ಚೀನಾ ಮತ್ತು ನಮ್ಮ ನಡುವೆ ನಡೆಯುತ್ತಿರುವ ಚರ್ಚೆ ಗೌಪ್ಯವಾದದ್ದು: ಭಾರತದ ವಿದೇಶಾಂಗ ಸಚಿವ!
PC: The indian express

“ಚೀನಾ-ಭಾರತದ ಗಡಿ ಉದ್ವಿಗ್ನತೆಯನ್ನು ಬಗೆಹರಿಸಲು ಉಭಯ ದೇಶಗಳು ಮಾತುಕತೆ ನಡೆಸುತ್ತಿವೆ, ಅದು ನಮ್ಮ ಮತ್ತು ಚೀನಾದ ನಡುವಿನ ಗೌಪ್ಯತೆಯ ವಿಷಯ” ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಗುರುವಾರ ಹೇಳಿದ್ದಾರೆ.

“ಚರ್ಚೆಗಳು ನಡೆಯುತ್ತಿವೆ. ಏನು ನಡೆಯುತ್ತಿದೆ ಎಂಬುದು ನಮ್ಮ ಮತ್ತು ಚೀನಿಯರ ನಡುವಿನ ಗೌಪ್ಯವಾದ ಸಂಗತಿಯಾಗಿದೆ. ಇದನ್ನು ಪೂರ್ವಗ್ರಹಪೀಡಿತಗೊಳಿಸಲು ನಾನು ಬಯಸುವುದಿಲ್ಲ” ಎಂದು ಬ್ಲೂಮ್‌ಬರ್ಗ್ ಇಂಡಿಯಾ ಎಕನಾಮಿಕ್ ಫೋರಂ ಅನ್ನು ಉದ್ದೇಶಿಸಿ ಮಾತನಾಡಿದರು ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

“ವಾಸ್ತವಿಕ ಗಡಿರೇಖೆಯ ಉದ್ದಕ್ಕೂ ಅಭೂತಪೂರ್ವ ಸೈನ್ಯವನ್ನು ನಿರ್ಮಿಸಲಾಗಿದೆ. ಬೆಳೆಯುತ್ತಿರುವ ಉಭಯ ದೇಶಗಳು ಸಮತೋಲನವನ್ನು ಕಂಡುಕೊಳ್ಳಬಹುದೇ? ಈಗ ಗಡಿಯಲ್ಲಿ ನೀವು ನೋಡುತ್ತಿರುವುದು ನಿಜಕ್ಕೂ ಸವಾಲಿನ ಅಭಿವ್ಯಕ್ತಿಯಾಗಿದೆ” ಎಂದು ವಿದೇಶಾಂಗ ಸಚಿವರು ಹೇಳಿದರು.

ಇದನ್ನೂ ಓದಿ: ಚೀನಾದೊಂದಿಗೆ ರಾಜತಾಂತ್ರಿಕ ಮಾತುಕತೆ ಸಾಧ್ಯವಾದರೆ, ಪಾಕಿಸ್ತಾನದೊಂದಿಗೆ ಯಾಕಿಲ್ಲ: ಫಾರೂಕ್ ಅಬ್ದುಲ್ಲಾ ಪ್ರಶ್ನೆ

ನಮ್ಮ ಆಂತರಿಕ ವಿಷಯಗಳ ಕುರಿತು ಚೀನಾ ಮಾತನಾಡಬಾರದು:

ಗಡಿಯಲ್ಲಿ ಶಾಂತಿ ಕಾಪಾಡುವುದಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳು ಸರಣಿ ಒಪ್ಪಂದಗಳಿಗೆ ಸಹಿ ಹಾಕಿದ ನಂತರ, 1993 ರಿಂದ ಚೀನಾ ಮತ್ತು ಭಾರತದ ನಡುವಿನ ಸಂಬಂಧ ಸುಧಾರಿಸಿದೆ. ಶಾಂತಿ ಮತ್ತು ನೆಮ್ಮದಿ ಖಾತ್ರಿಪಡಿಸದಿದ್ದಾಗ ಮತ್ತು ಸಹಿ ಹಾಕಿದ ಒಪ್ಪಂದಗಳನ್ನು ಗೌರವಿಸದಿದ್ದರೆ, ಇದೇ ಅಡ್ಡಿಪಡಿಸುವಿಕೆಗೆ ಪ್ರಾಥಮಿಕ ಕಾರಣವಾಗುತ್ತದೆ” ಎಂದು ಜೈಶಂಕರ್ ಹೇಳಿದರು.

“ಚೀನಾವನ್ನು ಸಂಪೂರ್ಣವಾಗಿ ನಂಬಲು ಸಾಧ್ಯವಿಲ್ಲದ ಕಾರಣ, ಪ್ರಸ್ತುತ ನಡೆಯುತ್ತಿರುವ ಮಾತುಕತೆಗಳ ಬಗ್ಗೆ ಸಚಿವರು ತಮ್ಮ ಹೇಳಿಕೆಗಳಲ್ಲಿ ಜಾಗರೂಕರಾಗಿದ್ದಾರೆ” ಎಂದು ಮಾಜಿ ರಾಜತಾಂತ್ರಿಕರೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ಚೀನಾ ಪಡೆಗಳಿಂದಲೇ ಪ್ರಚೋದನೆ- ಗಾಳಿಯಲ್ಲಿ ಗುಂಡು ಹಾರಿಸಿದ್ದವು: ಭಾರತದ ಪ್ರತ್ಯುತ್ತರ

“ಭಾರತದ ಕೆಡೆಯಿಂದ ಹಾಗೂ ಅರುಣಾಚಲ ಪ್ರದೇಶದಿಂದ ಅಕ್ರಮವಾಗಿ ರೂಪಿಸಾಲದ ಲಡಾಖ್ ಕೇಂದ್ರಾಡಳಿತ ಪ್ರದೇಶವನ್ನು ಚೀನಾ ಪರಿಗಣಿಸುವುದಿಲ್ಲ. ಗಡಿ ಪ್ರದೇಶದ ಉದ್ದಕ್ಕೂ ಸೇನಾ ಉದ್ವಿಗ್ನತೆಯ ಉದ್ದೇಶದಿಂದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯನ್ನು ನಾವು ವಿರೋಧಿಸುತ್ತೇವೆ” ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿದ್ದರು.

ಗಡಿ ಪ್ರದೇಶದಲ್ಲಿ ಸರಣಿಯಾಗಿ ನೂತನ ಸೇತುವೆಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಿದ ಹಿನ್ನೆಲೆಯಲ್ಲಿ ಚೀನಾ ಈ ಹೇಳಿಕೆ ನೀಡಿದೆ.

ಇದಕ್ಕೆ ಕಟುವಾಗಿ ಪ್ರತಿಕ್ರಿಯಿಸಿದ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ್, “ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಹಾಗೂ ಕಾಶ್ಮೀರ, ಲಡಾಖ್ ಭಾರತದ ಅವಿಭಾಜ್ಯ ಅಂಗ. ಭಾರತದ ಆಂತರಿಕ ವಿಷಯಗಳ ಬಗ್ಗೆ ಹೇಳಿಕೆ ನೀಡಲು ಚೀನಾಕ್ಕೆ ಹಕ್ಕಿಲ್ಲ. ಅರುಣಾಚಲ ಪ್ರದೇಶದ ಬಗ್ಗೆ ಕೂಡಾ ನಮ್ಮ ನಿಲುವನ್ನು ಈಗಾಗಲೆ ಹಲವು ಬಾರಿ ಹೇಳಿದ್ದೇವೆ. ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಹಾಗೂ ಪ್ರತ್ಯೇಕಿಸಲಾಗದ ಭಾಗ. ಈ ಸತ್ಯವನ್ನು ಹಲವು ಬಾರಿ ಚೀನಾಕ್ಕೆ ಮನವರಿಕೆ ಮಾಡಲಾಗಿದೆ” ಎಂದು ಹೇಳಿದ್ದಾರೆ.


ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ಗಾಲ್ವಾನ್‌ ಕಣಿವೆಯಲ್ಲಿ ಸಾವಿಗೀಡಾದ ಚೀನಾ ಸೈನಿಕರ ಸಮಾಧಿಯೆಂದು ಹಳೆಯ ಚಿತ್ರಗಳನ್ನು ಪ್ರಸಾರ ಮಾಡಿದ ಮಾಧ್ಯಮಗಳು

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts

LEAVE A REPLY

Please enter your comment!
Please enter your name here