Homeಅಂಕಣಗಳುಬಹುಸಂಖ್ಯಾತರು ಮತ್ತು ಗುಸ್ಪೈತೀಯರು: ಸಿಎಎ ಮತ್ತು ಎನ್‌ಆರ್‌ಸಿಗಳ ಒಳ ಹುನ್ನಾರ -  ಬಿ. ಶ್ರೀಪಾದ ಭಟ್

ಬಹುಸಂಖ್ಯಾತರು ಮತ್ತು ಗುಸ್ಪೈತೀಯರು: ಸಿಎಎ ಮತ್ತು ಎನ್‌ಆರ್‌ಸಿಗಳ ಒಳ ಹುನ್ನಾರ –  ಬಿ. ಶ್ರೀಪಾದ ಭಟ್

ಅಸ್ಸಾಂ ಮತ್ತು ತ್ರಿಪುರಾ ರಾಜ್ಯಗಳಲ್ಲಿ ಪಕ್ಕದ ಬಾಂಗ್ಲಾ ಮತ್ತು ಪಾಕಿಸ್ತಾನ ದೇಶದ ನುಸುಳುಕೋರರಿಗೆ ತಮ್ಮ ರಾಜ್ಯಗಳಿಗೆ ಆಶ್ರಯ ಕೊಡುತ್ತದೆ ಎನ್ನುವ ಒಂದೆ ಕಾರಣದಿಂದ ವಿರೋದಿಸುತ್ತಿದ್ದಾರೆ. ಇದು ಕೇವಲ ಸ್ಥಳಿಯರು ವರ್ಸಸ್ ಹೊರಗಿನವರು ಎನ್ನುವ ಅಂಶ ಮಾತ್ರವಿದೆ.

- Advertisement -
- Advertisement -

ಹಿನ್ನಲೆ
ಪೌರತ್ವ ತಿದ್ದಪಡಿ ಕಾಯಿದೆ, 2019 (ಸಿಎಎ) 11, ಡಿಸೆಂಬರ್ 2019ರಂದು ಸಂಸತ್ತಿನ ಎರಡೂ ಸದನಗಳಲ್ಲಿ ಅನುಮೋದನೆಗೊಂಡಿದೆ. 2003ರಲ್ಲಿ ಹುಟ್ಟಿನ ಆದಾರದಲ್ಲಿ ಪೌರತ್ವ ನೀಡುವ ಸಂಬAದ ‘ಅಕ್ರಮ ವಲಸಿಗರು’ ಎನ್ನುವುದನ್ನು ಸೇರಿಸಲಾಯಿತು. ಈ ತಿದ್ದಪಡಿ ಈಗಿನ ಸಿಎಎ ಮಸೂದೆಗೆ ಮೂಲವಾಗಿದೆ. ಆದರೆ ಆಗಲೂ ಎಲ್ಲಿಯೂ ದರ್ಮದ ಆದಾರವೆಂದು ಹೇಳಿರಲಿಲ್ಲ. ಈಗ ದರ್ಮ ಆದಾರಿತ ಶಾಸನ ಜಾರಿಗೆ ಬಂದಿದೆ. ಈ ಸಿಎಎ ಅನುಸಾರ ಭಾರತದೊಂದಿಗೆ ಗಡಿ ಹಂಚಿಕೊಂಡಿರುವ ಪಕ್ಕದ ಮೂರು ಮುಸ್ಲಿಂ ದೇಶಗಳಲ್ಲಿನ (ಪಾಕಿಸ್ತಾನ, ಅಫಘಾನಿಸ್ತಾನ, ಬಾಂಗ್ಲಾ) ಅಲ್ಪಸಂಖ್ಯಾತರಾಗಿರುವ ಹಿಂದೂ, ಸಿಖ್, ಜೈನ್, ಕ್ರಿಶ್ಚಿಯನ್, ಬೌದ್ದ, ಪಾರ್ಸಿ ದರ್ಮೀಯ ನಿರಾಶ್ರಿತರಿಗೆ ಭಾರತದಲ್ಲಿ ಆಶ್ರಯ ನೀಡುತ್ತದೆ. ಅಲ್ಲಿನ ಮುಸ್ಲಿಂರಿಗೆ “ಗುಸ್ಪೈತೀಯ” ಎಂದು ಹೊಸ ಹಣೆಪಟ್ಟಿ ಹಚ್ಚಲಾಗಿದೆ. ಇದು ನೇರವಾಗಿ ಪರಿಚ್ಚೇಧ 14, 21, 25ರ ಉಲ್ಲಂಘನೆಯಾಗಿದೆ. ಮೇಲ್ನೋಟಕ್ಕೆ ಕಾಣುವಂತೆ ಇದು ಸಾಂವಿದಾನಿಕವಾಗಿ ಮಾನ್ಯಗೊಳ್ಳುವುದಿಲ್ಲ. ಆದರೆ ಸದ್ಯಕ್ಕೆ ಈ ಕಾಯಿದೆಗೆ ಭಾರಿ ವಿರೋದ ವ್ಯಕ್ತವಾಗುತ್ತಿದೆ. ಈಶಾನ್ಯ ರಾಜ್ಯಗಳಲ್ಲಿ ಅದರಲ್ಲೂ ಅಸ್ಸಾಂ ರಾಜ್ಯದಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಇದು ತಾತ್ಕಾಲಿಕವೋ ಅಥವಾ ಮುಂದುವರೆಯುತ್ತದೆಯೋ ಗೊತ್ತಿಲ್ಲ. ಆದರೆ ಈ ಸಿಎಎ ಎನ್ನುವ ಜೀವವಿರೋದಿ ಕಾಯಿದೆಯನ್ನ ವಿರೋದಿಸುವುದಕ್ಕೆ ನೂರಾರು ಕಾರಣಗಳಿವೆ. ಈ ಕುರಿತು ಈಗಾಗಲೆ ಸಾಕಶ್ಟು ಚರ್ಚೆಯಾಗಿದೆ. ಲೇಖನಗಳೂ ಪ್ರಕಟಗೊಂಡಿವೆ.

ಈ ಸಿಎಎ ಕಾಯಿದೆಗೂ ಎನ್‌ಆರ್‌ಸಿ (ರಾಶ್ಟ್ರೀಯ ಪೌರತ್ವ ನೊಂದಣಿ) ಕಾಯಿದೆಗೂ ಸಂಬಂದವಿದೆ. ಅಂದರೆ ಎನ್‌ಆರ್‌ಸಿ ಅಡಿಯಲ್ಲಿ ಅಕ್ರಮ ವಲಸಿಗರು, ನುಸುಳುಕೋರರು, ವಿದೇಶಿಯರು ಎಂದು ಪರಿಗಣಿಸಲ್ಪಟ್ಟ ಹಿಂದೂಗಳು ಸಿಎಎ ಕಾಯಿದೆ ಅಡಿಯಲ್ಲಿ ಸಕ್ರಮಗೊಳ್ಳುತ್ತಾರೆ. ಅವರಿಗೆ ಆಶ್ರಯ ದೊರಕುತ್ತದೆ. ಆದರೆ ಅದೆ ಎನ್‌ಆರ್‌ಸಿ ಅಡಿಯಲ್ಲಿ ಅಕ್ರಮ ವಲಸಿಗರು ಎಂದು ಪರಿಗಣಿಸಲ್ಪಟ್ಟ ಮುಸ್ಲಿಂರಿಗೆ ಈ ಸಿಎಎ ಕಾಯಿದೆ ಅಡಿಯಲ್ಲಿಯೂ ಅಕ್ರಮ ವಲಸಿಗರಾಗುತ್ತಾರೆ ಮತ್ತು ನಿರಾಶ್ರಿತರ ಯಾತನಾ ಶಿಬಿರಗಳಲ್ಲಿ ನರಳಬೇಕಾಗುತ್ತದೆ.
ಎಕನಾಮಿಕ್ ಟೈಮ್ಸ್ ಸಮಾವೇಶದಲ್ಲಿ ಮಾತನಾಡುತ್ತ ಗೃಹಮಂತ್ರಿ ಅಮಿತ್ ಶಾ “ನಮ್ಮ ಸರಕಾರ ಈ ‘ಸಿಎಎ’ಯನ್ನು ಹಿಂಪಡೆಯುವುದಿಲ್ಲ. ವಿರೋದಪಕ್ಷಗಳು ಪಕ್ಕದ ದೇಶಗಳ ಎಲ್ಲಾ ಮುಸ್ಲಿಂರನ್ನು ಭಾರತಕ್ಕೆ ಕರೆತಂದು ಅವರಿಗೆಲ್ಲಾ ಇಲ್ಲಿನ ಪೌರತ್ವ ಕೊಡಿಸಿ” ಎಂದು ಸವಾಲು ಹಾಕಿದ್ದಾರೆ. ಇದೆ ಮಾತುಗಳನ್ನು ಪ್ರದಾನಿ ಮೋದಿ ಸಹ ಜಾರ್ಖಂಡ್ ಚುನಾವಣಾ ಸಂದರ್ಬದಲ್ಲಿ ಮಾತನಾಡಿದ್ದಾರೆ. ಸಂವಿದಾನ ವಿರೋದಿ, ಜೀವ ವಿರೋದಿ ಕರಾಳ ಶಾಸನವಾದ ಸಿಎಎ-ಎನ್‌ಆರ್‌ಸಿಯನ್ನು ವಿರೋದಿಸುವುದು ಪಾಕಿಸ್ತಾನ ಒಳಗೊಂಡಂತೆ ಎಲ್ಲಾ ಮುಸ್ಲಿಂ ರಾಶ್ಟ್ರಗಳನ್ನು ಸಮರ್ಥಿಸಿದಂತೆ ಎನ್ನುವ ನಿರೂಪಣೆ ಸೃಶ್ಟಿಸುತ್ತಿದ್ದಾರೆ. ಮೋದಿ-ಶಾ ಜೋಡಿಯು ಒಂದೆ ಕಲ್ಲಿನಲ್ಲಿ ಮರ‍್ನಾಲ್ಕು ಹಕ್ಕಿಗಳನ್ನು ಹೊಡೆದುರುಳಿಸುವ ತಂತ್ರ ರಚಿಸಿರುವುದು ಸ್ಪಶ್ಟವಾಗುತ್ತದೆ.

ಮುಂದಿನ ದಿನಗಳಲ್ಲಿ ಅವರು ದೇಶಾದ್ಯಾಂತ ಪ್ರವಾಸ ಮಾಡಿ ಬಹುಂಖ್ಯಾತರಿಗೆ ನಿಮಗೆ ಸಂಪೂರ್ಣ ರಕ್ಷಣೆ ದೊರಕಿದೆ ಈ ದೇಶ ನಿಮ್ಮದು ಎನ್ನುವ ಭರವಸೆ ಕೊಡುತ್ತ ಅಡ್ಡಾಡುತ್ತಾರೆ ಮತ್ತು ಅದೆ ಸಂದರ್ಬದಲ್ಲಿ “ಗುಸ್ಪೈತೀಯ” (ಸಿಎಎ ಕಾಯಿದೆ ಮುಸ್ಲಿಂರಿಗೆ ಕೊಟ್ಟ ಹೆಸರು)ರಿಗೆ ಇನ್ನು ನಿಮ್ಮ ಆಟ ಮುಗಿಯಿತು, ನಿಮಗಾಗಿ ಯಾತನಾ ಶಿಬಿರಗಳಿವೆ ಎಂದು ಎಚ್ಚರಿಕೆಯೂ ಕೊಡಲಿದ್ದಾರೆ. ನಾವು ಹಿಂದೂಗಳನ್ನು ಭಾರತಕ್ಕೆ ಕರೆತರಲು ಪ್ರಯತ್ನಿಸಿದರೆ ವಿರೋದಪಕ್ಷಗಳು ಅಡ್ಡಿ ಮಾಡುತ್ತಿವೆ ಎಂದು ಆರೋಪಿಸುತ್ತಾರೆ, ಇಲ್ಲಿನ ಮುಸ್ಲಿಮರು ಪಕ್ಕದ ದೇಶಗಳಲ್ಲಿರುವ ಹಿಂದೂಗಳು ಭಾರತಕ್ಕೆ ಮರಳುವುದನ್ನು ವಿರೋದಿಸುತ್ತಿದ್ದಾರೆ ಎಂದು ಅಪಪ್ರಚಾರ ಮಾಡುತ್ತಾರೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಮುಂದಿನ ದಿನಗಳಲ್ಲಿ ಸದ್ಯದ ಬಿಕ್ಕಟ್ಟುಗಳಾದ ಆರ್ಥಿಕ ಹಿಂಜರಿತ, ಸಾಮಾಜಿಕ ತಲ್ಲಣಗಳು, ನಿರುದ್ಯೋಗ ಇನ್ನಿತರ ಸಮಸ್ಯೆಗಳನ್ನು ಚರ್ಚೆಗೆ ಬರದಂತೆ ನಿಗಾ ವಹಿಸುವುದರಲ್ಲಿಯೂ ಯಶಸ್ವಿಯಾಗಿದ್ದಾರೆ

ಕತ್ತಲೆಗೆ ಹತ್ತು ತಲೆ, ನೂರಾರು?
’ಗುಸ್ಪೈತೀಯ’ ಎನ್ನುವ ಹೊಸ ಹಣೆಪಟ್ಟಿಯಿಂದ ಸಂಪೂರ್ಣವಾಗಿ ಅತಂತ್ರರಾದ ಮುಸ್ಲಿಂ ಸಮುದಾಯ ಎರಡು ಬಗೆಯಲ್ಲಿ ಪ್ರತಿಕ್ರಯಿಸುತ್ತಿದೆ. ಒಂದು ಈಗಾಗಲೆ ತಮ್ಮ ಬಳಿ ಇರುವ ದಾಖಲೆಗಳನ್ನು ಮರುಪರಿಶೀಲನೆ ನಡೆಸುವುದು ಸಾದ್ಯವಾದರೆ ಪರಿಶ್ಕರಿಸಿಕೊಳ್ಳುವುದು (ಯಾಕೆಂದರೆ ಹಿರಿಯಣ್ಣ ಅಮಿತ್ ಶಾ ದೇಶದಾದ್ಯಂತ ಸಂಚರಿಸಿ ಈ ಗುಸ್ಪೈತೀಯರನ್ನು ಪತ್ತೆ ಹಚ್ಚಲಿದ್ದಾರೆ, ವಿಚಾರಣೆಗೆ ಗುರಿಪಡಿಸಲಿದ್ದಾರೆ). ಸಂಪೂರ್ಣವಾಗಿ ಈ ಬಹುಸಂಖ್ಯಾವಾದದ ಮತೀಯವಾದಕ್ಕೆ ಶರಣಾಗಿರುವ ಬಹುಪಾಲು ಅದಿಕಾರಶಾಹಿಯು ಮುಸ್ಲಿಮರನ್ನು ಯಾವ ಬಗೆಯಲ್ಲಿ ಹಿಂಸಿಸಬಹುದು ಎನ್ನುವುದು ಊಹಿಸಿಕೊಳ್ಳುವುದು ಕಶ್ಟವಲ್ಲ. ಎರಡನೆಯದಾಗಿ ಸ್ವತಂತ್ರವಾಗಿ ಮತ್ತು ಪ್ರಗತಿಪರ ಸಂಘಟನೆಗಳ ಜೊತೆಗೂಡಿ ವ್ಯಾಪಕವಾಗಿ ಪ್ರಭಟಿಸುವುದು.

ಸಿಎಎ ಕಾಯಿದೆ ವಿರುದ್ದ ಜಾಮಿಯಾ ಮಿಲಿಯಾ ಇಸ್ಲಾಮಿಯ ವಿವಿ ಮತ್ತು ಅಲಿಘರ್ ಮುಸ್ಲಿಂ ವಿವಿಯಲ್ಲಿ ತೀವ್ರ ಸ್ವರೂಪದ ಪ್ರತಿಭಟನೆ ನಡೆದಿದೆ. ವಿವಿ ಕ್ಯಾಂಪಸ್‌ನೊಳಗೆ ಪ್ರತಿಬಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳು, ಶಿಕ್ಷಕರ ಮೇಲೆ ಲಾಠಿ ಪ್ರಯೋಗ ಮಾಡಲಾಗಿದೆ, ಟಿಯರ್ ಗ್ಯಾಸ್ ಸಿಡಿಸಲಾಗಿದೆ. ಈ ಸಿಎಎ ಕಾಯಿದೆಯ ಬಲಿಪಶುಗಳಾಗುವವರು ಮುಸ್ಲಿಂ ಸಮುದಾಯದವರು ಎನ್ನುವ ನಂಬಿಕೆಯೂ ಇಲ್ಲಿ ಪ್ರದಾನವಾಗಿದೆ. ಈ ಎರಡೂ ವಿವಿಗಳು ಐತಿಹಾಸಿಕವಾಗಿ ಮುಸ್ಲಿಂ ಸಮುದಾಯದ ತಳಹದಿಯ ಮೇಲೆ ಕಟ್ಟಲ್ಪಟ್ಟಿವೆ. ಅವರ ಆತಂಕ ಸಹಜ. ಆದರೆ ದೇಶದ ಇತರೆ ವಿಶ್ವವಿದ್ಯಾಲಯಗಳಲ್ಲಿ ಪ್ರತಿಭಟನೆ, ಪ್ರತಿರೋದ ನಡೆಯುತ್ತಿವೆಯಾದರೂ ಸಹ ಇಡೀ ಪ್ರತಿಬಟನೆಯು ‘ಸಿಎಎ-ಎನ್‌ಆರ್‌ಸಿ’ ಶಾಸನವು ಸಂವಿದಾನ ವಿರೋದಿ, ಇದು ಎಲ್ಲಾ ದರ್ಮದ ಪ್ರಜೆಗಳ ಹಕ್ಕುಗಳನ್ನು ಕಸಿಯುತ್ತದೆ ಎನ್ನುವ ಕಥನ ಕಟ್ಟಿಕೊಡುವಲ್ಲಿ ಸೋಲುತ್ತಿವೆ. ಯಾಕೆಂದರೆ ಇಲ್ಲಿನ ಬಹುಸಂಖ್ಯಾತರು, ವಿದ್ಯಾರ್ಥಿಗಳು, ಶಿಕ್ಷಕರು ಈ ಸಿಎಎ, ಎನ್‌ಆರ್‌ಸಿ ಕಾಯಿದೆಗಳು ಮುಸ್ಲಿಂ ಸಮುದಾಯಕ್ಕೆ ಅನ್ವಯಿಸುತ್ತವೆ ನಮಗಲ್ಲ ಎಂಬಂತೆ ಮುಗುಮ್ಮಾಗಿದ್ದಾರೆ. ಏಕೆಂದರೆ ಈ ಗುಸ್ಪೈತೀಯರು ಬೇಕಿದ್ದರೆ ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲಿ ನಾವ್ಯಾಕೆ ಮದ್ಯಪ್ರವೇಶ ಮಾಡಬೇಕು ಎನ್ನುವ ನೀಚ ಮನಸ್ಥಿತಿ ನಮ್ಮ ಸಮಾಜದಲ್ಲಿ, ವ್ಯವಸ್ಥೆಯಲ್ಲಿ ವ್ಯಾಪಕವಾಗಿ ಹಬ್ಬಿಕೊಂಡಿದೆ. ಎಲ್ಲರೂ ಜಾಣ ಮೌನದಲ್ಲಿದ್ದಾರೆ. ಗುಸ್ಪೈತೀಯ ಹಣೆಪಟ್ಟಿ ಹಚ್ಚಿಕೊಂಡಿರುವ ಮುಸ್ಲಿಂರು ಮಾತ್ರ ಆತಂಕದಲ್ಲಿದ್ದಾರೆ ಮತ್ತು ದಿಕ್ಕುತೋಚದೆ ಅಸಹಾಯತೆಯಲ್ಲಿ ನವೆಯುತ್ತಿದ್ದಾರೆ. ಆದರೆ ಎನ್‌ಆರ್‌ಸಿ ಮತ್ತು ಸಿಎಎ ಎನ್ನುವ ಎರಡು ಕರಾಳ ಶಾಸನಗಳಿಗೆ ಪ್ರತಿಕ್ರಯಿಸದ ಬಹುಸಂಖ್ಯಾತರ ಮೌನ ಮತ್ತು ನಿರ್ಲಕ್ಷ್ಯ ಕಳವಳಕಾರಿಯಾಗಿದೆ. ಇಂದು ಬಹುಸಂಖ್ಯಾತ ಪ್ರಜ್ಞಾವಂತರು ಈ ಪ್ರತಿಭಟನೆಯ ಮುಂಚೂಣಿಯಲ್ಲಿರುಬೇಕು. ಅದು ಈ ಕ್ಷಣದ ಅಗತ್ಯ.

ಮುಕುಲ್ ಕೇಶವನ್ ಅವರು “ಈ ಸಿಎಎ ಮತ್ತು ಎನ್‌ಆರ್‌ಸಿ ಶಾಸನಗಳ ಉದ್ದೇಶವೆ ಐಕ್ಯತೆಯನ್ನು ದ್ವಂಸಗೊಳಿಸುವುದು. ಬಹುಸಂಖ್ಯಾತರಲ್ಲಿ ನಾವು ಸುರಕ್ಷಿತರು ಎನ್ನುವ ಬಾವನೆ ಮೂಡಿಸಿದರೆ ಮುಸ್ಲಿಂ ಸಮುದಾಯಕ್ಕೆ ನಮಗೆ ಇನ್ನು ರಕ್ಷಣೆ ಇಲ್ಲ ಎನ್ನುವ ತಬ್ಬಲಿತನ ಮೂಡಿಸಿದೆ” ಎಂದಿದ್ದಾರೆ. ಆದರೆ ಸಿಎಎ ಶಾಸನ ಕೇವಲ ಮುಸ್ಲಿಂರಿಗೆ ಮಾತ್ರ ಅನ್ವಯವಾಗುವುದಿಲ್ಲ. ಮುಂದಿನ ದಿನಗಳಲ್ಲಿ ಇಲ್ಲಿನ ಮಹಿಳೆಯರು, ಆದಿವಾಸಿಗಳು, ದಲಿತರೂ ಸಹ ಈ ಕಾಯಿದೆಯ ಪ್ರತಿಗಾಮಿ ಉದ್ದೇಶಗಳಿಗೆ ಬಲಿಪಶುಗಳಾಗುತ್ತಾರೆ. ಇದನ್ನು ಸಂಬಂದಪಟ್ಟವರಿಗೆ ಅರಿವು ಮೂಡಿಸುವುದು ಹೇಗೆ?

ಬಿಜೆಪಿ ಪಕ್ಷ ಮತ್ತು ಸಂಘ ಪರಿವಾರ ಒಕ್ಕೊರಲಿಂದ ಸಿಎಎ ಅನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ ಪ್ರಜ್ಞಾವಂತ ನಾಗರಿಕರು ಚಿದ್ರ ಚಿದ್ರವಾಗಿದ್ದಾರೆ. ಚಿಂತಕ ಸುಹಾಸ್ ಪಲಿಸ್ಕರ್ ಅವರು “ಬಹಳ ಕಾಲದಿಂದ ಸೆಕ್ಯುಲರ್ ರಾಜಕಾರಣವು ನೈತಿಕ ಮೌಲ್ಯಗಳನ್ನು, ಸಂವಿದಾನ ನೀತಿಸಂಹಿತೆಗಳಿಗೆ ತನ್ನ ಬದ್ದತೆಯನ್ನು ಪ್ರದರ್ಶಿಸುತ್ತಲೆ ಇದೆ. ಆದರೆ ಜನ ಸಮುದಾಯದ ಮನಸ್ಸು, ಮಿದುಳಿನಲ್ಲಿ ಈ ಮೌಲ್ಯಗಳನ್ನು, ಬದ್ದತೆಯನ್ನು ತುಂಬುವಲ್ಲಿ ಮತ್ತು ಮನವರಿಕೆ ಮಾಡುವಲ್ಲಿ ಸೋತಿದ್ದಾರೆ ಅಥವಾ ಈ ಕುರಿತು ತಲೆಕೆಡೆಸಿಕೊಂಡಿಲ್ಲ. ಸೈದ್ದಾಂತಿಕ ಮತ್ತು ಬೌದ್ದಿಕ ಸಂಪನ್ಮೂಲಗಳನ್ನು ಸಾಂಕೇತಿಕವಾಗಿ ಪ್ರದರ್ಶಿಸುತ್ತಿದ್ದಾರೆ, ತಮ್ಮ ಪ್ರೇಕ್ಷಕರನ್ನು ಹೆಕ್ಕಿಕೊಳ್ಳುತ್ತಿದ್ದಾರೆ. ಅಂಬೇಡ್ಕರ್ ಮತ್ತು ಗಾಂದಿಯನ್ನು ಸೀಮಿತ ಉದ್ದೇಶಕ್ಕೆ, ಅನುಕೂಲರವಾಗಿ ಮಾತ್ರ ಬಳಸಿಕೊಳ್ಳುತ್ತಿದ್ದಾರೆ ಮತ್ತು ಸಾರ್ವಜನಿಕರು ವಿಕೃತಿ, ವಂಚನೆ ಮತ್ತು ಮಿಥ್ಯೆಗಳಿಗೆ ಏಕಾಂಗಿಯಾಗಿ ಮುಖಾಮುಖಿಯಾಗುವಂತೆ ಗುರಿಪಡಿಸುತ್ತಿದ್ದಾರೆ. ದೊಡ್ಡ ಸಂಖ್ಯೆಯ ಸಾರ್ವಜನಿಕರು ಈ ಸಿಎಎ ಕುರಿತು ತಲೆಕೆಡೆಸಿಕೊಂಡಿಲ್ಲದಿರುವುದು ಆಶ್ಚರ್ಯವೇನಲ್ಲ. ಮತ್ತು ಈ ಸಿಎಎ ಶಾಸನವು ಸುದಾರಣೆ ಸ್ವರೂಪದ್ದಾಗಿದೆ, ನಿಶ್ಪಕ್ಷಪಾತವಾಗಿದೆ, ಸಂವಿದಾನ ನೀತಿಸಂಹಿತೆಗಳನ್ನು ಉಲ್ಲಂಘಿಸಿಲ್ಲ, ಗಾಂದಿ, ಅಂಬೇಡ್ಕರ್ ಸಿದ್ದಾಂತಗಳನ್ನು ಮೀರಿ ಹೋಗಿಲ್ಲ ಎಂದು ನಂಬಿದ್ದಾರೆ. ಸಾರ್ವಜನಿಕ ಕಥನವನ್ನು ಈ ರೀತಿಯಲ್ಲಿ ಕಪಟತನದಿಂದ ಹೈಜಾಕ್ ಮಾಡಿರುವುದು ಭಾರತದ ಇತಿಹಾಸದಲ್ಲಿ ಹಿಂದೆಂದೂ ನಡೆದಿಲ್ಲ.

ಗಣ್ಯ ನಾಗರಿಕರು ಈ ಸಿಎಎ ಶಾಸನವನ್ನು ವಿರೋದಿಸಿ ಪತ್ರ ಬರೆದು ಸಹಿ ಹಾಕಿದ್ದಾರೆ, ಬುದ್ದಿಜೀವಿಗಳು ಮಾದ್ಯಮಗಳಲ್ಲಿ ಬರೆಯುತ್ತಿದ್ದಾರೆ, ಸಣ್ಣ ಸಣ್ಣ ಗುಂಪುಗಳನ್ನು ಕಟ್ಟಿಕೊಂಡಿರುವ ಸಂಘಟನೆಗಳು ಸಾರ್ವಜನಿಕವಾಗಿ ಕೆಲ ಘಂಟೆಗಳ ಕಾಲ ಪ್ರತಿಭಟನೆ ಮಾಡುತ್ತಿದ್ದಾರೆ ಮತ್ತು ಸೀಮಿತ ನೆಲೆಯಲ್ಲಿ ಸಾರ್ವಜನಿಕ ಅಬಿಪ್ರಾಯವನ್ನು ಕ್ರೋಡೀಕರಿಸುತ್ತಿದ್ದಾರೆ, ನಾಗರಿಕ ಅಸಹಕಾರ, ಪ್ರತಿರೋದದಂತಹ ವ್ಯಯುಕ್ತಿಕ ಮಟ್ಟದ ಪ್ರತಿಕ್ರಿಯೆಗಳಿವೆ. ಇವೆಲ್ಲವೂ ಬೌದ್ದಿಕವಾಗಿ ಮತ್ತು ನೌತಿಕವಾಗಿ ಮಹತ್ವವುಳ್ಳ ಸಂಗತಿಗಳು. ಆದರೆ ಇವೆಲ್ಲವಕ್ಕೂ ರಾಜಕೀಯ ಹಿಡಿತದ, ನಡೆಗಳ ಕೊರತೆ ಇದೆ. ಒಂದು ಈ ಮಾದರಿಯ ಪ್ರತಿರೋಧಗಳು ಪ್ರತ್ಯೇಕಗೊಂಡಿವೆ, ಸಾರ್ವಜನಿಕರಿಂದ ಬೇರ್ಪಟ್ಟಿವೆ, ಎರಡನೆಯದಾಗಿ ಈಗಿನ ಆಡಳಿತ ನಡೆಸುತ್ತಿರುವ ಸರಕಾರವು ಇಂತಹ ಗಂಬೀರ ಪ್ರತಿರೋದಗಳಿಗೆ ಸಂವೇದಿಸುವುದಿಲ್ಲ ಮೂರನೆಯದಾಗಿ ಈ ಎಲ್ಲಾ ಕಾರಣಗಳಿಂದ ಈ ಪ್ರತಿಭಟನೆಗಳಿಗೆ ಜನ ಸಮೂಹದ ಬೆಂಬಲವಿರುವುದಿಲ್ಲ’ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಇದು ನಿಜ.

ಇಲ್ಲಿನ ಜನಪರ ಚಳುವಳಿಗಳು ಬಹುಸಂಖ್ಯಾತ ಜನರ ಬೆಂಬಲದ ಕೊರತೆಯಿಂದ ಏಕಾಂಗಿಯಾಗಿರುವುದು ಈ ಮೋದಿ-ಶಾ ಜೋಡಿಗೆ ಅನುಕೂಲಕರವಾಗಿದೆ. ಇವರಿಗೆ ಇದು ಗೊತ್ತಿದೆ. ಈ ಸಿಎಎ ಮತ್ತು ಎನ್‌ಆರ್‌ಸಿಯಂತಹ ಕರಾಳ ಶಾಸನಗಳನ್ನು ವಿರೋದಿಸುವವರ ಪ್ರಮಾಣ ಶೇಕಡಾ 10-15ರಶ್ಟಿದೆ ಎಂಬುದನ್ನು ಮನಗಂಡಿರುವ ಮೋದಿ-ಶಾ ಜೋಡಿ ತಮ್ಮ ಮತಬ್ಯಾಂಕ್ ಆದ ಶೇಕಡಾ 40 ಪ್ರಮಾಣದ ಜನಸಂಖ್ಯೆಯನ್ನು ಉದ್ದೇಶಿಸಿ ರಾಜಕೀಯ ಮಾಡುತ್ತಾರೆ. ಈ ಮತಬ್ಯಾಂಕ್ ಕೊಂಚವೂ ಕಡಿಮೆಯಾಗಬಾರದು ಮತ್ತು ಅದರ ಪ್ರಮಾಣ ಇನ್ನಶ್ಟು ವೃದ್ದಿಸಬೇಕು ಎಂಬುದೆ ಇವರ ಗುರಿಯಾಗಿದೆ. ಮುಂದಿನ ವರ್ಶ ಬಿಹಾರ್ ಮತ್ತು ದೆಹಲಿ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತದೆ. ಇವರ ಬತ್ತಳಿಕೆಯಲ್ಲಿ ಕಲಮು 370 ರದ್ದತಿ ಮತ್ತು ಆ ಮೂಲಕ ಮುಸ್ಲಿಂರಿಗೆ ಪಾಠ ಕಲಿಸಿದ ಹೆಗ್ಗಳಿಕೆ ಮತ್ತಗೆ ಸಿಎಎ ಮೂಲಕ ಈ ‘ಗುಸ್ಪೈತೀಯ’ರನ್ನು ದೇಶದಿಂದ ಹೊರಗೋಡಿಸುವ ಪ್ರಣಾಳಿಕೆಯೊಂದಿಗೆ ಚುನಾವಣಾ ಪ್ರಚಾರಕ್ಕೆ ದುಮುಕುತ್ತಾರೆ, ಜೊತೆಗೆ ರಾಮ ಮಂದಿರ ನಿರ್ಮಾಣದ ಅಜೆಂಡಾ ಸಹ ಬಲ ತುಂಬುತ್ತದೆ. ಮೋದಿ-ಶಾ ಜೋಡಿಯ ಈ ರಣತಂತ್ರಕ್ಕೆ ಪ್ರತಿಯಾಗಿ ವಿರೋದ ಪಕ್ಷಗಳ ಕಾರ್ಯತಂತ್ರ ಯಾವ ಮಟ್ಟದಲ್ಲಿದೆ ಎನ್ನುವುದನ್ನು ಗಮನಿಸಿದಾಗ ನಿರಾಶೆ ಮೂಡಿಸುತ್ತದೆ. ಅವರಲ್ಲಿ ಆತ್ಮಸ್ಥೈರ್ಯವೇ ಕುಂದಿದೆ. ಈ ಬಹುಸಂಖ್ಯಾತ ಮತಾಂದತೆಗೆ ಪ್ರತಿರೋದವಾಗಿ ವಿರೋದ ಪಕ್ಷಗಳಲ್ಲಿ ರಚನಾತ್ಮಕ ಹಮ್ಮುಗೆಗಳಿಲ್ಲ. ಅವರ ಬಳಿ ಸಾರ್ವಜನಿಕ ಬೆಂಬಲವಿಲ್ಲ ಮತ್ತು ಮುಖ್ಯವಾಗಿ ಅವರೊಳಗೆ ಒಗ್ಗಟ್ಟಿಲ್ಲ. ಕೇರಳ, ಪಶ್ಚಿಮ ಬಂಗಾಳ, ಪಂಜಾಬ್‌ನಲ್ಲಿರುವ ವಿರೋದ ಪಕ್ಷಗಳ ಸರಕಾರಗಳು ಈ ಸಿಎಎ ಶಾಸನವನ್ನು ತಮ್ಮ ರಾಜ್ಯಗಳಲ್ಲಿ ಜಾರಿಗೊಳಿಸುವುದಿಲ್ಲ ಎಂದು ಹೇಳಿದ್ದಾರೆ ಆದರೆ ಇದು ದುರ್ಬಲ ಪ್ರತಿಕ್ರಿಯೆ ಎಂದೆ ಹೇಳಬೇಕಾಗುತ್ತದೆ ಮತ್ತು ಇದಕ್ಕೆ ಕಾನೂನಿನ ಬೆಂಬಲ ದೊರಕುವುದಿಲ್ಲ.

ಇದನ್ನೂ ಓದಿ: CAA ಮತ್ತು NRC ವಿರುದ್ಧದ ಹೋರಾಟದಲ್ಲಿ ’ಅಲ್ಲಾ ಹು ಅಕ್ಬರ್’, “ಇನ್ಶಾ ಅಲ್ಲಾಹ್” ಎಂಬ ಘೋಷಣೆಗಳನ್ನು ಕೂಗುವುದು ಸರಿಯೇ? ತಪ್ಪೆ?

ಸಾರ್ವಜನಿಕ ಪ್ರತಿಭಟನೆ ಮಾಡುತ್ತಿರುವ ಅಸ್ಸಾಂ ಮತ್ತು ತ್ರಿಪುರಾ ರಾಜ್ಯಗಳಲ್ಲಿ ಪಕ್ಕದ ಬಾಂಗ್ಲಾ ಮತ್ತು ಪಾಕಿಸ್ತಾನ ದೇಶದ ನುಸುಳುಕೋರರಿಗೆ ತಮ್ಮ ರಾಜ್ಯಗಳಿಗೆ ಆಶ್ರಯ ಕೊಡುತ್ತದೆ ಎನ್ನುವ ಒಂದೆ ಕಾರಣದಿಂದ ವಿರೋದಿಸುತ್ತಿದ್ದಾರೆ. ಇದು ಕೇವಲ ಸ್ಥಳಿಯರು ವರ್ಸಸ್ ಹೊರಗಿನವರು ಎನ್ನುವ ಅಂಶ ಮಾತ್ರವಿದೆ. ಈ ಪ್ರತಿರೋದದಲ್ಲಿ ಮುಸ್ಲಿಂ ಸಮುದಾಯವು ತಾರತಮ್ಯಕ್ಕೆ ಒಳಗಾಗಿದೆ ಎನ್ನುವ ನೈತಿಕ ಪ್ರಜ್ಞೆಯ ಅಂಶ ಕಡಿಮೆ ಇದೆ. ಆದರೂ ಸಹ ಈಶಾನ್ಯ ರಾಜ್ಯಗಳ ಆ ಹೋರಾಟದ ತಿರುಳು ಮಿಕ್ಕ ರಾಜ್ಯಗಳಿಗೂ ಸ್ಪೂರ್ತಿಯಾಗಬೇಕು

ಮುಂದೇನು?
ಈಗಾಗಲೆ ವಿಭಜನೆಗೊಂಡಿರುವ ಹಿಂದೂ-ಮುಸ್ಲಿಂ ಸಂಬಂದವು ಈ ಸಿಎಎ ಅನುಶ್ಟಾನಗೊಂಡರೆ ಮತ್ತಶ್ಟು ವಿಕೃತಿಗೆ ಹೊರಳಿಕೊಳ್ಳಲಿದೆ. ಮುಸ್ಲಿಂರ ಗೆಟ್ಟೋಗಳು ಹೆಚ್ಚಲಿದೆ. ಈಗಾಗಲೆ ಬೌದ್ದಿಕ ಪ್ರೌಡತೆ ಮತ್ತು ಸಾಮಾಜಿಕ ಸಮಾನತೆಯ ಕೊರತೆಯಿಂದ ಅತಂತ್ರವಾಗಿರುವ ಮುಸ್ಲಿಂ ಸಮುದಾಯಕ್ಕೆ ಲಿಬರಲ್ ಮತ್ತು ಸೆಕ್ಯುಲರ್ ನಾಯಕತ್ವ ಇನ್ನು ಶೂನ್ಯವಾಗುತ್ತದೆ ಎನ್ನುವ ದುರಂತ ಸುಳ್ಳಲ್ಲ. ಸುಹಾಸ್ ಪಲಿಸ್ಕರ್ ಹೇಳುವಂತೆ ಪ್ರಜಾಪ್ರಬುತ್ವದ ಮೌಲ್ಯಗಳಿಗಾಗಿ ನಡೆಯುವ ಹೋರಾಟಗಳು ನಿರ್ವಾತದಲ್ಲಿ ಸಕ್ರಿಯವಾಗಿದ್ದರೆ ಪ್ರಯೋಜನವಿಲ್ಲ. ಸುಹಾಸ್ ಅವರು ಮುಂದುವರೆದು ‘ ಸುದಾರಣವಾದದ ಮಿತಿಯೆಂದರೆ ಅದು ಆದರ್ಶಗಳಿಗೆ ಅಗತ್ಯವಾದ ರಾಜಕೀಯ ಗೆಲುವಿಗಾಗಿ ಅಮೂರ್ತ ವಿಚಾರವಾದವನ್ನು ನಿರೀಕ್ಷಿಸುತ್ತದೆ. ಆದರೆ ಪ್ರಜಾತಾಂತ್ರಿಕ ಹೋರಾಟಗಳು ಇಲ್ಲಿ ಮತ್ತು ಈಗಲೆ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ, ಆದರ್ಶಗಳು ಗೌಣವಾಗಿರುತ್ತದೆ ಮತ್ತು ಈ ಆದರ್ಶಗಳು ಪೂರಕವಾಗಿ ಬಳಕೆಯಾಗಬೇಕು ಆ ಮೂಲಕ ಜನಾಂದೋಲನಕ್ಕೆ ಬಲ ತುಂಬಬೇಕು’ ಎಂದು ಹೇಳುತ್ತಾರೆ

ಇಂದು ವಾಸ್ತವ ಸಂಗತಿಗಳು ಮತ್ತು ಆದರ್ಶಗಳು ಎರಡನ್ನೂ ಬೆರೆಸಿ ಹೆಣೆಯುವ ಜವಬ್ದಾರಿ ಇಲ್ಲಿನ ಪ್ರಜ್ಞಾವಂತರ ಮೇಲಿದೆ. ಇದನ್ನು ಬೆಸೆಯುವುದು ಹೇಗೆ? ಎಲ್ಲಿಂದ ಪ್ರಾರಂಬಿಸಬೇಕು? ಸಂವಿದಾನದ ನೀತಿಸಂಹಿತೆಗಳನ್ನು ಜನಸಾಮಾನ್ಯರು ಚರ್ಚಿಸುವಂತೆ ಮತ್ತು ಅದರ ಆಶಯಗಳಿಗೆ ಬದ್ದರಾಗುವಂತೆ ಪ್ರೇರೆಪಿಸುವುದು ಮೊದಲ ಗುರಿಯಾಗಬೇಕು. ಈ ಸಿಎಎ ವಿರೋದಿ ಹೋರಾಟವು ಸಂವಿದಾನ ಉಳಿಸುವ ಹೋರಾಟವಾಗಬೇಕು. ಸಾರ್ವಜನಿಕರ ಪಾಲ್ಗೊಳ್ಳುವಿಕೆಗೆ ಹೆಚ್ಚಿನ ಒತ್ತನ್ನು ಕೊಡಬೇಕು. ಈ ಸಿಎಎ ಮತ್ತು ಎನ್‌ಆರ್‌ಸಿ ಶಾಸನಗಳು ಕೇವಲ ಮುಸ್ಲಿಂ ಸಮುದಾಯವನ್ನು ಉದ್ದೇಶಿಸಿ ಜಾರಿಗೊಳಿಸಿಲ್ಲ ಜೊತೆಗೆ ದಲಿತರು ಮತ್ತು ಆದಿವಾಸಿಗಳು ಸಹ ಇದರ ಬಲಿಪಶುಗಳು ಎನ್ನುವ ಸತ್ಯವನ್ನು ತರ್ಕಬದ್ದವಾಗಿ, ತಾಂತ್ರಿಕವಾಗಿ, ತಾತ್ವಿಕವಾಗಿ ಮಂಡಿಸಬೇಕು. ಎಲ್ಲಿಯವರೆಗೆ ಈ ಸಿಎಎ ವಿರೋದಿ ಹೋರಾಟ ಮುಸ್ಲಿಂರ ರಕ್ಷಣೆ ಎನ್ನುವ ಒಂದಂಶದ ಕಾರ್ಯಕ್ರಮವಾಗಿರುತ್ತದೆಯೋ ಅಲ್ಲಿಯವರೆಗೂ ಇದು ಸಾರ್ವಜನಿಕರ ಒಳಗೊಳ್ಳುವಿಕೆಯಿಂದಲೂ ವಂಚಿತವಾಗುತ್ತದೆ. ಏಕೆಂದರೆ ಭಾರತದ ಶ್ರೇಣೀಕೃತ ಸಮಾಜವು ಅಲ್ಪಸಂಖ್ಯಾತರ, ತಳ ಸಮುದಾಯಗಳ ಪ್ರತ್ಯೇಕತೆ ಮತ್ತು ತಾರತಮ್ಯ ವಿರೋದಿ ಚಳುವಳಿಗಳಿಗೆ ಸ್ಪಂದಿಸುವುದಿಲ್ಲ ಎನ್ನುವ ಕಟುಸತ್ಯ ಇತಿಹಾಸದಲ್ಲಿಯೂ ದಾಖಲಾಗಿದೆ ಮತ್ತು ವರ್ತಮಾನದಲ್ಲಿಯೂ ಚಾಲ್ತಿಯಲ್ಲಿದೆ. ಈ ವಾಸ್ತವದ ಹಿನ್ನೆಲೆಯಲ್ಲಿ ನಮ್ಮ ಕಾರ್ಯಯೋಜನೆಗಳು ಸಿದ್ದಗೊಳ್ಳಬೇಕು. ನಾವೆಲ್ಲರೂ ‘ಗುಸ್ಪೈತೀಯರು’ ಎನ್ನುವ ಸಂಗತಿ ದಲಿತ-ಹಿಂದುಳಿದ ಸಮುದಾಯಗಳಿಗೆ ಮನವರಿಕೆ ಮಾಡಿಕೊಡಬೇಕು. ಇಲ್ಲಿ ಗಾಂದಿ ಮತ್ತು ಅಂಬೇಡ್ಕರ್ ಮತ್ತೆ ಮತ್ತೆ ಕೇಂದ್ರವಾಗಿ ಮೂಡಿಬರುತ್ತಾರೆ.

(ಲೇಖಕರು ಚಿಂತಕರು, ಬರಹಗಾರರು ಮತ್ತು ಸಮಾನ ಶಿಕ್ಷಣಕ್ಕಾಗಿನ ಹೋರಾಟಗಾರರು. ಲೇಖನದಲ್ಲಿರುವ ಅಭಿಪ್ರಾಯಗಳು ವ್ಯಕ್ತಿಗತವಾದವು)

(ಓದುಗರಿಗೆ ಸೂಚನೆ: ಈ ಲೇಖನದ ನಿರೂಪಣೆ ಡಿ.ಎನ್ ಶಂಕರಬಟ್ ಅವರ ಬಾಶಾ ಪ್ರಯೋಗಕ್ಕೆ ಒಳಪಟ್ಟಿದೆ. ಮಹಾಪ್ರಾಣದ ಬಳಕೆ, ಷ-ಶ ಬಳಕೆ ಸೇರಿದಂತೆ ಕೆಲವು ಹೊಸ ಸಂಗತಿಗಳನ್ನು ಅವರು ಬಲವಾಗಿ ಪ್ರತಿಪಾದಿಸುತ್ತಿದ್ದು, ಕೆಲವು ಲೇಖಕರು ಅದನ್ನು ಅನುಸರಿಸಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ಈ ಲೇಕನದಲ್ಲಿನ ಬಾಶೆಯ ಬಳಕೆಯಲ್ಲಿ ನಿಮಗೆ ಕಂಡುಬರುವ ವ್ಯತ್ಯಾಸವನ್ನು ಫ್ರೂಫ್ ವ್ಯತ್ಯಾಸವೆಂದು ಬಗೆಯಬಾರದೆಂದು ಕೋರುತ್ತೇವೆ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...