Homeಮುಖಪುಟ‘ನಿಮ್ಮ ಅತ್ತಿಗೆ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದಾರಾ?’: NCB ಅಧಿಕಾರಿಗೆ ನವಾಬ್ ಮಲಿಕ್ ಪ್ರಶ್ನೆ

‘ನಿಮ್ಮ ಅತ್ತಿಗೆ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದಾರಾ?’: NCB ಅಧಿಕಾರಿಗೆ ನವಾಬ್ ಮಲಿಕ್ ಪ್ರಶ್ನೆ

- Advertisement -
- Advertisement -

ಬಾಲಿವುಡ್‌ ನಟ ಶಾರುಕ್‌ ಖಾನ್‌ ಅವರ ಮಗ ಆರ್ಯನ್‌ ಖಾನ್‌ ಡ್ರಗ್ಸ್‌ ಆರೋಪ ಪ್ರಕರಣದ ವಿಚಾರದಲ್ಲಿ, ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಅಧಿಕಾರಿ ಸಮೀರ್ ವಾಂಖೆಡೆ ನಡುವಿನ ಮಾತಿನ ಚಕಮಕಿ ಸೋಮವಾರ ತೀವ್ರಗೊಂಡಿದೆ.

ಇಂದು ಸಮೀರ್‌ ವಾಂಖೆಡೆಯ ಮೇಲೆ ಹೊಸ ದಾಳಿ ಮಾಡಿರುವ ನವಾಬ್‌ ಮಲಿಕ್‌, “ಸಮೀರ್ ದಾವೂದ್ ವಾಂಖೆಡೆ, ನಿಮ್ಮ ಅತ್ತಿಗೆ ಹರ್ಷದಾ ದೀನಾನಾಥ್ ರೆಡ್ಕರ್ ಡ್ರಗ್ ದಂಧೆಯಲ್ಲಿ ತೊಡಗಿದ್ದಾರೆಯೇ? ಆಕೆಯ ಮೇಲಿನ ಪ್ರಕರಣ ಪುಣೆ ನ್ಯಾಯಾಲಯದಲ್ಲಿ ಬಾಕಿ ಇದ್ದು, ಇದಕ್ಕೆ ಕಾರಣವೇನೆಂದು ನೀವು ಉತ್ತರಿಸಬೇಕು” ಎಂದು ಟ್ವೀಟ್ ಮಾಡಿದ್ದಾರೆ. ಜೊತೆಗೆ ಟ್ವೀಟ್‌‌ನಲ್ಲಿ ದಾಖಲೆಯನ್ನೂ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಡ್ರಗ್‌ ಪ್ರಕರಣ: ಆರ್ಯನ್‌ ಖಾನ್‌ ರಕ್ಷಿಸಿದ ಒಂದು ಸೆಲ್ಫಿಯ ಕಥೆ!

ಜನವರಿ 14, 2008 ರಂದು ಮಾದಕ ದ್ರವ್ಯಗಳು ಮತ್ತು ಸೈಕೋಟ್ರೋಪಿಕ್ ವಸ್ತುಗಳ (ಎನ್‌ಡಿಪಿಎಸ್) ಕಾಯ್ದೆಯ ಅಕ್ರಮ ಸಾಗಣೆ ತಡೆ ಕಾಯ್ದೆಯ ಸೆಕ್ಷನ್ 3458 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಸಚಿವ ನವಾಬ್‌ ಮಲಿಕ್‌ ಹಂಚಿಕೊಂಡಿರುವ ಸ್ಕ್ರೀನ್‌ಶಾಟ್ ದಾಖಲೆ ಹೇಳುತ್ತದೆ. ಈ ಪ್ರಕರಣದ ವಿಚಾರಣೆಯು ಫೆಬ್ರವರಿ 18, 2008 ರಂದು ನಡೆದಿದ್ದು, ಮುಂದಿನ ವಿಚಾರಣೆಯನ್ನು ಮಾರ್ಚ್ 18, 2022 ಕ್ಕೆ ನಿಗದಿಪಡಿಸಲಾಗಿದೆ ಎಂದು ಆ ದಾಖಲೆಯಿಂದ ತಿಳಿದು ಬರುತ್ತದೆ.

ಈ ಮಧ್ಯೆ, ನವಾಬ್‌ ಮಲಿಕ್‌ ಅವರ ಟ್ವಿಟ್‌ಗೆ ಪ್ರತಿಕ್ರಿಯಿಸಿರುವ ಸಮೀರ್‌‌ ವಾಂಖೆಡೆ ಪ್ರಕರಣವನ್ನು ತನಗೆ ಲಿಂಕ್ ಮಾಡುತ್ತಿರುವುದರ ಬಗ್ಗೆ ಪ್ರಶ್ನಿಸಿದ್ದಾರೆ. “ಜನವರಿ 2008 ರಲ್ಲಿ ಪ್ರಕರಣ ನಡೆದಾಗ ನಾನು ಸೇವೆಯಲ್ಲಿ ಇರಲಿಲ್ಲ. ನಾನು ಕ್ರಾಂತಿ ರೆಡ್ಕರ್ ಅವರನ್ನು 2017 ರಲ್ಲಿ ವಿವಾಹವಾದೆ. ಹೀಗಾಗಿ ನನಗೂ, ಈ ಪ್ರಕರಣಕ್ಕೂ ಏನು ಸಂಬಂಧವಿದೆ” ಎಂದು ಅವರು ಹೇಳಿದ್ದಾಗಿ ಸುದ್ದಿ ಸಂಸ್ಥೆ ANI ವರದಿ ಮಾಡಿದೆ.

ಕಳೆದ ಶುಕ್ರವಾರ, ಡ್ರಗ್ಸ್ ವಿರೋಧಿ ಸಂಸ್ಥೆ ತನ್ನ ಮುಂಬೈ ಘಟಕದಿಂದ ತನಿಖೆ ನಡೆಸುತ್ತಿರುವ ಒಟ್ಟು ಆರು ಪ್ರಕರಣಗಳನ್ನು ದೆಹಲಿಯಲ್ಲಿರುವ ತನ್ನ ಕಾರ್ಯಾಚರಣಾ ಶಾಖೆಗೆ ವರ್ಗಾಯಿಸಿದೆ. ಇವುಗಳಲ್ಲಿ ಆರ್ಯನ್‌ ಪ್ರಕರಣ (ಡ್ರಗ್ಸ್ ಆನ್ ಕ್ರೂಸ್ ಪ್ರಕರಣ) ಮತ್ತು ಈ ವರ್ಷದ ಜನವರಿಯಲ್ಲಿ ನವಾಬ್‌‌ ಮಲಿಕ್ ಅವರ ಅಳಿಯ ಸಮೀರ್ ಖಾನ್ ಅವರನ್ನು ಎನ್‌ಸಿಬಿ ಬಂಧಿಸಿದ ಪ್ರಕರಣವೂ ಸೇರಿದೆ. ಸಮೀರ್‌‌ ಖಾನ್ ಅವರಿಗೆ ಸೆಪ್ಟೆಂಬರ್ 27 ರಂದು ಜಾಮೀನು ನೀಡಲಾಗಿತ್ತು.

ಇದನ್ನೂ ಓದಿ: ಡ್ರಗ್ಸ್ ಪ್ರಕರಣ: ಮೂರು ವಾರಗಳ ಬಳಿಕ ಆರ್ಯನ್‌ ಖಾನ್‌ಗೆ ಜಾಮೀನು ಮಂಜೂರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ತೆಲಂಗಾಣದಲ್ಲಿ ಮುಸ್ಲಿಮರಿಗೆ ನೀಡಿದ್ದ ಮೀಸಲಾತಿಯನ್ನು ರದ್ದುಪಡಿಸುತ್ತೇವೆ: ಅಮಿತ್‌ ಶಾ

0
ಲೋಕಸಭೆ ಚುನಾವಣೆ ಹಿನ್ನೆಲೆ ಮುಸ್ಲಿಮರನ್ನೇ ಟಾರ್ಗೆಟ್‌ ಮಾಡಿಕೊಂಡು ದ್ವೇಷದ ಹೇಳಿಕೆ ನೀಡುತ್ತಾ ಬಿಜೆಪಿ ನಾಯಕರು ಹಿಂದೂ ಸಮುದಾಯದ ಜನರ ಓಲೈಕೆ ರಾಜಕೀಯ ಮಾಡುತ್ತಿರುವುದು ವ್ಯಾಪಕವಾಗಿದೆ. ಇದರ ಮುಂದುವರಿದ ಭಾಗವಾಗಿ ತೆಲಂಗಾಣದಲ್ಲಿ ಕಾಂಗ್ರೆಸ್ ಮತ್ತು...