ಉತ್ತರ ಪ್ರದೇಶದ ಅಯೋಧ್ಯೆಯ ನಿವಾಸಿಯೊಬ್ಬರು ರಾಜ್ಯದ ಭರತ್‌ಕುಂಡ್ ಬಳಿಯ ಪೂರ್ವಾ ಗ್ರಾಮದಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್ ಅವರಿಗಾಗಿ ದೇವಸ್ಥಾನವೊಂದನ್ನು ನಿರ್ಮಿಸಿದ್ದಾರೆ. ಆದಿತ್ಯನಾಥ್ ಅವರ ವಿಗ್ರಹವನ್ನು ರಾಜಸ್ಥಾನದಿಂದ ತರಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದ್ದು, ದೇವಾಲಯದ ನಿರ್ಮಾಣಕ್ಕೆ ಸುಮಾರು 8.5 ಲಕ್ಷ ವೆಚ್ಚವಾಗಿದೆ ಎಂದು ವರದಿಯಾಗಿದೆ.
ದೇವಾಲಯದಲ್ಲಿರುವ ಮುಖ್ಯಮಂತ್ರಿ ಆದಿತ್ಯನಾಥ್ ಅವರ ವಿಗ್ರಹವನ್ನು ರಾಮನ ಅವತಾರವಾಗಿ ಚಿತ್ರಿಸಲಾಗಿದೆ. ವಿಗ್ರಹಕ್ಕೆ ಬಿಲ್ಲು ಮತ್ತು ಬಾಣವನ್ನು ಕೂಡಾ ನೀಡಲಾಗಿದೆ. ಬೆಳಿಗ್ಗೆ ಮತ್ತು ಸಂಜೆ ಸೇರಿ ದಿನಕ್ಕೆ ಎರಡು ಬಾರಿ ವಿಶೇಷ ಪೂಜೆಗಳನ್ನು ನಡೆಸಲಾಗುತ್ತಿದೆ. ಇಷ್ಟೆ ಅಲ್ಲದೆ ದೇವಾಲಯದಲ್ಲಿ ಭಕ್ತರಿಗೆ ಪ್ರಸಾದವನ್ನು ಸಹ ವಿತರಿಸಲಾಗುತ್ತದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ದೇವಾಲಯ ಇರುವ ಭರತ್‌ಕುಂಡ್ ಪೌರಾಣಿಕ ಸ್ಥಳ ಎಂದು ನಂಬಲಾಗಿದೆ. ರಾಮಾಯಣ ಕತೆಗಳ ಪ್ರಕಾರ, ಶ್ರೀರಾಮನ ವನವಾಸ ಪ್ರಾರಂಭವಾಗುವ ಮೊದಲು ಅವನ ಸಹೋದರ ಭರತ ಕೊನೆಯ ಬಾರಿಗೆ ಭೇಟಿಯಾದ ಸ್ಥಳವಾಗಿದೆ ಎಂದು ಪ್ರತೀತಿಯಿದೆ.
ಇದನ್ನೂ ಓದಿ: ಬಿಜೆಪಿ ಸಂಸದೀಯ ಮಂಡಳಿ: ಬಿ.ಎಸ್.ಯಡಿಯೂರಪ್ಪ ಒಳಗೆ, ನಿತಿನ್ ಗಡ್ಕರಿ ಔಟ್; ಆದಿತ್ಯನಾಥ್‌ಗೆ ಸ್ಥಾನವಿಲ್ಲ!
ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುವ ವ್ಯಕ್ತಿಗೆ ದೇವಸ್ಥಾನ ನಿರ್ಮಿಸಿ ಪೂಜೆ ಸಲ್ಲಿಸುವುದಾಗಿ ದೇವಸ್ಥಾನ ನಿರ್ಮಿಸಿದ ಪ್ರಭಾಕರ್ ಮೌರ್ಯ 2015ರಲ್ಲಿ ವಾಗ್ದಾನ ಮಾಡಿದ್ದರು. ಹೀಗಾಗಿ ಅವರು ಮುಖ್ಯಮಂತ್ರಿಯ ದೇವಸ್ಥಾನ ನಿರ್ಮಿಸಿದ್ದಾರೆ. ಆದಿತ್ಯನಾಥ್ ಅವರ ವಿಗ್ರಹದ ಮುಂದೆ ಶ್ರೀರಾಮನಿಗೆ ಮಾಡುವಂತೆ ಪ್ರತಿದಿನ ಸ್ತೋತ್ರಗಳನ್ನು ಪಠಿಸುತ್ತೇನೆ ಎಂದು ಅವರು ಎಎನ್‌ಐಗೆ ತಿಳಿಸಿದರು.


