Homeದಲಿತ್ ಫೈಲ್ಸ್ಮಧ್ಯಪ್ರದೇಶ: ಕೀಳು ಜಾತಿಯ ನಿನಗೆ ಓದುವ ಹಕ್ಕಿಲ್ಲ ಎಂದ ಶಿಕ್ಷಕ; ದಲಿತ ವಿದ್ಯಾರ್ಥಿ ಆತ್ಮಹತ್ಯೆ

ಮಧ್ಯಪ್ರದೇಶ: ಕೀಳು ಜಾತಿಯ ನಿನಗೆ ಓದುವ ಹಕ್ಕಿಲ್ಲ ಎಂದ ಶಿಕ್ಷಕ; ದಲಿತ ವಿದ್ಯಾರ್ಥಿ ಆತ್ಮಹತ್ಯೆ

- Advertisement -
- Advertisement -

ಜಾತಿ ಕಿರುಕುಳದಿಂದ ಬೇಸತ್ತು ದಲಿತ ವಿದ್ಯಾರ್ಥಿಯೊಬ್ಬರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯಪ್ರದೇಶದ ಸಿದ್ದಿ ಜಿಲ್ಲೆಯಲ್ಲಿ ನಡೆದಿದೆ. ತರಗತಿಯ ಶಿಕ್ಷಕ ಅಜಿತ್ ಪಾಂಡೆ ಜಾತಿ ತಾರತಮ್ಯ ಮಾಡುತ್ತಿದ್ದು, ನೀನು ಕೀಳು ಜಾತಿಯವನು, ನಿನಗೆ ಓದುವ ಹಕ್ಕಿಲ್ಲ ಎಂದು ತನ್ನ ಮಗನಿಗೆ ಕಿರುಕುಳ ನೀಡಿದ್ದಾರೆ ಎಂದು ಮೃತ ವಿದ್ಯಾರ್ಥಿಯ ತಂದೆ ಆರೋಪಿಸಿದ್ದಾರೆ.

ರಾಂಪುರ (ಸಾಕಿನ್) ಪೊಲೀಸ್ ಠಾಣೆ ವ್ಯಾಪ್ತಿಯ ಪಡ್ಖುರಿ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ. ನವೋದಯ ವಿದ್ಯಾಲಯದ 8ನೇ ತರಗತಿ ವಿದ್ಯಾರ್ಥಿ ಅಮಿತ್ ಪ್ರಜಾಪತಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ನವೋದಯ ವಿದ್ಯಾಲಯದಲ್ಲಿ ಅಮಿತ್ ಅವರ ಕ್ಲಾಸ್ ಟೀಚರ್ ಅಜಿತ್ ಪಾಂಡೆ ಜಾತಿ ತಾರತಮ್ಯ ಮಾಡುತ್ತಿದ್ದರು. ನೀನು ಕೀಳು ಜಾತಿಯವನು, ನಿನಗೆ ಓದುವ ಹಕ್ಕಿಲ್ಲ ಎಂದು ಕಿರುಕುಳ ನೀಡಿದ್ದಾರೆ” ಎಂದು ಮೃತ ವಿದ್ಯಾರ್ಥಿಯ ತಂದೆ ಅಲ್ಹಾ ಪ್ರಜಾಪತಿ ಆರೋಪಿಸಿದ್ದಾರೆ.

“ನನ್ನ ಮಗ ಕರೆ ಮಾಡಿ, ನನಗೆ ಅನಾರೋಗ್ಯವಿದೆ, ನಾನು ಮನೆಗೆ ಬರಬೇಕು ಎಂದು ಹೇಳಿದ. ಮಗುವಿನ ತಾಯಿ ಮತ್ತು ಸಹೋದರ ಅವನನ್ನು ಕರೆದುಕೊಂಡು ಬರಲು ನವೋದಯ ಶಾಲೆಗೆ ಹೋದರು. ಆದರೆ ಮಗನನ್ನು ಕಳುಹಿಸಿರಲಿಲ್ಲ. ಶಾಲೆಯ ಅನುಮತಿ ಇಲ್ಲದೆಯೇ ಅಂದು ರಾತ್ರಿ 12 ಗಂಟೆಗೆ ಮಗ ಮನೆಗೆ ಬಂದಿದ್ದ” ಎಂದು ತಿಳಿಸಿದ್ದಾರೆ.

“ಮನೆಗೆ ಬಂದ ನಂತರ, ಅಜಿತ್ ಪಾಂಡೆ ಸರ್ ನನಗೆ ಚಿತ್ರಹಿಂಸೆ ನೀಡುತ್ತಾರೆ ಮತ್ತು ಅವಮಾನಿಸುತ್ತಾರೆ. ನಾನು ಶಾಲೆಗೆ ಹೋಗುವುದಿಲ್ಲ ಎಂದು ಹೇಳಿದ್ದಾನೆ. ಈ ಘಟನೆಯಿಂದ ಮನನೊಂದ ಬಾಲಕ ಡೆತ್ ನೋಟ್ ಬರೆದಿಟ್ಟು ಮನೆಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ” ಎಂದು ಅಮಿತ್ ತಂದೆ ವಿವರಿಸಿದ್ದಾರೆ.

ಜೀವ ಅಮೂಲ್ಯವಾಗಿದೆ. ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿದೆ. ಮಾನಸಿಕ ಆರೋಗ್ಯ ಸಮಸ್ಯೆಗಳಿದ್ದರೆ ಅಥವಾ ಆತ್ಮಹತ್ಯೆ ಮಾಡಿಕೊಳ್ಳುವ ಭಾವನೆ ಬಂದರೆ ನಿಮಗೆ ಭಾವನಾತ್ಮಕ ಬೆಂಬಲವನ್ನು ನೀಡಿ ಆತ್ಮಹತ್ಯೆ ತಡೆಗಟ್ಟುವ ಸಂಸ್ಥೆಗಳ ಕೆಲವು ಸಹಾಯವಾಣಿ ಸಂಖ್ಯೆಗಳು ಇಲ್ಲಿವೆ.
ಸಹಾಯ (24-ಗಂಟೆ): 080 65000111, 080 65000222
24×7 ಸಹಾಯವಾಣಿ: 98204667260
ಭಾರತದಾದ್ಯಂತ ಸಹಾಯವಾಣಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಕೇಳ್ರಪ್ಪೋ ಕೇಳಿ!!!!?
    ಧರ್ಮ ಧರ್ಮ ಅನ್ನುವ ರಾಜ್ಯದಲ್ಲಿ
    ಯಾರ್ಯಾರೋ ಪುಣ್ಯಾತ್ಮರು ಹುಟ್ಟಿದ ( ಅವರೇ ಹೇಳಿದ್ದು ) ಆ ರಾಜ್ಯದಲ್ಲಿ
    ವಿದ್ಯೆ ಕಲಿತ ಗುರುವು
    ವಿದ್ಯೆ ಕಲಿಯುವ ಮಗುವಿಗೆ ಭವಿಷ್ಯ ರೂಪಿಸುವ ಕೆಲಸ ಮಾಡದೆ
    ಆ ಮಗು ಆತ್ಮಹತ್ಯೆ ಅನ್ನುವ ಯೋಚ್ನೆ ಮಾಡಿ ತನ್ನ ಜೀವನವನ್ನೇ ಕೊನೆ ಮಾಡಿದ್ದಾನೆ… ಯಾವ್ ರಾಜಕೀಯ ವ್ಯಕ್ತಿ ಕೂಡ ಮಾತ್ ಆಡಲ್ಲ. ಯಾವ್ ಪಕ್ಷ ಧರ್ಮ ಕೂಡ ಧ್ವನಿ ಎತ್ತಿಲ್ಲ, ಆಗುತ್ತೆ ಒಂದೆರೆಡು ಸಂತಾಪದ ಮಾತು ಆಡಿ, ತಮ್ ಪಾಡಿಗೆ ತಾವು ಆಗ್ತಾರೆ , ಇತ್ತಗೆ ಹೆಣ್ಣಿಗೆ ರಕ್ಷಣೆ ಇಲ್ಲ ರೈತನಿಗೆ ಬೆಲೆ ಕೊಡ್ತಾ ಇಲ್ಲಾ ಜಾತಿಗೆ ಕೊನೆ ಇಲ್ಲ, ಮನುಷ್ಯತ್ವದ ಕಥೆ ಅದೋ ಗತಿ…

  2. “ಮೇರಾ ಜಾತಿ ಭಾರತ್ ಮಹಾನ್ ಹೈ”, “ಹಿಂದೂ ನಾವೆಲ್ಲ ಒಂದು” ಎನ್ನುವ ಸನಾತನಿ ಶನಿ ಸಂತಾನಗಳು ಈ ದೇಶದ ವಿಷ ಬೇರುಗಳಾಗಿವೆ…, ಶೋಷಿತರೆಲ್ಲ ಜಾಗೃತರಾಗಿ, ಒಂದಾಗಿ ಬಾಬಾಸಾಹೇಬರ ಆಶಯದಂತೆ ಈ ವಿಷ ಬೇರುಗಳ ಬುಡಸಮೇತ ಕೀಳದಿದ್ದಲ್ಲಿ ಈ ದೇಶದಲ್ಲಿ ದಲಿತರಿಗೆ, ದೀನರಿಗೆ, ಶೋಷಿತರಿಗೆ ಬದುಕು ಮತ್ತು ಭವಿಷ್ಯ ಎಂದೂ ಇರದು. ಶಿಕ್ಷಣ, ಸಂಘಟನೆ, ಹೋರಾಟ ಅಷ್ಟೇ ಅಲ್ಲ, ಅಗತ್ಯವಾದಲ್ಲಿ ಬೀದಿ ಕಾಳಗ, ರಕ್ತ ಕ್ರಾಂತಿಗೂ ಸಿದ್ಧಾರಾಗಿರಬೇಕಾದ ಸೇನೆ ನಿರ್ಮಾಣವಾಗಬೇಕು. ಆದಷ್ಟೇ ಈ ಅಮಾನವೀಯ ಕ್ರೂರತೆ, ಅನ್ಯಾಯ, ದಬ್ಬಾಳಿಕೆ, ವಂಚನೆ ಮತ್ತು ಶೋಷಣೆಗೆ ಪರಿಹಾರ. ಯಾವ ಸರ್ಕಾರ, ನಾಯಕರು,ಕಾನೂನುಗಳು ನಮ್ಮ ನೆರವಿಗೆ ಸದಾ ಬಾರದು, ಇವುಗಳು ಕೂಡ ನಮ್ಮ ವಂಚನೆ ಮಾಡುತ್ತಿವೆ. ಎಲ್ಲಕಿಂತ ಮೊದಲು ಶೋಷಿತರು ತಕ್ಷಣದಲ್ಲಿ ಈ ಬದುಕಲ್ಲಿ ಸನಾತನಿ ಧರ್ಮಾಚಾರಣೆ, ಅನುಸರಣೆಗಳ ಧಿಕ್ಕರಿಸಿ ಮಾನವೀಯ ಆಚರಣೆಗಳಷ್ಟೇ ಪಾಲಿಸುವ ನಿರ್ಣಯ ಮಾಡಬೇಕು

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...