Homeಅಂತರಾಷ್ಟ್ರೀಯಅಮೆರಿಕವನ್ನು ಹಿಂದಿಕ್ಕಲಿದೆ ಚೀನಾ ಆರ್ಥಿಕತೆ; ಯಾಕೆ ಗೊತ್ತೇ?

ಅಮೆರಿಕವನ್ನು ಹಿಂದಿಕ್ಕಲಿದೆ ಚೀನಾ ಆರ್ಥಿಕತೆ; ಯಾಕೆ ಗೊತ್ತೇ?

2028 ರಲ್ಲಿ ಅಮೇರಿಕಾವನ್ನು ಹಿಂದಿಕ್ಕಿ ಚೀನಾ ವಿಶ್ವದ ಅತೀ ದೊಡ್ಡ ಆರ್ಥಿಕ ಶಕ್ತಿಯಾಗಲಿದೆ

- Advertisement -
- Advertisement -

ಕೊರೊನಾ ಸಾಂಕ್ರಮಿಕದಿಂದಾಗಿ ವಿಶ್ವದೆಲ್ಲೆಡೆ ಆರ್ಥಿಕ ಕುಸಿತ ಉಂಟಾಗಿದ್ದು, ವಿಶ್ವದ ದೊಡ್ಡಣ್ಣ ಎನಿಸಿಕೊಂಡಿದ್ದ ಅಮೆರಿಕ ಕೂಡಾ ಕೊರೊನಾ ಹೊಡೆತದಿಂದ ಹೊರತಾಗಿರಲಿಲ್ಲ. ಕೊರೊನಾ ಸಾಂಕ್ರಮಿಕದಿಂದಾಗಿ ಉಂಟಾದ ಆರ್ಥಿಕ ಏರುಪೇರಿನ ಕಾರಣಕ್ಕೆ, ಚೀನಾ ದೇಶವು ನಿರೀಕ್ಷೆಗಿಂತ ಐದು ವರ್ಷ ಮೊದಲೇ ವಿಶ್ವದ ಅತಿ ದೊಡ್ಡ ಆರ್ಥಿಕತೆಯ ದೇಶವಾಗಲಿದೆ ಎಂದು ಸೆಂಟರ್‌ ಫಾರ್‌ ಇಕನಾಮಿಕ್ಸ್‌ ಆಂಡ್ ಬ್ಯುಸಿನೆಸ್ ರಿಸರ್ಚ್ ಶನಿವಾರ ಪ್ರಕಟವಾದ ತನ್ನ ವಾರ್ಷಿಕ ವರದಿಯಲ್ಲಿ ಹೇಳಿದೆ.

ಇದನ್ನೂ ಓದಿ:ಚೀನಾ ಮತ್ತು ನಮ್ಮ ನಡುವೆ ನಡೆಯುತ್ತಿರುವ ಚರ್ಚೆ ಗೌಪ್ಯವಾದದ್ದು: ಭಾರತದ ವಿದೇಶಾಂಗ ಸಚಿವ!

ಈ ಹಿಂದೆಯೆ ಚೀನಾವು ವಿಶ್ವದ ಅತೀ ದೊಡ್ಡ ಆರ್ಥಿಕತೆಯಾಗಲಿದೆ ಎಂದು ಹೇಳಲಾಗಿತ್ತಾದರೂ, ಕೊರೊನಾ ಸಮಯದಲ್ಲಿ ತನ್ನ ಆರ್ಥಿಕತೆಯನ್ನು ಸರಿಯಾಗಿ ನಿರ್ವಹಿಸಿದ ಕಾರಣಕ್ಕೆ ಹಾಗೂ ದೇಶದ ಆರ್ಥಿಕತೆಯ ದೀರ್ಘಕಾಲಿಕ ಬೆಳವಣಿಗೆಯಿಂದ 2028 ರಲ್ಲಿ ಅಮೇರಿಕಾವನ್ನು ಹಿಂದಿಕ್ಕಿ ಚೀನಾ ವಿಶ್ವದ ಅತೀ ದೊಡ್ಡ ಆರ್ಥಿಕತೆಯಿರುವ ದೇಶವಾಗಲಿದೆ ಎಂದು ವರದಿ ಹೇಳಿದೆ.

ಚೀನಾ 2021-25 ರ ಆರ್ಥಿಕ ವರ್ಷಕ್ಕೆ ಸರಾಸರಿ 5.7 % ಆರ್ಥಿಕ ಬೆಳವಣಿಗೆಯನ್ನು ಹೊಂದಲಿದ್ದು, 2026-30 ರ ಅವಧಿಯಲ್ಲಿ 4.5% ಕ್ಕೆ ಆರ್ಥಿಕತೆ ಇಳಿಕೆಯಾಗಲಿದೆ ಎಂದು ವರದಿ ಹೇಳಿದೆ.

ಅಮೆರಿಕ ಆರ್ಥಿಕತೆ 2021 ರಲ್ಲಿ ಬೆಳವಣಿಗೆಯಾಗುವ ಸಾಧ್ಯತೆಯಿದೆ ಎಂದು ವರದಿ ಹೇಳಿದ್ದು, ಆದರೆ ಈ ಬೆಳವಣಿಗೆಯು 2022 ಮತ್ತು 2024 ರ ನಡುವೆ 1.9% ಇಳಿಕೆಯಾಗಲಿದೆ ಮತ್ತು ನಂತರದ ವರ್ಷಗಳಲ್ಲಿ 1.6% ಕ್ಕೆ ಇಳಿಯುತ್ತದೆ ಎಂದು ವರದಿಯು ಸೂಚಿಸಿದೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ಗಾಲ್ವಾನ್‌ ಕಣಿವೆಯಲ್ಲಿ ಸಾವಿಗೀಡಾದ ಚೀನಾ ಸೈನಿಕರ ಸಮಾಧಿಯೆಂದು ಹಳೆಯ ಚಿತ್ರಗಳನ್ನು ಪ್ರಸಾರ ಮಾಡಿದ ಮಾಧ್ಯಮಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಿಂಸೆಯೊಳಗಣ ಕಾರುಣ್ಯ: ಪ.ರಂಜಿತ್‌ ನಿರ್ದೇಶನದ ‘ಧಮ್ಮಮ್‌’ ತೆರೆದಿಟ್ಟ ತಾತ್ವಿಕತೆ

ಸೋನಿ ಲೈವ್‌ ಒಟಿಟಿಯಲ್ಲಿ ಬಿಡುಗಡೆಯಾಗಿರುವ ‘ವಿಕ್ಟಿಮ್’ ಎಂಬ ಆಂಥಾಲಜಿಯ ಮೊದಲ ಚಾಪ್ಟರ್‌ ‘ಧಮ್ಮಮ್‌’- ವಿಮರ್ಶಕರ ಮನಗೆದ್ದಿದೆ. ದಲಿತ ಪ್ರತಿರೋಧದ ಕಥನಗಳನ್ನು ತಮಿಳು ನೆಲದಲ್ಲಿ ಕಟ್ಟಿಕೊಡುತ್ತಿರುವ ಪ.ರಂಜಿತ್‌, ‘ಧಮ್ಮಮ್‌’ ನಿರ್ದೇಶಕರೆಂಬುದು ಮತ್ತೊಂದು ಗಮನಾರ್ಹ ಸಂಗತಿ. ಅರ್ಧ...