ದ್ವಿಚಕ್ರ ವಾಹನದ ಏಜೆನ್ಸಿಯಿಂದ ಹಣವನ್ನು ಕದಿಯುತ್ತಿದ್ದರು ಎಂದು ಆರೋಪಿಸಿ ಇಬ್ಬರು ದಲಿತ ಯುವಕರನ್ನು ರಾಜಸ್ಥಾನದ ನಾಗೌರ್ ಜಿಲ್ಲೆಯ ಶೋ ರೂಂನ ಸಿಬ್ಬಂದಿಗಳು ಥಳಿಸಿದ್ದಾರೆ ಎಂದು “ದಿ ಕ್ವಿಂಟ್” ವರದಿ ಮಾಡಿದೆ. ಅದರಲ್ಲಿ ಒಬ್ಬ ಯುವಕನನ್ನು ಬೆತ್ತಲೆಗೊಳಿಸಿ ಅಮಾನುಷವಾಗಿ ಹಲ್ಲೆ ನಡೆಸಲಾಗಿದೆ. ಹಲ್ಲೆಯ ವಿಡಿಯೋ ವೈರಲ್ ಆದ ನಂತರ ಘಟನೆ ಬೆಳಕಿಗೆ ಬಂದಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಐವರನ್ನು ವಶಕ್ಕೆ ಪಡೆದಿದ್ದಾರೆ.
ಇಬ್ಬರು ವ್ಯಕ್ತಿಗಳು ಭಾನುವಾರ ಹಣವನ್ನು ಕದಿಯುವಲ್ಲಿ ಸಿಕ್ಕಿಬಿದ್ದಿದ್ದರು. ಅಲ್ಲಿ ಅವರನ್ನು ಶೋ ರೂಂ ನೌಕರರು ಕ್ರೂರವಾಗಿ ಥಳಿಸಿದ್ದಾರೆ. ಅಲ್ಲದೆ ಅದನ್ನು ವೀಡಿಯೊ ಚಿತ್ರೀಕರಿಸಲಾಗಿ ಅದು ವೈರಲ್ ಆಗಿದೆ. ಸಂತ್ರಸ್ತರು ಬುಧವಾರ ಎಫ್ಐಆರ್ ದಾಖಲಿಸಿದ್ದಾರೆ ಎಂದು ಪಂಚೋಡಿ ಪೊಲೀಸ್ ಠಾಣೆಯ ಮುಖ್ಯ ಅಧಿಕಾರಿ ರಾಜ್ಪಾಲ್ ಸಿಂಗ್ ತಿಳಿಸಿದ್ದಾರೆ. ಅಲ್ಲದೆ ಹಣ ಕಳ್ಳತನಕ್ಕಾಗಿ ಶೋರೂಂ ಸಿಬ್ಬಂದಿ ಇಬ್ಬರು ದಲಿತ ಯವಕರ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಟ್ವಿಟ್ಟರ್ ನಲ್ಲಿ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಟೀಕಿಸಿದ್ದಾರೆ. ಅಲ್ಲದೆ ಸಂತ್ರಸ್ತರನ್ನು ಭೇಟಿ ಮಾಡಲು ಭೀಮ್ ಆರ್ಮಿಯ ರಾಜಸ್ಥಾನ ಘಟಕಕ್ಕೆ ಸೂಚಿಸಿದ್ದು ಫೆಬ್ರವರಿ 23 ರಂದು ರಾಜಸ್ಥಾನ್ ಬಂದ್ ಗೆ ಕರೆ ನೀಡಿದ್ದಾರೆ.
राजस्थान में दलितों का जीना मुश्किल हो गया है। अशोक गहलोत जी कुछ शर्म बची हो तो तुरन्त कुर्सी छोड़ दो। भीम आर्मी राजस्थान की टीम तुरन्त पीड़ितों से मिले और 23 फरवरी को पूरा राजस्थान बंद कर दो। @dhenwal_anil https://t.co/QTGMWdbXUH
— Chandra Shekhar Aazad (@BhimArmyChief) February 19, 2020
ರಾಜಸ್ಥಾನದಲ್ಲಿ ದಲಿತರು ವಾಸಿಸುವುದು ಕಷ್ಟಕರವಾಗಿದೆ. ಅಶೋಕ್ ಗೆಹ್ಲೋಟ್ ಜಿ, ಸ್ವಲ್ಪ ಮರ್ಯಾದೆ ಉಳಿದಿದ್ದರೆ ತಕ್ಷಣ ಕುರ್ಚಿಯನ್ನು ಬಿಡಿ. ಭೀಮ್ ಆರ್ಮಿ ರಾಜಸ್ಥಾನ ತಂಡವು ತಕ್ಷಣ ಸಂತ್ರಸ್ತರನ್ನು ಭೇಟಿಯಾಗಿ ಫೆಬ್ರವರಿ 23 ರಂದು ಇಡೀ ರಾಜಸ್ಥಾನವನ್ನು ಬಂದ್ ಮಾಡಲಿದೆ ಎಂದು ಟ್ವೀಟ್ ಮಾಡಿದ್ದಾರೆ.
“ರಾಜಸ್ಥಾನದ ನಾಗೌರ್ನಲ್ಲಿ ಇಬ್ಬರು ಯುವ ದಲಿತರ ಮೇಲೆ ಇತ್ತೀಚೆಗೆ ಕ್ರೂರವಾಗಿ ಹಿಂಸೆ ಮಾಡುತ್ತಿರುವ ವಿಡಿಯೋ ಭಯಾನಕ ಮತ್ತು ಅನಾರೋಗ್ಯಕರವಾಗಿದೆ. ಆಘಾತಕಾರಿಯಾಗಿದ್ದು ಈ ಅಪರಾಧದ ಅಪರಾಧಿಗಳಿಗೆ ಶಿಕ್ಷ ಆಗಲು ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ನಾನು ಒತ್ತಾಯಿಸುತ್ತೇನೆ ”ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್‌ನ ’ಪರಿಶಿಷ್ಟ ಜಾತಿ, ವರ್ಗಗಳ ವಿಭಾಗವೂ ಕೂಡ ಚಿತ್ರಹಿಂಸೆ ಖಂಡಿಸಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಪ್ರಕರಣದ ತನಿಖೆ ನಡೆಸಿ ಅದರಲ್ಲಿ ಭಾಗಿಯಾಗಿರುವ ಅಪರಾಧಿಗಳಿಗೆ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದೆ.
ನಾಗೌರ್ ಜಿಲ್ಲಾ ಪೊಲೀಸ್ ಮುಖ್ಯಸ್ಥ ವಿಕಾಸ್ ಪಾಠಕ್, ಇಬ್ಬರಿಂದ ಪೊಲೀಸರಿಗೆ ದೂರು ಬಂದಿಲ್ಲ. “ನಮಗೆ ಮಾಹಿತಿ ನೀಡಿದ ಕೂಡಲೇ (ವಿಡಿಯೋ ಬಗ್ಗೆ) ಆರೋಪಿಗಳನ್ನು ಗುರುತಿಸಿ ನಂತರ ಬಂಧಿಸಲಾಗಿದೆ” ಎಂದು ನಾಗರೂರು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ವಿಕಾಸ್ ಪಾಠಕ್ ತಿಳಿಸಿದ್ದಾರೆ.
ಶಂಕಿತರನ್ನು ಭೀವ್ ಸಿಂಗ್, ಐದಾನ್ ಲಷ್ಮಾನ್ ಸಿಂಗ್, ಜಾಸು ಸಿಂಗ್, ಸವಾಯಿ ಸಿಂಗ್, ಹರ್ಮಾ ಸಿಂಗ್ ಮತ್ತು ಗಣಪತ್ ರಾಮ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


