ಅರ್ಚಕ ಮತ್ತು ಆತನ ಪತ್ನಿಗೆ ಕೊರೊನ ಸೋಂಕು ಇರುವುದು ದೃಢಪಟ್ಟಿರುವುದರಿಂದ ತುಮಕೂರು ಜಿಲ್ಲೆಯ ಕೊರಟಗೆರೆಯ ಗೊರವನಹಳ್ಳಿ ಮಹಾಲಕ್ಷ್ಮಿ ದೇವಾಲಯವನ್ನು ಸೀಲ್ ಡೌನ್ ಮಾಡಲಾಗಿದೆ.
ಪ್ರತಿ ಶುಕ್ರವಾರ ಗೊರವನಹಳ್ಳಿ ದೇವಾಲಯಕ್ಕೆ ಸಾವಿರಾರು ಮಂದಿ ಭೇಟಿ ನೀಡಿ ಪೂಜೆ ಸಲ್ಲಿಸುವುದು ಹಿಂದಿನಿಂದಲೂ ರೂಢಿಯಲ್ಲಿದೆ. ಹೀಗಾಗಿ ಅರ್ಚಕರಿಗೆ ಸೋಂಕು ಹರಡಿರುವುದರಿಂದ ಭಕ್ತರಿಗೂ ಸೋಂಕು ತಗುಲಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ದೇವಸ್ಥಾನವನ್ನು ಸೀಲ್‌ಡೌನ್ ಮಾಡಿರುವ ಕಾರಣ ಸೀಲ್‌ಡೌನ್ ತೆರವುಗೊಳಿಸುವವರೆಗೂ ದೇವಸ್ಥಾನಕ್ಕೆ ಬರಬಾರದೆಂದು ಮನವಿ ಮಾಡಲಾಗಿದೆ.
ತುಮಕೂರು ಜಿಲ್ಲೆಯಲ್ಲಿ ಇಂದು 47 ಪ್ರಕರಣಗಳು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 1147ಕ್ಕೆ ಏರಿದ್ದು ಸಾವಿನ ಸಂಖ್ಯೆ 45ಕ್ಕೆ ಏರಿದಂತಾಗಿದೆ.
ತುಮಕೂರು ಮಹಾನಗರ ವ್ಯಾಪ್ತಿಯಲ್ಲಿ ಹೆಚ್ಚು ಪ್ರಕರಣಗಳು ಕಂಡು ಬಂದಿದ್ದು ಜನರು ಭೀತಿಗೊಳಗಾಗಿದ್ದಾರೆ. ಇದುವರೆಗೆ ತುಮಕೂರು, ಮಧುಗಿರಿ, ಕುಣಿಗಲ್, ಕೊರಟಗೆರೆ, ಚಿಕ್ಕನಾಯಕನಹಳ್ಳಿ ತಾಲೂಕುಗಳಲ್ಲಿ ಹೆಚ್ಚು ಕೊರೊನ ಪ್ರಕರಣಗಳು ಪತ್ತೆಯಾಗಿವೆ.
ಇದನ್ನೂ ಓದಿ: ಕೋವಿಡ್‌ನಿಂದ ಸ್ವಾತಂತ್ರ್ಯ: ಆಗಸ್ಟ್ 15 ರಂದು ಪಣತೊಡಲು ಮೋದಿ ಒತ್ತಾಯ


