ಕೊರೊನಾ ಎರಡನೇ ಅಲೆಯ ಪ್ರಕರಣಗಳು ಗ್ರಾಮೀಣ ಭಾರತದಲ್ಲಿ ಉಲ್ಬಣಗೊಂಡಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮುಗಿದ ಮೊದಲ ಅಲೆಗೆ ಹೋಲಿಸಿದರೆ, ಭಾರತದ ಒಳನಾಡು ಅಥವಾ ಹಿಂದುಳಿದ ಪ್ರದೇಶಗಳಲ್ಲಿ ಸೋಂಕಿನ ಪ್ರಕರಣಗಳು ಮತ್ತು ಅದರಿಂದಾಗಿ ಮೃತಪಟ್ಟವರ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ವರದಿಯಾಗಿದೆ.
ಹಿಂದುಳಿದ ಪ್ರದೇಶ ಅನುದಾನ ನಿಧಿ (ಬಿಆರ್‌ಜಿಎಫ್) ವ್ಯಾಪ್ತಿಗೆ 272 ಜಿಲ್ಲೆಗಳು ಒಳಪಡುತ್ತದೆ. ಇದರಲ್ಲಿ 243 ಜಿಲ್ಲೆಗಳ ಮಾಹಿತಿ ಲಭ್ಯವಿದ್ದು, ಈ ಮಾಹಿತಿಯಂತೆ ಮೇ 5 ರ ಹೊತ್ತಿಗೆ ಇಲ್ಲಿನ 39.16 ಲಕ್ಷಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದಾರೆ. ಕೊರೊನಾ ಮೊದಲ ಅಲೆಯ ಉತ್ತುಂಗದ ಸಮಯವಾದ ಸೆಪ್ಟೆಂಬರ್ 16, 2020 ರಲ್ಲಿ ಈ ಜಿಲ್ಲೆಗಳಲ್ಲಿ 9.5 ಲಕ್ಷ ಸೋಂಕುಗಳಷ್ಟೇ ಇದ್ದವು. ಇದಕ್ಕೆ ಹೋಲಿಸಿದರೆ ಪ್ರಸ್ತುತ ಪ್ರಕರಣಗಳು ನಾಲ್ಕು ಪಟ್ಟು ಹೆಚ್ಚಾಗಿದೆ.
ಇದನ್ನೂ ಓದಿ: ನಮ್ಮನ್ನು ನೋಡಿ ನಗುತ್ತಿದ್ದರೆ, ಮುಂಬೈ ಮಾದರಿಯನ್ನು ಹೇಗೆ ಹಂಚಿಕೊಳ್ಳುವುದು: ಮುಂಬೈ ಆಯುಕ್ತ
ಈ ಜಿಲ್ಲೆಗಳಲ್ಲಿ ಸಕ್ರಿಯ ಪ್ರಕರಣಗಳು ಕೂಡಾ ಎರಡನೇ ಅಲೆಯಲ್ಲಿ ಹೆಚ್ಚಾಗಿದ್ದು, ಗರಿಷ್ಠ ಮಟ್ಟದಲ್ಲಿದೆ. ಸಕ್ರಿಯ ಸೋಂಕಿತರು ಇದೀಗ ಮೊದಲ ಅಲೆಗಿಂತ 4.2 ಪಟ್ಟು ಹೆಚ್ಚಾಗಿದ್ದಾರೆ. ಈ ಜಿಲ್ಲೆಗಳಲ್ಲಿ ಪ್ರಸ್ತುತ 7.15 ಲಕ್ಷಕ್ಕೂ ಹೆಚ್ಚು ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಸೌಲಭ್ಯಗಳು ಹೆಚ್ಚಾಗಿ ಇಲ್ಲದೆ ಇರುವುದರಿಂದ ಇದು ಜನರನ್ನು ತೀವ್ರ ಸಂಕಷ್ಟಕ್ಕೆ ಈಡಾಗಿಸುತ್ತದೆ.
ಇದರ ಪ್ರತಿಫಲವೆ ಈ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯ ಸಾವುಗಳು ವರದಿಯಾಗಿವೆ. ಮೇ 5 ರ ಹೊತ್ತಿಗೆ, ಈ 243 ಜಿಲ್ಲೆಗಳು ಒಟ್ಟು 36,523 ಸಾವುಗಳನ್ನು ವರದಿಯಾಗಿವೆ. ಈ ಸಂಖ್ಯೆಯು ಕಳೆದ ವರ್ಷದಲ್ಲಿ ಮೊದಲ ಅಲೆಯ ಸಮಯದಲ್ಲಿ ಸಾವಿಗೀಡಾದವರ ಸಂಖ್ಯೆಗಿಂತ ಸುಮಾರು ನಾಲ್ಕು ಪಟ್ಟು ಹೆಚ್ಚಾಗಿದೆ. ಸೆಪ್ಟೆಂಬರ್ 16, 2020 ರ ಹೊತ್ತಿಗೆ, ಈ ಜಿಲ್ಲೆಗಳಲ್ಲಿ 9,555 ಜನರು ಮೃತಪಟ್ಟಿದ್ದರು.
ಬಿಆರ್‌ಜಿಎಫ್ ಅಡಿಯಲ್ಲಿರುವ 272 ಜಿಲ್ಲೆಗಳಲ್ಲಿ ಸುಮಾರು 54% ಜಿಲ್ಲೆಗಳು ಕೇವಲ ಐದು ರಾಜ್ಯಗಳಿಗೆ ಸೇರಿದೆ. ಅವುಗಳೆಂದರೆ: ಬಿಹಾರ-38, ಉತ್ತರ ಪ್ರದೇಶ-35, ಮಧ್ಯಪ್ರದೇಶ – 30, ಜಾರ್ಖಂಡ್ – 23 ಮತ್ತು ಒಡಿಶಾದ 20 ಜಿಲ್ಲೆಗಳು. ಈ ರಾಜ್ಯಗಳೆ ದೇಶದ ಪ್ರಮುಖ ನಗರಗಳಿಗೆ ಹೆಚ್ಚಿನ ವಲಸೆ ಕಾರ್ಮಿಕರನ್ನು ಒದಗಿಸುತ್ತವೆ.
ಇದನ್ನೂ ಓದಿ: ಕಂಗನಾ ರಾಣಾವತ್‌ಗೆ ಕೊರೊನಾ ಪಾಸಿಟಿವ್: ವೈರಸ್ ನಾಶಗೊಳಿಸುತ್ತೇನೆ ಎಂದ ನಟಿ!
ಕೊರೊನಾ ವೈರಸ್ ಪ್ರಕರಣಗಳ ನಗರ-ಗ್ರಾಮೀಣ ವಿಭಜನೆಯು ನೇರವಾಗಿ ಲಭ್ಯವಿಲ್ಲದಿದ್ದರೂ, ಬಿಆರ್‌ಜಿಎಫ್ ಜಿಲ್ಲೆಗಳಲ್ಲಿನ ಪ್ರಕರಣಗಳು ಮತ್ತು ಸಾವುಗಳ ವಿಶ್ಲೇಷಣೆಯು ಭಾರತದಲ್ಲಿ ಗ್ರಾಮೀಣ ಹರಡುವಿಕೆಯನ್ನು ಸೂಚಿಸುತ್ತದೆ.
ಒಟ್ಟಿನಲ್ಲಿ ಹೇಳುವುದಾದರೆ, 243 ಜಿಲ್ಲೆಗಳಲ್ಲಿನ ಸೋಂಕುಗಳ ಸಂಖ್ಯೆ ಮೊದಲ ಮತ್ತು ಎರಡನೆಯ ಅಲೆಗಳ ನಡುವೆ ನಾಲ್ಕು ಪಟ್ಟು ಹೆಚ್ಚಾಗಿದೆ. ಆದರೆ ದೇಶದ ಒಟ್ಟು ಸೋಂಕುಗಳ ಶೇಕಡಾವಾರು ಏರಿಕೆಯ ಪ್ರಮಾಣವು ಕೇವಲ 18.6% ರಷ್ಟಿದೆ. ಆದರೆ ಈ ಜಿಲ್ಲೆಗಳಲ್ಲಿ ಸಾವುಗಳು ಗಮನಾರ್ಹವಾಗಿ ಏರಿಕೆಯಾಗಿದೆ.
ಈ 272 ಜಿಲ್ಲೆಗಳಲ್ಲಿ ಹೆಚ್ಚಿನ ಜಿಲ್ಲೆಗಳು ಮೂಲಭೂತ ಆರೋಗ್ಯ ಸೌಲಭ್ಯಗಳನ್ನು ಮಾತ್ರ ಹೊಂದಿವೆ. ರಾಜ್ಯಗಳು ನಿರ್ಮಿಸುತ್ತಿರುವ ಹೊಸ ಮೂಲಸೌಕರ್ಯಗಳು ಹೆಚ್ಚಾಗಿ ದೊಡ್ಡ ಪಟ್ಟಣಗಳು ಮತ್ತು ನಗರಗಳಲ್ಲಿವೆ. ಇದರ ಪರಿಣಾಮವಾಗಿ, ಈ ಜಿಲ್ಲೆಗಳಿಂದ ಹತ್ತಿರದ ದೊಡ್ಡ ಪಟ್ಟಣಕ್ಕೆ ಹೆಚ್ಚಿನ ಸಂಖ್ಯೆಯ ರೋಗಿಗಳು ಬರುತ್ತಿದ್ದಾರೆ, ಇದು ಪಟ್ಟಣಗಳು ಮತ್ತು ನಗರಗಳಲ್ಲಿ ಈಗಾಗಲೇ ಒತ್ತಡಕ್ಕೊಳಗಾದ ಮೂಲಸೌಕರ್ಯಗಳ ಮೇಲೆ ಹೊರೆಯನ್ನು ಹೆಚ್ಚಿಸುತ್ತಿದೆ.
ಇದನ್ನೂ ಓದಿ: ಕೋಮು ಸಾಮರಸ್ಯ ಕದಡುವ ಯತ್ನ: ತೇಜಸ್ವಿ ಸೂರ್ಯ ವಿರುದ್ಧ ದೂರು ದಾಖಲಾಗಲಿದೆಯೇ?


