Homeಮುಖಪುಟಕೇಂದ್ರೀಯ ಸಂಸ್ಥೆಗಳ ಮಿತಿಮೀರಿದ ದಾಳಿಗಳ ಹಿಂದೆ ಪ್ರಧಾನಿಯ ಕೈವಾಡವಿದೆ ಎಂದು ನಂಬುವುದಿಲ್ಲ...: ಮಮತಾ ಬ್ಯಾನರ್ಜಿ

ಕೇಂದ್ರೀಯ ಸಂಸ್ಥೆಗಳ ಮಿತಿಮೀರಿದ ದಾಳಿಗಳ ಹಿಂದೆ ಪ್ರಧಾನಿಯ ಕೈವಾಡವಿದೆ ಎಂದು ನಂಬುವುದಿಲ್ಲ…: ಮಮತಾ ಬ್ಯಾನರ್ಜಿ

- Advertisement -
- Advertisement -

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯದಲ್ಲಿ ಕೇಂದ್ರೀಯ ಸಂಸ್ಥೆಗಳ ಮಿತಿಮೀರಿದ ದಾಳಿಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ಕೈವಾಡವಿದೆ ಎಂದು ನಂಬುವುದಿಲ್ಲ ಎಂದು ಹೇಳಿದ್ದು, ಬಿಜೆಪಿಯ ಕೆಲವು ನಾಯಕರು ತಮ್ಮ ಹಿತಾಸಕ್ತಿಗಳನ್ನು ಪೂರೈಸಲು ಅವುಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಕೇಂದ್ರೀಯ ತನಿಖಾ ಸಂಸ್ಥೆಗಳ ಮಿತಿಮೀರಿದ ದಾಳಿಗಳ ವಿರುದ್ಧ ವಿಧಾನಸಭೆಯ ನಿರ್ಣಯದ ಮೇಲೆ ಮಾತನಾಡುತ್ತಿದ್ದ ಮಮತಾ ಬ್ಯಾನರ್ಜಿ, “ಒಕ್ಕೂಟ ಸರ್ಕಾರದ ಅಜೆಂಡಾ ಮತ್ತು ಅವರ ಪಕ್ಷದ ಹಿತಾಸಕ್ತಿಗಳು ಮಿಶ್ರಣವಾಗದಂತೆ ನೋಡಿಕೊಳ್ಳಬೇಕು” ಎಂದು ಪ್ರಧಾನಿಯನ್ನು ಒತ್ತಾಯಿಸಿದ್ದಾರೆ. ಇದೇ ವೇಳೆ ವಿಧಾನಸಭೆಯಲ್ಲಿ ಅಂಗೀಕರಿಸಿದ ನಿರ್ಣಯವನ್ನು ಬಿಜೆಪಿ ವಿರೋಧಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಈಗಿನ ಒಕ್ಕೂಟ ಸರಕಾರ ಸರ್ವಾಧಿಕಾರದ ರೀತಿಯಲ್ಲಿ ವರ್ತಿಸುತ್ತಿದೆ. ಈ ನಿರ್ಣಯವು ನಿರ್ದಿಷ್ಟವಾಗಿ ಯಾರ ವಿರುದ್ಧವೂ ಅಲ್ಲ. ಇದು ಕೇಂದ್ರೀಯ ಸಂಸ್ಥೆಗಳ ಪಕ್ಷಪಾತದ ಕಾರ್ಯನಿರ್ವಹಣೆಯ ವಿರುದ್ಧವಾಗಿದೆ” ಎಂದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥರೂ ಆಗಿರುವ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಇದನ್ನೂ ಓದಿ: ’ಬಿಜೆಪಿ ಮಾಡುವ ಪಾಪಗಳಿಗೆ ಜನರು ಏಕೆ ನರಳಬೇಕು?’: ಮಮತಾ ಬ್ಯಾನರ್ಜಿ ಆಕ್ರೋಶ

“ಸಿಬಿಐ ಮತ್ತು ಇಡಿ ವಿರುದ್ಧದ ಇಂತಹ ನಿರ್ಣಯ ವಿಧಾನಸಭೆಯ ನಿಯಮಗಳು ಮತ್ತು ನಿಬಂಧನೆಗಳಿಗೆ ವಿರುದ್ಧವಾಗಿದೆ” ಎಂದು ವಿರೋಧ ಪಕ್ಷದ ನಾಯಕ, ಬಿಜೆಪಿಯ ಸುವೇಂದು ಅಧಿಕಾರಿ ಹೇಳಿದ್ದಾರೆ.

ನಿರ್ಣಯದ ಪರವಾಗಿ 189 ಮತಗಳು ಬಂದರೆ ಮತ್ತು ವಿರುದ್ಧವಾಗಿ 69 ಮತಗಳು ದಾಖಲಾದವು. ಕೇಂದ್ರೀಯ ಸಂಸ್ಥೆಗಳಾದ ಸಿಬಿಐ ಮತ್ತು ಇಡಿ ರಾಜ್ಯದಲ್ಲಿನ ಹಲವು ಪ್ರಕರಣಗಳ ತನಿಖೆ ನಡೆಸುತ್ತಿದ್ದು, ಇದರಲ್ಲಿ ಹಿರಿಯ ಟಿಎಂಸಿ ನಾಯಕರು ಆರೋಪಿಗಳಾಗಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ವಿರುದ್ದ ಬ್ಲೂ ಕಾರ್ನರ್ ನೋಟಿಸ್: ಏನಿದು ರೆಡ್, ಬ್ಲೂ ಬಣ್ಣ ಆಧಾರಿತ...

0
ಹಾಸನದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ ಕರ್ನಾಟಕದಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣ ವಿರುದ್ಧ ಇಂಟರ್‌ಪೋಲ್ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿದೆ. ಪ್ರಜ್ವಲ್‌...