ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿರುವ ಸ್ಯಾಮ್‌ಸಂಗ್ ಸ್ಥಾವರದಲ್ಲಿ ಕಾರ್ಮಿಕ ಸಂಘಟನೆಯಾದ ಸಿಐಟಿಯು ನೇತೃತ್ವದಲ್ಲಿ ನಡೆಯುತ್ತಿರುವ ಮುಷ್ಕರವು ಎರಡನೇ ತಿಂಗಳಿಗೆ ಕಾಲಿಟ್ಟಿದೆ. ಭಾರತದಲ್ಲಿ ಇತ್ತಿಚೆಗೆ ನಡೆದ ಅತಿ ದೊಡ್ಡ ಮುಷ್ಕರಗಳಲ್ಲಿ ಇದು ಒಂದಾಗಿದೆ ಎಂದು ವರದಿಯಾಗಿದೆ. ಭಾರತದಲ್ಲಿ ಸ್ಯಾಮ್‌ಸಂಗ್‌ನ ವಾರ್ಷಿಕ ಆದಾಯದ ಸರಿಸುಮಾರು ಮೂರನೇ ಒಂದು ಭಾಗದಷ್ಟು ಆರ್ಥಿಕ ವಹಿವಾಟು ತಮಿಳುನಾಡಿನ ಈ ಸ್ಥಾವರದಲ್ಲಿ ನಡೆಯುತ್ತಿದೆ. ಸ್ಯಾಮ್‌ಸಂಗ್ ವಿರುದ್ಧ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಸ್ಯಾಮ್‌ಸಂಗ್‌ನ ಶ್ರೀಪೆರಂಬದೂರ್ ಸ್ಥಾವರವು ರೆಫ್ರಿಜರೇಟರ್‌ಗಳು, ಟೆಲಿವಿಷನ್‌ಗಳು ಮತ್ತು ವಾಷಿಂಗ್‌ಮಿಷನ್ ಯಂತ್ರಗಳಂತಹ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ತಯಾರಿಸುತ್ತದೆ. ಭಾರತದ ತನ್ನ 12 ಶತಕೋಟಿ ಡಾರಲ್ ಆದಾಯದ ಸರಿಸುಮಾರು 30% ರಷ್ಟು ವಹಿವಾಟು ಈ ಕಾರ್ಖಾನೆಯಲ್ಲೆ ನಡೆಯುವುದರಿಂದ ಕಾರ್ಮಿಕರ ಈ ಪ್ರತಿಭಟನೆಯು ಸ್ಯಾಮ್‌ಸಂಗ್ ಉತ್ಪಾದನೆಯ ಮೇಲೆ ಭಾರಿ ಪರಿಣಾಮ ಬೀರಿದೆ.
ಮುಷ್ಕರದ ಹಿನ್ನೆಲೆ
ಕಾರ್ಮಿಕರ ಮುಷ್ಕರವು 2024ರ ಸೆಪ್ಟೆಂಬರ್ 9ರಂದು ಪ್ರಾರಂಭವಾಯಿತು. ಈ ಮುಷ್ಕರದಲ್ಲಿ ಕಾರ್ಖಾನೆಯ 1,500 ಕ್ಕೂ ಹೆಚ್ಚು ಕಾರ್ಮಿಕರು ಭಾಗವಹಿಸಿದ್ದರು. ಇದು ಕಾರ್ಖಾನೆಯಲ್ಲಿ ಕೆಲಸ ಮಾಡುವ 80% ಕ್ಕಿಂತ ಹೆಚ್ಚು ಕಾರ್ಮಿಕರ ಸಂಖ್ಯೆಯಾಗಿದ್ದು, ಉತ್ಪಾದನೆ ಮೇಲೆ ತೀವ್ರ ಹೊಡೆತ ಬಿದ್ದಿದೆ.
சாம்சங் தொழிலாளர்களின் போராட்டமும் போலீஸ் அடக்குமுறையும்… #CPIM #Samsung #SamsungWorkers #SamsungStrike #WorkersRights #CITU @CMOTamilnadu @mkstalin pic.twitter.com/ktNTXxUbaK
— CPIM Tamilnadu (@tncpim) October 9, 2024
ಕಾರ್ಮಿಕರು ಉತ್ತಮ ವೇತನ, ಸುಧಾರಿತ ಕೆಲಸದ ಪರಿಸ್ಥಿತಿಗಳು ಮತ್ತು ಹೊಸದಾಗಿ ರೂಪುಗೊಂಡ ತಮ್ಮ ಟ್ರೇಡ್ ಯೂನಿಯನ್, ‘ಸ್ಯಾಮ್‌ಸಂಗ್ ಇಂಡಿಯಾ ವರ್ಕರ್ಸ್ ಯೂನಿಯನ್'(SIWU)ಗೆ ಮಾನ್ಯತೆ ನೀಡಬೇಕು ಎಂಬ ಪ್ರಮುಖ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.ಸ್ಯಾಮ್‌ಸಂಗ್ ವಿರುದ್ಧ
ಇದನ್ನೂಓದಿ: ಅಮೆರಿಕ ಅಧ್ಯಕ್ಷೀಯ ಚುನಾವಣೆ | ಟ್ರಂಪ್ ಪರವಾಗಿ ಸಭೆ ನಡೆಸುತ್ತಿರುವ ಬಿಜೆಪಿಯ ಮಾಜಿ ಶಾಸಕ!
ಮುಷ್ಕರ ನಿರತ ಕಾರ್ಮಿಕರ ಪ್ರಮುಖ ಬೇಡಿಕೆಗಳು
ಉತ್ತಮ ವೇತನ: ಕಾರ್ಖಾನೆಯ ಪ್ರಸ್ತುತ ವೇತನವು ರೂ. 20,000 ರಿಂದ ರೂ 40,000 ವರೆಗೆ ಇವೆ. ಈ ವೇತವನ್ನು ಹೆಚ್ಚು ಮಾಡಬೇಕು ಎಂದು ಕಾರ್ಮಿಕರು ಒತ್ತಾಯಿಸುತ್ತಿದ್ದಾರೆ. ಸ್ಯಾಮ್‌ಸಂಗ್‌ನ ದಕ್ಷಿಣ ಕೊರಿಯಾದಲ್ಲಿ ಇದೆ ರೀತಿ ಕೆಲಸ ಮಾಡುವ ಕಾರ್ಮಿಕರು ವೇತನ ತಿಂಗಳಿಗೆ ಸುಮಾರು 4.55 ಲಕ್ಷವರೆಗೂ ಇವೆ. ಇತ್ತಿಚೆಗಷ್ಟೆ ದಕ್ಷಿಣ ಕೊರಿಯಾದ ಸ್ಟಾವರದಲ್ಲೂ ಕಾರ್ಮಿಕರು ಪ್ರತಿಭಟನೆ ನಡೆಸಿ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಂಡಿದ್ದರು.
ಸುಧಾರಿತ ಕೆಲಸದ ಪರಿಸ್ಥಿತಿಗಳು: ಅನೇಕ ಕಾರ್ಮಿಕರು ಶಾಸನಬದ್ಧ ಕೆಲಸದ ಸಮಯವನ್ನು ಮೀರಿ ಕಾರ್ಖನೆಯು ಕೆಲಸ ಮಾಡಿಸುತ್ತಿದೆ ಎಂದು ವರದಿಯಾಗಿವೆ. ನಿರ್ದಿಷ್ಟವಾಗಿ, ಎಂಟು ಗಂಟೆಗಳ ಕೆಲಸಕ್ಕಾಗಿ ಕಾರ್ಮಿಕರು ಬೇಡಿಕೆ ಸಲ್ಲಿಸುತ್ತಿದ್ದಾರೆ. ಜೊತೆಗೆ ಕಾರ್ಖಾನೆಯಲ್ಲಿ ಕಾರ್ಮಿಕರ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತಿದ್ದು, ಅಧಿಕಾರಿಗಳು ಸೌಜನ್ಯದಿಂದ ವರ್ತಿಸುವಂತೆ ಬೇಡಿಕೆ ಸಲ್ಲಿಸಿದ್ದಾರೆ.
ಒಕ್ಕೂಟದ ಮಾನ್ಯತೆ: ಇದು ಪ್ರಮುಖವಾದ ಬೇಡಿಕೆಯಾಗಿದ್ದು, ತಮ್ಮ ಕಾರ್ಮಿಕ ಸಂಘಟನೆಗೆ ಕಾರ್ಖಾನೆಯ ಆಡಳಿತ ಮಾನ್ಯತೆ ನೀಡಬೇಕು ಎಂದು ಕಾರ್ಮಿಕರು ಬೇಡಿಕೆ ಮುಂದಿಟ್ಟಿದ್ದಾರೆ. ತಮಿಳುನಾಡು ಕಾರ್ಮಿಕ ಇಲಾಖೆಯಲ್ಲಿ ಯೂನಿಯನ್ ನೋಂದಣಿಗಾಗಿ ಬಾಕಿ ಉಳಿದಿರುವ ಅರ್ಜಿಯ ಹೊರತಾಗಿಯೂ, SIWU ಅನ್ನು ಆಡಳಿತವು ಅಂಗೀಕರಿಸಿಲ್ಲ. ಆಡಳಿತ ಮಂಡಳಿತಯು ಸಿಐಟಿಯು ನೇತೃತ್ವದ ಸಂಘಟನೆಯ ಮಾನ್ಯತೆಯ ಬಗ್ಗೆ ತರಕಾರು ಮಾಡುತ್ತಿವೆ.
ಕಾರ್ಮಿಕ ಹಕ್ಕುಗಳ ದೃಷ್ಟಿಕೋನದಿಂದ, ನ್ಯಾಯಯುತ ವೇತನ ಮತ್ತು ಸುಧಾರಿತ ಕೆಲಸದ ಪರಿಸ್ಥಿತಿಗಳ ಬೇಡಿಕೆಗಳು ಜಾಗತಿಕ ಕಾರ್ಮಿಕ ಮಾನದಂಡಗಳಾಗಿವೆ. ಅಲ್ಲದೆ, ಕಾರ್ಮಿಕರ ಪ್ರಮುಖ ಬೇಡಿಕೆಯಾದ ಕಾರ್ಮಿಕ ಸಂಘದ ಮಾನ್ಯತೆ ಕೂಡಾ, ಕಾರ್ಮಿಕ ಒಕ್ಕೂಟಗಳನ್ನು ರಚಿಸುವ ಹಕ್ಕನ್ನು ಅಂತರರಾಷ್ಟ್ರೀಯ ಕಾರ್ಮಿಕ ಕಾನೂನುಗಳ ಅಡಿಯಲ್ಲಿ ರಕ್ಷಿಸಲಾಗಿದೆ. ಈ ಹಕ್ಕನ್ನು ನಿರಾಕರಿಸುವುದು ಮೂಲಭೂತ ಕಾರ್ಮಿಕರ ಹಕ್ಕುಗಳ ಉಲ್ಲಂಘನೆಯಾಗಿದೆ.
ಇದನ್ನೂಓದಿ: ಕೂಲಿ ಕೇಳಿದ ದಲಿತ ಕಾರ್ಮಿಕನಿಗೆ ಹಲ್ಲೆ : ದೇಹದ ಮೇಲೆ ಉಗುಳಿ, ಮೂತ್ರ ವಿಸರ್ಜಿಸಿ ವಿಕೃತಿ
ತಮಿಳುನಾಡು ಸರ್ಕಾರ ಮತ್ತು ಕಾರ್ಮಿಕರ ಮುಷ್ಕರ
ತಮಿಳುನಾಡು ಸರ್ಕಾರವು ಕಾರ್ಮಿಕರು ಮತ್ತು ಸ್ಯಾಮ್‌ಸಂಗ್ ಆಡಳಿತದ ನಡುವೆ ಹಲವು ಬಾರಿ ಮಧ್ಯಸ್ಥಿಕೆ ವಹಿಸಿದೆ. ಕಾರ್ಮಿಕರಿಗೆ ಮಾಸಿಕ ಉತ್ಪಾದಕತೆ ಸ್ಥಿರೀಕರಣ ಪ್ರೋತ್ಸಾಹ ಮತ್ತು ಸುಧಾರಿತ ಸಾರಿಗೆ ಸೌಲಭ್ಯಗಳನ್ನು ಒಳಗೊಂಡಿರುವ ಒಪ್ಪಂದದ ಜ್ಞಾಪಕ ಪತ್ರಕ್ಕೆ (MoA) ಸಹಿ ಮಾಡಿದ ಹೊರತಾಗಿಯೂ, ಕಾರ್ಮಿಕರ ಪ್ರಮುಖ ಬೇಡಿಕೆಯಾಗಿರುವ ಯೂನಿಯನ್ ಮಾನ್ಯತೆಯನ್ನು ಒಪ್ಪದ ಕಾರಣಕ್ಕೆ ಮುಷ್ಕರ ನಿರತ ನೌಕರರು ಒಪ್ಪಂದವನ್ನು ತಿರಸ್ಕರಿಸಿದ್ದಾರೆ.
ತನ್ನ ಉತ್ಪಾದನಾ ಕಾರ್ಯಾಚರಣೆಗಳನ್ನು ತಮಿಳುನಾಡಿನಿಂದ ಸ್ಥಳಾಂತರಿಸುವ ಯೋಜನೆಯಿದೆ ಎಂಬ ವದಂತಿಗಳನ್ನು ಸ್ಯಾಮ್‌ಸಂಗ್ ನಿರಾಕರಿಸಿದೆ. ಅದರ ಆಡಳಿತವು ತಮಿಳುನಾಡು ಸರ್ಕಾರ ಮತ್ತು ಅದರ ಹೂಡಿಕೆ ಸ್ನೇಹಿ ಪರಿಸರ ಬಗ್ಗೆಗಿನ ತಮ್ಮ ಬದ್ಧತೆಯನ್ನು ಒತ್ತಿಹೇಳಿದೆ. ಈ ನಡುವೆ ತಮಿಳುನಾಡು ಸರ್ಕಾರದ ಮೈತ್ರಿ ಪಕ್ಷವಾಗಿರುವ ಸಿಪಿಐ(ಎಂ) ಕಾರ್ಮಿಕರಿಗೆ ಬೆಂಬಲ ವ್ಯಕ್ತಪಡಿಸಿದೆ.
சாம்சங் தொழிலாளர்கள் போராட தடையில்லை என்று நீதிமன்றம் சொன்ன பிறகு போலீஸ் கைது செய்வது அராஜகம். #Samsung #SamsungWorkers #SamsungStrike #CITU More: https://t.co/eDplKNpuo2 pic.twitter.com/pkPgw3SBl9
— CPIM Tamilnadu (@tncpim) October 10, 2024
ಮೈತ್ರಿಯಲ್ಲಿ ಬಿರುಕು ಉಂಟಾಗುತ್ತಿದ್ದು, ಸಿಪಿಐ(ಎಂ) ಮೈತ್ರಿಗೆ ದ್ರೋಹ ಬಗೆದಿದೆ ಎಂದು ಕೂಡಾ ಡಿಎಂಕೆ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಕಾರ್ಮಿಕ ನಾಯಕರು ಇದನ್ನು ನಿರಾಕರಿಸಿದ್ದಾರೆ. “ಈ ಹೋರಾಟ ಕಾರ್ಮಿಕರ ಹಿತಾಸಕ್ತಿಗಾಗಿ ನಡೆಯುತ್ತಿದ್ದು, ಕಮ್ಯನಿಸ್ಟ್ ಪಕ್ಷಕ್ಕಾಗಿ ಅಲ್ಲ. ಸಿಐಟಿಯು ಈ ಸಂದರ್ಭದಲ್ಲಿ ಕಮ್ಯುನಿಸ್ಟ್ ಪಕ್ಷದ ಜೊತೆಗೆ ನೇರ ಸಂಬಂಧವಿಲ್ಲದ ಸಂಘಟನೆಯಾಗಿದೆ. ನಮಗೆ ಎಲ್ಲಾ ಪಕ್ಷಗಳ ಬೆಂಬಲವಿದೆ. ಈ ಮುಷ್ಕರವು ಕಮ್ಯುನಿಸಂ ಬಗ್ಗೆ ಅಲ್ಲ” ಎಂದು ಪ್ರತಿಭಟನಾನಿರತ ಕಾರ್ಮಿಕ ನಾಯಕರೊಬ್ಬರು ಹೇಳಿದ್ದಾರೆ.
ಇದನ್ನೂಓದಿ: ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ: ಕಿರಿಯರ ಪ್ರತಿಭಟನೆ ಬೆಂಬಲಿಸಿ 100ಕ್ಕೂ ಹೆಚ್ಚು ಹಿರಿಯ ವೈದ್ಯರಿಂದ ರಾಜೀನಾಮೆ
ಕಾಂಗ್ರೆಸ್, ಸಿಪಿಐ(ಎಂ), ಸಿಪಿಐ, ಎಂಡಿಎಂಕೆ, ವಿಸಿಕೆ ಸೇರಿದಂತೆ ಡಿಎಂಕೆಯ ಮೈತ್ರಿಕೂಟದ ಪ್ರಮುಖ ನಾಯಕರು ಬುಧವಾರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡುವ ಮುನ್ನ ಬುಧವಾರ ಮುಂಜಾನೆ, ತಮಿಳುನಾಡು ಪೊಲೀಸರು 11 ಪ್ರಮುಖ ಯೂನಿಯನ್ ನಾಯಕರನ್ನು ಬಂಧಿಸಿ, ಪ್ರತಿಭಟನಾ ಡೇರೆಗಳನ್ನು ಕೆಡವಿದ್ದಾರೆ.
ಇತ್ತೀಚಿನ ಬೆಳವಣಿಗೆಗಳು
ಇತ್ತಿಚೆಗೆ ಪೊಲೀಸರ ಕೈವಾಡದಿಂದ ಪ್ರತಿಭಟನಾ ಸ್ಥಳದಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಪ್ರತಿಭಟನೆಯ ಸಮಯದಲ್ಲಿ ನಡೆದ ವಾಗ್ವಾದದ ನಂತರ ಏಳು ಕಾರ್ಮಿಕರನ್ನು ಬಂಧಿಸಲಾಗಿದೆ. ಪ್ರತಿಭಟನಾ ನಿರತ ಕಾರ್ಮಿಕರ ವಿರುದ್ಧ ಪೋಲಿಸರು ಕಿರುಕುಳ ನೀಡುತ್ತಿದ್ದು, ಬೆದರಿಕೆ ತಂತ್ರಗಳನ್ನು ಅನುಸರಿಸಿದ್ದಾರೆ ಎಂದು ಆರೋಪಿಸಲಾಗಿದೆ.
சாம்சங்கைப் பார்த்து தமிழக அரசு பயப்படுவது ஏன்? – தோழர் இ.முத்துகுமார், காஞ்சிபுரம் மாவட்டச் செயலாளர், #CITU #SamsungWirkers #WorkersStrike #FightForRights #WorkersRights More: https://t.co/iKbpLLexos pic.twitter.com/VpfDA7NB59
— CPIM Tamilnadu (@tncpim) October 10, 2024
ಮುಷ್ಕರ ನಿರತ ಕಾರ್ಮಿಕರನ್ನು ಮೇಲ್ವಿಚಾರಣೆ ಮಾಡಲು ಪೊಲೀಸರು ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿದ್ದಾರೆ ಎಂದು ಆರೋಪಿಸಲಾಗಿದ್ದು, ಪ್ರತಿಭಟನಾ ಟೆಂಟ್‌ಗಳನ್ನು ಕೆಡವಿದ್ದಾರೆ. ಇದು ಅಧಿಕಾರಿಗಳು ಮತ್ತು ನೌಕರರ ನಡುವಿನ ಉದ್ವಿಗ್ನತೆಯನ್ನು ಇನ್ನಷ್ಟು ತೀವ್ರಗೊಳಿಸಿದ್ದಾರೆ.
ಸಮುದಾಯ ಮತ್ತು ರಾಜಕೀಯ ಬೆಂಬಲ
ಮುಷ್ಕರ ನಿರತ ಕಾರ್ಮಿಕರಿಗೆ ಕಾಂಗ್ರೆಸ್, ಸಿಪಿಐ(ಎಂ), ಸಿಪಿಐ, ಎಂಡಿಎಂಕೆ, ವಿಸಿಕೆ ಸೇರಿದಂತೆ ಡಿಎಂಕೆಯ ಮೈತ್ರಿಕೂಟದ ಪ್ರಮುಖ ನಾಯಕರು, ವಿವಿಧ ರಾಜಕೀಯ ಪಕ್ಷಗಳು ಮತ್ತು ಕಾರ್ಮಿಕ ಸಂಘಟನೆಗಳಿಂದ ಬೆಂಬಲ ವ್ಯಕ್ತವಾಗಿದೆ.
ವಿಡಿಯೊ ನೋಡಿ: ಬೆಂಗಳೂರು: ಜಯನಗರದಲ್ಲಿ ಬೀದಿ ಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆ


