Homeಮುಖಪುಟಭಾರತದಲ್ಲಿ 33 ಲಕ್ಷ ಮಕ್ಕಳಲ್ಲಿ ಅಪೌಷ್ಟಿಕತೆ: ಆರ್‌ಟಿಐ ಅಡಿ ಮಾಹಿತಿ ಬಹಿರಂಗ

ಭಾರತದಲ್ಲಿ 33 ಲಕ್ಷ ಮಕ್ಕಳಲ್ಲಿ ಅಪೌಷ್ಟಿಕತೆ: ಆರ್‌ಟಿಐ ಅಡಿ ಮಾಹಿತಿ ಬಹಿರಂಗ

ಕಳೆದ ತಿಂಗಳು ಹೊರಬಿದ್ದ 2021ರ ಜಾಗತಿಕ ಹಸಿವು ಸೂಚ್ಯಂಕದಲ್ಲಿ 116 ದೇಶಗಳ ಪೈಕಿ ಭಾರತವು 101ನೇ ಸ್ಥಾನದಲ್ಲಿದೆ.

- Advertisement -
- Advertisement -

ಭಾರತದಲ್ಲಿ 33 ಲಕ್ಷ ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ, ಮಹಾರಾಷ್ಟ್ರ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ಅಪೌಷ್ಟಿಕ ಮಕ್ಕಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಪಿಟಿಐ ಸುದ್ದಿಸಂಸ್ಥೆಯು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಈ ಮಾಹಿತಿಯನ್ನು ಪಡೆದುಕೊಂಡಿದೆ.

ಮಹಿಳಾ ಮತ್ತು ಮಕ್ಕಳ ಸಬಲೀಕರಣ ಸಚಿವಾಲಯದ ಅಕ್ಟೋಬರ್‌ 14ರವರೆಗಿನ ಮಾಹಿತಿ ಪ್ರಕಾರ, ಅಪೌಷ್ಟಿಕತೆಯನ್ನು ಹೊಂದಿರುವ ಅರ್ಧದಷ್ಟು ಮಕ್ಕಳು ತೀವ್ರತರನಾದ ಅಪೌಷ್ಟಿಕತೆಯನ್ನು ಹೊಂದಿವೆ. 17,76,902 ಮಕ್ಕಳಲ್ಲಿ ತೀವ್ರ ಅಪೌಷ್ಟಿಕತೆ ಇದ್ದು, 15,46,420 ಮಕ್ಕಳಲ್ಲಿ ಮಧ್ಯಮ ತೀವ್ರ ಅಪೌಷ್ಟಿಕತೆ ಇದೆ.

ಎತ್ತರಕ್ಕೆ ಅನುಗುಣವಾಗಿ ಇಲ್ಲದ ತೂಕ, ತೋಳಿನ ಮಧ್ಯದ ಸುತ್ತಳತೆ 115 ಮಿಲಿಮೀಟರ್‌ಗಿಂತ ಕಡಿಮೆ ಇರುವುದು ತೀವ್ರ ಅಪೌಷ್ಟಿಕತೆಯನ್ನು ಸೂಚಿಸುತ್ತದೆ ಎಂದು ವಿಶ್ವಸಂಸ್ಥೆ ಹೇಳಿದೆ. ತೋಳಿನ ಮಧ್ಯದ ಸುತ್ತಳತೆ 115 ಮಿಲಿಮೀಟರ್‌ಗಳಿಗಿಂತ ಹೆಚ್ಚು ಆದರೆ 125 ಮಿಲಿಮೀಟರ್‌ಗಳಿಗಿಂತ ಕಡಿಮೆ ಇದ್ದರೆ ಅದನ್ನು ಮಧ್ಯಮ ತೀವ್ರ ಅಪೌಷ್ಟಿಕತೆ ಎಂದು ವಿಶ್ವಸಂಸ್ಥೆ ವ್ಯಾಖ್ಯಾನಿಸಿದೆ.

ವರದಿಯ ಪ್ರಕಾರ, 6,16,772 ಅಪೌಷ್ಟಿಕ ಮಕ್ಕಳನ್ನು ಹೊಂದಿರುವ ಮಹಾರಾಷ್ಟ್ರ ರಾಜ್ಯ ಮೊದಲ ಸ್ಥಾನದಲ್ಲಿದೆ. ಬಿಹಾರದಲ್ಲಿ 4,75,824, ಗುಜರಾತ್‌ನಲ್ಲಿ 3,20,465, ಆಂಧ್ರಪ್ರದೇಶದಲ್ಲಿ 2,67,228, ಕರ್ನಾಟಕದಲ್ಲಿ 2,49,463, ಉತ್ತರ ಪ್ರದೇಶದಲ್ಲಿ 1,86,640 ಅಪೌಷ್ಟಿಕ ಮಕ್ಕಳಿದ್ದಾರೆ.

ನವೆಂಬರ್ 2020 ಮತ್ತು ಈ ವರ್ಷದ ಅಕ್ಟೋಬರ್ 14ರ ನಡುವೆ ತೀವ್ರತರವಾದ ಅಪೌಷ್ಟಿಕತೆಯ ಮಕ್ಕಳ ಸಂಖ್ಯೆಯಲ್ಲಿ 91% ಏರಿಕೆಯಾಗಿದೆ. ನವೆಂಬರ್ 2020ರಲ್ಲಿ ಅಪೌಷ್ಟಿಕ ಮಕ್ಕಳ ಸಂಖ್ಯೆ 9,27,606 ಆಗಿತ್ತು.

ಪಿಟಿಐ ಪ್ರಕಾರ, ಎರಡು ವಿಧದಲ್ಲಿ ಅಪೌಷ್ಟಿಕ ಮಕ್ಕಳ ಅಂಕಿ-ಅಂಶಗಳನ್ನು ಸರ್ಕಾರ ದಾಖಲಿಸಿದೆ. ಕಳೆದ ವರ್ಷದ ಅಂಕಿಅಂಶಗಳನ್ನು ರಾಜ್ಯ ಸರ್ಕಾರಗಳು ಸಂಗ್ರಹಿಸಿ ಕೇಂದ್ರಕ್ಕೆ ರವಾನಿಸಿದ್ದರೆ, ಈ ವರ್ಷದ ಅಂಕಿಅಂಶಗಳನ್ನು ಅಂಗನವಾಡಿ ಕಾರ್ಯಕರ್ತೆಯರು ನೇರವಾಗಿ ಪೋಷಣ್‌ ಟ್ರ್ಯಾಕರ್ ಅಪ್ಲಿಕೇಶನ್‌ನಲ್ಲಿ ನಮೂದಿಸಿ ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದಾರೆ.

ಕಳೆದ ವರ್ಷದ ದತ್ತಾಂಶವು ಆರು ತಿಂಗಳಿಂದ ಆರು ವರ್ಷಗಳವರೆಗಿನ ಮಕ್ಕಳ ಗುಂಪಿಗೆ ಸಂಬಂಧಿಸಿದ್ದು, ಈ ವರ್ಷದ ದತ್ತಾಂಶದಲ್ಲಿ ಮಕ್ಕಳ ವಯಸ್ಸಿನ ಗುಂಪನ್ನು ನಿರ್ದಿಷ್ಟಪಡಿಸಲಾಗಿಲ್ಲ.

ಎಲ್ಲಾ ಅಂಗನವಾಡಿ ಕೇಂದ್ರಗಳು ಮತ್ತು ಅವುಗಳ ಫಲಾನುಭವಿಗಳನ್ನು ಪತ್ತೆಹಚ್ಚಲು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಪೋಷಣ್‌ ಟ್ರ್ಯಾಕರ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದೆ.

ಕಳೆದ ತಿಂಗಳು ಹೊರಬಿದ್ದ 2021ರ ಜಾಗತಿಕ ಹಸಿವು ಸೂಚ್ಯಂಕದಲ್ಲಿ 116 ದೇಶಗಳ ಪೈಕಿ ಭಾರತವು 101ನೇ ಸ್ಥಾನದಲ್ಲಿದೆ. ಕಳೆದ ವರ್ಷ 94ನೇ ಸ್ಥಾನದಲ್ಲಿದ್ದ ಭಾರತವು ತನ್ನ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ನೇಪಾಳ ಮತ್ತು ಬಾಂಗ್ಲಾದೇಶಕ್ಕಿಂತ ಹಿಂದಿತ್ತು.

ಆದರೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಸೂಚ್ಯಂಕಕ್ಕೆ ಬಳಸಲಾದ ವಿಧಾನವು ಅವೈಜ್ಞಾನಿಕವಾಗಿದೆ ಎಂದು ಪ್ರತಿಪಾದಿಸಿದೆ.


ಇದನ್ನೂ ಓದಿರಿ: ನೋಟ್‌ ಬ್ಯಾನ್‌ ದುರಂತಕ್ಕೆ 5 ವರ್ಷ: ದೇಶ ಮರೆಯಬಾರದ ಚಿತ್ರಗಳಿವು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...