Homeಕರೋನಾ ತಲ್ಲಣಕೊರೊನಾ ರೋಗಕ್ಕೆ ‘ಮಹಾಮಾರಿ’ ಎಂದು ಕರೆಯುವವರು ಮೂರ್ಖರು..

ಕೊರೊನಾ ರೋಗಕ್ಕೆ ‘ಮಹಾಮಾರಿ’ ಎಂದು ಕರೆಯುವವರು ಮೂರ್ಖರು..

ಯಾವುದೇ ಔಷಧಿ ಕೊಡದೇ ಶೇ.60 ಸೋಂಕಿತರಲ್ಲಿ ತನ್ನಿಂದ ತಾನೇ ಗುಣಾವಾಗುವ ಕೊರೊನಾ ರೋಗಕ್ಕೆ ‘ಮಹಾಮಾರಿ’ ಎಂದು ಮೂರ್ಖ ಹೆಸರು ಇಟ್ಟಿರುವುದು ಹಾಸ್ಯಾಸ್ಪದ ಅಲ್ಲವೇ!  

- Advertisement -
- Advertisement -

ಕೊರೊನಾ ಕಾಲದಲ್ಲಿ ಬೀರಬಲ್ಲನ ಈ ಕಥೆ ತುಂಬಾ ಪ್ರಸ್ತುತ. ಒಮ್ಮೆ ಅಕ್ಬರನ ಆಸ್ಥಾನದಲ್ಲಿ ಬೀರಬಲ್ಲ ನೆಲದ ಮೇಲೆ ಒಂದು ಗೆರೆ ಎಳೆದು– ಈ ಗೆರೆ ಉದ್ದವಿದೆಯೋ ಅಥವಾ ಗಿಡ್ಡವಿದೆಯೋ ಎಂದು ಕೇಳಿದ. ಕೆಲವರು ಅದು ‘ಉದ್ದ ಗೆರೆ’ ಎಂದರೆ ಕೆಲವರು ಅದು ‘ಗಿಡ್ಡ ಗೆರೆ’ ಎಂದು ಹೇಳಿದರು. ಆಗ ಬೀರಬಲ್ಲ ಆ ಗೆರೆಯ ಪಕ್ಕದಲ್ಲಿ ಅದಕ್ಕಿಂತ ಚಿಕ್ಕ ಇನ್ನೊಂದು ಗೆರೆ ಎಳೆದು ಕೇಳಿದನಂತೆ ಈಗ ಹೇಳಿ ಮೊದಲಿನ ಗೆರೆ ಉದ್ದವೋ ಅಥವಾ ಗಿಡ್ಡವೋ ಎಂದು. ಆಗ ಎಲ್ಲರೂ ಒಮ್ಮತದಿಂದ ಅದು ಉದ್ದ ಗೆರೆ ಎಂದು ಹೇಳಿದರು. ಆನಂತರ ಬೀರಬಲ್ಲ ಆ ಗೆರೆಯ ಇನ್ನೊಂದು ಪಕ್ಕದಲ್ಲಿ ಅದಕ್ಕಿಂತ ಉದ್ದ ಗೆರೆ ಎಳೆದು ಕೇಳಿದನಂತೆ – ಈಗ ಹೇಳಿ ಮೊದಲಿನ ಗೆರೆ ಉದ್ದವೋ ಗಿಡ್ಡವೋ ಎಂದು. ಆಗ ಎಲ್ಲರೂ ಒಮ್ಮತದಿಂದ ಮೊದಲಿನ ಗೆರೆ ಗಿಡ್ಡ ಗೆರೆ ಎಂದು ಹೇಳಿದರು.  ಆಗ ಬೀರಬಲ್ಲ ಕೇಳಿದ- ಅದೇ ಗೆರೆಯನ್ನು ನೀವೆಲ್ಲಾ ಉದ್ದ ಗೆರೆ ಎಂದು ಮೊದಲು ಒಮ್ಮತದಿಂದ ಹೇಳಿದ್ದೀರಿ, ಆದರೆ ಈಗ ಅದೇ ಗೆರೆಯನ್ನು ಗಿಡ್ಡ ಗೆರೆ ಎಂದು ಹೇಳಿತ್ತಿರುವಿರಿ, ಅದು ಹೇಗೆ ಒಂದೇ ಗೆರೆ ಉದ್ದವೂ ಗಿಡ್ಡವೂ ಎರಡೂ ಆಗಿರಲು ಸಾಧ್ಯ?  ಆಗ ಸಭಿಕರು ಹೇಳಿದರು- ಅದು ಹೋಲಿಕೆಯಿಂದ ಮಾತ್ರ ಸಾಧ್ಯವಾಗಿದ್ದು ಎಂದು.

ಈಗ ಕೊರೊನಾ ವಿಷಯದಲ್ಲೂ ಅದೇ ಹೋಲಿಕೆ ಆಗಬೇಕಿದೆ. ಅಂದರೆ ಕೊರೊನಾದ ದೈನಂದಿನ ಅಂಕಿ ಸಂಖ್ಯೆಗಳೊಂದಿಗೆ ಇತರ ಸೋಂಕು ರೋಗಗಳ ಅಂಕಿಸಂಖ್ಯೆಯನ್ನೂ ಹೋಲಿಕೆ ಮಾಡಿ ಪತ್ರಿಕೆಗಳಲ್ಲಿ ಪ್ರಕಟಿಸಬೇಕು. ಆಗ ಜನರಿಗೆ ಗೊತ್ತಾಗುತ್ತದೆ- ಕೊರೊನಾ ಎಂಬ ಒಂದು ಸಾಧಾರಣ ನೆಗಡಿ ಜ್ವರವನ್ನು ಸುಮ್ಮನೆ ಮಹಾಮಾರಿ ಎಂದು ಹೇಳಿ ಇಡೀ ವಿಶ್ವವನ್ನೇ ಹೆದರಿಸಲಾಗಿದೆ ಎಂಬುದು. ಕೊರೋನಾದಿಂದ ಆಗಿರುವ ಸೋಂಕು, ಮರಣ, ಗುಣಮುಖ ಇವುಗಳ ಸಂಖ್ಯೆಯನ್ನು ಇತರ ಇಂತಹದ್ದೇ ಸೋಂಕು ರೋಗಗಳ ಅಂಕಿಸಂಖ್ಯೆಗಳೊಂದಿಗೆ ಹೊಲಿಸಿದರೆ ಮಾತ್ರ ಕೊರೋನಾವು ಕಾಳಿಂಗ ಹಾವೋ ಅಥವಾ ಒಂದು ನಿಷ್ಪಾಪ ಕೇರೇ ಹಾವೋ ಎಂದು ಗೊತ್ತಾಗಲು ಸಾಧ್ಯ.

ನಮ್ಮ ದೇಶದ ಆರೋಗ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಪ್ರತಿವರ್ಷ ನಮ್ಮ ದೇಶದಲ್ಲಿ ತೊಂಬತ್ತು ಲಕ್ಷಕ್ಕೂ ಹೆಚ್ಚು ಜನ ಸಾಯುತ್ತಾರೆ (ಮರಣ ಪ್ರಮಾಣ ಶೇ.0.73). ಅಂದರೆ ಪ್ರತಿದಿನ 25000 ಕ್ಕೂ ಹೆಚ್ಚು ಜನ ಸಾಯುತ್ತಾರೆ. ಅದರಲ್ಲಿ ಕನಿಷ್ಠ 15000 ಜನರಾದರೂ ಸಾಧಾರಣ ಸೋಂಕು ರೋಗಗಳಾದ ಮಲೇರಿಯಾ, ಡೆಂಗೀ, ಹಕ್ಕಿಜ್ವರ, ಎಬೋಲ, ಹೆಪಿಟೈಸ್ ಮುಂತಾದ ಸಾಂಕ್ರಾಮಿಕ ರೋಗಗಳಿಂದ ಸಾಯುತ್ತಾರೆ. ಈ 15000 ಜನರಲ್ಲಿ ಕೇವಲ 500 ಜನರು ಮಾತ್ರ ಕೊರೋನಾ ದಿಂದ ಸತ್ತರೆ ಅದು ಭಯಾನಕ ರೋಗ ಎಂದು ಕರೆಯುವುದು ಸರಿಯೇ? ಹಾಗಾದರೆ ಉಳಿದ 14 ಸಾವಿರ ಜನರನ್ನು ದಿನಾಲೂ ಕೊಲ್ಲುವ ಇತರ ಸಾಂಕ್ರಾಮಿಕ ರೋಗಗಳು ಮಾಹಾಮಾರಿ ಯಾಕಲ್ಲ? ಮೇಲಾಗಿ ಕೊರೊನಾ ಯಾರನ್ನೂ ಒಂಟಿಯಾಗಿ ಕೊಲ್ಲುವ ಸಾಮರ್ಥ್ಯ ಹೊಂದಿಲ್ಲ. ಅದು ಕೇವಲ ಮಧುಮೇಹ, ಬಿ‌ಪಿ, ಆಸ್ತಮಾ, ಕಿಡ್ನಿ ತೊಂದರೆ ಇದ್ದವರಿಗೆ ಮಾತ್ರ ಮಾರಕ ಆಗಬಲ್ಲದು. ಇಲ್ಲದಿದ್ದರೆ ಕೊರೋನಾ ಪೂರ್ಣ ನಿರುಪದ್ರವಿ.

ಹಾಗಾಗಿ ಬೀರಬಲ್ಲನ ಗೆರೆಯ ಕಥೆಯಂತೆ ಹೋಲಿಕೆ ಮಾಡಲು ದಿನಾಲೂ ಎಲ್ಲಾ ತರದ ಸೋಂಕು ರೋಗಗಳ ತುಲಾನಾತ್ಮಕ ಸಂಖ್ಯೆಯ ಚಾರ್ಟನ್ನು (ಹೊಸ ಸೋಂಕು, ಒಟ್ಟು ಸೋಂಕು, ಈ ದಿನದ ಮರಣ, ಒಟ್ಟು ಮರಣ, ಒಟ್ಟು ಗುಣಮುಖರಾದವರು) ಸರಕಾರವೇ ಪ್ರಕಟಿಸಿದರೆ ಜನರಿಗೆ ಕೊರೋನಾದ ನಾಟಕ ಸುಲಭವಾಗಿ ಅರ್ಥವಾಗುತ್ತದೆ, ಅದರಲ್ಲೂ “ಯಾವುದೇ ಔಷಧವಿಲ್ಲದೆ ಎಷ್ಟು ಕೊರೋನಾ ಸೋಂಕಿತರು ಗುಣಮುಖರಾದರು” ಎಂಬುದನ್ನೂ ತಪ್ಪದೇ ಬರೆಯಬೇಕು. ಕೊರೋನಾ ಸೋಂಕಿತರಲ್ಲಿ ಕೇವಲ ಶೇ.2 ಜನ ಮಾತ್ರ ಸಾಯುತ್ತಾರೆ ಹಾಗೂ ಶೇ.98 ಸೋಂಕಿತರು ಸುಲಭವಾಗಿ ಗುಣಮುಖರಾಗುತ್ತಾರೆ ಎಂಬ ಸತ್ಯವನ್ನು ಮಾಧ್ಯಮಗಳು ಉದ್ದೇಶಪೂರ್ವಕವಾಗಿ ಪ್ರಕಟಿಸುತ್ತಿಲ್ಲ. ಇದಕ್ಕೆ ಹೋಲಿಸಿದರೆ ಇತರ ಸೋಂಕು ರೋಗಗಳಿಂದ ಶೇ.10 ರಿಂದ 15  ಸೋಂಕಿತರು ಸಾಯುತ್ತಾರೆ. ಜನರನ್ನು ಮೂರ್ಖರನ್ನಾಗಿಸಲು “ಏಸಿಂಪ್ಟೋಮ್ಯಟಿಕ್” (ಗುಣಲಕ್ಷಣ ರಹಿತ ರೋಗ) ಎಂಬ ಪಾರಿಭಾಷಿಕ ಶಬ್ಧವನ್ನು ಹುಟ್ಟು ಹಾಕಲಾಗಿದೆ. ಇದರಿಂದಾಗಿ ಸೈಕಲ್ ನಿಂದ ಬಿದ್ದು ಆದ ಸಣ್ಣ ಗಾಯಕ್ಕೆ ಬ್ಯಾಂಡೇಜ್ ಮಾಡಲು ಡಾಕ್ಟರರಲ್ಲಿ ಹೋದರೂ ಅವರು ಜಬರ್ದಸ್ತಿ ಕೊರೋನಾ ಟೆಸ್ಟ್ ಮಾಡಿಸಿ ಭಾರಿ ಬಿಲ್ ಹಾಕುತ್ತಾರೆ.
ಕೊರೋನಾ ಹೊಸ ರೋಗವಾದರೆ 25 ವರ್ಷಗಳಿಂದಲೂ ಡೆಟ್ಟಾಲ್ ಬಾಟಲ್ ಮೇಲೆ ಬರೆಯುತ್ತಿರುವ ರೋಗಗಳ ಲಿಸ್ಟ್ ನಲ್ಲಿ ಕೊರೋನಾ ವೈರಸ್ ಹೆಸರು ಹೇಗೆ ಬಂತು? ಚೀನಾದಲ್ಲಿ ಈ ರೋಗ ಹುಟ್ಟಿದ್ದರೆ ಚೀನಿ ಹೆಸರಿನ ಬದಲು ಇಂಗ್ಲಿಷ್ ಹೆಸರು ಯಾಕಿದೆ?

ಕಳೆದ ವರ್ಷ ಜುಲೈ ತಿಂಗಳಲ್ಲಿಯೇ ನನ್ನ 82 ವರ್ಷದ ಮಾವ ಮೊದಲು ಶೀತ ಜ್ವರ ಆಗಿ ನಂತರ ಅದು ನಿಮೋನಿಯಾಕ್ಕೆ ತಿರುಗಿ ಅವರು ತೀರಿಕೊಂಡರು. ನಮ್ಮ ಹಳ್ಳಿಯ ಮನೆಯ ಎದುರಿನ ಗದ್ದೆಯಲ್ಲಿಯೇ ಅವರ ಅಂತ್ಯಕ್ರಿಯೆ ಮಾಡಲಾಯಿತು.  ಒಂದು ವೇಳೆ ಅವರು ಈ ವರ್ಷ ತೀರಿಕೊಳ್ಳುತ್ತಿದ್ದರೆ ಆಗ ಜಿಲ್ಲಾಡಳಿತ ಮತ್ತು ಹಳ್ಳಿಯ ಜನ ಎಷ್ಟು ನಾಟಕ ಆಡುತ್ತಿದ್ದರೋ ಏನೋ!?  ಪೊಲೀಸರು ಇಡೀ ಹಳ್ಳಿಯನ್ನೇ ಸೀಲ್ ಡೌನ್ ಮಾಡುತ್ತಿದ್ದರು. ಎಲ್ಲರಿಗೂ ಕ್ವಾರಂಟೈನ್ ಮಾಡುತ್ತಿದ್ದರು. ಎಲ್ಲಕ್ಕಿಂತ ಮಿಗಿಲಾಗಿ ಮನೆಯ ಮುಂದಿನ ಗದ್ದೆಯಲ್ಲಿ ಅವರ ಶವ ಸುಡುವುದಕ್ಕೆ ಸ್ವಕುಟುಂಬದವರ ಸಹಿತ ಹಳ್ಳಿಯವರೆಲ್ಲಾ ಆಕ್ಷೇಪ ಎತ್ತಿ ರಂಪ ಮಾಡುತ್ತಿದ್ದರು. ಶವವನ್ನು ದುಬಾರಿ ಪ್ಲಾಸ್ಟಿಕ್ ನಲ್ಲಿ ಸುತ್ತಿ ಜೆ‌ಸಿ‌ಬಿ ಯಲ್ಲಿ ಕೊಂಡೊಯ್ದು ಹತ್ತು ಅಡಿ ಆಳದಲ್ಲಿ ಹೂಳುತ್ತಿದ್ದರು.  ಶೀತ ಜ್ವರ, ವೈರಲ್ ಫೀವರ್, ನಿಮೋನಿಯಾದಿಂದ ಹಿಂದಿನ 10 ವರ್ಷಗಳಿಂದ ಎಷ್ಟು ಜನ ಸತ್ತಿದ್ದಾರೆ ಎಂದು ಸರಕಾರ ಅಂಕಿಸಂಖ್ಯೆ ಪ್ರಕಟಿಸಿದರೆ ಗೊತ್ತಾಗುತ್ತದೆ – ಈ ಕೊರೋನಾ ಹೊಸ ರೋಗ ಅಲ್ಲ ಅದು ಹಿಂದಿನ ಅನೇಕ ವರ್ಷಗಳಿಂದ ನಮ್ಮನ್ನು ಪೀಡಿಸುತ್ತಿದೆ ಹಾಗೂ ಈ ವರ್ಷಕ್ಕಿಂತ ಹೆಚ್ಚು ಜನರನ್ನು ಅದು ಹಿಂದಿನ ವರ್ಷಗಳಲ್ಲಿ ಆಹುತಿ ಪಡೆದಿದೆ ಎಂಬುದು!.

ಏಪ್ರಿಲ್ ಲಾಕ್ ಡೌನ್ ಮುಗಿದ ನಂತರ ಲಕ್ಷಾಂತರ ವಲಸೆ ಕಾರ್ಮಿಕರು ಕಾಲ್ನಡಿಗೆಯಲ್ಲಿಯೇ ಮುಂಬೈ ಮತ್ತು ಗುಜರಾತ್ ನಿಂದ ಬಿಹಾರಕ್ಕೆ ಹೋದರು. ಮುಂಬೈ ಮತ್ತು ಗುಜರಾತ್ ಕೊರೋನಾ ಹಾಟ್ ಸ್ಪಾಟ್ ಆಗಿದ್ದರೂ ಈ ಲಕ್ಷಾಂತರ ವಲಸೆ ಕಾರ್ಮಿಕರಲ್ಲಿ ಯಾರಿಗೂ ಯಾಕೆ ಕೊರೋನಾ ಸೋಂಕು ಇದ್ದ ಸುದ್ದಿ ಬರಲಿಲ್ಲ ಗೊತ್ತೇ?  ಯಾಕೆಂದರೆ ಬಡ ಕಾರ್ಮಿಕರಲ್ಲಿ ಸುಲಿಯಲು ಹಣ ಇಲ್ಲ ಎಂದು ಡಾಕ್ಟರ್ ಗಳಿಗೆ ಗೊತ್ತಿತ್ತು! ಹಾಗಾಗಿ ಅವರೆಲ್ಲಾ ಕೊರೋನಾ ನೆಗೆಟಿವ್ ಆದರು. ಯಾವುದೇ ಔಷಧಿ ಕೊಡದೇ ಶೇ.60 ಸೋಂಕಿತರಲ್ಲಿ ತನ್ನಿಂದ ತಾನೇ ಗುಣಾವಾಗುವ ಕೊರೊನಾ ರೋಗಕ್ಕೆ ‘ಮಹಾಮಾರಿ’ ಎಂದು ಮೂರ್ಖ ಹೆಸರು ಇಟ್ಟಿರುವುದು ಹಾಸ್ಯಾಸ್ಪದ ಅಲ್ಲವೇ!

ಬೇರೆ ದಿನಗಳಲ್ಲಿ 12 ಗಂಟೆ ಅಂಗಡಿಗಳು ತೆರೆದಿರುವುದರಿಂದ ದಿನಸಿ ಸಾಮಾನು ಕೊಳ್ಳಲು ಜನ ಮುಗಿಬೀಳುವುದಿಲ್ಲ. ಹಾಗಾಗಿ ಸೋಂಕು ಹರಡುವುದಿಲ್ಲ. ಆದರೆ ಲಾಕ್ ಡೌನ್ ಹೇರಿದಾಗ ಕೇವಲ ಮೂರು ಗಂಟೆ ತೆರೆದಿರುವ ಅಂಗಡಿಗೆ ಸಾಮಾನು ಕೊಳ್ಳಲು ಜನರು ಮುಗಿಬೀಳುವುದರಿಂದ ಸೋಂಕು ಹರಡುವ ಸಾಧ್ಯತೆ ಹತ್ತು ಪಟ್ಟು ಹೆಚ್ಚುತ್ತದೆ ಎಂಬುದನ್ನೂ ಆರೋಗ್ಯ ತಜ್ಞರೇ ಖಚಿತ ಪಡಿಸಿದ್ದಾರೆ. ಹಾಗಾದರೆ ಲಾಕ್ ಡೌನ್ ಯಾವ ಕರ್ಮಕ್ಕೆ?  ಲಾಕ್ ಡೌನ್ ಕೇವಲ ನಮ್ಮ ದೇಶದ ಆರ್ಥಿಕತೆಯನ್ನು ಕೊಂದಿದ್ದು ನಿಜ. ಅರೆಸಾಕ್ಷರರೇ ನಮ್ಮ ದೇಶವನ್ನು ಆಳುತ್ತಿರುವಾಗ ಇಂತಹಾ ಘೋರ ತಪ್ಪುಗಳು ಸ್ವಾಭಾವಿಕ.

ಪ್ರವೀಣ್ ಎಸ್ ಶೆಟ್ಟಿ.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನಾಮನಿರ್ದೇಶನ ರದ್ದು ಪ್ರಶ್ನಿಸಿ ಬಿಜೆಪಿ ಅಭ್ಯರ್ಥಿಯಿಂದ ಅರ್ಜಿ; ಮನವಿ ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಣೆ

0
ಪಶ್ಚಿಮ ಬಂಗಾಳದ ಬಿರ್ಭೂಮ್ ಲೋಕಸಭಾ ಕ್ಷೇತ್ರಕ್ಕೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿ ದೇಬಾಶಿಶ್ ಧಾರ್ ಅವರು ತಮ್ಮ ನಾಮಪತ್ರಗಳನ್ನು ರದ್ದುಗೊಳಿಸುವುದರ ವಿರುದ್ಧ ಸಲ್ಲಿಸಿದ ಮನವಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ. ನ್ಯಾಯಮೂರ್ತಿಗಳಾದ...