Homeದಲಿತ್ ಫೈಲ್ಸ್ಭಾರತದ ವಿಜ್ಞಾನ ಕ್ಷೇತ್ರದಲ್ಲಿ ದಲಿತರಿಗಿಲ್ಲ ಹೆಚ್ಚಿನ ಪ್ರಾತಿನಿಧ್ಯ: ‘ನೇಚರ್‌’ ವರದಿ

ಭಾರತದ ವಿಜ್ಞಾನ ಕ್ಷೇತ್ರದಲ್ಲಿ ದಲಿತರಿಗಿಲ್ಲ ಹೆಚ್ಚಿನ ಪ್ರಾತಿನಿಧ್ಯ: ‘ನೇಚರ್‌’ ವರದಿ

- Advertisement -
- Advertisement -

ಭಾರತದ ಪ್ರಮುಖ ವೈಜ್ಞಾನಿಕ ಸಂಶೋಧನಾ ಸಂಸ್ಥೆಗಳಲ್ಲಿ ದಲಿತ, ಆದಿವಾಸಿಗಳಿಗೆ ಹೆಚ್ಚಿನ ಅವಕಾಶಗಳು ಇಲ್ಲವಾಗಿವೆ. ಇಲ್ಲಿನ ವೈಜ್ಞಾನಿಕ ಕ್ಷೇತ್ರದಲ್ಲಿ ಸಮುದಾಯಗಳ ವೈವಿಧ್ಯತೆ ಕಡೆಗಣಿಸಿರುವುದನ್ನು ಪ್ರತಿಷ್ಠಿತ ವಿಜ್ಞಾನ ನಿಯತಕಾಲಿಕೆ ‘ನೇಚರ್‌’ ಗುರುತಿಸಿದೆ.

ವಿವಿಧ ದೇಶಗಳಲ್ಲಿ ವಿಜ್ಞಾನ ಕ್ಷೇತ್ರದಲ್ಲಿರುವ ಜನಾಂಗೀಯ ಅಥವಾ ಜನಾಂಗೀಯ ವೈವಿಧ್ಯತೆ ಹೇಗಿದೆ ಎಂಬ ಅಂಕಿ-ಅಂಶಗಳನ್ನು ದಾಖಲಿಸುತ್ತಿರುವ ‘ನೇಚರ್‌’ ತನ್ನ ಸರಣಿಯಲ್ಲಿ ಭಾರತದಲ್ಲಿನ ತಾರತಮ್ಯವನ್ನು ವಿವರಿಸಿದೆ.

ಜಾತಿಯ ಕಾರಣಕ್ಕೆ ತನ್ನ ಐಡೆಂಟಿಯನ್ನು ಮುಚ್ಚಿಕೊಳ್ಳುವ ಪರಿಸ್ಥಿತಿಯನ್ನು ಎದುರಿಸುತ್ತಿರುವ ಆದಿವಾಸಿಯುವಕನೊಬ್ಬನ ಮಾತುಗಳೊಂದಿಗೆ ಆರಂಭವಾಗುವ ವರದಿಯು, ವೈಜ್ಞಾನಿಕ ಕ್ಷೇತ್ರದಲ್ಲಿ ಸವಲತ್ತು ಪಡೆದ ಸಮುದಾಯಗಳೇ ಪಾರಮ್ಯ ಮೆರೆದಿರುವುದನ್ನು ತೆರೆದಿಟ್ಟಿದೆ.

‘ಸಾಮಾನ್ಯ’ ವರ್ಗ ಭಾರತದ ಸಂಶೋಧನಾ ಸಂಸ್ಥೆಗಳಲ್ಲಿ ಪ್ರಾಬಲ್ಯ ಮೆರೆದಿದೆ. ಪಿಎಚ್‌ಡಿ ವಿದ್ಯಾರ್ಥಿಗಳಲ್ಲಿ ಆದಿವಾಸಿಗಳು ಮತ್ತು ದಲಿತರ ಪ್ರಾತಿನಿಧ್ಯ ಕೆಳಮಟ್ಟದಲ್ಲಿದೆ. ದಮನಿತ ಸಮುದಾಯಗಳಿಂದ ಬಂದ 1% ಕ್ಕಿಂತ ಕಡಿಮೆ ಪ್ರಾಧ್ಯಾಪಕರು ಉನ್ನತ ಶ್ರೇಣಿಯ 23 ಸಂಸ್ಥೆಗಳಲ್ಲಿ ಇದ್ದಾರೆ.

ವಿಜ್ಞಾನ ಸಂಸ್ಥೆಗಳಲ್ಲಿ ವೈವಿಧ್ಯತೆ ಕಡೆಗಣೆನೆಯಾಗಿರುವುದು ಪ್ರತಿ ರಾಷ್ಟ್ರದಲ್ಲಿ ವಿಭಿನ್ನ ರೂಪಗಳು ಇದೆ. ಭಾರತದಲ್ಲಿನ ಪರಿಸ್ಥಿತಿಗೆ ಅದರ ಜಾತಿ ವ್ಯವಸ್ಥೆಯು ಕಾರಣವಾಗಿರುವುದನ್ನು ವರದಿ ಗಮನ ಸೆಳೆದಿದೆ.

ಜಾತಿ ಮತ್ತು ಶೈಕ್ಷಣಿಕ ಸ್ಥಾನದ ಮೂಲಕ ವಿಜ್ಞಾನಿಗಳ ವಿಶ್ಲೇಷಣೆ ಮಾಡಲು ಸರ್ಕಾರ ಅವಕಾಶ ನೀಡುವುದಿಲ್ಲ. ಆದರೆ ಕಳೆದ ಕೆಲವು ವರ್ಷಗಳಲ್ಲಿ, ಪತ್ರಕರ್ತರು, ವಿದ್ಯಾರ್ಥಿ ಗುಂಪುಗಳು ಮತ್ತು ಸಂಶೋಧಕರು ಸಾರ್ವಜನಿಕ-ಮಾಹಿತಿ ಕಾನೂನುಗಳನ್ನು ಬಳಸಿಕೊಂಡು ವೈವಿಧ್ಯತೆಯ ಡೇಟಾವನ್ನು ಸಂಗ್ರಹಿಸುತ್ತಿದ್ದಾರೆ ಮತ್ತು ಬದಲಾವಣೆಗಾಗಿ ಒತ್ತಾಯಿಸುತ್ತಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಜಾತಿ ಸವಾಲು ಶಾಲಾ ಹಂತದಲ್ಲೇ ಪ್ರಾರಂಭವಾಗುತ್ತದೆ. ವಿಶ್ವವಿದ್ಯಾನಿಲಯದ ಪ್ರವೇಶದಲ್ಲಿ ಢಾಳಾಗಿ ಕಂಡು ಬರುತ್ತದೆ. ಆದಿವಾಸಿಗಳು ಮತ್ತು ದಲಿತರು ಪದವಿಪೂರ್ವ ವಿಜ್ಞಾನ ಕೋರ್ಸ್‌ಗಳಲ್ಲಿ ಕಡಿಮೆ ಪ್ರಾತಿನಿಧ್ಯವನ್ನು ಹೊಂದಿದ್ದಾರೆ. ಆದರೆ ಕಲಾ ಕೋರ್ಸ್‌ಗಳಲ್ಲಿ ಹೆಚ್ಚಿದ್ದಾದೆ ಎಂದು ಉನ್ನತ-ಶಿಕ್ಷಣ ಸಮೀಕ್ಷೆಯ ಡೇಟಾಗಳು ತೋರಿಸುತ್ತವೆ.

“ಆರ್ಟ್ಸ್‌ನಲ್ಲಿ ಹೆಚ್ಚಿನದಾಗಿ ಆದಿವಾಸಿ, ದಲಿತರು ಸೇರುತ್ತಿರುವುದಕ್ಕೆ ಆರ್ಟ್ಸ್ ಕೋರ್ಸ್‌ಗಳು ಹೆಚ್ಚು ಜನಪ್ರಿಯವಾಗಿರುವುದು ಕಾರಣವಲ್ಲ. ಈ ವಿದ್ಯಾರ್ಥಿಗಳು, ವಿಶೇಷವಾಗಿ ಆದಿವಾಸಿಗಳು ಕಲಿಯುವ ಗ್ರಾಮೀಣ ಪ್ರೌಢಶಾಲೆಗಳಲ್ಲಿ ವಿಜ್ಞಾನದಲ್ಲಿ ಪರಿಣತಿ ಹೊಂದಿರುವ ಶಿಕ್ಷಕರು ಮತ್ತು ಮಾರ್ಗದರ್ಶಕರು ವಿರಳವಾಗಿರುತ್ತಾರೆ” ಎಂದು ಕಂಪ್ಯೂಟರ್ ವಿಜ್ಞಾನಿ ಮತ್ತು ಸಿಡೋ ಕನ್ಹು ಮುರ್ಮು ವಿಶ್ವವಿದ್ಯಾಲಯದ ಉಪಕುಲಪತಿ ಸೋನಾಜಾರಿಯಾ ಮಿಂಜ್ ಹೇಳುತ್ತಾರೆ (ಮಿಂಜ್ ಭಾರತದಲ್ಲಿ ಉಪಕುಲಪತಿ ಹುದ್ದೆಯನ್ನು ಅಲಂಕರಿಸಿದ ಎರಡನೇ ಆದಿವಾಸಿ ಮಹಿಳೆ.) ಒಬಿಸಿ ಗುಂಪಿನ ವಿದ್ಯಾರ್ಥಿಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ ಎಂದಿದೆ ವರದಿ.

ಪಿಎಚ್‌ಡಿಯಲ್ಲಿ ದಮನಿತರ ಸ್ಥಿತಿಗತಿ

ಪಿಎಚ್‌ಡಿ ಪಡೆಯುತ್ತಿರುವವರಲ್ಲಿ ದಮನಿತ ಸಮುದಾಯಗಳ ಪ್ರಮಾಣವು ಮತ್ತಷ್ಟು ಕುಸಿಯುತ್ತದೆ. ನೇಚರ್ ಸಂಗ್ರಹಿಸಿದ ಐದು ಉನ್ನತ ಶ್ರೇಣಿಯ ಐಐಟಿಗಳಲ್ಲಿ 2020ರಲ್ಲಿ ಪಿಎಚ್‌ಡಿ ಕೋರ್ಸ್‌ಗಳ ದತ್ತಾಂಶ ಹೇಳುವುದೇನೆಂದರೆ- ದಲಿತರಿಗೆ ಸರಾಸರಿ 10% ಮತ್ತು ಆದಿವಾಸಿಗಳಿಗೆ 2% ಪ್ರಾತಿನಿಧ್ಯ ಸಿಕ್ಕಿದೆ. ಭಾರತದ ಅಗ್ರ ಶ್ರೇಯಾಂಕದ ವಿಶ್ವವಿದ್ಯಾನಿಲಯ, ಬೆಂಗಳೂರಿನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಕೂಡ ಹೆಚ್ಚಿನ ಪ್ರಾತಿನಿಧ್ಯವನ್ನೇನು ನೀಡಿಲ್ಲ.

ಶೋಷಿತ ಸಮುದಾಯದ ಅಭ್ಯರ್ಥಿಗಳು ಪಿಎಚ್‌ಡಿ ಪ್ರಾರಂಭಿಸಿದಾಗ ಸವಾಲು ಎದುರಿಸುತ್ತಾರೆ. ತಮ್ಮನ್ನು ಶಿಷ್ಯರನ್ನಾಗಿ ತೆಗೆದುಕೊಳ್ಳಲು ಸಿದ್ಧರಿರುವ ಉತ್ತಮ ಮಾರ್ಗದರ್ಶಕರನ್ನು ಹುಡುಕಲು ಹೆಣಗಾಡಬೇಕಾಗುತ್ತದೆ. ಸವಲತ್ತುಳ್ಳ ಜಾತಿ ಪ್ರಾಧ್ಯಾಪಕರು ಶೋಷಿತ ಸಮುದಾಯಗಳ ವಿದ್ಯಾರ್ಥಿಗಳನ್ನು ಮೇಲ್ವಿಚಾರಣೆ ಮಾಡದಿರುವುದು “ಸಾಮಾನ್ಯವಾಗಿದೆ” ಎಂದು ಒಬಿಸಿ ಗುಂಪಿಗೆ ಸೇರಿದ ಮತ್ತು ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಪರಿಸರ ವಿಜ್ಞಾನದ ಸಹಾಯಕ ಪ್ರಾಧ್ಯಾಪಕರಾದ ಕಿರ್ಪಾ ರಾಮ್ ಅಭಿಪ್ರಾಯಪಟ್ಟಿದ್ದಾರೆ.

ದೆಹಲಿ ವಿಶ್ವವಿದ್ಯಾನಿಲಯದ ವಿಜ್ಞಾನ ವಿಭಾಗದ ಆದಿವಾಸಿ ಪಿಎಚ್‌ಡಿ ವಿದ್ಯಾರ್ಥಿಯೊಬ್ಬರು ನೇಚರ್‌ಗೆ ಪ್ರತಿಕ್ರಿಯಿಸಿದ್ದು, “2018ರಲ್ಲಿ ನಡೆದ ಘಟನೆ. ನನಗೆ ಮೇಲ್ವಿಚಾರಕರಾಗುವಂತೆ ಕೋರಲು ಮೇಲ್ಜಾತಿ ಪ್ರಾಧ್ಯಾಪಕರನ್ನು ಸಂಪರ್ಕಿಸಿದೆ. ನೀನು ಕೋಟಾ ಅಭ್ಯರ್ಥಿ, ಎಲ್ಲಿಯಾದರೂ ಮೇಲ್ವಿಚಾರಕರನ್ನು ಹುಡುಕಬಹುದು” ಎಂದಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿರಿ: ಮಧ್ಯಪ್ರದೇಶ: ಕೀಳು ಜಾತಿಯ ನಿನಗೆ ಓದುವ ಹಕ್ಕಿಲ್ಲ ಎಂದ ಶಿಕ್ಷಕ; ದಲಿತ ವಿದ್ಯಾರ್ಥಿ ಆತ್ಮಹತ್ಯೆ

ಸಿಬ್ಬಂದಿ ನೇಮಕಾತಿಯಲ್ಲಿ ತಾರತಮ್ಯ

ಅಂಚಿನಲ್ಲಿರುವ ಜಾತಿಗಳ ಕೆಲವೇ ಕೆಲವು ಡಾಕ್ಟರೇಟ್ ವಿದ್ಯಾರ್ಥಿಗಳು ಪ್ರಖ್ಯಾತ ಸಂಸ್ಥೆಗಳಲ್ಲಿ ಹುದ್ದೆಗಳನ್ನು ಪಡೆಯುತ್ತಿದ್ದಾರೆ. ಉನ್ನತ-ಶ್ರೇಣಿಯ IITಗಳು ಮತ್ತು IISc ಗಳಲ್ಲಿ 98% ಪ್ರಾಧ್ಯಾಪಕರು, 90% ಕ್ಕಿಂತ ಹೆಚ್ಚು ಸಹಾಯಕ ಅಥವಾ ಸಹಪ್ರಾಧ್ಯಾಪಕರು ಸವಲತ್ತುಳ್ಳ ಜಾತಿಗಳವರಾಗಿದ್ದಾರೆ ಎಂದು ನೇಚರ್ ಕಂಡುಕೊಂಡಿದೆ. ಮುಂಬೈ ಮೂಲದ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‌ನಲ್ಲಿ (ಟಿಐಎಫ್‌ಆರ್), ಎಲ್ಲಾ ಪ್ರಾಧ್ಯಾಪಕರು ಸವಲತ್ತು ಪಡೆದ ಜಾತಿಗಳವರಾಗಿದ್ದಾರೆ.

ಕೆಲವು ಪ್ರಮುಖ ಸಂಸ್ಥೆಗಳಲ್ಲಿ ಪರಿಸ್ಥಿತಿ ಪರವಾಗಿಲ್ಲ. ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್‌ನಲ್ಲಿ 18% ಸಂಶೋಧಕರು (ಹಿರಿಯ ಸಿಬ್ಬಂದಿ ಶ್ರೇಣಿಗಳನ್ನು ಒಟ್ಟುಗೂಡಿಸಿ) ದಲಿತರಿದ್ದಾರೆ, 4% ಆದಿವಾಸಿಗಳು ಇದ್ದಾರೆ ಎಂದು ವರದಿ ತಿಳಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...