Homeಕರೋನಾ ತಲ್ಲಣಕೊರೊನಾ 3ನೇ ಅಲೆಯ ಉತ್ತುಂಗ ಫೆಬ್ರವರಿಯಲ್ಲಿ: ಕೇಂದ್ರ ಸಮಿತಿ

ಕೊರೊನಾ 3ನೇ ಅಲೆಯ ಉತ್ತುಂಗ ಫೆಬ್ರವರಿಯಲ್ಲಿ: ಕೇಂದ್ರ ಸಮಿತಿ

- Advertisement -
- Advertisement -

ಕೊರೊನಾದ ಮೂರನೇ ಅಲೆಯು ಮುಂದಿನ ವರ್ಷದ ಫೆಬ್ರವರಿಯಲ್ಲಿ ಉತ್ತುಂಗಕ್ಕೇರುವ ನಿರೀಕ್ಷೆಯಿದೆ ಎಂದು ‘ರಾಷ್ಟ್ರೀಯ ಕೊವಿಡ್‌‌ 19 ಸೂಪರ್ ಮಾಡೆಲ್’ ಸಮಿತಿ ತಿಳಿಸಿದೆ. ಆದರೆ ಈ ಅಲೆಯು ಎರಡನೇ ಅಲೆಗಿಂತ ಸೌಮ್ಯವಾಗಿರುತ್ತದೆ ಎಂದು ಅದು ಉಲ್ಲೇಖಿಸಿದೆ.

ಭಾರತದಲ್ಲಿ ಪ್ರಸ್ತುತ ಡೆಲ್ಟಾ ರೂಪಾಂತರ ವೈರಸಿನ ಸುಮಾರು 7,500 ದೈನಂದಿನ ಸೋಂಕುಗಳಿವೆ. ಇದರ ಸ್ಥಳದಲ್ಲಿ ಒಮೈಕ್ರಾನ್ ರೂಪಾಂತರ ಬರುತ್ತಿದ್ದಂತೆ, ಕೊರೊನಾ ಸೋಂಕು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ರಾಷ್ಟ್ರೀಯ ಕೋವಿಡ್ -19 ಸೂಪರ್ ಮಾಡೆಲ್ ಸಮಿತಿಯ ಸದಸ್ಯರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಒಮೈಕ್ರಾನ್ ಆತಂಕ; ಲಭ್ಯವಿರುವ ಸಾಕ್ಷ್ಯಗಳಿಂದ ಸಾರ್ವಜನಿಕ ಆರೋಗ್ಯದ ಕಣ್ಣೋಟ

ಸಮಿತಿಯ ಮುಖ್ಯಸ್ಥ ವಿದ್ಯಾಸಾಗರ್, “ಭಾರತದಲ್ಲಿ ಒಮೈಕ್ರಾನ್‌ನ ಮೂರನೇ ಅಲೆ ಅಪ್ಪಳಿಸಲಿದೆ. ಆದರೆ ಈಗ ದೇಶದಲ್ಲಿ ದೊಡ್ಡ ಪ್ರಮಾಣದ ರೋಗನಿರೋಧಕ ಶಕ್ತಿ ಇರುವುದರಿಂದ ಇದು ಎರಡನೇ ತರಂಗಕ್ಕಿಂತ ಸೌಮ್ಯವಾಗಿರುತ್ತದೆ” ಎಂದು ಹೇಳಿದ್ದಾರೆ.

ಮೂರನೇ ಅಲೆಯು ದೇಶವನ್ನು ಅಪ್ಪಳಿಸಿದರೆ, ಉತ್ತುಂಗದ ಸಮಯದಲ್ಲೂ ದೇಶದಲ್ಲಿ ಪ್ರತಿದಿನ ಎರಡು ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುವುದಿಲ್ಲ ಎಂದು ಅವರು ಸಲಹೆ ನೀಡಿದ್ದಾರೆ. ದೇಶದಲ್ಲಿ ನಿಧಾನವಾಗಿ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಜನರು ಲಸಿಕೆ ಹಾಕಿಸಿಕೊಳ್ಳುವಂತೆ ವಿದ್ಯಾಸಾಗರ್‌‌ ಸೂಚಿಸಿದ್ದಾರೆ.

ಈ ಮಧ್ಯೆ, ದೇಶಾದ್ಯಂತ ಒಮೈಕ್ರಾನ್ ಪ್ರಕರಣಗಳಲ್ಲಿ ಏರಿಕೆಯಾಗಿದೆ. ಹಾಗಾಗಿ ಹೊಸ ವರ್ಷದ ಆಚರಣೆಗಳನ್ನು ಸರಳವಾಗಿ ಆಚರಿಸಲು ಮತ್ತು ಅನಿವಾರ್ಯವಲ್ಲದ ಪ್ರಯಾಣವನ್ನು ತಪ್ಪಿಸಲು ಒಕ್ಕೂಟ ಸರ್ಕಾರ ಶುಕ್ರವಾರ ಜನರಿಗೆ ಸಲಹೆ ನೀಡಿದೆ.

ಇದನ್ನೂ ಓದಿ:ಒಮೈಕ್ರಾನ್ ವಿರುದ್ಧದ ಹೋರಾಟದಲ್ಲಿ ‘ಲಾಕ್‌ಡೌನ್’ ಕೊನೆಯ ಅಸ್ತ್ರವಾಗಿಬೇಕು: WHO

ಡೆಲ್ಟಾಗಿಂತ ವೇಗವಾಗಿ ಹರಡುತ್ತದೆ

“ನಾವು ಇಲ್ಲಿಯವರೆಗೆ ತಿಳಿದಿರುವ ಪ್ರಕಾರ, ಒಮೈಕ್ರಾನ್ ಡೆಲ್ಟಾ ರೂಪಾಂತರಕ್ಕಿಂತ ವೇಗವಾಗಿ ಹರಡುತ್ತಿದೆ ಎಂದು ತೋರುತ್ತದೆ. ಇದು ಕಳೆದ ಹಲವಾರು ತಿಂಗಳುಗಳಲ್ಲಿ ಪ್ರಪಂಚದಾದ್ಯಂತ ಕೊರೊನಾ ಪ್ರಕರಣಗಳ ಉಲ್ಬಣಕ್ಕೆ ಕಾರಣವಾಗಿದೆ” ಎಂದು ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾ ವಲಯದ ಪ್ರಾದೇಶಿಕ ನಿರ್ದೇಶಕಿ ಪೂನಮ್ ಖೇತ್ರಪಾಲ್ ಸಿಂಗ್ ಹೇಳಿದ್ದಾರೆ.

“ಒಮೈಕ್ರಾನ್ ಸೋಂಕಿಗೆ ಒಳಗಾದವರ ಕ್ಲಿನಿಕಲ್ ಚಿತ್ರಣವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಹೆಚ್ಚಿನ ಮಾಹಿತಿಯ ಅಗತ್ಯವಿದೆ. ಮುಂಬರುವ ವಾರಗಳಲ್ಲಿ ನಾವು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸುತ್ತೇವೆ. ಒಮೈಕ್ರಾನ್ ಅನ್ನು ಸೌಮ್ಯವೆಂದು ತಳ್ಳಿಹಾಕಬಾರದು” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:ಮಹಾರಾಷ್ಟ್ರದ ಮೊದಲ ಒಮೈಕ್ರಾನ್‌ ರೋಗಿ ಗುಣಮುಖ; ಆಸ್ಪತ್ರೆಯಿಂದ ಬಿಡುಗಡೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...