Homeಅಂತರಾಷ್ಟ್ರೀಯನ್ಯೂಯಾರ್ಕ್ ಪೊಲೀಸರಿಂದ ಮತ್ತೊಬ್ಬ ಕಪ್ಪು ವ್ಯಕ್ತಿಯ ಹತ್ಯೆ : ಸಾಕ್ಷ್ಯ ಬಿಡುಗಡೆ ಮಾಡಿದ ಮೃತನ ಕುಟುಂಬ

ನ್ಯೂಯಾರ್ಕ್ ಪೊಲೀಸರಿಂದ ಮತ್ತೊಬ್ಬ ಕಪ್ಪು ವ್ಯಕ್ತಿಯ ಹತ್ಯೆ : ಸಾಕ್ಷ್ಯ ಬಿಡುಗಡೆ ಮಾಡಿದ ಮೃತನ ಕುಟುಂಬ

ಮಾರ್ಚ್ 30 ರಂದು ಸಂಭವಿಸಿದ್ದ ಈ ಸಾವು, ಮೃತನ ಕುಟುಂಬ ನಿನ್ನೆಯ ಸುದ್ಧಿಗೋಷ್ಟಿಯಲ್ಲಿ ಈ ಕುರಿತು ದಾಖಲೆಗಳು ಮತ್ತು ವಿಡಿಯೋವೊಂದನ್ನು ಬಿಡುಗಡೆ ಮಾಡುವ ತನಕ ಇದು ಒಂದು ಹತ್ಯೆಯಾಗಿ ಸಾರ್ವಜನಿಕರ ಗಮನ ಸೆಳೆದಿರಲಿಲ್ಲ.

- Advertisement -
- Advertisement -

ಪಶ್ಚಿಮ ನ್ಯೂಯಾರ್ಕ್ ನಗರದಲ್ಲಿ ಬೆತ್ತಲೆಯಾಗಿ ಓಡಿಬರುತ್ತಿರುವ ಕಪ್ಪು ವ್ಯಕ್ತಿಯೊಬ್ಬನನ್ನು ಪೊಲೀಸರು ಉಸಿರುಗಟ್ಟುವಂತೆ ಮಾಡಿ ಹತ್ಯೆಗೈದಿದ್ದಾರೆ. ಈ ಕುರಿತು ಮೃತ ವ್ಯಕ್ತಿಯ ಕುಟುಂಬ ಬುಧವಾರ ವೀಡಿಯೋವೊಂದನ್ನು ಬಿಡುಗಡೆ ಮಾಡಿದೆ.

ಮೃತ ವ್ಯಕ್ತಿಯ ಕುಟುಂಬ ಬಿಡುಗಡೆ ಮಾಡಿದ ದಾಖಲೆ ಮತ್ತು ವಿಡಿಯೋ ದೃಶ್ಯದಲ್ಲಿ, ಪೊಲೀಸ್ ಅಧಿಕಾರಿಗಳ ಗುಂಪೊಂದು ಆತನ ತಲೆಗೆ ಮುಂಗಡಿಯೊಂದನ್ನು (Hood) ಹಾಕಿ, ಮುಖವನ್ನು ಎರಡು ನಿಮಿಷಗಳ ಕಾಲ ರಸ್ತೆಗೆ ಒತ್ತಿ, ಉಸಿರುಗಟ್ಟುವಂತೆ ಮಾಡಿ ಹತ್ಯೆ ಮಾಡಿದ್ದಾರೆ ಎಂಬುದು ತಿಳಿದುಬಂದಿದೆ.

ಮಾರ್ಚ್ 30 ರಂದು ಸಂಭವಿಸಿದ್ದ ಈ ಸಾವು, ಮೃತನ ಕುಟುಂಬ ನಿನ್ನೆಯ ಸುದ್ಧಿಗೋಷ್ಟಿಯಲ್ಲಿ ಈ ಕುರಿತು ದಾಖಲೆಗಳು ಮತ್ತು ವಿಡಿಯೋವೊಂದನ್ನು ಬಿಡುಗಡೆ ಮಾಡುವ ತನಕ ಇದು ಒಂದು ಹತ್ಯೆಯಾಗಿ ಸಾರ್ವಜನಿಕರ ಗಮನ ಸೆಳೆದಿರಲಿಲ್ಲ.

ರೋಚೆಸ್ಟರ್‌ನಲ್ಲಿ ಪೊಲೀಸರಿಂದ ಎನ್ ಕೌಂಟರ್ ಆದ ಏಳು ದಿನಗಳ ನಂತರ, ಡೇನಿಯಲ್ ಪ್ರೂಡ್ ಕೃತಕ ಉಸಿರಾಟದಲ್ಲಿದ್ದರು. ನಂತರ ಮಾರ್ಚ್ 30 ರಂದು ಸಾವನ್ನಪ್ಪಿದ್ದರು.

ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಡೇನಿಯಲ್ ಪ್ರೂಡ್ ಅವರ ಸಹೋದರ ಜೋ ಪ್ರೂಡ್, “ನೀವು ಅವನನ್ನು  ಹೇಗೆ ನೋಡಿದಿರಿ. ರಕ್ಷಣೆಯಿಲ್ಲದ ಮನುಷ್ಯ ನೆಲೆದ ಮೇಲೆ ಬೆತ್ತಲೆಯಾಗಿ ಬಿದ್ದಿದ್ದಾನೆ. ಅವನ ಕೈಗೆ ಕೋಳ ತೊಡಿಸಲಾಗಿದೆ. ಈ ಸಮಾಜ ಇದನ್ನು ಅರ್ಥಮಾಡಿಕೊಳ್ಳಲು ಇನ್ನೂ ಎಷ್ಟು ಜನ ಸಹೋದರರು ಹೀಗೆ ಸಾಯಬೇಕು?” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೃತನ ಸಹೋದರ ಬಿಡುಗಡೆ ಮಾಡಿರುವ ವೀಡಿಯೋದಲ್ಲಿ ಪೋಲಿಸರ ಕ್ರೂರತೆ ಮತ್ತು ಹತ್ಯೆ, ಪೊಲೀಸ್ ಮತ್ತು ಡೇನಿಯಲ್ ಫ್ರೂಡ್ ನ ಸಂಭಾಷಣೆಯ ಸಮೇತ ಸ್ಪಷ್ಟವಾಗಿ ದಾಖಲಾಗಿದೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.

ಇದನ್ನೂ ಓದಿ: ಪ್ರತಿಭಟನಾಕಾರರಿಗೆ ಹೆದರಿ ಶ್ವೇತಭವನದ ಬಂಕರ್ ನಲ್ಲಿ ಅಡಗಿದ ಡೊನಾಲ್ಡ್ ಟ್ರಂಪ್

ಅಮೆರಿಕದಲ್ಲಿ ಇತ್ತೀಚೆಗೆ ಜಾರ್ಜ್ ಫ್ಲಾಯ್ಡ್ ಎಂಬ ಕಪ್ಪು ಜನಾಂಗದ ವ್ಯಕ್ತಿಯನ್ನು ಪೊಲೀಸ್ ಓರ್ವ ಕತ್ತಿನ ಮೇಲೆ ತುಳಿದು ಅಮಾನವೀಯವಾಗಿ ಕೊಂದ ಘಟನೆ, ಅಲ್ಲಿ ದೊಡ್ಡ ಹೋರಾಟಕ್ಕೆ ಕಾರಣವಾಗಿತ್ತು.

ಪ್ರೂಡ್ ಚಿಕಾಗೊ ಮೂಲದವನಾಗಿದ್ದು, ತನ್ನ ಕುಟುಂಬದ ಭೇಟಿಗಾಗಿ ನ್ಯೂಯಾರ್ಕ್ ನ ರೋಚೆಸ್ಟರ್‌ಗೆ ಬಂದಿದ್ದನು. ಜೋ ಪ್ರೂಡ್, “911 ಗೆ ಕರೆ ಮಾಡಿ, ಮನೆಯಿಂದ ಹೊರಹೋಗಿರುವ ತನ್ನ ಸಹೋದರ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾನೆ ಎಂದು ಹೇಳಿದ ನಂತರ ಪೊಲೀಸರು ಪ್ರತಿಕ್ರಿಯಿಸಿದ್ದರು” ಎಂದು ಹೇಳಿದ್ದಾರೆ.

ಏಪ್ರಿಲ್ ನಲ್ಲಿ ರಾಜ್ಯ ಅಟಾರ್ನಿ ಜನರಲ್ ಲೆಟಿಟಿಯಾ ಜೇಮ್ಸ್ ಕಚೇರಿ ಸ್ವಯಂ ತನಿಖೆಯನ್ನು ಪ್ರಾರಂಭಿಸಿದಾಗ, ನಗರವು ಪ್ರೂಡ್ ಸಾವಿನ ತನಿಖೆಯನ್ನು ನಿಲ್ಲಿಸಿತು. ನ್ಯೂಯಾರ್ಕ್ ಕಾನೂನಿನ ಪ್ರಕಾರ, ಪೊಲೀಸ್ ಕಸ್ಟಡಿಯಲ್ಲಿರುವ ನಿರಾಯುಧ ಜನರ ಸಾವುಗಳನ್ನು ಸ್ಥಳೀಯ ಅಧಿಕಾರಿಗಳು ನಿರ್ವಹಿಸುವ ಬದಲು ಅಟಾರ್ನಿ ಜನರಲ್ ಕಚೇರಿಗೆ ವರ್ಗಾಯಿಸಲಾಗುತ್ತದೆ. ತನಿಖೆ ಮುಂದುವರೆದಿದೆ ಎಂದು ಜೇಮ್ಸ್ ಬುಧವಾರ ಹೇಳಿದ್ದಾರೆ.

ಇದನ್ನೂ ಓದಿ: ತಮಿಳುನಾಡು ಲಾಕಪ್ ಡೆತ್: ಭಾರತದ ಜಾರ್ಜ್ ಫ್ಲಾಯ್ಡ್ ಎಂದು ಆಕ್ರೋಶ ವ್ಯಕ್ತಪಡಿಸಿದ ನೆಟ್ವಿಗರು.

ಇತ್ತೀಚಿನ ವರ್ಷಗಳಲ್ಲಿ ಅಮೇರಿಕಾ ಮತ್ತು ಇತರ ದೇಶಗಳಲ್ಲಿ ಹಲವಾರು ಕೈದಿಗಳ ಸಾವಿಗೆ ಸ್ಪಿಟ್ ಹುಡ್ ಗಳು ಪ್ರಮುಖ ಅಂಶವೆಂದು ಪರಿಶೀಲಿಸಲಾಗಿದೆ.

“ಆತ ನಿರಂತರವಾಗಿ ಉಗುಳುತ್ತಿದ್ದ. ಹಾಗಾಗಿ ಕೊರೊನಾ ಬಗ್ಗೆ ಕಾಳಜಿ ವಹಿಸುತ್ತಿರುವುದರಿಂದ ಅಧಿಕಾರಿಗಳ ನಿರ್ದೇಶನದಲ್ಲಿ ಅವರು ಪ್ರೂಡ್ ಮೇಲೆ ಹುಡ್ ಹಾಕಿದ್ದಾರೆ” ಎಂದು ಒಬ್ಬ ಅಧಿಕಾರಿ ಹೇಳಿದ್ದಾರೆ.

ಇನ್ನೂ, ಹಲವು ಹೋರಾಟಗಾರರು ಮತ್ತು ಕಾರ್ಯಕರ್ತರು “ಪ್ರೂಡ್ ಅವರ ಸಾವಿಗೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕೊಲೆ ಆರೋಪದಲ್ಲಿ ಕಾನೂನು ಕ್ರಮ ಜರುಗಿಸಬೇಕು. ಅವರನ್ನು ಇಲಾಖೆಯಿಂದ ವಜಾಗೊಳಿಸಬೇಕು” ಎಂದು ಒತ್ತಾಯಿಸಿದ್ದಾರೆ.

“ಮಾನಸಿಕ ಆರೋಗ್ಯ ಸಮಸ್ಯೆಯನ್ನು ಹೊಂದಿರುವ ವ್ಯಕ್ತಿಗಳನ್ನು ನಿಭಾಯಿಸಲು ಅವರು ಸಜ್ಜುಗೊಂಡಿಲ್ಲ ಎಂದು ಪೊಲೀಸರು ಮತ್ತೆ ಮತ್ತೆ ನಮಗೆ ತೋರಿಸಿದ್ದಾರೆ. ಈ ಅಧಿಕಾರಿಗಳಿಗೆ ಕೊಲ್ಲಲು ತರಬೇತಿ ನೀಡಲಾಗುತ್ತದೆ. ಡೇನಿಯಲ್ ಪ್ರೂಡ್ ಅವರನ್ನು ರಕ್ಷಿಸುವ ಬದಲು ಅಪಹಾಸ್ಯ ಮಾಡಲು ಈ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ” ಎಂದು ಸುದ್ದಿಗೋಷ್ಠಿಯಲ್ಲಿ ಫ್ರೀ ದಿ ಪೀಪಲ್ ಆರ್ ಒ ಸಿಯ ಆಶ್ಲೇ ಗ್ಯಾಂಟ್ ಹೇಳಿದರು.

ಪೊಲೀಸ್ ಪ್ರಧಾನ ಕಚೇರಿಯಾಗಿ ಕಾರ್ಯನಿರ್ವಹಿಸುವ ರೋಚೆಸ್ಟರ್‌ನ ಸಾರ್ವಜನಿಕ ಸುರಕ್ಷತಾ ಕಟ್ಟಡದ ಹೊರಗೆ ಹಲವು ಪ್ರತಿಭಟನಾಕಾರರು ಬುಧವಾರ ಜಮಾಯಿಸಿದರು. “ವಾರೆನ್ ಮಾಧ್ಯಮಗಳೊಂದಿಗೆ ಮಾತನಾಡುತ್ತಿರುವಾಗ ಕಟ್ಟಡವನ್ನು ಪ್ರವೇಶಿಸಿದ ನಂತರ ಹಲವಾರು ಸಂಘಟಕರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ” ಎಂದು ಫ್ರೀ ದಿ ಪೀಪಲ್ ಆರ್ ಒ ಸಿ ಹೇಳಿದೆ.


ಇದನ್ನೂ ಓದಿ: ಟ್ರಂಪ್ ‌ಟವರ್‌ ಮುಂದೆ ’ಬ್ಲ್ಯಾಕ್ ಲೈವ್ಸ್ ಮ್ಯಾಟರ್‌’ ಎಂದು ಬರೆದ ಚಳವಳಿಗಾರರು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read