Homeಕರ್ನಾಟಕಬಿಜೆಪಿಯ ಕೊನೆಯ ದಿನಗಳು ಆರಂಭ, ಬೊಮ್ಮಾಯಿ ಧಮ್ ಇಳಿಯುತ್ತದೆ: ಡಿ.ಕೆ. ಶಿವಕುಮಾರ್‌

ಬಿಜೆಪಿಯ ಕೊನೆಯ ದಿನಗಳು ಆರಂಭ, ಬೊಮ್ಮಾಯಿ ಧಮ್ ಇಳಿಯುತ್ತದೆ: ಡಿ.ಕೆ. ಶಿವಕುಮಾರ್‌

- Advertisement -
- Advertisement -

ಮುಖ್ಯಮಂತ್ರಿ ಬೊಮ್ಮಾಯಿ ಅವರು ಧಮ್‌ ವಿಚಾರ ಮಾತನಾಡಿದ್ದಾರೆ. ನಾನು ಅವರಿಗೆ ಅದೇ ಧಮ್‌ ನಿಂದ ಹೇಳುತ್ತಿದ್ದೇನೆ; ಬಿಜೆಪಿಯ ಕೊನೆಯ ದಿನಗಳು ಆರಂಭವಾಗಿವೆ. ಅವರ ಧಮ್ ಇಳಿಯುತ್ತದೆ, ನಮ್ಮ ಧಮ್‌ ಏರುತ್ತದೆ ಎಂದು ರಾಜ್ಯ ಕಾಂಗ್ರೆಸ್‌‌ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಭಾನುವಾರ ಹೇಳಿದ್ದಾರೆ. ಅವರು ಬಳ್ಳಾರಿಯಲ್ಲಿ ನಡೆದ ʼಭಾರತ ಜೋಡೋ ಯಾತ್ರೆʼ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಮಾತನಾಡುತ್ತಿದ್ದರು.

“ಬಿಜೆಪಿಯವರು ಈ ದೇಶವನ್ನು ಕತ್ತರಿಸುವ ಕತ್ತರಿಯಾದರೆ, ಕಾಂಗ್ರೆಸ್ ಪಕ್ಷ ಈ ದೇಶವನ್ನು ಒಗ್ಗೂಡಿಸುವ ಸೂಜಿಯಂತೆ ಕೆಲಸ ಮಾಡಲಿದೆ. ಇದೇ ನಮಗೂ ಅವರಿಗೂ ಇರುವ ವ್ಯತ್ಯಾಸ” ಎಂದು ಅವರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಪ್ರತಿ ಕ್ಷೇತ್ರದಲ್ಲಿ 25000 ಜನರನ್ನು ಸೇರಿಸಿ

“ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3510 ಕಿ.ಮೀ. ಪಾದಯಾತ್ರೆ ಮಾಡುತ್ತಿರುವುದನ್ನು ಕಂಡು ಬಿಜೆಪಿ ಅವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಅವರು ರಾಜ್ಯದಲ್ಲಿ ಬೇರೆ ಮಾರ್ಗವಾಗಿ ಪಾದಯಾತ್ರೆ ಮಾಡಬಹುದಿತ್ತು. ಆದರೆ ನನ್ನ ತಾಯಿಗೆ ರಾಜಕೀಯವಾಗಿ ಜೀವ ಕೊಟ್ಟ ಬಳ್ಳಾರಿ ಕ್ಷೇತ್ರದಲ್ಲಿ ನಾನು ಪಾದಯಾತ್ರೆ ಮಾಡಬೇಕು ಎಂದು ಅವರು ತೀರ್ಮಾನಿಸಿದ್ದಾರೆ” ಎಂದು ಹೇಳಿದ್ದಾರೆ.

“ಬಳ್ಳಾರಿಯ ಪಾಲಿಕೆ ಸದಸ್ಯರು ಭಾರತ ಜೋಡೋ ಯಾತ್ರೆ ಕುರಿತು ಭಿತ್ತಿಪತ್ರಗಳನ್ನು ಮನೆ, ಮನೆಗೆ ತಲುಪಿಸಬೇಕು. ಪ್ರತಿ ಹಳ್ಳಿಯಲ್ಲಿ ಎಲ್ಲರೂ ಪ್ರವಾಸ ಮಾಡಿ ಈ ಕಾರ್ಯಕ್ರಮದ ಬಗ್ಗೆ ಪ್ರಚಾರ ಮಾಡಬೇಕು. ಈ ವಿಚಾರವಾಗಿ ಪಂಚಾಯತಿ ಮಟ್ಟದಲ್ಲಿ ಪೂರ್ವತಯಾರಿ ಸಭೆಗಳನ್ನು ನಡೆಸಬೇಕು. ಚುನಾವಣೆಯಲ್ಲಿ ಗೆದ್ದಿರುವವರು ಹಾಗೂ ಸೋತಿರುವವರು ನಾಯಕರಾಗಿ ಬೆಳೆದಿದ್ದೀರಿ. ಪ್ರತಿ ಕ್ಷೇತ್ರದಿಂದ 25 ಸಾವಿರ ಜನರನ್ನು ಪಾದಯಾತ್ರೆಗೆ ಕರೆತನ್ನಿ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ರಾಹುಲ್ ಗಾಂಧಿ ವಿದೇಶಿ ಟಿ-ಶರ್ಟ್ ಧರಿಸಿದ್ದಾರೆ: ಅಮಿತ್‌ ಶಾ

“ರಾಜ್ಯದ ರೈತರು ಹಾಗೂ ಕಾರ್ಮಿಕರ ಬದುಕನ್ನು ಹಸನು ಮಾಡಬೇಕಾಗಿದೆ. ರೈತರ ಬೆಳೆಗೆ ಬೆಂಬಲ ಬೆಲೆ ಸಿಗಬೇಕಿದೆ. ಹಾಲು ಉತ್ಪಾದಿಸುವ ರೈತರಿಗೂ ಸರಿಯಾದ ಬೆಲೆ ಸಿಗುತ್ತಿಲ್ಲ. ರೈತರು ಬಳಸುವ ರಸಗೊಬ್ಬರ, ಕೀಟನಾಶಕ, ಯಂತ್ರೋಪಕರಣಗಳ ಬೆಲೆ ಹೆಚ್ಚಾಗಿದೆ. ರಾಹುಲ್ ಗಾಂಧಿಯವರು ತಮಗೆ ಸಿಕ್ಕಿದ್ದ ಅಧಿಕಾರದ ಅವಕಾಶಗಳನ್ನು ತ್ಯಾಗ ಮಾಡಿ ಜನರಿಗಾಗಿ ಹೋರಾಟ ಮಾಡಲು ತೀರ್ಮಾನಿಸಿದ್ದಾರೆ” ಎಂದು ತಿಳಿಸಿದ್ದಾರೆ.

“ಯಾತ್ರೆಗೆ ಹಣ ಕೊಟ್ಟು ಜನ ಕರೆದುಕೊಂಡು ಬರೋದು ಬೇಡ. ಪ್ರೀತಿ, ವಿಶ್ವಾಸ, ಅಭಿಮಾನದಿಂದ ದೇಶವನ್ನು ಒಗ್ಗೂಡಿಸಲು ಆಸಕ್ತಿ ಇರುವವರು ಈ ಯಾತ್ರೆಗೆ ಆಗಮಿಸಲಿ. ಬಿಜೆಪಿಯವರು ನಾವು ಹಿಂದುಗಳು, ನಾವು ಮುಂದು ಎಂದು ಹೇಳುತ್ತಾರೆ. ಆದರೆ ನಾವು ಹಿಂದು, ಕ್ರೈಸ್ತರು, ಸಿಖ್ಖರು, ಪರಿಶಿಷ್ಟರು, ಬ್ರಾಹ್ಮಣರು, ವೀರಶೈವ ಲಿಂಗಾಯತರು, ಒಕ್ಕಲಿಗರು ಎಲ್ಲರೂ ಒಂದು ಎಂದು ಹೇಳುತ್ತೇವೆ” ಎಂದು ಅವರು ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...