Homeಮುಖಪುಟಕೊರೊನಾ ತಡೆಯಲು ಪಣ: ಭಾರತೀಯರು ಈಗಲೂ ಪ್ರಜ್ಞಾವಂತರಂತೆ ನಡೆದುಕೊಳ್ಳದಿದ್ದರೆ ಇನ್ಯಾವಾಗ?

ಕೊರೊನಾ ತಡೆಯಲು ಪಣ: ಭಾರತೀಯರು ಈಗಲೂ ಪ್ರಜ್ಞಾವಂತರಂತೆ ನಡೆದುಕೊಳ್ಳದಿದ್ದರೆ ಇನ್ಯಾವಾಗ?

- Advertisement -
- Advertisement -

ದಶಕಗಳ ಹಿಂದೆಯೇ ಭಾರತ ದೇಶ ಪ್ಲೇಗ್, ಕಾಲರಾ, ಕ್ಷಯ, ಮಲೇರಿಯಾದಂತಹ ಮಾರಕ ಖಾಯಿಲೆಗಳ ವಿರುದ್ಧ ಹೋರಾಡಿ ಗೆಲುವು ಸಾಧಿಸಿದೆ. ಮಲೆನಾಡಿನ ಭಾಗದಲ್ಲಿ ಈಗಲೂ ಮಂಗನ ಖಾಯಿಲೆ ವಿರುದ್ಧ ನಿರಂತರ ಹೋರಾಟ ನಡೆಯುತ್ತಲೇ ಇದೆ. ಆದರೆ, ಇದೀಗ ಆವರಿಸಿರುವ ಕೊರೊನಾ ಇದೆಲ್ಲಕ್ಕಿಂತ ಅತ್ಯಂತ ಅಪಾಯಕಾರಿ.

ಎರಡು ತಿಂಗಳ ಹಿಂದೆ ಈ ಮಾರಣಾಂತಿಕ ಸೋಂಕು ಚೀನಾದಲ್ಲಿ ಸಾಲು ಸಾಲು ಬಲಿ ಪಡೆಯುತ್ತಿದ್ದ ಸಂದರ್ಭದಲ್ಲೇ ಭಾರತದಲ್ಲಿ ಅನೇಕ ಪ್ರಜ್ಞಾವಂತರು ಕೇಂದ್ರ ಸರ್ಕಾರವನ್ನು ಎಚ್ಚರಿಸಿದ್ದರು. ಆದರೆ, ಈ ಸೋಂಕು ಭಾರತಕ್ಕೆ ಬಾರದು ಎಂದೇ ಭಾವಿಸಿದ್ದ ಸರ್ಕಾರ ಕುಂಬಕರ್ಣ ನಿದ್ದಿಗೆ ಜಾರಿತ್ತು. ಆದರೆ, ಇದರ ನಿಜವಾದ ಬಿಸಿ ಯಾವಾಗ ತಟ್ಟಿತ್ತೋ ಇದೀಗ ಮೆಲ್ಲನೆ ನಿದ್ದೆಯಿಂದ ಜಾಗೃತರಾಗುತ್ತಿದೆ.

ಈ ಸೋಂಕು ಮನುಕುಲದ ಮುಂದಿಟ್ಟಿರುವ ಭೀತಿ ಅಷ್ಟಿಷ್ಟಲ್ಲ. ಚೀನಾದಲ್ಲಿ 3700 ಬಲಿ ಪಡೆದ ಈ ಮಹಾಮಾರಿ ಇಟಲಿಯಲ್ಲಿ ದಿನನಿತ್ಯ ಮರಣಮೃದಂಗ ಬಾರಿಸುತ್ತಿದೆ. ಈವರೆಗೆ 4,000 ಕ್ಕೂ ಅಧಿಕ ಜೀವಗಳ ಬಲಿ ಪಡೆದಿದೆ. ಭಾರತದಲ್ಲೂ 10 ಜನ ಬಲಿಯಾಗಿದ್ದಾರೆ. ವಿಶ್ವದಾದ್ಯಂತ ಒಟ್ಟಾರೆ ಮೃತಪಟ್ಟವರ ಸಂಖ್ಯೆ 14,000 ದಾಟಿದ್ದು, 2 ಲಕ್ಷಕ್ಕೂ ಅಧಿಕ ಜನರಿಗೆ ಸೋಂಕು ತಗುಲಿದೆ.

ಇಲ್ಲಿ ಗಮನಿಸಬೇಕಾದ ಅಗತ್ಯ ಅಂಶ ಎಂದರೆ ಸರ್ಕಾರದ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಸೋಂಕಿತರ ಸಂಖ್ಯೆ ಕೇವಲ 500 ಎಂದು ಹೇಳಲಾಗುತ್ತಿದೆ. ಅಂದರೆ ಸರ್ಕಾರ ಈವರೆಗೆ ವಿದೇಶದಿಂದ ಆಗಮಿಸಿದವರು ಮತ್ತು ಅವರ ಕುಟುಂಬಸ್ಥರನ್ನು ಮಾತ್ರ ಪರೀಕ್ಷೆಗೆ ಒಳಪಡಿಸಿದೆ. ಆದರೆ, 130 ಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ನಮ್ಮ-ನಿಮ್ಮಂತಹ ಸಾಮಾನ್ಯ ಜನ ಈವರೆಗೆ ಯಾವುದೇ ಪರೀಕ್ಷೆಗೆ ಒಳಪಟ್ಟಿಲ್ಲ. ಹೀಗಾಗಿ ಸೋಂಕಿತರ ಸಂಖ್ಯೆ ಇದರ ನೂರು ಪಟ್ಟು ಅಧಿಕ ಇರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇದು ಕೇವಲ ಇಂದು ಊಹೆಯಾಗಿದ್ದು ಒಂದು ವೇಳೆ ನಿಜವಾದರೆ ಭಾರತದಲ್ಲಿ 50 ರಿಂದ 80 ಮಿಲಿಯನ್ ಜನರಿಗೆ ಈ ಸೋಂಕು ವ್ಯಾಪಿಸುವ ಸಾಧ್ಯತೆ ಇದೆ. ಈ ಪೈಕಿ ಕನಿಷ್ಟ ಶೇ.2 ರಷ್ಟು ಜನ ಸಾವನ್ನಪ್ಪುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅಲ್ಲದೆ, ಇಷ್ಟು ಜನರಿಗೆ ವೆಂಟಿಲೇಟರ್ ಸೇರಿದಂತೆ ಆರೋಗ್ಯ ವ್ಯವಸ್ಥೆಯನ್ನು ಅಗತ್ಯ ಸಲಕರಣೆ-ಸೌಲಭ್ಯಗಳನ್ನು ಕಲ್ಪಿಸುವುದು ಯಾವುದೇ ಸರ್ಕಾರಕ್ಕೂ ಸವಾಲಿನ ಕೆಲಸವೇ ಸರಿ. ಇದೇ ಕಾರಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾರಣಾಂತಿಕ ಸೋಂಕು ಹರಡದಂತೆ ತಡೆಯುವ ಸಲುವಾಗಿ ಇಡೀ ದೇಶದಾದ್ಯಂತ ಲಾಕ್‌ಡೌನ್‌ ಘೋಷಿಸಿರುವುದು.

ಲಾಕ್‌ಡೌನ್‌ ಎಂದರೆ ಶಂಕ ಜಾಗಟೆ ಬಾರಿಸುವುದಲ್ಲ!

ಕೊರೋನಾ ಸೋಂಕಿಗೆ ಯಾವುದೇ ಔಷಧ ಈವರೆಗೆ ಕಂಡುಹಿಡಿದಿಲ್ಲ. ಹೀಗಾಗಿ ಇಡೀ ರಾಷ್ಟ್ರದಾದ್ಯಂತ ಈ ಸೋಂಕು ವ್ಯಾಪಿಸದಂತೆ ತಡೆಯಲು ನಮ್ಮ ಮುಂದಿರುವ ಏಕೈಕ ಸಾಧನ ಎಂದರೆ ಸುರಕ್ಷಿತವಾಗಿ ಮನೆಯಲ್ಲಿರುವುದು. ಇದರ ಹೊರತಾಗಿ ಬೇರಾವುದೇ ಮಾರ್ಗ ತೋಚುತ್ತಿಲ್ಲ.

ಇದೇ ಕಾರಣಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 22 ರಂದು ಜನತಾ ಕರ್ಫ್ಯೂಗೆ ಕರೆ ನೀಡಿದ್ದರು. ಬೆಳಗ್ಗೆ 6 ರಿಂದ 9ರ ವರೆಗೆ ಜನಸಾಮಾನ್ಯರು ಮನೆಯಿಂದ ಆಚೆ ಬರದಂತೆ ಕರೆ ನೀಡಿದ್ದರು. ಜನ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಕರೆ ನೀಡಿದ್ದರು. ಪ್ರಾಯೋಗಿಕವಾಗಿ ಇದೊಂದು ಉತ್ತಮ ನಡೆಯೇ ಸರಿ. ಆದರೆ, ಅವರು ಅದೊಂದು ಕರೆ ನೀಡಬಾರದಿತ್ತು.

ರಾತ್ರಿ 8 ಗಂಟೆಯ ಮನ್ ಕಿ ಬಾತ್‌ನ ಮಾತಿನ ನಡುವೆ ಪ್ರಧಾನಿ ಮೋದಿ ಕೊರೋನಾ ಭೀತಿಯ ನಡುವೆಯೂ ನಮಗಾಗಿ ಹಗಲಿರುಳು ದುಡಿಯುವ ವೈದ್ಯರು, ಪೌರ ಕಾರ್ಮಿಕರು, ಸೈನಿಕರು ಮತ್ತು ಪೊಲೀಸರಿಗಾಗಿ ಸಂಜೆ 5 ಗಂಟೆಯ ಮನೆಯ ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ತಟ್ಟಲು ಹೇಳಿದರಷ್ಟೆ.

ಆದರೆ, ಪ್ರಧಾನಿಯ ಮಾತನ್ನು ನಾವು ಶಿರಸಾವಹಿಸಿ ಪಾಲಿಸುತ್ತೇವೆ ಎಂಬ ಭ್ರಮೆಯಲ್ಲೋ? ಭಕ್ತಿಯಲ್ಲೋ? ಒಂದಷ್ಟು ಜನ ದೇಶದಾದ್ಯಂತ ಅಲ್ಲಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಾಮೂಹಿಕವಾಗಿ ಸೇರಿದ್ದಾರೆ. ಅಲ್ಲದೆ, ಅತಿರೇಕಕ್ಕೆ ಹೋದ ಅಭಿಮಾನದಿಂದಾಗಿ ಶಂಕ ಜಾಗಟೆ ಬಾರಿಸಿ ಪ್ರಧಾನಿಯ ಕರೆಗೆ ಬೆಂಬಲ ಸೂಚಿಸಿದ್ದಾರೆ. ಈ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂಬ ಪ್ರಧಾನಿಯ ಮನವಿಗೆ ಎಳ್ಳುನೀರು ಬಿಟ್ಟಿದ್ದಾರೆ.

ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ವೈರಲ್ಗೆ ಒಳಗಾದವು. ಇದು ನಿಜಕ್ಕೂ ಜವಾಬ್ದಾರಿಯುತ ಜನ ಸಮೂಹ ಮಾಡುವ ಕೆಲಸವಾಗಿರಲಿಲ್ಲ. ಅದರಲ್ಲೂ ಭಾರತ ವಿಶ್ವಗುರು ಎಂದು ಹೇಳಿಕೊಂಡು ಬೀಗುವ ಸಮಾಜದ ನಡುವೆ ಈ ಸನ್ನಿವೇಶ ವಿಶ್ವ ಮಟ್ಟದಲ್ಲಿ ಭಾರತವನ್ನು ನಗೆಪಾಟಲಿಗೆ ಈಡಾಗಿಸಿದ್ದು ಸುಳ್ಳಲ್ಲ.

ಆದರೆ, ನಿನ್ನೆಯವರೆಗೆ ಮನವಿಯಾಗಿದ್ದ ಲಾಕ್‌ಡೌನ್‌ ಇಂದು ಸರ್ಕಾರದ ಅಧಿಕೃತ ಆದೇಶವಾಗಿಯೇ ಹೊರಬಿದ್ದಿದೆ. ಜನ ಅನಗತ್ಯವಾಗಿ ಮನೆಯಿಂದ ಹೊರ ಬಂದರೆ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸುವುದಾಗಿ ಪೊಲೀಸರು ಎಚ್ಚರಿಸಿದ್ದಾರೆ. ಇದೇ ಕಾರಣಕ್ಕೆ ಇಂದು ಸರ್ಕಾರ ವಲಯದಿಂದ ಖಾಸಗಿ ವಲಯದ ವರೆಗೆ ಎಲ್ಲಾ ವಲಯದಲ್ಲೂ work from home ಅಂದರೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ನೀಡಲಾಗಿದೆ. ಐಟಿಬಿಟಿ ಕಂಪೆನಿಗಳೂ ಸಹ ತಿಂಗಳ ಹಿಂದೆಯೇ ತಮ್ಮ ಉದ್ಯೋಗಿಗಳ ಸುರಕ್ಷತೆಯ ದೃಷ್ಟಿಯಿಂದ ಮನೆಯಿಂದಲೇ ಕೆಲಸ ಮಾಡುವ ಅವಕಾಶ ನೀಡಿದೆ.

ಹೀಗಾಗಿ ಜನ ಮನೆಯಲ್ಲೇ ಸುರಕ್ಷಿತವಾಗಿ ಕೆಲಸ ಮಾಡುವುದು ಒಳಿತು. ಅನಗತ್ಯವಾಗಿ ಒಂದೆಡೆ ಸೇರದೆ, ಜನ ಸಮೂಹ ಇರುವ ಸ್ಥಳಗಳಿಂದ ದೂರ ಇದ್ದಷ್ಟು ನಿಮ್ಮ ಮತ್ತು ನಿಮ್ಮ ಕುಟುಂಬದ ಆರೋಗ್ಯ ಕಾಪಾಡಲ್ಪಡುತ್ತದೆ. ಅಲ್ಲದೆ, ಭಾರತೀಯರು ನಿಜಕ್ಕೂ ಜವಾಬ್ದಾರಿಯುತವಾಗಿ ನಡೆದುಕೊಳ್ಳುವ ಮೂಲಕ ಮಾದರಿಯಾಗುವ ಕಾಲ ಇದಾಗಿದೆ. ಅಂದಹಾಗೆ ಈಗಲೂ ನಾವು ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿದ್ದರೆ ಮತ್ತೆ ಇನ್ಯಾವಾಗ? ಎಂಬುದು ಪ್ರಶ್ನೆ. ಹೀಗಾಗಿ ಮನೆಯಲ್ಲೇ ಇರಿ ಸುರಕ್ಷಿತವಾಗಿರಿ ಎಂಬುದು ನಾನು ಗೌರಿ ತಂಡದ ಆಶಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...