Homeಮುಖಪುಟದೇವಾಲಯಗಳ ಮೇಲೆ TDP, BJP ಕಾರ್ಯಕರ್ತರ ದಾಳಿ: ಆಂಧ್ರಪ್ರದೇಶದ DGP ಗೌತಮ್ ಸೇವಾಂಗ್ ಗಂಭೀರ ಆರೋಪ

ದೇವಾಲಯಗಳ ಮೇಲೆ TDP, BJP ಕಾರ್ಯಕರ್ತರ ದಾಳಿ: ಆಂಧ್ರಪ್ರದೇಶದ DGP ಗೌತಮ್ ಸೇವಾಂಗ್ ಗಂಭೀರ ಆರೋಪ

ದೇವಾಲಯ ದಾಳಿ ಪ್ರಕರಣಗಳಲ್ಲಿ 13 ಮಂದಿ ಟಿಡಿಪಿ ಕಾರ್ಯಕರ್ತರು ಮತ್ತು ಇಬ್ಬರು ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

- Advertisement -
- Advertisement -

ಆಂಧ್ರಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷ ಮತ್ತು ತೆಲುಗು ದೇಶಂ ಪಕ್ಷದ ಕಾರ್ಯಕರ್ತರು ದೇವಾಲಯಗಳ ಮೇಲೆ ದಾಳಿ ನಡೆಸಿ ಧಾರ್ಮಿಕ ಗುಂಪುಗಳ ನಡುವೆ ಸುಳ್ಳುಸುದ್ದಿ ಹರಡಿ ಕೋಮುಗಲಭೆ ಸೃಷ್ಟಿಸುವ ಸಂಚು ರೂಪಿಸಿದ್ದಾರೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಗೌರಮ್ ಸೇವಾಂಗ್ ನೀಡಿರುವ ಹೇಳಿಕೆ ಉಲ್ಲೇಖಿಸಿ ದಿವೈರ್.ಇನ್ ವರದಿ ಮಾಡಿದೆ. ಡಿಜಿಪಿ ಮಾಡಿರುವ ಆರೋಪ ಚರ್ಚೆಯ ಕಿಡಿ ಹೊತ್ತಿಸಿದೆ.

ಈ ಸಂಬಂಧ ಅಮರಾವತಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಗೌತಮ್ ಸೇವಾಂಗ್, ಟಿಡಿಪಿ ಮತ್ತು ಬಿಜೆಪಿ ಕಾರ್ಯಕರ್ತರು ದೇವಾಲಯ ದಾಳಿ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. 15 ಮಂದಿ ಟಿಡಿಪಿ ಮತ್ತು 4 ಮಂದಿ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದಾರೆ. ದೇವಾಲಯ ದಾಳಿ ಪ್ರಕರಣಗಳಲ್ಲಿ 13 ಮಂದಿ ಟಿಡಿಪಿ ಕಾರ್ಯಕರ್ತರು ಮತ್ತು ಇಬ್ಬರು ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹೈದರಾಬಾದ್ ಪಾಲಿಕೆ ಚುನಾವಣೆಯಲ್ಲಿ ಹಿಂದುತ್ವ ಶಕ್ತಿಗಳು ಮೇಲುಗೈ ಪಡೆದಿದ್ದು ಹೇಗೆ?

ಕಳೆದ ಕೆಲವು ತಿಂಗಳುಗಳ ಹಿಂದ ಆಂಧ್ರಪ್ರದೇಶಾದ್ಯಂತ ಹಿಂದೂ ದೇವಾಲಯಗಳು ಮತ್ತು ಧಾರ್ಮಿಕ ಸ್ಥಳಗಳ ಮೇಲೆ ದಾಳಿ ನಡೆದಿತ್ತು. ದಾಳಿಕೋರರು ದೇವರಮೂರ್ತಿಗಳನ್ನು ಭಗ್ನಗೊಳಿಸಿ ಧಾರ್ಮಿಕ ಸ್ಥಳವನ್ನು ಧ್ವಂಸ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಪಕ್ಷ ಟಿಡಿಪಿ ಮತ್ತು ಬಿಜೆಪಿ ಮುಖಂಡರು ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಕ್ರಿಶ್ಚಿಯನ್ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಆರೋಪಿಸಿದ್ದರು.

ಈ ಆರೋಪ ಕೇಳಿಬಂದ ಕೆಲವೇ ದಿನಗಳ ನಂತರ ಡಿಜಿಪಿ ಗೌತಮ್ ಸೇವಾಂಗ್ ದೇವಾಲಯಗಳ ಮೇಲಿನ ದಾಳಿಗೆ ಟಿಡಿಪಿ ಮತ್ತು ಬಿಜೆಪಿ ಕಾರ್ಯಕರ್ತರು ಕಾರಣ ಎಂದು ಗಂಭೀರ ಆರೋಪ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಟಿಡಿಪಿ ಮತ್ತು ಬಿಜೆಪಿ ಕಾರ್ಯಕರ್ತರು ಮದ್ಯ ಸೇವಿಸಿ ಈ ಕೃತ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ತೆಗೆದುಕೊಳ್ಳುತ್ತಿರುವ ಸಾರ್ವಜನಿಕ ತೀರ್ಮಾನಗಳು ದಾಳಿಗೆ ಕಾರಣ. ಇದು ಸರ್ಕಾರದ ಕಲ್ಯಾಣ ಯೋಜನೆಗಳಿಗೆ ಅಡ್ಡಿಪಡಿಸುವುದು ಮತ್ತು ಸರ್ಕಾರದ ವಿರುದ್ಧ ಪಿತೂರಿ ಮತ್ತು ರಾಜಕೀಯ ಗೆರಿಲ್ಲಾ ಯುದ್ದದ ಭಾಗವಾಗಿದೆ ಎಂಬುದು ಗೌತಮ್ ಅವರ ಅಭಿಪ್ರಾಯವಾಗಿದೆ ಎಂದು ವರದಿ ಮಾಡಿದೆ.

ಇದನ್ನೂ ಓದಿ: ಆಂಧ್ರ ಪ್ರದೇಶ: ನಿಗೂಢ ಕಾಯಿಲೆಗೆ ಕೀಟನಾಶಕಗಳ ತ್ಯಾಜ್ಯ ಕಾರಣ-ಏಮ್ಸ್

ರಾಜ್ಯದಲ್ಲಿ ಕೋಮು ಸೌಹಾರ್ದತೆಯನ್ನು ಹಾಳುಮಾಡಲು ಕೆಲ ರಾಜಕೀಯ ಪಕ್ಷಗಳು ಯತ್ನಿಸುತ್ತಿವೆ ಎಂದು ಗೌತಮ್ ಸೇವಾಂಗ್ ಶುಕ್ರವಾರ ಆರೋಪಿಸಿದ್ದರು. ಕೆಲವು ದುರುದ್ಧೇಶಪೂರಿತ ಗುಂಪುಗಳು ಕೃತ್ಯದಲ್ಲಿ ಭಾಗಿಯಾಗಿದ್ದು ತನಿಖೆ ಮುಂದುವರಿದಿದೆ. ಕೆಲ ರಾಜಕೀಯ ಪಕ್ಷಗಳು ಸುಳ್ಳು ಸುದ್ದಿಗಳನ್ನು ಹರಡಲು ಯತ್ನಿಸುತ್ತಿರುವುದು ಈ ದಾಳಿಯ ಹಿಂದಿದೆ. ರಾಜ್ಯದಲ್ಲಿ ವದಂತಿಗಳನ್ನು ಹರಡಿ ಕೋಮುಸೌಹಾರ್ದತೆಯನ್ನು ಹಾಳುಗೆಡವುತ್ತ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಯತ್ನಿಸುತ್ತಿವೆ. 9 ಪ್ರಕರಣಗಳಲ್ಲಿ ಟಿಡಿಪಿ ಮತ್ತು ಬಿಜೆಪಿ ಸದಸ್ಯತ್ವ ಪಡೆದಿರುವವರು ಭಾಗಿಯಾಗಿರುವುದನ್ನು ಅಂಕಿಅಂಶಗಳು ದೃಢಪಡಿಸಿವೆ.

ಬಿಜೆಪಿಯ ಇಬ್ಬರು ಮತ್ತು ಟಿಡಿಪಿಯ ಇಬ್ಬರು ಸದಸ್ಯರು ಸೆಪ್ಟೆಂಬರ್ 2020 ರಲ್ಲಿ ಬೊಮ್ಮೂರು ಗ್ರಾಮದಲ್ಲಿ ವಿನಾಯಕ ಮೂರ್ತಿಗೆ ಹಾನಿ ಮಾಡಲಾಗಿದೆ ಎಂದು ಸುಳ್ಳು ಸುದ್ದಿ ಹರಡಿದ್ದರು. ಬಡವೆಲ್‌‌ನಲ್ಲಿ ಆಂಜನೇಯ ಮೂರ್ತಿಗೆ ಟಿಡಿಪಿ ಕಾರ್ಯಕರ್ತನೊಬ್ಬ ಚಪ್ಪಲಿ ಹಾರವನ್ನು ಹಾಕಿದ್ದ ಎಂಬ ಆರೋಪವೂ ಇದೆ. ಜನರಲ್ಲಿ ಗೊಂದಲ ಮೂಡಿಸಲು ಇಂತಹ ಸುದ್ಧಿಗಳನ್ನು ಹಬ್ಬಿಸುತ್ತಿದ್ದರು ಎಂದು ಆರೋಪಿಸಲಾಗಿದ್ದು, ಈ ಸಂಬಂಧ ನಾಲ್ವರು ಟಿಡಿಪಿ ಕಾರ್ಯಕರ್ತರು ಸೇರಿದಂತೆ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಅದಾನಿಗೆ 6 ವಿಮಾನ ನಿಲ್ದಾಣಗಳ ನಿರ್ವಹಣೆ ನೀಡುವುದರ ವಿರುದ್ಧ ದನಿಯೆತ್ತಿದ್ದ ಹಣಕಾಸು ಇಲಾಖೆ, ನೀತಿ ಆಯೋಗ! ಕಾರಣವೇನು?

ರಾಜ್ಯದ 180 ದೇವಾಲಯಗಳ ಧ್ವಂಸ ಅಪರಾಧ ಪ್ರಕರಣಗಳಲ್ಲಿ 337 ಆರೋಪಿಗಳನ್ನು ಬಂಧಿಸಲಾಗಿದೆ. ಕೃತ್ಯದಲ್ಲಿ ಭಾಗಿಯಾದ ಆರೋಪ ಇವರ ಮೇಲಿದೆ. 4643 ಆರೋಪಿಗಳು ಕೋಮುಗಲಭೆಯನ್ನು ಸೃಷ್ಟಿಸಲು ಯತ್ನಿಸಿದ್ದಾರೆ ಎಂದು ಡಿಜಿಪಿ ಗೌತಮ್ ಹೇಳಿದ್ದಾರೆಂದು ದಿವೈರ್.ಇನ್ ವರದಿ ಮಾಡಿದೆ.

ರಾಜಕೀಯ ಪಕ್ಷಗಳಿಗೆ ಮನವಿ ಮಾಡುತ್ತೇನೆ. ಧಾರ್ಮಿಕ ದ್ವೇಷವನ್ನು ಕೆರಳಿಸಬೇಡಿ. ಸಾಮಾಜಿಕ ಜಾಲತಾಣಗಳ ಮೂಲಕ ವದಂತಿಗಳನ್ನು ಹರಡಬೇಡಿ. ನೀವು ಇಂತಹ ಕೆಲಸ ಮಾಡಿದರೆ ನಾವು ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಗೌತಮ್ ಎಚ್ಚರಿಕೆ ನೀಡಿದ್ದಾರೆ.

ಡಿಜಿಪಿ ಗೌತಮ್ ಆರೋಪದ ಬೆನ್ನಿಗೇ ಟಿಡಿಪಿ ಮತ್ತು ಬಿಜೆಪಿ ಮುಖಂಡರು ವಾಗ್ದಾಳಿ ನಡೆಸಿದ್ದು ಡಿಜಿಪಿ ವೈ.ಎಸ್. ಜಗನ್ ಏಜೆಂಟ್ ಎಂದು ದೂರಿದ್ದಾರೆ. ಅವರು “ನೀವು ವೈಎಸ್ಆರ್‌ಸಿ ಪಕ್ಷದ ವಕ್ತಾರರಾಗಲು ಲಾಯಕ್ಕು’’ ಎಂದು ಟಿಡಿಪಿ ಪಕ್ಷದ ರಾಜ್ಯಾಧ್ಯಕ್ಷರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಆಂಧ್ರಪ್ರದೇಶ ಸಿಎಂ ಜಗನ್ ‘ಸೈಕೋ’ನಂತೆ ವರ್ತಿಸುತ್ತಿದ್ದಾರೆ: ಸಿಎಂ ವಿರುದ್ಧ ಮಾಜಿ ಸಿಎಂ ಕಿಡಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...