Homeಅಂತರಾಷ್ಟ್ರೀಯಕೊರೊನಾ ಪ್ರಕರಣ ಹೆಚ್ಚಳ: 5 ದಿನಗಳಲ್ಲಿ 1500 ಕೊಠಡಿಗಳ ಆಸ್ಪತ್ರೆ ನಿರ್ಮಿಸಿದ ಚೀನಾ

ಕೊರೊನಾ ಪ್ರಕರಣ ಹೆಚ್ಚಳ: 5 ದಿನಗಳಲ್ಲಿ 1500 ಕೊಠಡಿಗಳ ಆಸ್ಪತ್ರೆ ನಿರ್ಮಿಸಿದ ಚೀನಾ

- Advertisement -
- Advertisement -

ಚೀನಾದಲ್ಲಿ ಕೊರೊನಾ ಮತ್ತೇ ಉಲ್ಬಣಗೊಳ್ಳುತ್ತಿದೆ ಎಂದು ವರದಿಯಾಗಿದ್ದು, ಇದರ ವಿರುದ್ದ ಹೋರಾಡಲು ಚೀನಾ ಸರ್ಕಾರ ಐದೇ ದಿನಗಳಲ್ಲಿ 1,500 ಕೊಠಡಿವುಳ್ಳ ಆಸ್ಪತ್ರೆಯನ್ನು ಬೀಜಿಂಗ್‌ ನಗರದ ದಕ್ಷಿಣ ಭಾಗದಲ್ಲಿ ನಿರ್ಮಿಸಿದೆ.

ಬೀಜಿಂಗ್‌ನ ದಕ್ಷಿಣ ಭಾಗದಲ್ಲಿರುವ ನಂಗೊಂಗ್‌ನ ಹೆಬೈ ಪ್ರಾಂತ್ಯದಲ್ಲಿ ಒಟ್ಟು 6,500 ಕೊಠಡಿಗಳವುಳ್ಳ ಆರು ಆಸ್ಪತ್ರೆಗಳನ್ನು ನಿರ್ಮಿಸಲು ಸರ್ಕಾರ ಉದ್ದೇಶಿಸಿದ್ದು, ಈ ಯೋಜನೆಯ ಭಾಗವಾಗಿ ಬೀಜಿಂಗ್‌ ನಗರದಲ್ಲಿ ಈ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ: ಅಮೆರಿಕವನ್ನು ಹಿಂದಿಕ್ಕಲಿದೆ ಚೀನಾ ಆರ್ಥಿಕತೆ; ಯಾಕೆ ಗೊತ್ತೇ?

ಕೊರೊನಾ ವೈರಸ್ ಮೊದಲ ಬಾರಿಗೆ ಪತ್ತೆಯಾದಾಗ ಕೂಡಾ ಇದೇ ರೀತಿ ತ್ವರಿತಗತಿಯಲ್ಲಿ ಆಸ್ಪತ್ರೆಗಳನ್ನು ನಿರ್ಮಿಸುವ ಕಾರ್ಯವನ್ನು ಚೀನಾ ಸರ್ಕಾರ ಕೈಗೊಂಡಿತ್ತು.

ನಂಗೊಂಗ್ ಮತ್ತು ಹೆಬೈ ಪ್ರಾಂತೀಯ ರಾಜಧಾನಿ ಶಿಜಿಯಾಝುವಾಂಗ್‌ನಲ್ಲಿ ಒಟ್ಟು 645 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ ಅಲ್ಲಿ ಈಗಾಗಲೇ 3,000 ಕೊಠಡಿಗಳ ಆಸ್ಪತ್ರೆ ನಿರ್ಮಾಣ ಹಂತದಲ್ಲಿದೆ. ಶಿಜಿಯಾಝುವಾಂಗ್‌ನಲ್ಲಿ ಇದುವರೆಗೆ ಒಂದು ಕೋಟಿಗೂ ಹೆಚ್ಚು ಜನರನ್ನು ಕೊರೊನಾ ವೈರಸ್‌ ಪರೀಕ್ಷೆಗೆ ಒಳಪಡಿಸಲಾಗಿದೆ ಎನ್ನಲಾಗಿದೆ.

ಇತ್ತೀಚಿನ ಸೋಂಕು ಅಸಾಧಾರಣ ವೇಗದಿಂದ ಹರಡುತ್ತವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ. ದೇಶದಾದ್ಯಂತ ಶುಕ್ರವಾರ 130 ಹೊಸ ಪ‍್ರಕರಣಗಳು ದೃಢಪಟ್ಟಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ. ಇವುಗಳಲ್ಲಿ 90 ಪ್ರಕರಣಗಳು ಹೆಬೈ ಪ್ರಾಂತ್ಯದಲ್ಲಿ ಪತ್ತೆಯಾಗಿವೆ.

ಇದನ್ನೂ ಓದಿ: ರೈಲು ಸುರಂಗ ನಿರ್ಮಿಸಲು ಚೀನಾ ಕಂಪೆನಿಗೆ ಗುತ್ತಿಗೆ ನೀಡಿದ ’ಆತ್ಮನಿರ್ಭರ್‌’ ಮೋದಿ ಸರ್ಕಾರ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಹಾರದಲ್ಲಿ ಜೆಡಿಯು ಮುಖಂಡನ ಗುಂಡಿಟ್ಟು ಹತ್ಯೆ: ಭುಗಿಲೆದ್ದ ಪ್ರತಿಭಟನೆ

0
ಜೆಡಿಯು ಯುವ ಮುಖಂಡನನ್ನು ಅಪರಿಚಿತ ದಾಳಿಕೋರರು ಗುಂಡಿಕ್ಕಿ  ಹತ್ಯೆ ಮಾಡಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಬೀದಿಗಿಳಿದು ಪ್ರತಿಭಟನೆಯನ್ನು ನಡೆಸಿದ್ದಾರೆ. ಸೌರಭ್ ಕುಮಾರ್ ಹತ್ಯೆಗೀಡಾದ ಜೆಡಿಯು ಯುವ ಮುಖಂಡ....