Homeಕರೋನಾ ತಲ್ಲಣಕೊರೊನಾ: ಭದ್ರಾವತಿಯ ಮಾಜಿ ಶಾಸಕ ಎಂ.ಜೆ.ಅಪ್ಪಾಜಿಗೌಡ ನಿಧನ

ಕೊರೊನಾ: ಭದ್ರಾವತಿಯ ಮಾಜಿ ಶಾಸಕ ಎಂ.ಜೆ.ಅಪ್ಪಾಜಿಗೌಡ ನಿಧನ

ಉಕ್ಕಿನ ನಗರಿ ಭದ್ರಾವತಿಯ ಕಾರ್ಖಾನೆ ಕಾರ್ಮಿಕರ ಧ್ವನಿಯಾಗಿ ರಾಜಕೀಯ ಪ್ರವೇಶಿಸಿದ ಅಪ್ಪಾಜಿ ಗೌಡರ ನಿಧನ ಈ ನಾಡಿಗೆ ಮತ್ತು ಜೆಡಿಎಸ್ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ- ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ

- Advertisement -
- Advertisement -

ಭದ್ರಾವತಿಯ ಮಾಜಿ ಶಾಸಕ, 67 ವರ್ಷದ ಎಂ.ಜೆ.ಅಪ್ಪಾಜಿ ಗೌಡ ಕೊರೊನಾದಿಂದ ಶಿವಮೊಗ್ಗದ ಜಿಲ್ಲಾ ಮೆಕ್‌ಗ್ಯಾನ್ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ನಿಧನರಾಗಿದ್ದಾರೆ.

ಅವರನ್ನು ಮೂರು ದಿನಗಳ ಹಿಂದೆ ಉಸಿರಾಟದ ಅಸ್ವಸ್ಥತೆಯ ಕಾರಣಕ್ಕೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊರೊನಾ ಸೋಂಕು ದೃಢಪಟ್ಟನಂತರ ಅವರನ್ನು ಮೆಕ್‌ಗ್ಯಾನ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ಅವರು ಕೊನೆಯುಸಿರೆಳೆದರು. ಅವರಿಗೆ ಒಬ್ಬ ಮಗ ಮತ್ತು ಮಗಳು ಇದ್ದಾರೆ.

ಭದ್ರಾವತಿಯ ವಿಶ್ವೇಶ್ವರಯ್ಯ ಐರನ್ ಮತ್ತು ಸ್ಟೀಲ್ ಪ್ಲಾಂಟ್‌ನಲ್ಲಿ ಉದ್ಯೋಗಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದ ಅವರು, ಕಾರ್ಮಿಕ ಸಂಘದ ನಾಯಕರಾಗಿ ಬೆಳೆದು, ನಂತರ ರಾಜಕೀಯಕ್ಕೆ ಕಾಲಿಟ್ಟರು.

ಅವರು 1994 ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದರು. ಅವರು 1999 ರಲ್ಲಿ ಕಾಂಗ್ರೆಸ್ ನ ಪ್ರತಿಸ್ಪರ್ಧಿ ಬಿ.ಕೆ.ಸಂಗಮೇಶ್ ವಿರುದ್ಧ ಜಯ ದಾಖಲಿಸಿದ್ದರು. ಆದಾಗ್ಯೂ, ಅವರನ್ನು ಸಂಗಮೇಶ್ ಎರಡು ಬಾರಿ ಸೋಲಿಸಿದರು.

ಇದನ್ನೂ ಓದಿ: ಐತಿಹಾಸಿಕ ಜಿಡಿಪಿ ಕುಸಿತಕ್ಕೆ ಕೊರೊನಾ ಮಾತ್ರ ಕಾರಣವೆ? ಕರ್ನಾಟಕದ ತಜ್ಞರು ಏನಂತಾರೆ?

ನಂತರ, ಅವರು ಜೆಡಿ(ಎಸ್)ಗೆ ಸೇರಿ ಮತ್ತು 2013 ರಲ್ಲಿ ಮತ್ತೆ ಗೆದ್ದಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಸಹಾಯಕ ಸಿ ಎಂ ಇಬ್ರಾಹಿಂ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದಾಗ ಅಪ್ಪಾಜಿ ಗೌಡ 2013 ರಲ್ಲಿ ಗಮನಾರ್ಹ ಜಯ ದಾಖಲಿಸಿದ್ದರು. ಸಂಗಮೇಶ್ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯನ್ನು ಎದುರಿಸಿದ್ದರು.

ಸಂಗಮೇಶ್ ಅವರು 2018 ರಲ್ಲಿ ಮತ್ತೆ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಅಪ್ಪಾಜಿಗೌಡರನ್ನು ಸೋಲಿಸಿದ್ದರು.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಟ್ವೀಟ್ ಮಾಡಿ, “ಭದ್ರಾವತಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು, ಜೆಡಿಎಸ್ ಪಕ್ಷದ ಹಿರಿಯ ಮುಖಂಡರಾದ ಎಂ.ಜೆ. ಅಪ್ಪಾಜಿ (ಅಪ್ಪಾಜಿ ಗೌಡ್ರು) ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ತೀರಾ ದು:ಖವಾಯಿತು. ದೇವರು ಮೃತರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಅವರ ಕುಟುಂಬದವರಿಗೆ ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಉಕ್ಕಿನ ನಗರಿ ಭದ್ರಾವತಿಯ ಕಾರ್ಖಾನೆ ಕಾರ್ಮಿಕರ ಧ್ವನಿಯಾಗಿ ರಾಜಕೀಯ ಪ್ರವೇಶಿಸಿದ ಅಪ್ಪಾಜಿ ಗೌಡರ ನಿಧನ ಈ ನಾಡಿಗೆ ಮತ್ತು ಜೆಡಿಎಸ್ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ” ಎಂದು ಸಂತಾಪ ಸೂಚಿಸಿದ್ದರು.


ಇದನ್ನೂ ಓದಿ: 10 ಲಕ್ಷ ಡಿಸ್‌ಲೈಕ್ ಮೂಲಕ ದಾಖಲೆ ಬರೆದ ಮೋದಿಯ ‘ಮನ್-ಕಿ-ಬಾತ್’!: ಡಿಸ್‌ಲೈಕ್‌ ತೆಗೆದುಹಾಕಲಾಗಿದೆಯೆಂಬ ಆರೋಪ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...