ಬಿಜೆಪಿ ಪಕ್ಷದ ನರೇಂದ್ರ ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ‘1000’ ಮತ್ತು ‘500’ ಮುಖ ಬೆಲೆಯ ಹಳೆಯ ನೋಟುಗಳನ್ನು ರದ್ದು ಮಾಡಿ ಇಂದಿಗೆ ಐದು ವರ್ಷ ಪೂರ್ಣಗೊಂಡಿವೆ. ಅಂದು ನೋಟ್‌ ಬ್ಯಾನ್‌ಗೆ ಹಲವಾರು ಕಾರಣಗಳು ಮತ್ತು ಸಮರ್ಥನೆಗಳನ್ನು ಪ್ರಧಾನಿ ನೀಡಿದ್ದರು.

2016 ರ ನವೆಂಬರ್‌ 8 ರ ರಾತ್ರಿ 08:15 ಕ್ಕೆ ಪ್ರಧಾನಿ ಮೋದಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಕಪ್ಪು ಹಣ, ಭ್ರಷ್ಟಾಚಾರ, ಖೋಟಾ ನೋಟು ತಡೆಗೆ ಹಾಗೂ ನಗದು ರಹಿತ ಆರ್ಥಿಕತೆಗೆ ಬೇಕಾಗಿ ‘1000’ ಮತ್ತು ‘500’ ಮುಖ ಬೆಲೆಯ ಹಳೆಯ ನೋಟುಗಳನ್ನು ರದ್ದು ಮಾಡಿತ್ತಿದ್ದೇವೆ ಎಂದು ಹೇಳಿದ್ದರು.

ಇದನ್ನೂ ಓದಿ: ನೋಟ್‌ ಬ್ಯಾನ್‌ಗೆ 5 ವರ್ಷ: ಮೋದಿ ನೇತೃತ್ವದ BJP ಸರ್ಕಾರ ಅಂದು ಹೇಳಿದ್ದೇನು? ಈಗ ಅಉ ಆಗಿದೆಯೆ?

ಆದರೆ, ಇವುಗಳಿಗೆ ವಿರುದ್ದವಾಗಿ ದೇಶದ ಬ್ಯಾಂಕುಗಳಲ್ಲಿ, ತಮ್ಮ ನೋಟುಗಳನ್ನು ಬದಲಾಯಿಸಿಕೊಳ್ಳಲು ಜನರು ಉದ್ದನೆಯ ಸರತಿ ಸಾಲಿನಲ್ಲಿ ನಿಲ್ಲಬೇಕಾಯಿತು. ಈ ಸಮಯದಲ್ಲಿ ಹಲವರು ಮೃತಪಟ್ಟರು. ತಮ್ಮ ಅಗತ್ಯಗಳಿಗೆ ಬೇಕಾದಷ್ಟು ಹಣವಿಲ್ಲದೆ ಜನರು ಪರದಾಡಬೇಕಾಯಿತು. ಬಡಜನತೆಯ ಅಸಹಾಯಕತೆಯಿಂದ ಅಳುತ್ತಿರುವ ದೃಶ್ಯಗಳು ಸಾಮಾನ್ಯವಾಗಿತ್ತು. ನೋಡ ನೋಡುತ್ತಿದ್ದಂತೆ ದೇಶದಲ್ಲಿ ಮನುಷ್ಯ ನಿರ್ಮಿತ ದುರಂತವೊಂದು ನಡೆದೇ ಹೋಯಿತು.

ದೇಶವು ಮರೆಯಬಾರದ ದುರಂತವೊಂದರ ಚಿತ್ರಗಳು ಇಲ್ಲಿವೆ.

ಗುರ್‌‌ಗಾಂವ್‌ನ ಬ್ಯಾಂಕ್‌ನ ಹೊರಗೆ ಇದ್ದ ಸಾಲಿನಲ್ಲಿ ತನ್ನ ಸರತಿಯನ್ನು ಕಳೆದುಕೊಂಡ ಕಾರಣಕ್ಕೆ ವೃದ್ಧನೊಬ್ಬ ಅಳುತ್ತಿರುವ ದೃಶ್ಯ | PC: HT
ಉತ್ತರಪ್ರದೇಶದ ಕುಶಿನಗರ ಜಿಲ್ಲೆಯ ಕಪ್ತಂಗಂಜ್ ಪ್ರದೇಶದ ನಿವಾಸಿಯಾದ ತೀರ್ಥಜಿ ದೇವಿ ತನ್ನ ಮತ್ತು ಕುಟುಂಬವನ್ನು ಪೋಷಿಸಲು ಕೂಲಿ ಕೆಲಸ ಮಾಡುತ್ತಿದ್ದರು. ನೋಟು ಅಮಾನ್ಯೀಕರಣದ ಬಗ್ಗೆ ಮಾಹಿತಿ ತಿಳಿಯದೆ ನವೆಂಬರ್ 9 ರಂದು ತಮ್ಮ ಉಳಿತಾಯದಿಂದ ತಲಾ ಒಂದು ಸಾವಿರ ರೂಪಾಯಿಗಳ ನಾಲ್ಕು ನೋಟುಗಳನ್ನು ಠೇವಣಿ ಮಾಡಲು ಸೆಂಟ್ರಲ್ ಬ್ಯಾಂಕ್‌ಗೆ ತೆರಳಿದ್ದರು. ಬ್ಯಾಂಕಿನ ಹೊರಗಿದ್ದ ಜನರು 500-1000 ನೋಟುಗಳ ಅಮಾನ್ಯೀಕರಣದ ಬಗ್ಗೆ ತಿಳಿಸಿದಾಗ, ತನ್ನ ಸಂಪಾದನೆಯ ನಾಲ್ಕು ಸಾವಿರ ರೂಪಾಯಿ ವ್ಯರ್ಥವಾಯಿತು ಎಂದು ಮಹಿಳೆ ಭಾವಿಸಿ ತೀವ್ರ ಆಘಾತಕ್ಕೊಳಗಾಗಿ ಅಲ್ಲಿಯೇ ನಿಧನರಾದರು.
Image
ತನ್ನ ಹಣವನ್ನು ಬದಲಾಯಿಸಲು ಹೆಣಗಾಡುತ್ತಿರುವ ವೃದ್ಧ ಅಂಗವಿಕಲ ಮಹಿಳೆ.
terrorist attack, black money, demonetization, unconscious, redundant, deposit
ತನ್ನ ಹಣವು ನಿಷ್ಪ್ರಯೋಜಕವೆಂದು ತಿಳಿದು ಕಣ್ಣೀರು ಹಾಕುತ್ತಿರುವ ವ್ಯಕ್ತಿ.
Image
ನಗದು ಇಲ್ಲ ಎಂದು ಬೋರ್ಡ್ ಹಾಕಿದ ಬ್ಯಾಂಕಿನ ಮುಂದೆ ರೋಧಿಸುತ್ತಿರುವ ವೃದ್ದೆ
Image
ತನ್ನ ಹಣಕ್ಕಾಗಿ ಮೂತ್ರಚೀಲದೊಂದಿಗೆ ಬ್ಯಾಂಕಿಗೆ ಬಂದ ರೋಗಿ ವೃದ್ಧ
ಉತ್ತರಪ್ರದೇಶದ ಕುಶಿನಗರ ಜಿಲ್ಲೆಯ ಕಪ್ತಂಗಂಜ್ ಪ್ರದೇಶದ ನಿವಾಸಿಯಾದ ತೀರ್ಥಜಿ ದೇವಿ ತನ್ನ ಮತ್ತು ಕುಟುಂಬವನ್ನು ಪೋಷಿಸಲು ಕೂಲಿ ಕೆಲಸ ಮಾಡುತ್ತಿದ್ದರು. ನೋಟು ಅಮಾನ್ಯೀಕರಣದ ಬಗ್ಗೆ ಮಾಹಿತಿ ತಿಳಿಯದೆ ನವೆಂಬರ್ 9 ರಂದು ತಮ್ಮ ಉಳಿತಾಯದಿಂದ ತಲಾ ಒಂದು ಸಾವಿರ ರೂಪಾಯಿಗಳ ನಾಲ್ಕು ನೋಟುಗಳನ್ನು ಠೇವಣಿ ಮಾಡಲು ಸೆಂಟ್ರಲ್ ಬ್ಯಾಂಕ್‌ಗೆ ತೆರಳಿದ್ದರು. ಬ್ಯಾಂಕಿನ ಹೊರಗಿದ್ದ ಜನರು 500-1000 ನೋಟುಗಳ ಅಮಾನ್ಯೀಕರಣದ ಬಗ್ಗೆ ತಿಳಿಸಿದಾಗ, ತನ್ನ ಸಂಪಾದನೆಯ ನಾಲ್ಕು ಸಾವಿರ ರೂಪಾಯಿ ವ್ಯರ್ಥವಾಯಿತು ಎಂದು ಮಹಿಳೆ ಭಾವಿಸಿ ತೀವ್ರ ಆಘಾತಕ್ಕೊಳಗಾಗಿ ಅಲ್ಲಿಯೇ ನಿಧನರಾದರು. ಅವರ ಸಾವಿಗೆ ರೋಧಿಸುತ್ತಿರುವ ಸಂಬಂಧಿಕರು
ತಮ್ಮ ಹಣಗಳ ಬಗ್ಗೆ ಚಿಂತಿತರಾಗಿರುವ ಜನರು

 

http-%2f%2fo-aolcdn-com%2fhss%2fstorage%2fmidas%2f32d4793915fcf87be41c450381596fff%2f204583876%2f623013552

Image
ಹಣ ಬದಲಾವಣೆಗೆ ಬಂದ ವೃದ್ದೆ

ವಿಡಿಯೊಗಳು


ಅಮಾಯಕ ಜನರ ಮೇಲೆ ಲಾಠಿ ಚಾರ್ಜ್


ಬ್ಯಾಂಕಗಳಲ್ಲಿನ ಪರಿಸ್ಥಿತಿ


ಬ್ಯಾಂಕಿನ ಮುಂದೆ ಜನರ ಸರತಿ ಸಾಲು

2016 ನವೆಂಬರ್‌ 13 ರಂದು ಗೋವಾದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಐವತ್ತು ದಿನಗಳ ಕಾಲಾವಕಾಶವನ್ನು ದೇಶದ ಜನತೆಯಿಂದ ಕೇಳಿದ್ದರು. ನಂತರವೂ ತಾವು ಕೈಗೊಂಡ ಕ್ರಮದಲ್ಲಿ ಲೋಪದೋಷಗಳಿದ್ದರೆ ದೇಶ ನೀಡುವ ಶಿಕ್ಷೆಗೆ ನಾನು ಸಿದ್ದನಿದ್ದೇನೆ ಎಂದು ಭಾವೋದ್ವೇಗದಿಂದ ಮಾತನಾಡಿದ್ದರು. ಆದರೆ ಇಂದಿಗೆ ನೋಟ್‌ ಬ್ಯಾನ್ ಆಗಿ ಐದು ವರ್ಷಗಳಾಯಿತು!.

ಇದನ್ನೂ ಓದಿ: ಸ್ವಿಸ್‌ ಬ್ಯಾಂಕ್‌: 20,700 ಕೋಟಿಗೆ ಏರಿಕೆಯಾದ ಭಾರತೀಯರ ಹಣ; 13 ವರ್ಷಗಳಲ್ಲೇ ಹೆಚ್ಚು!

LEAVE A REPLY

Please enter your comment!
Please enter your name here