Homeಮುಖಪುಟಆಂಧ್ರ ಪ್ರದೇಶ: ನಿಗೂಢ ಕಾಯಿಲೆಗೆ ಕೀಟನಾಶಕಗಳ ತ್ಯಾಜ್ಯ ಕಾರಣ-ಏಮ್ಸ್

ಆಂಧ್ರ ಪ್ರದೇಶ: ನಿಗೂಢ ಕಾಯಿಲೆಗೆ ಕೀಟನಾಶಕಗಳ ತ್ಯಾಜ್ಯ ಕಾರಣ-ಏಮ್ಸ್

ಏಲೂರು, ಪಶ್ಚಿಮ ಗೋದಾವರಿ ಜಿಲ್ಲೆಯ ಪ್ರಧಾನ ಕೇಂದ್ರವಾಗಿದ್ದು, ಇಲ್ಲಿನ ವ್ಯಾಪಕವಾದ ಭತ್ತದ ಕೃಷಿಗೆ ಕೀಟನಾಶಕಗಳು ಮತ್ತು ರಸಗೊಬ್ಬರಗಳ ಬಳಕೆ ಭಾರೀ ಪ್ರಮಾಣದಲ್ಲಿದೆ.

- Advertisement -
- Advertisement -

ಆಂಧ್ರಪ್ರದೇಶದ ಏಲೂರಿನಲ್ಲಿ ನೂರಾರು ಜನರ ಅನಾರೋಗ್ಯಕ್ಕೆ ಕಾರಣವಾಗಿದ್ದ ನಿಗೂಢ ಕಾಯಿಲೆಯ ಹಿಂದೆ  ಕೀಟನಾಶಕಗಳಿಂದ ಬಿಡುಗಡೆಯಾಗಿರುವ ರಾಸಾಯನಿಕ ಪದಾರ್ಥಗಳು ಇರಬಹುದು ಎಂದು ದೆಹಲಿಯ ಏಮ್ಸ್ ಮತ್ತು ದೇಶದ ಇತರ ವೈಜ್ಞಾನಿಕ ಸಂಸ್ಥೆಗಳ ಪರೀಕ್ಷೆಗಳು ತಿಳಿಸಿವೆ.

ಏಲೂರು ನಿಗೂಢ ಕಾಯಿಲೆಯ ಘಟನೆ ಕುರಿತು ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು. ಈ ಸಭೆಯಲ್ಲಿ ಆರೋಗ್ಯ ಸಚಿವ ಅಲಾನಾನಿ, ಎಲೂರು ಜಿಲ್ಲಾಧಿಕಾರಿ ರೇವು ಮುತ್ಯಲರಾಜು, ಜಂಟಿ ಕಲೆಕ್ಟರ್ ಹಿಮಾಂಶು ಶುಕ್ಲಾ, ಡಿಎಂಹೆಚ್‌ಒ ಡಾ.ಸುನಂದಾ, ಡಿಸಿಎಚ್‌ಎಂಒ ಡಾ. ಎವಿಆರ್ ಮೋಹನ್ ಮತ್ತು ಇತರರು ಭಾಗವಹಿಸಿದ್ದರು.

ಈ ವೇಳೆ ಏಮ್ಸ್ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ ಸೇರಿದಂತೆ ಪ್ರಮುಖ ಸಂಸ್ಥೆಗಳು ಕೀಟನಾಶಕಗಳ ಅವಶೇಷಗಳು, ತ್ಯಾಜ್ಯಗಳು ಏಲೂರು ಪರಿಸ್ಥಿತಿಗೆ ಕಾರಣ ಎಂದು ಆರೋಪಿಸಿವೆ. ಆದರೆ, ಈ ಅವಶೇಷಗಳು ಮಾನವನ ದೇಹಕ್ಕೆ ಹೇಗೆ ಸೇರಿದವು ಎಂಬುದರ ಕುರಿತು ಹೆಚ್ಚಿನ ಅಧ್ಯಯನ ಅಗತ್ಯ ಎಂದು ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ: ಆಂಧ್ರ ಪ್ರದೇಶ: ನಿಗೂಢ ಕಾಯಿಲೆಗೆ ಓರ್ವ ಬಲಿ, 315ಕ್ಕೂ ಅಧಿಕ ಮಂದಿ ಅಸ್ವಸ್ಥ

ಘಟನೆ ಕುರಿತ ಹೆಚ್ಚಿನ ಅಧ್ಯಯನದ ಜವಾಬ್ದಾರಿಯನ್ನು ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ,  ನವದೆಹಲಿಯ ಏಮ್ಸ್ ನ ರಾಷ್ಟ್ರೀಯ ರಾಸಾಯನಿಕ ತಂತ್ರಜ್ಞಾನ ಸಂಸ್ಥೆಗೆ ವಹಿಸಿದ್ದಾರೆ. ಸದ್ಯ ಎಲೂರಿನಲ್ಲಿ ಕಾಯಿಲೆ ಬೀಳುವ ಪ್ರಕರಣಗಳು ಕಡಿಮೆಯಾಗಿವೆ.

ಮುಂದಿನ ಕೆಲವು ತಿಂಗಳುಗಳು ಜಿಲ್ಲೆಯಲ್ಲಿ ಆಹಾರ, ನೀರು ಮತ್ತು ತರಕಾರಿ ಮಾದರಿಗಳನ್ನು ಮತ್ತೆ ಮತ್ತೆ ವಿಶ್ಲೇಷಿಸಿದ ನಂತರವೇ ಕಾಯಿಲೆಗೆ ನಿಖರವಾದ ಕಾರಣಗಳನ್ನು ಗುರುತಿಸಬಹುದು ಎಂದು ತಜ್ಞರು ಹೇಳುತ್ತಾರೆ. ಈ ಹಿಂದೆ ಕುಡಿಯುವ ನೀರು ಮತ್ತು ಹಾಲಿನಲ್ಲಿನ ಸೀಸ ಮತ್ತು ನಿಕ್ಕಲ್ ಅಂಶ ಕಾಯಿಲೆಗೆ ಮೂಲ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿತ್ತು.

ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ರಾಜ್ಯದ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಇಂತಹ ಘಟನೆಗಳು ಮತ್ತೆ ಪುನರಾವರ್ತನೆಯಾಗದಂತೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಇದನ್ನು ಓದಿ: ತೀವ್ರ ಚಳಿಗಾಳಿಯಿಂದಾಗಿ ಪಂಜಾಬ್- ಹರಿಯಾಣ ಗಡಿಯಲ್ಲಿ ಪ್ರತಿಭಟನಾ ನಿರತ ರೈತ ಸಾವು

ಆಹಾರ, ನೀರು ಮತ್ತು ತರಕಾರಿ ಯಾವುದನ್ನೂ ಬಿಟ್ಟುಬಿಡದೆ ಎಲ್ಲಾ ಪರೀಕ್ಷೆಗಳನ್ನು ಸಾಧ್ಯವಾದಷ್ಟು ಮಾಡಬೇಕು. ಡಂಪಿಂಗ್ ಯಾರ್ಡ್‌ಗಳ ನಿರ್ವಹಣೆಗೆ ಗಮನ ಕೊಡಿ. ಏಲೂರು ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಯಾದ್ಯಂತ ಇದೇ ರೀತಿಯ ಪರೀಕ್ಷೆಗಳನ್ನು ನಡೆಸಬೇಕು. ಎಲ್ಲಾ ಜಿಲ್ಲೆಗಳ ಎಲ್ಲಾ ಕುಡಿಯುವ ನೀರಿನ ಮೂಲಗಳನ್ನು ಪರೀಕ್ಷಿಸಿ. ಮಾದರಿಗಳನ್ನು ವಿಧಾನದ ಪ್ರಕಾರ ತೆಗೆದುಕೊಳ್ಳಬೇಕು ಮತ್ತು ತಜ್ಞರು ವಿಶ್ಲೇಷಿಸಬೇಕು ಎಂದು ಮುಖ್ಯಮಂತ್ರಿ ಜಗನ್ ತಿಳಿಸಿದ್ದಾರೆ.

ಜೊತೆಗೆ ರೈತರು ಹಾನಿಕಾರಕ ಕೀಟನಾಶಕಗಳ ಬಳಕೆಯನ್ನು ಬಿಟ್ಟು, ಸಾವಯವ ಪರ್ಯಾಯಗಳನ್ನು ಆರಿಸಿಕೊಳ್ಳಲು ಪ್ರೋತ್ಸಾಹಿಸಲು ಕೃಷಿ ಇಲಾಖೆಗೆ ತಿಳಿಸಲಾಯಿತು. ಏಲೂರು, ಪಶ್ಚಿಮ ಗೋದಾವರಿ ಜಿಲ್ಲೆಯ ಪ್ರಧಾನ ಕೇಂದ್ರವಾಗಿದ್ದು, ಇದನ್ನು ರಾಜ್ಯದ “ಭತ್ತದ ಬಟ್ಟಲು” ಎಂದು ಪರಿಗಣಿಸಲಾಗಿದೆ. ಇಲ್ಲಿನ ವ್ಯಾಪಕವಾದ ಭತ್ತದ ಕೃಷಿಗೆ ಕೀಟನಾಶಕಗಳು ಮತ್ತು ರಸಗೊಬ್ಬರಗಳ ಬಳಕೆ ಭಾರೀ ಪ್ರಮಾಣದಲ್ಲಿದೆ.

ಇದನ್ನೂ ಓದಿ: ಆಂಧ್ರಪ್ರದೇಶ: ನಿಗೂಢ ಕಾಯಿಲೆಗೆ ಸೀಸ ಮತ್ತು ನಿಕ್ಕಲ್ ಅಂಶ ಕಾರಣ- ತಜ್ಞರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...