Homeಮುಖಪುಟಪ್ಲೇಗ್ ಹಾಗೂ ಕೋವಿಡ್ 19 ನಡುವೆ ಕೆಲವು ಹೋಲಿಕೆಗಳು

ಪ್ಲೇಗ್ ಹಾಗೂ ಕೋವಿಡ್ 19 ನಡುವೆ ಕೆಲವು ಹೋಲಿಕೆಗಳು

ಕಳೆದ ಶತಮಾನದಲ್ಲಿ ಕೋಟಿಗಟ್ಟಲೆ ಜನರನ್ನ ಬಲಿ ತೆಗೆದುಕೊಂಡಿದ್ದ ಪ್ಲೇಗ್‌ ಮತ್ತು ಇದೀಗ ಅಂತಹುದೇ ಹೆದರಿಕೆ ಹುಟ್ಟಿಸಿರುವ ಕೊರೊನಾ ನಡುವಿನ ಒಂದು ತುಲನೆ. ಮೂಲ ಲೇಖನ ʼದಿ ಹಿಂದುʼ ಪತ್ರಿಕೆಯದ್ದು.

- Advertisement -
- Advertisement -

ಅನುವಾದ: ನಿಝಾಮ್ ಅನ್ಸಾರಿ ಕಲ್ಲಡ್ಕ

ಕೃಪೆ : ದಿ ಹಿಂದೂ (ಮಾರ್ಚ್27)

ಸುಮಾರು 20 ಮಿಲಿಯನ್ ಯುರೋಪ್ಯನ್ ಜನತೆಯನ್ನು ಆಹುತಿ ತೆಗೆದುಕೊಂಡ ಪ್ಲೇಗ್ (ಬ್ಲಾಕ್ ಡೆತ್) ಮಹಾ ದುರಂತ ಸಂಭವಿಸಿದ್ದೂ ಇಟಲಿಯಲ್ಲೇ ಆಗಿತ್ತು. 700 ವರ್ಷಗಳ ಹಿಂದೆ ಹರಡಿದ ಈ ಮಹಾಮಾರಿ ಅತಿ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದ್ದು ಫ್ಲೋರನ್ಸ್ ನಲ್ಲಿ.  ಅಂದಿನ ಸಾಮಾಜಿಕ ಅಂತರ (ಸೋಶೀಯಲ್ ಡಿಸ್ಟೆನ್ಸಿಂಗ್), ಏಕಾಂತ ವಾಸ (ಕ್ವಾರಂಟೈನ್) ಇತ್ಯಾದಿಗಳನ್ನು ನಂತರ ಅನೇಕರು ಅಧ್ಯಯನ ವಿಷಯವನ್ನಾಗಿಸಿದರು.

2011 ರಲ್ಲಿ ಅಂತರರಾಷ್ಟ್ರೀಯ ವಿಜ್ಞಾನಿಗಳ ಸಮಿತಿಯೊಂದು ‘ನೇಚರ್’ ಎಂಬ ಜರ್ನಲ್‌ನಲ್ಲಿ  ಮಧ್ಯಯುಗದಲ್ಲಿ ಸಂಭವಿಸಿದ ಮಹಾಮಾರಿಗೆ ಕಾರಣವಾದ ‘ಯೆರ್ಸಿನಿಯ ಪೆಸ್ಟಿಸ್’ ಎಂಬ ಬ್ಯಾಕ್ಟೀರಿಯಾದ ಕುರಿತು ಒಂದು ಪತ್ರವನ್ನು ಹೊರಡಿಸಿದರು. ‘ಪ್ಯೂಬೋನಿಕ್ ಪ್ಲೇಗ್’ ಎಂದಾಗಿತ್ತು ಆ ರೋಗದ ಹೆಸರು. ಅವರ ಪರಿಶೋಧನೆಯಲ್ಲಿ ಈ ಬ್ಯಾಕ್ಟೀರಿಯ ಬಂದಿದ್ದು ಚೀನಾದಿಂದಲೋ ಅಥವಾ ಸಮೀಪ ಪ್ರದೇಶಗಳಿಂದಲೋ ಎಂದಾಗಿತ್ತು. ಅವರು ಇಂದಿನ ಸಿಲ್ಕ್ ರೋಡ್ ಮತ್ತು ಇತರ ಲ್ಯಾಂಡ್ ಟ್ರೇಡ್ ರೂಟ್‍ಗಳ ನೀಲನಕ್ಷೆ ತಯಾರಿಸಿದರು. ಅಂತಿಮವಾಗಿ, ಅದು ಸಮುದ್ರ ಹಾದಿಯಾಗಿ, ಇಟಲಿಯನ್ ಬಂದರು ಪ್ರದೇಶವಾದ ಮೆಸ್ಸಿನಗೆ ಬಂದು ತಲುಪಿತು. ಅಂದೂ ಅದರ ಹುಟ್ಟು ಪ್ರಾಣಿಗಳಿಂದ ಮನುಷ್ಯನಿಗೆ ಹರಡುವುದೇ ಆಗಿತ್ತು. ಇಲಿ, ಅಳಿಲು, ಹಾವು ಇತ್ಯಾದಿ ಜೀವಿಗಳಿಂದ ಬಂದಿದ್ದು ಎಂದು ಅಂದು ಹೇಳಲಾಗಿತ್ತು. ಭಯ, ಆತಂಕ ಹಾಗೂ ನಿರೀಕ್ಷೆಯೇ ಆಗಿತ್ತು ಇಂದಿನಂತೆಯೇ ಅಂದಿನ ಜನರ ಮನಸ್ಥಿತಿ. ’ನಮಗೇನಾಗುತ್ತಿದೆ’ ಎಂಬುದೇ ಅಲ್ಲಿ ಕೇಳುತ್ತಿದ್ದುದು. ಏಕಾಂತತೆ (ಐಸೊಲೇಶನ್) ಮಾತ್ರವಾಗಿತ್ತು ಪ್ರತಿರೋಧದ ಔಷಧ. ಅಂದು ಬ್ಯಾಕ್ಟೀರಿಯ ಇಂದು ವೈರಸ್, ಸಾರ್ಸ್, ಕೋವಿಡ್ 19 (ಕೋವ್2) ಎಂಬ ಈ ಎರಡೂ ಕೂಡಾ ಶರೀರದ ಶ್ವಾಸ ವ್ಯವಸ್ಥೆಯನ್ನು ಬಾಧಿಸುವುದಾಗಿತ್ತು, 1916-20 ಗಳಲ್ಲಿ ಬಂದ ‘ಸ್ಪ್ಯಾನಿಶ್ ಫ್ಲೂ’ ವಿಗೂ ಇದಕ್ಕೂ ಸಮಾನ ಹೋಲಿಕೆಗಳಿವೆ.

ತರತಮಗಳಿಲ್ಲದೆ ಸಮಾಧಾನ ಶಾಂತಿ ತುಂಬಿ ತುಳುಕುತ್ತಿದ್ದ ಸಮಯದಲ್ಲೇ ಯುರೋಪನ್ನು ‘ಬ್ಲಾಕ್ ಡೆತ್’ ಆವರಿಸಿದ್ದು. ರಕ್ತಸಿಕ್ತವಾದ ಶಿಲುಬೆ ಯುದ್ಧ ನಡೆದು ಒಂದು ಶತಮಾನದ ನಂತರ, ಇಂದಿಗೂ ಅದೇ ತರತಮ, ತುಲನೆಗಳಿಲ್ಲದ ಶಾಂತಿ ನೆಲೆಗೊಳ್ಳುವ (ಆಪೇಕ್ಷಿತ ಮಾತ್ರ) ಕಾಲದಲ್ಲಿ ಕೊರೋನಾ ಬಂದು ಬಿಟ್ಟಿದೆ. ಬ್ಲಾಕ್ ಡೆತ್ ನಂತೆ ಇದರಿಂದ ಉಂಟಾಗಬುಹುದಾದಂತಹ ಆರ್ಥಿಕ ಮುಗ್ಗಟ್ಟು ಗುರುತರವಾದದ್ದು. ಎಲ್ಲೆಡೆ ಆವರಿಸಬಹುದಾದ ಬಡತನ, ದಾರಿದ್ರ್ಯ, ಹಸಿವು, ಸಂಘರ್ಷ ಎಂಬಿತ್ಯಾದಿಗಳು ಇದನ್ನು ಎದುರಿಸುವ ಭಾಗವಾಗಿ ಉಂಟಾಗುತ್ತವೆ. ಮಕಾಡೆ ಮಲಗಿರುವ ಜಾಗತಿಕ ಆರ್ಥಿಕತೆ ಮೇಲೇಳಲು ಶತಮಾನವೊಂದು ಬೇಕಾದೀತು ಎಂದು ಬ್ಲಾಕ್ ಡೆತ್ ಇಂಪ್ಯಾಕ್ಟ್ ಹೇಳುತ್ತವೆ.

ಅಂದಿನ ಮಕ್ಕಳ ಬಾಯಿಂದ ಕೇಳಿ ಬರುತ್ತಿದ್ದ ಹಾಡು ಇದಾಗಿತ್ತು.

“Ring a Ringa roses…..all fall down”

ಇದರಲ್ಲಿ ರೋಸಸ್ ಎಂಬುದು ಬಾಧಿತರ ಶರೀರದಲ್ಲಿರುವ ಬ್ಲೂಬೋಸ್ ಅನ್ನು ಸೂಚಿಸಿದರೆ, ‘ಆಲ್ ಫಾಲ್ ಡೌನ್’ ಎಂಬುದು ಸಾಮೂಹಿಕ ಮರಣದೆಡೆಗೆ ಬೊಟ್ಟು ಮಾಡುತ್ತದೆ. ಆದರೆ, ಅಂದಿನ ಅಷ್ಟೊಂದು ಸಾಹಿತ್ಯಗಳು ಇಂತಹ ರೋಗಗಳ ಹಿನ್ನೆಲೆಯಲ್ಲಿ 20,21 ಶತಮಾನಗಳಲ್ಲಿ ಬರೆಯಲ್ಪಟ್ಟಿಲ್ಲ.
ಬೊಕೊಚಿಯೊ ಅವರ ಮಾಸ್ಟರ್ ಪೀಸ್ ಕೃತಿಯಾಗಿ ಗುರುತಿಸಲ್ಪಡುವ ‘ದಿ ಡೆಕಾಮರೂನ್’ ಆ ಕಾಲದಲ್ಲಿ ಬರೆಯಲ್ಪಟ್ಟ ಬಹುದೊಡ್ಡ ಸಾಹಿತ್ಯ ಕೃತಿಯಾಗಿದೆ. ಬ್ಲಾಕ್ ಡೆತ್‍ನ ಹಿನ್ನೆಲೆಯಲ್ಲಿ ಅಂದಿನ ಸಾಹಿತ್ಯದ ಮೇರು ಪರ್ವತವೆಂದೇ ಖ್ಯಾತನಾಮರಾಗಿದ್ದ ಬೊಕಾಚಿಯೊ ಏಕಾಂತ ಬಂಧನದಲ್ಲಿದ್ದ ರೋಗಿಗಳ ಕತೆಗಳನ್ನು ದಾಖಲಿಸಿ ‘ಡೆಕಾಮರೂನ್’ ಬರೆದು ಮುಗಿಸಿದ್ದು. ಸೆಲ್ಫ್ ಕ್ವಾರಂಟೈನ್‍ನಲ್ಲಿದ್ದ ಮೂರು ಪುರುಷರ ಹಾಗೂ ಏಳು ಸ್ರೀಯರ ಕಥೆಗಳು ಇದರಲ್ಲಿವೆ.

ಮೆಡಿಕೇಶನ್, ಡ್ರಗ್ಸ್, ಜನಟಿಕ್ಸ್, ಎಪ್ಪಿಡಮಾಲಜಿ, ಡಬ್ಲ್ಯೂ.ಎಚ್.ಒ ಮುಂತಾದ ಹೆಸರುಗಳ  ಬಗ್ಗೆ ಚಿಂತಿಸುವುದಕ್ಕೂ ಕೂಡಾ ಆಗದ ಕಾಲವದು. ಶೇಕ್ಸ್‍ಪಿಯರ್ ಮತ್ತು ಗಲಿಲಿಯೋ ಅವರಿಗಿಂತ 200 ವರ್ಷಗಳ ಹಿಂದೆ ಸಾಗಿ ಹೋದ ಪ್ಲೇಗ್‍ಗೆ, ‘ಡಕಾಮರೂನ್’ ನಂತಹ ಒಂದು ಕಾಲಾತೀತ ಸಾಹಿತ್ಯ ಕೃತಿಗೆ ಜನ್ಮ ಕೊಡಲು ಅಂದು ಸಾಧ್ಯವಾಯಿತು. ಆಧುನಿಕತೆ ಮತ್ತು ಯುಕ್ತಿಯಾಧಾರಿತ ಶಾಸ್ತ್ರವು ಆಗಿನ್ನೂ ರಂಗ ಪ್ರವೇಶ ಮಾಡದ ಹೊತ್ತಲ್ಲಿ, ಮಾನವೀಯತೆಯ ಹರಿಕಾರರಾದ ಡಾನ್‍ರೆ ಮತ್ತು ಬೊಕೊಚಿಯೊರಂತಹ ಸಾಹಿತ್ಯಕಾರರು ಜನ್ಮತಾಳಿದ್ದು.

ಬ್ಲಾಕ್ ಡೆತ್‍ನ ನಂತರವೇ ಆಗಿತ್ತು ಯುರೋಪಿನಲ್ಲಿ ನವೋತ್ಥಾನ ಆರಂಭಗೊಂಡಿರುವುದು.“Revival in arts and letters” ಅನ್ನೋದು ಒಂದು ಮಹಾ ಲಿಬರೇಶನ್ ಆಗಿತ್ತು. ಅದರ ಪರವಾಗಿ ಮತ್ತು ವಿರುದ್ಧವಾಗಿ ವಿಶ್ಲೇಷಣೆಗಳು, ವಿವರಣೆಗಳಿದ್ದರೂ, ಪ್ರಪಂಚಕ್ಕೆ ಹಲವಾರು ತಿರುವುಗಳನ್ನು ನೀಡಿದೆ. ಈ ಕೊರೋನಾ ಕಾಲವೂ ಕೂಡಾ ಬಹುಶಃ ಒಂದು ಮಹಾ ನವೋತ್ಥಾನಕ್ಕೆ ಕಾರಣವಾಗಲಿ ಎಂದು ನಾವು ಆಶಿಸಬಹುದು. ಈ ಕ್ವಾರಂಟೈನ್ ನಮ್ಮ ವ್ಯಕ್ತಿ ಜೀವನದಲ್ಲೂ, ಸಾಮಾಜಿಕ, ರಾಜಕೀಯ, ಸಾಹಿತ್ಯ ವಲಯಗಳಲ್ಲೂ ಮಂಗಳಕರವಾದ ಬೆಳವಣಿಗೆಗಳನ್ನುಂಟು ಮಾಡಲಿದೆ ಎಂದು ನಿರೀಕ್ಷಿಸೋಣ…

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...