Homeಮುಖಪುಟಬಡವರ ಪರವೆಂಬ ಮುಖವಾಡ ಕಳಚಿ ಮೇಲ್ಜಾತಿ, ಮಧ್ಯಮವರ್ಗ, ನಗರ ಬೇರುಗಳಿಗೆ ಮರಳಿದ ಬಿಜೆಪಿ.

ಬಡವರ ಪರವೆಂಬ ಮುಖವಾಡ ಕಳಚಿ ಮೇಲ್ಜಾತಿ, ಮಧ್ಯಮವರ್ಗ, ನಗರ ಬೇರುಗಳಿಗೆ ಮರಳಿದ ಬಿಜೆಪಿ.

ಬಡವರ ವಿರೋಧಿ ಲಾಕ್‌ಡೌನ್ ಮೂಲಕ ತನ್ನ ಮೇಲ್ಜಾತಿ, ಮಧ್ಯಮವರ್ಗ, ನಗರ ಬೇರುಗಳಿಗೆ ಬಿಜೆಪಿ ಮರಳಿದೆ. ಜನಸಾಮಾನ್ಯರಿಗೆ ಆದ ಭಾರೀ ತೊಂದರೆಯ ಹೊರತಾಗಿಯೂ, ನೋಟು ಅಮಾನ್ಯೀಕರಣದ ರಾಜಕೀಯ ಲಾಭವೆಂದರೆ, ಬಿಜೆಪಿಯನ್ನು ಬಡವರ ಪರ ಪಕ್ಷವೆಂದು ಬ್ರಾಂಡ್ ಮಾಡುವುದಾಗಿತ್ತು. ಅತ್ಯಂತ ಕೆಟ್ಟದಾಗಿ ಅನುಷ್ಟಾನಗೊಳಿಸಲಾದ ಕೊರೋನ ವೈರಸ್ ಲಾಕ್‌ಡೌನ್ ಈ ಚಿತ್ರವನ್ನು ಮಸುಕಾಗಿಸುತ್ತಿದೆ.

- Advertisement -
- Advertisement -

ಶಿವಂ ವಿಜ್

ಅನುವಾದ: ನಿಖಿಲ್ ಕೋಲ್ಪೆ

ಕೃಪೆ: ದಿ ಪ್ರಿಂಟ್‌

ಒಂದು ನಿರ್ದಿಷ್ಟ ದಿನದ ರಾತ್ರಿ 8.00 ಗಂಟೆಗೆ ಮಾಡಿದ “ರಾಷ್ಟ್ರವನ್ನುದ್ದೇಶಿಸಿ ಭಾಷಣ”ದ ಮೂಲಕ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ಜನತಾ ಪಕ್ಷದ ಇಮೇಜನ್ನು ಬದಲಿಸಿದರು. ಒಂದು ಕಾಲದಲ್ಲಿ ಭಾರತದ ಪೇಟೆ ಚೌಕದ “ಬ್ರಾಹ್ಮಣ-ಬನಿಯಾ (ವ್ಯಾಪಾರಿ)” ಪಕ್ಷ ಎಂದು ಕಾಣಲಾಗುತ್ತಿದ್ದ ಪಕ್ಷವೊಂದು ಆಗ, ಇಂದಿರಾ ಗಾಂಧಿಯವರಂತೆ ಶ್ರೀಮಂತರನ್ನು ಸಂಶಯದಿಂದ ನೋಡುವ “ಬಡಜನರ ಪರ” ಪಕ್ಷವಾಗಿ ಬದಲಾಗಿತ್ತು.

ಅದೊಂದು ಅಪಾಯಕಾರಿ ಜೂಜಾಗಿದ್ದು, ಭಾರೀ ಲಾಭ ತಂದುಕೊಟ್ಟಿತ್ತು. ಬಿಜೆಪಿಯ ಹಿಂದೂ ಮೇಲ್ಜಾತಿ, ಮಧ್ಯಮವರ್ಗ ಮತ್ತು ನಗರ ಮತಗಳ ಲೆಕ್ಕಾಚಾರ ಸರಿಯೆಂದು ಸಾಬೀತಾಯಿತು. ಏಕೆಂದರೆ, ಅವರಿಗೆ ಬೇರೆ ಬದಲಿ ಆಯ್ಕೆಗಳಿರಲಿಲ್ಲ.

ನಾಲ್ಕು ವರ್ಷಗಳ ನಂತರ, ಇನ್ನೊಂದು 8.00 ಗಂಟೆಯ “ರಾಷ್ಟ್ರವನ್ನುದ್ದೇಶಿಸಿ ಭಾಷಣ”ದ ಮೂಲಕ ಬಹಳ ಜಾಗರೂಕತೆಯಿಂದ ಕಟ್ಟಿದ ತನ್ನ ಪಕ್ಷದ ಬಡವರ ಪರ ಇಮೇಜನ್ನು ಮೋದಿ ಅಪಾಯಕ್ಕೆ ಒಡ್ಡಿದ್ದಾರೆ. ಅಗತ್ಯವಾಗಿದ್ದರೂ, ಭಯಾನಕ ರೀತಿಯಲ್ಲಿ ಅನುಷ್ಟಾನಗೊಳಿಸಲಾಗುತ್ತಿರುವ 21 ದಿನಗಳ ರಾಷ್ಟ್ರವ್ಯಾಪಿ ಕೊರೋನ ವೈರಸ್ ಲಾಕ್‌ಡೌನ್, ಬಿಜೆಪಿಯ ಬಡವರ ಪರ ಇಮೇಜನ್ನು ಕಳಚಿಹಾಕಿದ್ದು, ಸ್ವಭಾವತಃ ಅದು ಹಿಂದೂ ಮೇಲ್ಜಾತಿ, ಮಧ್ಯಮವರ್ಗ ಮತ್ತು ನಗರ ಪಕ್ಷ ಎಂಬುದನ್ನು ಅನಾವರಣಗೊಳಿಸಿದೆ. ಕೆಲವೊಮ್ಮೆ ಅದು ಮತದಾರರನ್ನು ಓಲೈಸಲು ಬೇರೆ ರೀತಿಯಲ್ಲಿ ವರ್ತಿಸಿದರೂ ಅದು ಅದೇ ರೀತಿಯಲ್ಲಿ ಯೋಚನೆ ಮಾಡುತ್ತದೆ.

ಈ ಲಾಕ್‌ಡೌನ್ ಎಂಬುದು ದಿನಗೂಲಿಯ ವಲಸೆ ಕಾರ್ಮಿಕರು ‌ನೂರಾರು ಕಿ.ಮೀ. ನಡೆದಾದರೂ ತಮ್ಮ ಮನೆಗಳಿಗೆ ಮರಳುವುದನ್ನು ಅನಿವಾರ್ಯಗೊಳಿಸುತ್ತದೆ ಎಂದು ಮೋದಿ ಸರಕಾರ ಯೋಚಿಸಿರಲೇ ಇಲ್ಲ ಎಂಬುದು ಸ್ಪಷ್ಟ. ಇಂತಹಾ ಒಂದು ಪ್ರಮಾದವು ವಾಸ್ತವವಾಗಿ ಅಸ್ತಿತ್ವದಲ್ಲಿರುವ ಭಾರತ ಮತ್ತು ‘7, ಲೋಕ್‌ ಕಲ್ಯಾಣ್ ಮಾರ್ಗ್‌’ನ ಕಲ್ಪನೆಯ ಭಾರತದ ನಡುವಿನ ಕಳಚಿದ ಕೊಂಡಿಯನ್ನು ತೋರಿಸುತ್ತದೆ.

“ನೋಟ್ ಬಂಧಿ” ಮತ್ತು “ಘರ್ ಬಂಧಿ” ನಡುವಿನ ವ್ಯತ್ಯಾಸಗಳೇನು? ಅನೇಕರು ನೋಟ್ ಬಂಧಿ ಮತ್ತು ಘರ್ ಬಂಧಿಗಳ- ಅಂದರೆ, ಅಮಾನ್ಯೀಕರಣ ಮತ್ತು ಲಾಕ್‌ಡೌನ್ ನಡುವೆ ಅನೇಕ ಕಣ್ಣಿಗೆ ರಾಚುವ ಸಾಮ್ಯತೆಗಳನ್ನು ಗುರುತಿಸಿದ್ದಾರೆ. ಉತ್ತಮ ಉದ್ದೇಶ, ಹಠಾತ್ ಘೋಷಣೆ, ನಾಲ್ಕು ಗಂಟೆಗಳ ಕಾಲಾವಧಿ, ಜನರ ಸಾವು, ಆದೇಶಗಳ ದಿನವಹಿ ಬದಲಾವಣೆ, ಎಡೆಬಿಡಂಗಿತನ… ಇತ್ಯಾದಿ ಇತ್ಯಾದಿ. ಆದರೆ ಇಲ್ಲಿ ದೊಡ್ಡ ವ್ಯತ್ಯಾಸವಿದೆ. ಅಮಾನ್ಯೀಕರಣವು ಬಡಜನರ ಪರ, ಶ್ರೀಮಂತರ ವಿರುದ್ಧ ಎಂದು ಭಾವಿಸಲಾಯಿತು. (ಕಪ್ಪುಹಣ, ಸ್ವಿಸ್ ಬ್ಯಾಂಕ್, 15 ಲಕ್ಷ ಖಾತೆಗೆ ಹಣ, ಭಯೋತ್ಪಾದನೆಯ ಬೆನ್ನುಮೂಳೆ ಇತ್ಯಾದಿ ಬೊಗಳೆಗಳ ಕಾರಣದಿಂದ). ಆದರೆ, ಕೊರೋನ ವೈರಸ್ ಲಾಕ್‌ಡೌನ್ ಇದಕ್ಕೆ ತದ್ವಿರುದ್ಧವಾಗಿದೆ.

ಲಾಕ್‌ಡೌನ್ ಅಗತ್ಯವಾಗಿತ್ತು ಮತ್ತು ಅದು ಸೋಂಕಿನ ಹರಡುವಿಕೆಯನ್ನು ನಿಧಾನಗೊಳಿಸುತ್ತದೆ; “ನಕ್ಷೆಯಲ್ಲಿನ ತಿರುವನ್ನು ಸಪಾಟುಗೊಳಿಸುತ್ತದೆ” ಎಂಬುದರಲ್ಲಿ ಸಂಶಯವಿಲ್ಲ. ಆದರೆ, ಲಾಕ್‌ಡೌನ್ ನಿರಂತರ ಮುಂದುವರಿಸದ ಹೊರತಾಗಿ ಪ್ರಕರಣಗಳ ಸಂಖ್ಯೆ ಏರುವುದಿಲ್ಲ ಎಂದು ಸೂಚಿಸುವಂತದ್ದು ಏನೂ ಇಲ್ಲ. ಹಾಗೆ ಮಾಡುವುದು ಸಾಧ್ಯವೇ ಇಲ್ಲ.

ಆದರೆ, ಬಡಜನರು ಪ್ರಪಂಚದಲ್ಲಿಯೇ ಅತ್ಯಂತ ಕಠಿಣವಾದ ಲಾಕ್‌ಡೌನ್‌ನಿಂದ ಈಗಾಗಲೇ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಜನರ ಲಾಕ್‌ಡೌನ್ ಸಂಕಷ್ಟ ಪರಿಹಾರಕ್ಕೆ ಟಿವಿಯಲ್ಲಿ ರಾಮಾಯಣ, ಮಹಾಭಾರತ ನೋಡಿ ಎಂದು ಮಧ್ಯಮ ವರ್ಗದ ಮನಸ್ಥಿತಿ ಇರುವ ಸರಕಾರವಷ್ಟೇ ಫರ್ಮಾನು ಹೊರಡಿಸಲು ಸಾಧ್ಯ. ಏಕೆಂದರೆ, ಲಾಕ್‌ಡೌನ್‌ನಿಂದ ಜನರಿಗೆ ಮನೆಯಲ್ಲಿ ಕುಳಿತು ಬೋರಾಗುತ್ತದೆ ಎಂದಷ್ಟೇ ಸರಕಾರ ಭಾವಿಸಿದೆ. ಆದರೆ, ಬಡವರ ಚಿಂತೆ ಬೋರಾಗುವುದು ಅಲ್ಲ. ಅವರು ಇನ್ನೂ- ಕೆಲಸವಿಲ್ಲ, ಹೊಟ್ಟೆಗಿಲ್ಲ, ಮನೆಯಿಲ್ಲ, ಮುಂದೇನು ಮುಂತಾದ ಚಿಂತೆಗಳಲ್ಲಿ ಮುಳುಗಿದ್ದಾರೆ.

ಮನೆ ಸೇರರಲು ಪರದಾಡುತ್ತಿರುವ ಪ್ರಜೆಗಳಿಗೆ “ಮನೆಯಲ್ಲಿ ಕುಳಿತು ರಾಮಾಯಣ ನೋಡಿ” ಎಂದ ಮೋದಿ ಸರಕಾರ.

ಪ್ರಜೆಗಳಲ್ಲ; ಕೇವಲ ವಸ್ತುಗಳು!

ಇದೇವೇಳೆಗೆ, ಪೊಲೀಸರು ಅವರನ್ನು ಥಳಿಸುತ್ತಿದ್ದು, ಅವರು ಮಾನವರಲ್ಲ; ಕೇವಲ ವಸ್ತುಗಳು ಎಂಬಂತೆ ನಡೆಸಿಕೊಳ್ಳುತ್ತಿದ್ದಾರೆ. ಅಧಿಕಾರಿಗಳು ಅವರೇ ವೈರಸ್‌ಗಳು ಎಂಬಂತೆ ಅವರನ್ನು ಮಂದೆ ಸೇರಿಸಿ, ರಾಸಾಯನಿಕಗಳನ್ನು ಸಿಂಪಡಿಸುತ್ತಿದ್ದಾರೆ, ಅವರಿಗೆ ಹೊಡೆಯುತ್ತಿದ್ದಾರೆ, ಅವಮಾನಕಾರಿ ಶಿಕ್ಷೆಗಳನ್ನು ಕೊಡುತ್ತಿದ್ದಾರೆ. ಇವೆಲ್ಲವೂ ನಡೆದ ಬಳಿಕ ಅವರು ಭಾರತ ಸರಕಾರದ ಬಗ್ಗೆ ಯಾವ ಅಭಿಪ್ರಾಯ ತಳೆದಿರಬಹುದು? ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ. ಅತ್ಯಂತ ಕೆಟ್ಟಸ್ಥಿತಿಯಲ್ಲಿರುವುದು ಗೋವಾ. ಅಲ್ಲಿನ ಅತಿರೇಕಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಜನರಿಗೆ ಹಾಲು ಮತ್ತು ಬ್ರೆಡ್ ಕೊಳ್ಳಲೂ ಬಿಡುತ್ತಿಲ್ಲ. ಜನರು ದೂರದರ್ಶನವನ್ನೇ ತಿನ್ನಲಿ ಎಂದಾತ ಯೋಚಿಸಿದಂತಿದೆ.

ಪ್ರಜೆಗಳ ಆತ್ಮಗೌರವವನ್ನೇ ಮುರಿಯುವ ಅವಮಾನಕಾರಿ ಶಿಕ್ಷೆಗಳು

ವಲಸಿಗರು ಮನೆತಲಪುವುದು ಹೇಗೆ ಎಂದು ಚಿಂತಿಸುತ್ತಿರುವಾಗ ಸಾರ್ವಜನಿಕ ರಂಗದ ದೂರದರ್ಶನ ಜನರು ತಾವು ಮನೆಯಲ್ಲಿ ಕುಳಿತು ರಾಮಾಯಣ ನೋಡುತ್ತಿರುವ ಚಿತ್ರಗಳನ್ನು ಕಳುಹಿಸುವಂತೆ ಕೇಳಿಕೊಳ್ಳುತ್ತಿದೆ. ಇಲ್ಲಿ ತಿಳಿದೂ ತಿಳಿದೂ ಬಿಜೆಪಿಯು ನಿಜವಾಗಿಯೂ ಏನಾಗಿದೆಯೋ ಅದರ ಪರವಾಗಿಯೇ ತಾರತಮ್ಯವನ್ನು ತೋರಲಾಗುತ್ತಿದೆ. ಬಿಜೆಪಿ ನಿಜವಾಗಿಯೂ ಏನೆಂದರೆ, ಅದೊಂದು ನಗರವಾಸಿ ಮಧ್ಯಮ ವರ್ಗ ಮತ್ತು ಮೇಲ್ಜಾತಿಗಳ ಪಕ್ಷ.

ಹೊಡಿಬಡಿ ಪೊಲೀಸರು

ಅದು ಕಾಲಾಂತರದಲ್ಲಿ ಈ ಇಮೇಜನ್ನು ಸ್ವಲ್ಪ ಮಟ್ಟಿಗೆ ಕಳಚಿಕೊಳ್ಳುವುದರ ಮೂಲಕ ಈಗ ಭಯಹುಟ್ಟಿಸುವ ರಾಷ್ಟ್ರೀಯ ಪ್ರಾಬಲ್ಯ ಪಡೆದಿದೆ. ಅದು ಸ್ಮಾರ್ಟ್ ಗ್ರಾಮಗಳ ಬದಲಿಗೆ ಸ್ಮಾರ್ಟ್‌ಸಿಟಿಗಳ ಬಗ್ಗೆ ಯೋಚಿಸಿತು. ಹಣದುಬ್ಬರವನ್ನು ಕೆಳಮಟ್ಟದಲ್ಲಿ ಇರಿಸುವಲ್ಲಿ ರೈತರ ಪಾತ್ರವನ್ನು ಕಡೆಗಣಿಸಿತು… ಇತ್ಯಾದಿ. ಇದರಿಂದ ಬರಬಹುದಾದ ಹಿಂಬಡಿತವನ್ನು ಶೌಚಾಲಯ, ಎಲ್‌ಪಿಜಿ ಸಿಲಿಂಡರ್‌ಗಳು, ಅಗ್ಗದ ಮನೆಗಳು ಇತ್ಯಾದಿ ಕಣ್ಕಟ್ಟುಗಳ ಮೂಲಕ ನಿಭಾಯಿಸಿತು.

ಡಿಸೆಂಬರ್ 2018ರಲ್ಲಿ ಹಿಂದಿ ಬೆಲ್ಟಿನ ಮೂರು ರಾಜ್ಯಗಳನ್ನು ಕಳೆದುಕೊಂಡ ಬಳಿಕ ರೈತರಿಗೆ ನಗದು ಹಣದ ಭರವಸೆ ನೀಡುವುದು ಬಿಜೆಪಿಗೆ ಅನಿವಾರ್ಯವಾಯಿತು. ಆದರೆ, ಈ ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ಅದು ತನ್ನ ನಿಜರೂಪವನ್ನು ಅನಾವರಣಗೊಳಿಸಿದೆ. ಈ ಕೂಲಿ ಕಾರ್ಮಿಕರು ಏಕೆ ರಸ್ತೆಯಲ್ಲಿದ್ದಾರೆ? ಎಲ್ಲಿದ್ದರೋ ಅಲ್ಲಿಯೇ ಉಳಿದಿರಲು ಆವರಿಗೇನು ದಾಡಿ? ಸಾಮಾಜಿಕ ಜಾಲತಣಗಳಲ್ಲಿ ಮೋದಿ ಭಕ್ತರಿಂದ ನಾವು ನೋಡುತ್ತಿರುವ ಪ್ರತಿಕ್ರಿಯೆಗಳು ಈ ರೀತಿಯವು.

ಕನಿಷ್ಟ 22 ಮಂದಿ ಮನೆಗೆ ಮರಳುವಾಗ ಹೆದ್ದಾರಿ ಅವಘಡಗಳಲ್ಲಿ ಮೃತಪಟ್ಟಿದ್ದಾರೆ. ಅಪಘಾತದ ಸಾವುಗಳು ಯಾವಾಗಲೂ ನಡೆಯುತ್ತಲೇ ಇರುತ್ತವೆ. ಆದರೆ, ಜನರು ಹೆದ್ದಾರಿಗಳಲ್ಲಿ ನಡೆಯುತ್ತಾರೆಂದು ವಾಹನ ಚಾಲಕರಿಗಾಗಲೀ, ಲಾಕ್‌ಡೌನ್ ಸಂದರ್ಭದಲ್ಲಿ ವಾಹನಗಳು ಹೆದ್ದಾರಿಯಲ್ಲಿ ಓಡುತ್ತವೆ ಎಂದು ವಲಸಿಗರಾಗಲೀ ಊಹಿಸಿರಲಾರರು.

ಬಡತನ ಕಂಡವರಾರು? 

ನರೇಂದ್ರ ಮೋದಿ ಬಟ್ಟಲು ಜಾಗಟೆ ಬಡಿಯಲು ಜನರಿಗೆ ಮತ್ತು ಶಕ್ತಿಪ್ರದರ್ಶನ ಮಾಡಲು ಬಿಜೆಪಿಗೆ ಮೂರು ದಿನಗಳ ಕಾಲಾವಕಾಶ ಕೊಟ್ಟರು. ಆದರೆ, ಲಾಕ್‌ಡೌನ್‌ಗೆ ಆತ ಕೊಟ್ಟದ್ದು ಕೇವಲ ನಾಲ್ಕು ಗಂಟೆಗಳಿಗೂ ಕಡಿಮೆ ಅವಕಾಶ. ಅಗತ್ಯ ವಸ್ತುಗಳೂ ಸೇರಿದಂತೆ ಸರಕುಗಳನ್ನು ಹೊತ್ತ ಲಾರಿಗಳನ್ನು ರಾಜ್ಯಗಳ ಗಡಿಯಲ್ಲಿ ನಿಲ್ಲಿಸಲಾಯಿತು. ಈ ಲಾರಿಗಳ ಚಾಲಕರು ಹೇಗೆ ಮನೆ ತಲಪಬೇಕು? ಹೇಗೆ ಉಣ್ಣಬೇಕು? ಇಂತಹಾ ಪ್ರಶ್ನೆಗಳನ್ನು ಕುರಿತು ಯೋಚನೆಯನ್ನೇ ಮಾಡಿರಲಿಲ್ಲ. ಏಕೆಂದರೆ, ಬಿಜೆಪಿಯ ಮನಸ್ಥಿತಿಯು ಯಾವುದೇ ಚಿಂತೆಯಿಲ್ಲದೇ ಕೆಲವು ದಿನಗಳ ಕಾಲ ರಜೆ ತೆಗೆದುಕೊಂಡು, ಮನೆಯಲ್ಲಿ ಕುಳಿತು ರಾಮಾಯಣ, ಮಹಾಭಾರತ ನೋಡುವ ತಾಕತ್ತಿರುವ ಮೇಲ್ಜಾತಿಯ ಶ್ರೀಮಂತ ವರ್ತಕ ಮತ್ತು ಮಧ್ಯಮ ವರ್ಗದ್ದಾಗಿದೆ.

ರಾಜ್ಯ ಗಡಿಗಳಲ್ಲಿ ನಿಲ್ಲಿಸಲಾದ ಅಗತ್ಯವಸ್ತು ಪೂರೈಕೆ ಲಾರಿಗಳು

ಅಗತ್ಯ ಸೇವೆಗಳಲ್ಲಿ ಇರುವ ಜನರಿಗೆ ಪ್ರಯಾಣದ ಅವಕಾಶ ಒದಗಿಸಲಾಯಿತು. ಆದರೆ, ಅವರಿಗೂ ಪೊಲೀಸರು ಕಿರುಕುಳ ನೀಡಿ, ಲಾಠಿ ಪ್ರಹಾರ ಮಾಡಿದರು. ಸಾರ್ವಜನಿಕ ಸಾರಿಗೆ ಸಂಪೂರ್ಣ ಮುಚ್ಚಿದೆ. ಒಬ್ಬ ಸ್ವಚ್ಛತಾ ಕಾರ್ಮಿಕ ತನ್ನ ಕೆಲಸಕ್ಕಾಗಿ ಸುತ್ತಾಡುವುದು ಹೇಗೆ? ಆಸ್ಪತ್ರೆಗಳ ಸ್ವಚ್ಛತಾ ಸಿಬ್ಬಂದಿ ಕೆಲಸಕ್ಕೆ ಹೋಗುವುದಾದರೂ ಹೇಗೆ? ರಾಷ್ಟ್ರೀಯ ಲಾಕ್‌ಡೌನ್ ನಡುವೆ ಆಸ್ಪತ್ರೆಗೆಳು ಅವರಿಗೆ ಸಾರಿಗೆ ಒದಗಿಸುವುದಾದರೂ ಹೇಗೆ? ಅವರು ಪ್ರತೀದಿನ ಹಲವಾರು ಕಿ.ಮೀ.ಗಳಷ್ಟು ನಡೆಯಬೇಕಾಗಿದೆ. ಬಿಜೆಪಿ ಈ ಕುರಿತು ಯೋಚಿಸಲೇ ಇಲ್ಲ. ಅದರ ಚಿಂತನೆಯ ಪ್ರಕಾರ ಪ್ರತಿಯೊಬ್ಬರ ಬಳಿ ಕಾರಿದೆ. ಅದಕ್ಕೆ ಗೊತ್ತಿರುವ ಎಲ್ಲರ ಬಳಿಯೂ ಇದೆ.


ಇದನ್ನೂ ಓದಿ: ನಮ್ಮೆಲ್ಲರ ಆತ್ಮಸಾಕ್ಷಿಯನ್ನು ಶಾಶ್ವತವಾಗಿ ಕಾಡಲಿರುವ ಮತ್ತೊಂದು ವಿಭಜನೆಯ ಚಿತ್ರ :ಎ.ನಾರಾಯಣ್


ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮ್ ತಡವಾಗಿ ಘೋಷಿಸಿರುವ ಪ್ಯಾಕೇಜ್ ಒಂದು ಕಣ್ಕಟ್ಟಾಗಿದ್ದು, ಅದು ಅತ್ಯಗತ್ಯವಾಗಿ ಬೇಕಾಗಿರುವವರಿಗೆ, ಮುಖ್ಯವಾಗಿ ವಲಸೆ ಕಾರ್ಮಿಕರಿಗೆ, ದಿನಗೂಲಿ ನೌಕರರಿಗೆ, ಅತೀ ಸಣ್ಣ ರೈತರಿಗೆ ಯಾವುದೇ ತುರ್ತು ಅಥವಾ ತಕ್ಷಣದ ಪರಿಹಾರ ಒದಗಿಸುವುದಿಲ್ಲ.

ನರೇಂದ್ರ ಮೋದಿ- “ಗರೀಬಿ ದೇಖಿ ಹೈ ಮೈನೇ” (ಬಡತನ ನೋಡಿದ್ದೇನೆ ನಾನು) ಎಂದು ಹೇಳಿ ಮರುಳು ಮಾಡಬಹುದಾದ ಕಾಲ ಇದಲ್ಲ. ಈ ಲಾಕ್‌ಡೌನ್ ಬಳಿಕ ಈ ಪ್ರಧಾನಿಗೆ ಬಡತನ ಏನೆಂದು ಗೊತ್ತು ಎಂದು ಹೇಳುವುದೂ, ನಂಬುವುದೂ ಕಷ್ಟ!


ನಾನುಗೌರಿ ಯೂಟ್ಯೂಬ್‌ ಚಾನೆಲ್‌ಗೆ ಸಬ್‌ಸ್ಕ್ರೈಬ್‌ ಆಗಲು ಇಲ್ಲಿ ಕ್ಲಿಕ್‌ ಮಾಡಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸತೀಶ್‌ ಜಾರಕಿಹೊಳಿ ಮೇಲಿನ ಇಡಿ ದಾಳಿಯನ್ನು ‘ಚಾರಿತ್ರ್ಯ ಹರಣ’ ಎಂದ ವಿಜಯ್ ಮಲ್ಯ

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯವು (ಇಡಿ) ನಡೆಸಿದ ದಾಳಿಯನ್ನು ಮಾಜಿ ಸಂಸದ ಮತ್ತು ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಸಾರ್ವಜನಿಕವಾಗಿ ಚಾರಿತ್ರ್ಯ...

ಒಗ್ಗಟ್ಟಿನ ಮಾತುಗಳಷ್ಟೇ ಸಾಲದು, ಕೃತಿಯಲ್ಲಿರಲಿ ದಿಟ್ಟತನ : ಬ್ರಿಕ್ಸ್ ವಿಚಾರದಲ್ಲಿ ಕೇಂದ್ರಕ್ಕೆ ಕಾಂಗ್ರೆಸ್ ಚಾಟಿ

ಜಾಗತಿಕ ಮಟ್ಟದಲ್ಲಿ ಬ್ರಿಕ್ಸ್ (BRICS) ಒಕ್ಕೂಟದ ಪ್ರಭಾವ ಹೆಚ್ಚುತ್ತಿರುವುದನ್ನು ಸ್ವಾಗತಿಸಿರುವ ಕಾಂಗ್ರೆಸ್, ಈ ಒಕ್ಕೂಟದ ಅಧ್ಯಕ್ಷತೆಯನ್ನು ವಹಿಸಿರುವ ಭಾರತವು ‘ಗ್ಲೋಬಲ್ ಸೌತ್’ (Global South) ರಾಷ್ಟ್ರಗಳ ನಡುವೆ ತನ್ನ ರಾಜತಾಂತ್ರಿಕ ಸ್ಥಾನಮಾನವನ್ನು ಮರುಸ್ಥಾಪಿಸಲು...

9/11 ರ ಹಿಂದಿನ ದಾಳಿಯನ್ನು ಇರಾನ್ ಜೊತೆಗಿನ ಇಂದಿನ ಯುದ್ಧಕ್ಕೆ ಜೋಡಿಸಿದ ಡೊನಾಲ್ಡ್‌ ಟ್ರಂಪ್

"ಸೆಪ್ಟೆಂಬರ್ 11, 2001 ರ ದಾಳಿಯನ್ನು ಯುನೈಟೆಡ್ ಸ್ಟೇಟ್ಸ್ ಎಂದಿಗೂ ಮರೆಯುವುದಿಲ್ಲ. 25 ವರ್ಷಗಳ ನಂತರವೂ ಇರಾನ್ ಮೇಲೆ ದಾಳಿ ಮಾಡುವ ಮೂಲಕ ದೇಶವು ಭಯೋತ್ಪಾದನೆ ವಿರುದ್ಧದ ಯುದ್ಧವನ್ನು ಮುಂದುವರೆಸಿದೆ" ಎಂದು ಅಧ್ಯಕ್ಷ...

SIR ನೋಟಿಸ್ ಮತ್ತು ವಿಚಾರಣೆಯಲ್ಲಿ ಅಕ್ರಮ : ಚು. ಆಯೋಗದ ವಿರುದ್ಧ ನಾಗರಿಕ ಸಂಘಟನೆಗಳಿಂದ 2ನೇ ಎಫ್‌ಐಆರ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಭಾಗವಾಗಿ, ಆಗಸ್ಟ್ 24ರಂದು ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದ ಕರಡು ಮತದಾರರ ಪಟ್ಟಿಯನ್ನು ತಿರಸ್ಕರಿಸಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಎಫ್‌ಐಆರ್ ಬಿಡುಗಡೆ...

‘ಕೊಂಕಣಿ – ಮಾಲ್ವಣಿ ಸಮುದಾಯಗಳು ಹಿಂದುತ್ವದ ಬೆಂಬಲಿಗರು..’; ಮಹಾರಾಷ್ಟ್ರ ಬಿಜೆಪಿ ನಾಯಕ ಅಮೀತ್ ಸತಮ್

ಮುಂಬೈನಲ್ಲಿ ವಾಸಿಸುತ್ತಿರುವ ಕೊಂಕಣಿ ಮತ್ತು ಮಾಲ್ವಣಿ ಸಮುದಾಯಗಳು ಸೇರಿದಂತೆ ಕೊಂಕಣ ಪ್ರದೇಶದ ಜನರು ಹಿಂದುತ್ವವನ್ನು ಬೆಂಬಲಿಸುತ್ತಾರೆ ಎಂದು ಬಿಜೆಪಿ ನಾಯಕ ಅಮೀತ್ ಸತಮ್ ಹೇಳಿದ್ದಾರೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದ ಸಾವಂತವಾಡಿಗೆ ಗಣಪತಿ ಭಕ್ತರಿಗಾಗಿ ಛತ್ರಪತಿ...

SIR! ಸಾಮಾನ್ಯರಿಗೆ ಸಂಕಷ್ಟ; ಗಣ್ಯರಿಗೆ ಮನೆ ಬಾಗಿಲಲ್ಲೇ ಸೇವೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕರ್ನಾಟಕದಲ್ಲಿ ಮುಂದುವರೆದಿರುವ ನಡುವೆಯೇ, ಅದರ ಜಾರಿಯಲ್ಲಿ ಸಾಮಾನ್ಯ ಮತದಾರರು ಮತ್ತು ಪ್ರಭಾವಿ ವ್ಯಕ್ತಿಗಳ ಅನುಭವದ ನಡುವಿನ ವ್ಯತ್ಯಾಸದ ಕುರಿತು ಪ್ರಶ್ನೆಗಳು ಎದ್ದಿವೆ. ಮತದಾರರ ಪಟ್ಟಿಯಲ್ಲಿನ...

ದಲಿತ ಬಾಲಕಿ ನಿಶು ಆಜಾದ್ ಕುಟುಂಬಕ್ಕೆ ನಿಲ್ಲದ ಕಿರುಕುಳ; ಅಸಭ್ಯ ಭಾಷೆ – ಬೆದರಿಕೆ ಸಂದೇಶ ರವಾನೆ

ಸಿಜೆಪಿ ಪ್ರತಿಭಟನೆಯಲ್ಲಿ ಗಮನ ಸೆಳೆದಿದ್ದ ಹದಿನಾಲ್ಕು ವರ್ಷ ವಯಸ್ಸಿನ ದಲಿತ ಸಮುದಾಯದ ಕಂಟೆಂಟ್ ಕ್ರಿಯೇಟರ್ ನಿಶು ಆಜಾದ್ ಮತ್ತು ಅವರ ಕುಟುಂಬಕ್ಕೆ ಮೊಬೈಲ್‌ ಫೋನ್‌ ಮೂಲಕ ನಿರಂತರ ಕಿರುಕುಳ ಸಂದೇಶ ಬರುತ್ತಿವೆ ಎಂದು...

ಉತ್ತರ ಪ್ರದೇಶ| 8ನೇ ತರಗತಿಯ ದಲಿತ ವಿದ್ಯಾರ್ಥಿಗೆ ಶಿಕ್ಷಕಿಯಿಂದ ಜಾತಿ ತಾರತಮ್ಯ

ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯೊಬ್ಬರು ಶಿಕ್ಷಕಿಯಿಂದ ಜಾತಿ ಆಧಾರಿತ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿದ್ದಾನೆ. ಕೃಷ್ಣ ಎಂದು ಗುರುತಿಸಲ್ಪಟ್ಟ ಈ ವಿದ್ಯಾರ್ಥಿ ಪರಿಶಿಷ್ಟ...

ಯೆಮನ್ | ಸಂಪೂರ್ಣ ರೆಡ್ ಸೀ ಕರಾವಳಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಹೌತಿ ಪಡೆ : ಮಂದೇಬ್ ಜಲಸಂಧಿ ಮೇಲೆಯೂ ಹಿಡಿತ ಸಾಧಿಸಿರುವುದಾಗಿ ವರದಿ

ಮಹತ್ವದ ಬೆಳವಣಿಗೆಯಲ್ಲಿ, ಹೌತಿ ಬಂಡುಕೋರರು ಯೆಮನ್‌ನ ಇಡೀ ಕೆಂಪು ಸಮುದ್ರದ (ರೆಡ್ ಸೀ) ಕರಾವಳಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇರಾನ್ ಬೆಂಬಲಿತ ಹೌತಿ ಸಶಸ್ತ್ರ ಪಡೆಗಳು ಯೆಮನ್ ಸರ್ಕಾರದ ನಿಯಂತ್ರಣದಲ್ಲಿದ್ದ...

ಭಾರತದ ಚುನಾವಣಾ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿದೆ: ಸಿಇಸಿ ಜ್ಞಾನೇಶ್ ಕುಮಾರ್

ಭಾರತದ ಚುನಾವಣಾ ಪ್ರಕ್ರಿಯೆಯು ವಿಶ್ವದಲ್ಲೇ ಅತ್ಯಂತ ಪಾರದರ್ಶಕವಾದದ್ದು ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ (ಸೆ.11) ಹೇಳಿದ್ದಾರೆ. ಗುಜರಾತ್ ವಿಶ್ವವಿದ್ಯಾಲಯದ ಅಟಲ್ ಕಲಾಂ ಸಭಾಂಗಣದಲ್ಲಿ ನಡೆದ 'ಮತಗಟ್ಟೆ ಮಟ್ಟದ ಅಧಿಕಾರಿಗಳೊಂದಿಗೆ...