Homeಕರೋನಾ ತಲ್ಲಣಕೊರೊನಾ: ಮೃತದೇಹವನ್ನು ಕಸದ ವಾಹನದಲ್ಲಿ ಸಾಗಾಟ!

ಕೊರೊನಾ: ಮೃತದೇಹವನ್ನು ಕಸದ ವಾಹನದಲ್ಲಿ ಸಾಗಾಟ!

- Advertisement -
- Advertisement -

ಚತ್ತೀಸ್‌ಗಡದ ರಾಜನಂದಗಾಂವ್‌ನಲ್ಲಿ ಕೊರೊನಾದಿಂದ ಮೃತಪಟ್ಟ ರೋಗಿಗಳ ಶವಗಳನ್ನು ಸಾಗಿಸಲು ಕಸದ ವ್ಯಾನ್ ಬಳಸುವ ಭಯಾನಕ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನಾಲ್ಕು ನೈರ್ಮಲ್ಯ ಕಾರ್ಮಿಕರು, ಪೂರ್ಣ ಪಿಪಿಇ ಕಿಟ್‌ಗಳನ್ನು ಧರಿಸಿ, ಶವಗಳನ್ನು ಶವಸಂಸ್ಕಾರಕ್ಕೆ ಕರೆದೊಯ್ಯಲು ಬೇಕಾಗಿ ವ್ಯಾನ್‌ನ ಹಿಂಭಾಗಕ್ಕೆ ಎತ್ತಿ ಹಾಕುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ತಲ್ಲಣ ಸೃಷ್ಟಿಸಿದ್ದು, ಸರ್ಕಾರದ ವಿರುದ್ದ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಘಟನೆಯ ಬಗ್ಗೆ ಮುಖ್ಯ ವೈದ್ಯಕೀಯ ಆರೋಗ್ಯ ಅಧಿಕಾರಿ, “ವಾಹನವನ್ನು ಜೋಡಿಸುವುದು ನಗರ ಪಂಚಾಯತ್ ಮತ್ತು ಸಿಎಮ್ಒನ ಜವಾಬ್ದಾರಿಯಾಗಿದೆ” ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಕೊರೊನಾ ಪ್ರಕರಣಗಳಲ್ಲಿನ ಉಲ್ಬಣ ಮತ್ತು ಹಾಸಿಗೆಗಳ ಕೊರತೆಯನ್ನು ಎದುರಿಸಲು, ರಾಜನಂದಗಾಂವ್‌ನ ಪ್ರೆಸ್ ಕ್ಲಬ್ ತನ್ನ ಆವರಣವನ್ನು ಕೋವಿಡ್ ಕೇಂದ್ರವನ್ನಾಗಿ ಪರಿವರ್ತಿಸಿದೆ. ರೋಗಲಕ್ಷಣವಿಲ್ಲದ ಆದರೆ ವೈದ್ಯಕೀಯ ನೆರವು ಅಗತ್ಯವಿರುವ ರೋಗಿಗಳಿಗೆ ಪ್ರೆಸ್ ಕ್ಲಬ್ ಸದಸ್ಯರು 30 ಹಾಸಿಗೆಗಳನ್ನು ವ್ಯವಸ್ಥೆ ಮಾಡಿದ್ದಾರೆ.

ಇದನ್ನೂ ಓದಿ: ವಿದೇಶಿ ಲಸಿಕೆಗಳ ಅನುಮೋದನೆ ಬಗ್ಗೆ ಕೇಂದ್ರಕ್ಕೆ ‘ಟಾಂಗ್’‌ ನೀಡಿದ ರಾಹುಲ್ ಗಾಂಧಿ!

ದೇಶದ ಅತ್ಯಂತ ಹೆಚ್ಚು ಕೊರೊನಾ ಪೀಡಿತ ರಾಜ್ಯಗಳಲ್ಲಿ ಒಂದಾದ ಚತ್ತೀಸ್‌ಗಡದಲ್ಲಿ ಹೆಚ್ಚುತ್ತಿರುವ ಪ್ರಕರಣಗಳು ಮತ್ತು ಸಾವಿನಿಂದಾಗಿ ಆರೋಗ್ಯ ಮೂಲಸೌಕರ್ಯದ ಕೊರತೆ ಉಂಟಾಗಿದೆ.

ಪ್ರಮುಖ ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕಗಳು ಮತ್ತು ಆಮ್ಲಜನಕ-ಸುಸಜ್ಜಿತ ಹಾಸಿಗೆಗಳು ಕಳೆದ ಒಂದು ವಾರದಿಂದ ಸುಮಾರು 100 ಪ್ರತಿಶತದಷ್ಟು ತುಂಬಿಹೋಗಿದೆ. ಶನಿವಾರದಂದು ರೆಕಾರ್ಡ್ ಮಾಡಲಾದ ವೀಡಿಯೊ ಕ್ಲಿಪ್ ಒಂದರಲ್ಲಿ ಮೃತ ದೇಹಗಳನ್ನು ಫ್ರೀಜರ್‌ಗಳಲ್ಲಿ ಇರಿಸಿಕೊಳ್ಳುವ ಬದಲು, ಎಲ್ಲೆಂದರಲ್ಲಿ ಇರಿಸಲಾಗುತ್ತಿವ ದೃಶ್ಯವನ್ನು ತೋರಿಸಿತ್ತು.

ಚತ್ತೀಸ್‌ಗಡದಲ್ಲಿ ಬುಧವಾರ 14,250 ಹೊಸ ಕೊರೊನಾ ಪ್ರಕರಣಗಳು ಮತ್ತು 120 ಸಾವುಗಳು ವರದಿಯಾಗಿದೆ. ರಾಜ್ಯದಲ್ಲಿ ಸೋಂಕಿನ ಸಂಖ್ಯೆ 4,86,244 ಮತ್ತು ಸಾವಿನ ಸಂಖ್ಯೆ 5,307 ಕ್ಕೆ ತಲುಪಿದೆ ಎಂದು ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಎನ್‌ಡಿಟಿವಿ ತಿಳಿಸಿದೆ.

ಕಳೆದ ಒಂದು ತಿಂಗಳಲ್ಲಿ ರಾಜ್ಯದಲ್ಲಿ 1.68 ಲಕ್ಷ ಪ್ರಕರಣಗಳು ಮತ್ತು 1,417 ಸಾವುಗಳು ದಾಖಲಾಗಿವೆ.

ಇದನ್ನೂ ಓದಿ: ರಾಜ್ಯದಲ್ಲಿ ಕೊರೊನಾ ಚಿಕಿತ್ಸೆಗೆ ರೆಮ್ಡಿಸಿವಿರ್‌ ಕೊರತೆ: ಖಾಸಗಿ ಆಸ್ಪತ್ರೆಗಳ ಒಕ್ಕೂಟ ‘ಫಾನಾ’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...