Homeಮುಖಪುಟತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷರಿಗೆ ನಾಲಿಗೆ ಕತ್ತರಿಸುವ ಎಚ್ಚರಿಕೆ ನೀಡಿದ ಸಿಎಂ!

ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷರಿಗೆ ನಾಲಿಗೆ ಕತ್ತರಿಸುವ ಎಚ್ಚರಿಕೆ ನೀಡಿದ ಸಿಎಂ!

- Advertisement -
- Advertisement -

ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್, ಪಕ್ಷದ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಅವರಿಗೆ ಪೊಳ್ಳು ಮಾತುಗಳಿಂದ ದೂರವಿರದಿದ್ದರೇ, ನಿಮ್ಮ ನಾಲಿಗೆ ಕತ್ತರಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.

ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿರುವ ಮುಖ್ಯಮಂತ್ರಿ ಕೆಸಿಆರ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಬಿಜೆಪಿ ರಾಜ್ಯಾದ್ಯಕ್ಷ ಸಂಜಯ್, ತೆಲಂಗಾಣದ ರೈತರನ್ನು ಭತ್ತ ಬೆಳೆಯುವಂತೆ ಹೇಳಿ ರೈತರನ್ನು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಒತ್ತಾಯಿಸುತ್ತಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರ ಭತ್ತವನ್ನು ಖರೀದಿಸುವುದಾಗಿ ರೈತರಿಗರ ಸುಳ್ಳು ಭರವಸೆ ನೀಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

ಕೇಂದ್ರದಿಂದ ಭತ್ರ ಖರೀದಿಸದಿದ್ದರೂ ರೈತರನ್ನು ಭತ್ತ ಬೆಳೆಯುವಂತೆ ಬಂಡಿ ಸಂಜಯ್ ಒತ್ತಾಯಿಸುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. “ಕೇಂದ್ರವು ಭತ್ತವನ್ನು ಖರೀದಿಸುವುದಿಲ್ಲ ಎಂದು ಹೇಳುತ್ತಿದೆ. ಆದರೆ, ರಾಜ್ಯ ಬಿಜೆಪಿ ಘಟಕವು ನಾವು ಭತ್ತ ಖರೀದಿಸುತ್ತೇವೆ ಎಂದು ಹೇಳುತ್ತಿದೆ. ಹೀಗೆ ಪೊಳ್ಳು ಮಾತುಗಳಿಂದ ದೂರವಿರಿ. ನಮ್ಮ ಬಗ್ಗೆ ಅನಗತ್ಯ ಹೇಳಿಕೆಗಳನ್ನು ನೀಡಿದರೆ ನಿಮ್ಮ ನಾಲಿಗೆ ಕತ್ತರಿಸುತ್ತೇವೆ” ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಮೇಲಿನ ಸಂಪೂರ್ಣ ಸೆಸ್ ತೆಗೆದುಹಾಕಿ: ತೆಲಂಗಾಣ ಸಿಎಂ ಒತ್ತಾಯ

ಹಿಂಗಾರು ಋತುವಿನಲ್ಲಿ ಭತ್ತದ ಕೃಷಿ ಮಾಡದಂತೆ ರಾಜ್ಯ ರೈತರನ್ನು ನಿರುತ್ಸಾಹಗೊಳಿಸುತ್ತಿರುವ ಟಿಆರ್‌ಎಸ್‌ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿಯು ಆಂದೋಲನ ಕಾರ್ಯಕ್ರಮಗಳನ್ನು ಘೋಷಿಸಿದೆ. ಆದ್ದರಿಂದ ಮುಖ್ಯಮಂತ್ರಿ ಕೆಸಿಆರ್‌ ರಾಜ್ಯದ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

“ಭತ್ತ ಖರೀದಿಸಲು ಕೇಂದ್ರ ಮುಂದಾಗುತ್ತಿಲ್ಲ. ಆ ಕಾರಣದಿಂದ ರೈತರಿಗೆ ನಷ್ಟವಾಗದಂತೆ ಬೇರೆ ಬೆಳೆಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಕೃಷಿ ಸಚಿವರು ಹೇಳಿದ್ದಾರೆ. ನಾನು ನೇರವಾಗಿ ಸಂಬಂಧಪಟ್ಟ ಕೇಂದ್ರ ಸಚಿವರನ್ನು ಭೇಟಿ ಮಾಡಿ ಸಂಗ್ರಹಿಸಿದ ಭತ್ತವನ್ನು ತೆಗೆದುಕೊಳ್ಳುವಂತೆ ಕೇಳಿದ್ದೇನೆ. ಅವರು ನಿರ್ಧಾರ ತೆಗೆದುಕೊಂಡು ನನಗೆ ತಿಳಿಸುವುದಾಗಿ ಹೇಳಿದ್ದರು. ಆದರೆ, ಈವರೆಗೆ ನನಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ತೆಲಂಗಾಣ ರಾಜ್ಯದಲ್ಲಿ ಈಗಾಗಲೇ ಕಳೆದ ವರ್ಷದ ಸುಮಾರು 5 ಲಕ್ಷ ಟನ್ ಭತ್ತವಿದೆ. ಕೇಂದ್ರವು ಅದನ್ನು ಖರೀದಿಸುತ್ತಿಲ್ಲ” ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

‘ಸಂಸತ್ತಿನಲ್ಲಿ ಭತ್ತ ಸಂಗ್ರಹಣೆ ಸಮಸ್ಯೆಯ ಬಗ್ಗೆ ಪ್ರಸ್ತಾಪಿಸುತ್ತೇವೆ. ಜಿಲ್ಲೆಗಳಲ್ಲಿ ಧರಣಿ ನಡೆಸುತ್ತೇವೆ. ಮತ್ತು ಅಗತ್ಯವಿದ್ದರೆ ಮುಖ್ಯಮಂತ್ರಿ ಸೇರಿದಂತೆ ತೆಲಂಗಾಣದ ಸಂಸದರು, ಶಾಸಕರು, ಎಂಎಲ್‌ಸಿಗಳು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತೇವೆ’ ಎಂದು ಕೆಸಿಆರ್ ಹೇಳಿದರು.

ವಿವಾದಿತ ಕೃಷಿ ಕಾನೂನುಗಳ ರದ್ದತಿಗೆ ಹೊರಾಡುತ್ತಿರುವ ರೈತರಿಗೆ ತಮ್ಮ ಬೆಂಬಲವಿದೆ ಎಂದಿರುವ ತೆಲಂಗಾಣ ಮುಖ್ಯಮಂತ್ರಿ, ಬಿಜೆಪಿ ನಾಯಕರ ರೈತ ವಿರೋಧಿ ನೀತಿಗಳನ್ನು ಟೀಕಿಸಿದ್ದಾರೆ. “ನೀವು (ಬಿಜೆಪಿ) ರೈತರ ಮೇಲೆ ಕಾರು ಹರಿಸಿ ಕೊಲ್ಲುತ್ತಿದ್ದೀರಿ. ಬಿಜೆಪಿ ಮುಖ್ಯಮಂತ್ರಿಯೊಬ್ಬರು ರೈತರನ್ನು ಹೊಡೆದು ಸಾಯಿಸಲು ಆದೇಶಿಸುತ್ತಾರೆ” ಎಂದು ಹೇಳಿದ್ದಾರೆ.

‘ಕೇಂದ್ರದ ಮೂರು ಕೃಷಿ ಕಾನೂನುಗಳ ಹಿಂಪಡೆಯುವಂತೆ ಒತ್ತಾಯಿಸಿ ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ರೈತ ಚಳವಳಿಯನ್ನು ಕೆಆರ್‌ಎಸ್‌ ಪಕ್ಷವು ಬೆಂಬಲಿಸುತ್ತದೆ. ರೈತವಿರೋಧಿ ಕಾನೂನುಗಳನ್ನು ಹಿಂಪಡೆಯುವವರೆಗೂ ಕೇಂದ್ರವನ್ನು ವಿಶ್ರಾಂತಿ ಪಡೆಯಲು ಬಿಡುವುದಿಲ್ಲ’ ಎಂದರು.


ಇದನ್ನೂ ಓದಿ: ತೆಲಂಗಾಣದಲ್ಲಿ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಶೇ. 33.3 ರಷ್ಟು ಮೀಸಲಾತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಿಜಯಪುರ: ಗೋ ಸಾಗಾಟಗಾರನ ಮೇಲೆ ಬಜರಂಗದಳದಿಂದ ಥಳಿತ

0
ರಾಜ್ಯದಲ್ಲಿ ಮತ್ತೆ ಗೂಂಡಾಗಿರಿ ವರದಿಯಾಗಿದ್ದು, ದನ-ಕರುಗಳನ್ನು ಸಾಗಾಟ ಮಾಡುವಾಗ ವಾಹನ ತಡೆದು ಯುವಕನಿಗೆ ಬಜರಂಗದಳ ಕಾರ್ಯಕರ್ತರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲ್ಲೂಕಿನ ಸಾರವಾಡ ಬ್ರಿಡ್ಜ್ ಬಳಿ ನಡೆದಿದೆ. ಬಂದೇನವಾಝ್‌...