ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸುತ್ತಿದೆ ಎಂದು ಹೇಳುತ್ತಿರುವ ಪ್ರಾದೇಶಿಕ ಪಕ್ಷಗಳಿಗಿಂತ ಭಿನ್ನವಾಗಿ ಆರ್‌ಜೆಡಿ ನಾಯಕ, ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು, “ವಿಪಕ್ಷಗಳ ಬಣದಲ್ಲಿ ಕಾಂಗ್ರೆಸ್ ಇನ್ನೂ ಅತೀ ದೊಡ್ಡ ಪಕ್ಷವಾಗಿದೆ” ಎಂದು ಪ್ರತಿಪಾದಿಸಿದ್ದಾರೆ. ಇತರ ಪಕ್ಷಗಳು ಕಾಂಗ್ರೆಸ್ ಪ್ರಸ್ತುತತೆಯನ್ನು ಪ್ರಯೋಗಿಕವಾಗಿ ಯೋಚಿಸಬೇಕು ಎಂದು ಅವರು ಹೇಳಿದ್ದಾರೆ.
ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ತೇಜಸ್ವಿ ಯಾದವ್, “2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ವಿರೋಧ ಪಕ್ಷಗಳ ನಡುವೆ ಒಗ್ಗಟ್ಟು ಮೂಡಿಸುವ ಪ್ರಯತ್ನಗಳ ಭಾಗವಾಗಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿದೇಶದಿಂದ ಹಿಂದಿರುಗಿದ ನಂತರ ಅವರನ್ನು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಭೇಟಿಯಾಗಲಿದ್ದಾರೆ” ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಬಿಜೆಪಿಯನ್ನು ಸೋಲಿಸುವುದು ವಿರೋಧ ಪಕ್ಷದ ನಾಯಕರ ಏಕೈಕ “ವೈಯಕ್ತಿಕ ಮಹತ್ವಾಕಾಂಕ್ಷೆ” ಆಗಿರಬೇಕು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ದೇಶದ ಎಲ್ಲಾ ಪ್ರಮುಖ ವಿಪಕ್ಷಗಳ ನಾಯಕರ ಭೇಟಿಯಾದ ಬಿಹಾರ ಸಿಎಂ ನಿತೀಶ್ ಕುಮಾರ್
“ಒಳ್ಳೆಯ ಆರಂಭವನ್ನು ಮಾಡಲಾಗಿದೆ. ಬಿಹಾರ ಉತ್ತಮ ಮಾದರಿಯನ್ನು ಒದಗಿಸಿದ್ದು, ಅದನ್ನು ಬೇರೆಡೆ ಪುನರಾವರ್ತಿಸಬೇಕು. ನಿತೀಶ್ ಅವರು ಅನೇಕ ನಾಯಕರನ್ನು ಭೇಟಿ ಮಾಡಿದ್ದಾರೆ, ಲಾಲೂ ಅವರು ಕೂಡ ಮಾತನಾಡಿದ್ದಾರೆ, ನಾನು ಕೂಡ ಭೇಟಿಯಾಗುತ್ತೇನೆ” ಎಂದು ತೇಜಸ್ವಿ ಹೇಳಿದ್ದಾರೆ.
“ಸೋನಿಯಾ ಗಾಂಧಿ ಹಿಂತಿರುಗಿದ ನಂತರ, ನಿತೀಶ್ ಮತ್ತು ಲಾಲೂ ಅವರು ಮುಂದಿನ ಮಾರ್ಗವನ್ನು ಚರ್ಚಿಸಲು ಅವರನ್ನು ಭೇಟಿ ಮಾಡುತ್ತಾರೆ. ಮುಂದಿನ ಲೋಕಸಭಾ ಚುನಾವಣೆಯ ಕುರಿತು ಸಂವಾದ ಕೊನೆಗೂ ಆರಂಭವಾಗಿದೆ. ಬಿಹಾರದ ಇತ್ತಿಚೆಗಿನ ಬೆಳವಣಿಗೆಗಳ ಮೊದಲು ಈ ವಿಚಾರ ಇರಲಿಲ್ಲ” ಎಂದು ಅವರು ಹೇಳಿದ್ದಾರೆ.
ಕಳೆದ ತಿಂಗಳು ಬಿಹಾರದಲ್ಲಿ ಬಿಜೆಪಿಯೊಂದಿಗಿನ ಜೆಡಿಯು ಮೈತ್ರಿಯನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ಕೊನೆಗೊಳಿಸಿದ್ದು, ಹೊಸ ಸಮ್ಮಿಶ್ರ ಸರ್ಕಾರಕ್ಕಾಗಿ ಆರ್‌ಜೆಡಿ, ಕಾಂಗ್ರೆಸ್ ಮತ್ತು ಎಡ ಪಕ್ಷಗಳೊಂದಿಗೆ ಕೈಜೋಡಿಸಿದ್ದಾರೆ. ಈ ಬೆಳವಣಿಗೆಯು ಪ್ರತಿಪಕ್ಷಗಲ್ಲಿ ‘ಭರವಸೆ’ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ರಾಷ್ಟ್ರವ್ಯಾಪಿ ಇದೆ ಭಾವನೆ ಮೂಡಿಸುವ ಮಂಥನವನ್ನು ಹುಟ್ಟುಹಾಕಿದೆ ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.
ಇದನ್ನೂ ಓದಿ: ಲಾಲು ಯಾದವ್ ಹಾಗೂ ರಾಹುಲ್ ಗಾಂಧಿ ಭೇಟಿ ಮಾಡಿದ ಬಿಹಾರ ಸಿಎಂ ನಿತೀಶ್ ಕುಮಾರ್
“ಈ ಬೆಳವಣಿಗೆ ಖಂಡಿತವಾಗಿಯೂ ವ್ಯತ್ಯಾಸವನ್ನುಂಟು ಮಾಡುತ್ತದೆ. ಜೆಡಿಯು ನಿರ್ಗಮನದ ನಂತರ ಬಿಜೆಪಿ ಬಲವು ಈಗಾಗಲೇ ಕುಸಿದಿದೆ. ಅಂಕಿ ಅಂಶದ ಪ್ರಕಾರ ಕಾಂಗ್ರೆಸ್, ಆರ್‌ಜೆಡಿ, ಜೆಡಿಯು, ಎಡಪಕ್ಷಗಳ ಒಟ್ಟು ಮತಗಳ ಪ್ರಮಾಣ 50% ಮೀರಿದೆ. ಬಿಹಾರದಲ್ಲಿ 40 ಸ್ಥಾನಗಳ ಪೈಕಿ 39 ಸ್ಥಾನಗಳಲ್ಲಿ ಗೆಲುವು ಸಾಧಿಸಿದ ಸಾಧನೆಯನ್ನು ಬಿಜೆಪಿ ಪುನರಾವರ್ತಿಸಲು ಸಾಧ್ಯವಿಲ್ಲ. ನಾವು ಕೈಜೋಡಿಸಿ ತಂತ್ರದೊಂದಿಗೆ ಹೋರಾಡಿದರೆ, ಬಿಜೆಪಿ ಖಂಡಿತವಾಗಿಯೂ ಅರ್ಧದಾರಿಯಲ್ಲೇ ನಿಲ್ಲುತ್ತದೆ” ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಅನ್ನು ಲೆಕ್ಕಾಚಾರದಿಂದ ಹೊರಗಿಡಲು ಸಾಧ್ಯವಿಲ್ಲ ಎಂದು ಹೇಳಿದ ಅವರು, “ಸಂಸತ್ತಿನಲ್ಲಿ ಅವರ ಸಂಖ್ಯೆ ನಮಗಿಂತ ಹೆಚ್ಚಿದೆ ಎಂಬ ನಿಜವನ್ನು ಒಪ್ಪದೆ ಇರಲು ಸಾಧ್ಯವಿಲ್ಲ. ಅಂತಿಮವಾಗಿ ಸಂಖ್ಯೆಗಳು ನಿರ್ಧಾರಕ ಅಂಶವಾಗಿರುತ್ತದೆ ಹೊರತು ಹೇಳಿಕೆಗಳಲ್ಲ. ಇತರ ಪಕ್ಷಗಳು ಹೆಚ್ಚಾಗಿ ತಮ್ಮ ಸ್ವಂತ ರಾಜ್ಯಗಳಿಗೆ ಸೀಮಿತವಾಗಿವೆ. ಆದ್ದರಿಂದ ಜನರು ಪ್ರಾಯೋಗಿಕವಾಗಿ ಯೋಚಿಸಬೇಕು ಮತ್ತು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಬಿಹಾರಕ್ಕೆ ಭೇಟಿ ನೀಡಿದ ತೆಲಂಗಾಣ ಸಿಎಂ ಕೆಸಿಆರ್: ‘ಬಿಜೆಪಿ ಮುಕ್ತ ಭಾರತ’ಕ್ಕೆ ಕರೆ
ಬಿಹಾರದ ಬದಲಾವಣೆಯ ನಂತರ ಬಿಜೆಪಿ ಬಿಸಿ ಅನುಭವಿಸುತ್ತಿದೆ ಎಂಬುದು ಅದರ ಸಾರ್ವಜನಿಕ ನಿಲುವುಗಳಲ್ಲಿಯೂ ಪ್ರತಿಫಲಿಸುತ್ತದೆ ಎಂದು ತೇಜಸ್ವಿ ಯಾದವ್ ಹೇಳಿದ್ದು, “ಬಿಹಾರದ ಬೆಳವಣಿಗೆ ಬಿಜೆಪಿಯನ್ನು ಅಭದ್ರಗೊಳಿಸಿದೆ. ತಮ್ಮ ಕಾರ್ಯಕರ್ತರ ನೈತಿಕತೆಯನ್ನು ಹೆಚ್ಚಿಸಲು, ಅವರು ಈಗ 350 ಸೀಟುಗಳ ಗುರಿಯ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದಾರೆ. ಅವರು ಸಮಾಜವಾದಿ ರಾಜಕೀಯವನ್ನು ನಾಶಮಾಡಲು ಬಯಸಿದ್ದರು” ಎಂದು ಅವರು ಹೇಳಿದ್ದಾರೆ.



Absolutely correct. Thejaswi is matured politician.