ಹಠಾತ್ ದಾಳಿ : ಅಮೆರಿಕ ಪಶ್ಚಾತ್ತಾಪ ಪಡಲಿದೆ ಎಂದ ಇರಾನ್

ಭಾರತೀಯ ನೌಕಾಪಡೆಯ ಆಹ್ವಾನದ ಮೇರೆಗೆ ಸಮರಾಭ್ಯಾಸದಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದ ಇರಾನ್‌ನ ಅತ್ಯಾಧುನಿಕ ಯುದ್ಧನೌಕೆ ಐಆರ್‌ಐಎಸ್ ದೆನಾ ಮೇಲೆ ಅಮೆರಿಕದ ಜಲಾಂತರ್ಗಾಮಿ ದಾಳಿ ನಡೆಸಿ ಅದನ್ನು ಮುಳುಗಿಸಿದೆ. ಮಾರ್ಚ್ 4ರಂದು ಶ್ರೀಲಂಕಾದ ದಕ್ಷಿಣ ಕರಾವಳಿಯಿಂದ ಸುಮಾರು 40 ನಾಟಿಕಲ್...

ದೆಹಲಿ| ಹೋಳಿ ಹಬ್ಬ ಸಡಗರದಲ್ಲಿ ಕುಡಿದು ವಾಹನ ಚಾಲನೆ; 1,200 ಕ್ಕೂ ಹೆಚ್ಚು ಜನರ ಮೇಲೆ ಪ್ರಕರಣ ದಾಖಲು

ಹೋಳಿ ಹಬ್ಬದಂದು ನಗರದಾದ್ಯಂತ ನಡೆಸಿದ ವಿಶೇಷ ಪರಿಶೀಲನೆಯಲ್ಲಿ ದೆಹಲಿ ಸಂಚಾರ ಪೊಲೀಸರು 1,200 ಕ್ಕೂ ಹೆಚ್ಚು ವಾಹನ ಚಾಲಕರ ವಿರುದ್ಧ ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ ಪ್ರಕರಣ ದಾಖಲಿಸಿದ್ದಾರೆ. ಪಶ್ಚಿಮ ವಲಯದಿಂದ ಅತಿ ಹೆಚ್ಚು...