Homeಮುಖಪುಟ‘ಮತಾಂತರದ ತಂತ್ರ’ ಎಂದು ಆರೋಪಿಸಿ ಸಾಂತಕ್ಲಾಸ್‌ ಪ್ರತಿಕೃತಿ ದಹಿಸಿದ ಬಲಪಂಥೀಯರು!

‘ಮತಾಂತರದ ತಂತ್ರ’ ಎಂದು ಆರೋಪಿಸಿ ಸಾಂತಕ್ಲಾಸ್‌ ಪ್ರತಿಕೃತಿ ದಹಿಸಿದ ಬಲಪಂಥೀಯರು!

- Advertisement -
- Advertisement -

ಬಲಪಂಥೀಯ ಸಂಘಟನೆಗಳಾದ ಐಎಚ್‌ಪಿ ಮತ್ತು ರಾಷ್ಟ್ರೀಯ ಜಬರಂಗದಳದ ಕಾರ್ಯಕರ್ತರು ಸಾಂತ ಕ್ಲಾಸ್‌ನ ಪ್ರತಿಕೃತಿಗಳನ್ನು ಸುಟ್ಟ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ಶುಕ್ರವಾರ ನಡೆದಿದೆ. ಕ್ರಿಶ್ಚಿಯನ್ ಮಿಷನರಿಗಳು ಜನರನ್ನು ಮತಾಂತರಿಸುವ ತಂತ್ರದ ಭಾಗವಾಗಿ ಸಾಂತಾ ಕ್ಲಾಸ್‌‌‌ ಅನ್ನು ಬಳಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಕ್ರಿಸ್‌ಮಸ್ ಮುನ್ನಾದಿನದಂದು ಮಹಾತ್ಮ ಗಾಂಧಿ ಮಾರ್ಗದಲ್ಲಿರುವ ಸೇಂಟ್ ಜಾನ್ಸ್ ಕಾಲೇಜಿನ ಕ್ಯಾರಿಡಾರ್‌‌ ಬಳಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ:ಗುರ್ಗಾಂವ್‌ನಲ್ಲಿ ಕ್ರಿಸ್‌ಮಸ್ ಪ್ರಾರ್ಥನೆಗೆ ಅಡ್ಡಿ: ವೇದಿಕೆಗೆ ನುಗ್ಗಿ ದಾಂಧಲೆ

ಐಎಚ್‌ಪಿ ಮತ್ತು ರಾಷ್ಟ್ರೀಯ ಬಜರಂಗದಳದ ಸದಸ್ಯರು ಸಾಂತಕ್ಲಾಸ್ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಸಂತ ನಿಕೋಲಸ್ ಅವರ ಪ್ರತಿಕೃತಿಗಳನ್ನು ಹೊತ್ತು ಮೆರವಣಿಗೆ ನಡೆಸಿದ್ದಾರೆ. ಇದರ ನಂತರ ಅವರು “ಸಾಂತಕ್ಲಾಸ್ ಮುರ್ದಾಬಾದ್” ಎಂಬ ಘೋಷಣೆಗಳನ್ನು ಕೂಗಿ ಪ್ರತಿಕೃತಿಗಳನ್ನು ದಹಿಸಿದ್ದಾರೆ.

ಕ್ರಿಸ್‌ಮಸ್ ಸಮಯದಲ್ಲಿ ಸಾಂತ ಕ್ಲಾಸ್‌ ಅನ್ನು ಬಳಸಿಕೊಂಡು ತಂತ್ರಪೂರ್ವಕವಾಗಿ ಹಿಂದೂಗಳನ್ನು ಮತಾಂತರಿಸುವ ಕ್ರಿಶ್ಚಿಯನ್ ಸಮಾಜದ ಆಪಾದಿತ ಪ್ರಯತ್ನಗಳನ್ನು ಬಲವಾಗಿ ವಿರೋಧಿಸುತ್ತೇವೆ ಎಂದು ಬಲಪಂಥೀಯ ಕಾರ್ಯಕರ್ತರು ಹೇಳಿಕೆ ನೀಡಿದ್ದಾರೆ.

ಮಿಷನರಿ ಶಾಲೆಗಳು ವಿದ್ಯಾರ್ಥಿಗಳನ್ನು ಸಾಂತ ಕ್ಲಾಸ್‌ನಂತೆ ವೇಷಧರಿಸಿ ಬಲವಂತವಾಗಿ ಮತಾಂತರ ಮಾಡಲು ಪ್ರಯತ್ನಿಸುತ್ತಿವೆ ಎಂದು ಅಹಿಂಪ ಮತ್ತು ರಾಷ್ಟ್ರೀಯ ಬಜರಂಗದಳದ ಪ್ರಧಾನ ಕಾರ್ಯದರ್ಶಿ ಅಜ್ಜು ಚೌಹಾಣ್ ಆರೋಪಿಸಿದ್ದಾರೆ.

ಇದನ್ನೂ ಓದಿ:ಶಾಲೆಗೆ ನುಗ್ಗಿ ಕ್ರಿಸ್‌ಮಸ್ ಆಚರಿಸದಂತೆ ಬೆದರಿಸಿದ ಬಲಪಂಥೀಯರು

“ಸಾಂತ ಯಾವುದೇ ಉಡುಗೊರೆಗಳನ್ನು ಹೊತ್ತುಕೊಂಡು ಬರುವುದಿಲ್ಲ. ಹಿಂದೂಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತಿಸುವುದು ಅವನ ಏಕೈಕ ಗುರಿಯಾಗಿದೆ. ಇದು ಇನ್ನು ಮುಂದೆ ಕೆಲಸ ಮಾಡುವುದಿಲ್ಲ. ಯಾವುದೇ ಮತಾಂತರದ ಪ್ರಯತ್ನವನ್ನು ಯಶಸ್ವಿಯಾಗಲು ಬಿಡುವುದಿಲ್ಲ, ಇದನ್ನು ನಿಲ್ಲಿಸದಿದ್ದರೆ, ಮಿಷನರಿ ಶಾಲೆಗಳ ವಿರುದ್ದ ಆಂದೋಲನಗಳು ನಡೆಯುತ್ತವೆ” ಎಂದು ಅಜ್ಜು ಚೌಹಾಣ್ ಹೇಳಿದ್ದಾರೆ.

ರಾಷ್ಟ್ರೀಯ ಬಜರಂಗದಳದ ಅಧ್ಯಕ್ಷ ಅವತಾರ್ ಸಿಂಗ್ ಗಿಲ್ ಮಾತನಾಡಿ, “ಒಂದೆಡೆ ಕ್ರಿಶ್ಚಿಯನ್ ಮಿಷನರಿಗಳು ದೊಡ್ಡ ಶಾಲೆಗಳನ್ನು ನಡೆಸುತ್ತಾ, ಮತ್ತೊಂದೆಡೆ ಹಿಂದೂಗಳನ್ನು ಅವರು ಮತಾಂತರಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.

ಇದನ್ನು ತಡೆಯಲು ರಾಷ್ಟ್ರೀಯ ಬಜರಂಗ ದಳದಿಂದ ತಂಡಗಳನ್ನು ರಚಿಸಲಾಗುವುದು. ಈ ತಂಡಗಳು ಪ್ರದೇಶಗಳು ಮತ್ತು ಮೊಹಲ್ಲಾಗಳ ಮೇಲೆ ನಿಗಾ ಇಡುತ್ತವೆ. ಇದರಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವ ದುರುದ್ದೇಶಪೂರಿತ ಪ್ರಯತ್ನಗಳನ್ನು ವಿಫಲಗೊಳಿಸಲಾಗುತ್ತದೆ. ಯಾವುದೇ ಮಿಷನರಿ ಈ ರೀತಿ ಮಾಡುವುದು ಕಂಡುಬಂದರೆ, ಅಹಿಂಪ ಮತ್ತು ರಾಷ್ಟ್ರೀಯ ಬಜರಂಗದಳ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ’’ ಎಂದು ಅವತಾರ್ ಸಿಂಗ್ ಗಿಲ್ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ:ಯೇಸುವಿನ ಜೀವನ ಬೋಧನೆ ಸ್ಮರಿಸುತ್ತೇವೆ: ಪ್ರಧಾನಿ ಮೋದಿ ಟ್ವೀಟ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭೆ ಚುನಾವಣೆ 2024: ರಾಹುಲ್ ಗಾಂಧಿ ಸ್ಪರ್ಧೆಗೆ ಒತ್ತಾಯಿಸಿ ಅಮೇಠಿ ಕಾಂಗ್ರೆಸ್ ಕಾರ್ಯಕರ್ತರಿಂದ ಧರಣಿ

0
ಅಮೇಠಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಘೋಷಣೆಯಲ್ಲಿ ಅನಗತ್ಯ ವಿಳಂಬ ಮಾಡುತ್ತಿರುವುದನ್ನು ಪ್ರತಿಭಟಿಸಿ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಇಲ್ಲಿನ ಪಕ್ಷದ ಜಿಲ್ಲಾ ಸಮಿತಿ ಕಚೇರಿ ಎದುರು ಧರಣಿ ನಡೆಸಿ, ರಾಹುಲ್ ಗಾಂಧಿ ಅವರನ್ನು ಕಣಕ್ಕಿಳಿಸಬೇಕು...