Homeಮುಖಪುಟಕಂಗನಾ ರಾಣಾವತ್‌ಗೆ ಕೊರೊನಾ ಪಾಸಿಟಿವ್: ವೈರಸ್ ನಾಶಗೊಳಿಸುತ್ತೇನೆ ಎಂದ ನಟಿ!

ಕಂಗನಾ ರಾಣಾವತ್‌ಗೆ ಕೊರೊನಾ ಪಾಸಿಟಿವ್: ವೈರಸ್ ನಾಶಗೊಳಿಸುತ್ತೇನೆ ಎಂದ ನಟಿ!

- Advertisement -
- Advertisement -

ಸದಾ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗಿದ್ದ ಬಾಲಿವುಡ್ ನಟಿ ಕಂಗನಾ ರಾಣಾವತ್‌ಗೆ ಕೊರೊನಾ ಸೋಂಕು ದೃಢಪಟ್ಟಿದೆ. ಪದೇ ಪದೇ ನಿಯಮ ಉಲ್ಲಂಘನೆಯ ಕಾರಣಕ್ಕೆ ಟ್ವಿಟರ್ ಅವರ ಖಾತೆಯನ್ನು ಬ್ಲಾಕ್ ಮಾಡಿರುವುದರಿಂದ ನಟಿ ಈ ವಿಚಾರವನ್ನು ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ.

“ಕಳೆದ ಕೆಲವು ದಿನಗಳಿಂದ ಸುಸ್ತು ಮತ್ತು ನಿಶ್ಯಕ್ತಿ ಕಾಡುತ್ತಿತ್ತು. ಕಣ್ಣುಗಳು ಉರಿಯುತ್ತಿದ್ದವು. ಹಿಮಾಚಲ ಪ್ರದೇಶಕ್ಕೆ ಹೋಗುವುದಕ್ಕಾಗಿ ನಿನ್ನೆ ನಾನು ಕೊರೊನಾ ಟೆಸ್ಟ್‌ ಮಾಡಿಸಿದ್ದು, ಇಂದು ಪಾಸಿಟಿವ್ ವರದಿ ಬಂದಿದೆ. ನಾನು ಕ್ವಾರಂಟೈನ್ ಆಗಿದ್ದೇನೆ” ಎಂದು ಕಂಗನಾ ರಾಣಾವತ್ ತಿಳಿಸಿದ್ದಾರೆ.

 

View this post on Instagram

 

A post shared by Kangana Ranaut (@kanganaranaut)

“ವೈರಸ್ ನನ್ನ ದೇಹದೊಳಗೆ ಪಾರ್ಟಿ ಮಾಡುತ್ತಿದೆಯೋ ಏನೋ ಗೊತ್ತಿಲ್ಲ. ಆದರೆ ನಾನು ಅದನ್ನು ನಾಶಗೊಳಿಸುತ್ತೇನೆ ಎಂಬುದು ನನಗೆ ಗೊತ್ತು. ಜನರು ತನ್ನ ಮೇಲೆ ಸವಾರಿ ಮಾಡಲು ಯಾವ ಶಕ್ತಿಗೂ ಅವಕಾಶ ಮಾಡಿಕೊಡಬಾರದು. ನೀವು ಭಯಪಟ್ಟರೆ ಅದು ನಿಮ್ಮನ್ನು ಮತ್ತಷ್ಟು ಭಯಪಡಿಸುತ್ತದೆ. ಹಾಗಾಗಿ ಬನ್ನಿ ಈ ವೈರಸ್ ಅನ್ನು ನಾಶಗೊಳಿಸೋಣ. ಕೋವಿಡ್ 19 ಸಣ್ಣ ಜ್ವರವಲ್ಲದೇ ಬೇರೆನೂ ಅಲ್ಲ. ಅದು ಈಗ ಜನರಲ್ಲಿ ತುಂಬಾ ಒತ್ತಡ ಉಂಟು ಮಾಡಿ ಭಯಗೊಳಿಸಿದೆ” ಎಂದು ಅವರು ಬರೆದುಕೊಂಡಿದ್ದಾರೆ.

ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಫಲಿತಾಂಶಗಳಿಗೆ ಪ್ರತಿಕ್ರಿಯೆಯಾಗಿ ಹಿಂಸಾಚಾರಕ್ಕೆ ಕರೆ ನೀಡುವ ಮತ್ತು ಅವಹೇಳನಕಾರಿ ಸರಣಿ ಟ್ವೀಟ್‌ಗಳನ್ನು ಪೋಸ್ಟ್ ಮಾಡಿದ ನಟಿ ಕಂಗನಾ ರಾಣಾವತ್‌ ಅವರ ಟ್ವಿಟರ್ ಖಾತೆಯನ್ನು ಮಂಗಳವಾರ ಶಾಶ್ವತವಾಗಿ ಅಮಾನತುಗೊಳಿದೆ.


ಇದನ್ನೂ ಓದಿ: ನಟಿ ಕಂಗನಾ ರಣಾವತ್‌ ಖಾತೆಯನ್ನು ಶಾಶ್ವತವಾಗಿ ಅಮಾನತು ಮಾಡಿದ ಟ್ವಿಟರ್‌!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಆದಷ್ಟು ಶೀಘ್ರವಾಗಿ ಅವಳ ಸಾವಿನ ಸುದ್ದಿ ಕೇಳಲು ಕಿವಿಗಳು ಕಾತರಿಸುತ್ತಿವೆ. ಬಹಳ ಬೇಗ ಆ ಭಗವಂತ ಹರಿ ರಾಮ ಅವಳನ್ನು ತನ್ನ ಹತ್ರ ಕರೆಸಿಕೊಳ್ಳಲಿ. ಅವಳ ಆತ್ಮ ಎಂದೂ ದೆವ್ವ ಆಗಿ ಇನ್ನೊಬ್ಬರಿಗೆ ಕಾಡದಿರಲೆಂದು ಪ್ರಾರ್ಥನೆ ಮಾಡುತ್ತೇನೆ.

LEAVE A REPLY

Please enter your comment!
Please enter your name here

- Advertisment -

Must Read

ನೇಹಾ ಕೊಲೆ ಪ್ರಕರಣ: ‘ತನಿಖೆ ದಿಕ್ಕು ತಪ್ಪುತ್ತಿದೆ’ ಎಂದು ಆರೋಪಿಸಿದ್ದ ತಂದೆ ಕ್ಷಮೆಯಾಚನೆ

0
ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣದ ತನಿಖೆ ದಿಕ್ಕು ತಪ್ಪುತ್ತಿದೆ ಎಂದು ಆರೋಪಿಸಿದ್ದ ಆಕೆಯ ತಂದೆ ನಿರಂಜನಯ್ಯ ಹಿರೇಮಠ ಇದೀಗ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ. ಮಾಹಿತಿಯ ಕೊರತೆಯಿಂದ ಮಗಳ ಕೊಲೆ ಪ್ರಕರಣದ ತನಿಖೆ ದಿಕ್ಕು...