Homeಮುಖಪುಟಮರಣೋತ್ತರ ಪುಲಿಟ್ಝರ್‌ ಪ್ರಶಸ್ತಿಗೆ ದಾನಿಶ್‌ ಸಿದ್ದಿಕಿ ಭಾಜನ

ಮರಣೋತ್ತರ ಪುಲಿಟ್ಝರ್‌ ಪ್ರಶಸ್ತಿಗೆ ದಾನಿಶ್‌ ಸಿದ್ದಿಕಿ ಭಾಜನ

- Advertisement -
- Advertisement -

ಪತ್ರಿಕೋದ್ಯಮ, ಪುಸ್ತಕ, ನಾಟಕ ಮತ್ತು ಸಂಗೀತಕ್ಕೆ ಸಂಬಂಧಿಸಿದಂತೆ 2022ರ ಪುಲಿಟ್ಝರ್‌‌ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಸೋಮವಾರ ಪ್ರಕಟಿಸಲಾಗಿದೆ. ಖ್ಯಾತ ಫೋಟೋ ಜರ್ನಲಿಸ್ಟ್‌ ದಾನಿಶ್‌ ಸಿದ್ದಿಕಿ ಅವರಿಗೆ ಮರಣೋತ್ತರ ಪುಲಿಟ್ಝರ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕೋವಿಡ್ ಸಂದರ್ಭದಲ್ಲಿ ಭಾರತದ ಪರಿಸ್ಥಿತಿಯನ್ನು ತೆರೆದಿಟ್ಟ ಫೋಟೋ ಜರ್ನಲಿಸಂಗಾಗಿ ಭಾರತೀಯರಾದ ಅದ್ನಾನ್ ಅಬಿದಿ, ಸನ್ನಾ ಇರ್ಷಾದ್ ಮಟ್ಟೂ, ಅಮಿತ್ ದೇವ್ ಮತ್ತು ತಾಲಿಬಾನ್‌ನ ಸಂಘರ್ಷದ ವೇಳೆ ಕೊಲ್ಲಲ್ಪಟ್ಟ ರಾಯಿಟರ್ಸ್ ಫೋಟೋ ಜರ್ನಲಿಸ್ಟ್‌ ದಾನಿಶ್ ಸಿದ್ದಿಕಿ ಅವರಿಗೆ ಪುಲಿಡ್ಜರ್‌ ಪ್ರಶಸ್ತಿ ನೀಡಲಾಗುತ್ತಿದೆ.

ಅಬಿದಿ ಅವರಿಗೆ ಮೂರನೇ ಬಾರಿಗೆ ಪುಲಿಡ್ಝರ್‌ ಸಂದಿದ್ದರೆ, ಈ ಹಿಂದೆ 2018ರಲ್ಲಿ ಸಿದ್ದಿಕಿ ಕೂಡ ಪ್ರಶಸ್ತಿ ಪಡೆದಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಉಕ್ರೇನ್‌ನ ಪತ್ರಕರ್ತರನ್ನು 2022ರ ಪುಲಿಟ್ಜರ್‌‌ ಪ್ರಶಸ್ತಿಯಲ್ಲಿ ವಿಶೇಷವಾಗಿ ಗುರುತಿಸಲಾಗಿದೆ. ಜನವರಿ 6ರಂದು ಅಮೆರಿಕ ಸಂಸತ್‌ ಮೇಲೆ ಆದ ದಾಳಿ, ಅಫಫಾನಿಸ್ತಾನದ ಬಿಕ್ಕಟ್ಟು ಮತ್ತು ಫ್ಲೋರಿಡಾದಲ್ಲಿ ಸರ್ಫ್‌ಸೈಡ್ ಕಾಂಡೋಮಿನಿಯಂ ಕುಸಿತದ ಕುರಿತ ವರದಿಗಳನ್ನು ತೀರ್ಪುಗಾರರು ಗುರುತಿಸಿದ್ದಾರೆ.

ಪತ್ರಿಕೋದ್ಯಮದಲ್ಲಿ ವಿಭಾಗದಲ್ಲಿ ಪ್ರಶಸ್ತಿ ಪಡೆದವರು

ಸಾರ್ವಜನಿಕ ಸೇವೆ: ಜನವರಿ 6, 2021ರಂದು ವಾಷಿಂಗ್ಟನ್ ಮೇಲಿನ ದಾಳಿಯ ಕುರಿತ ವರದಿಗಾಗಿ ವಾಷಿಂಗ್ಟನ್ ಪೋಸ್ಟ್‌ಗೆ ಪ್ರಶಸ್ತಿ.

ಬ್ರೇಕಿಂಗ್ ನ್ಯೂಸ್ ವರದಿ: ಫ್ಲೋರಿಡಾದಲ್ಲಿ ಸೀಸೈಡ್ ಅಪಾರ್ಟ್‌ಮೆಂಟ್ ಟವರ್‌ಗಳ ಕುಸಿತದ ವರದಿಗಾಗಿ ಮಿಯಾಮಿ ಹೆರಾಲ್ಡ್‌ನ ಸಿಬ್ಬಂದಿಗೆ ಪ್ರಶಸ್ತಿ.

ತನಿಖಾ ವರದಿ: ಟ್ಯಾಂಪಾ ಬೇ ಟೈಮ್ಸ್‌ನ ಕೋರಿ ಜಿ. ಜಾನ್ಸನ್, ರೆಬೆಕಾ ವೂಲಿಂಗ್‌ಟನ್ ಮತ್ತು ಎಲಿ ಮುರ್ರೆ ಅವರು ಫ್ಲೋರಿಡಾದ ಏಕೈಕ ಬ್ಯಾಟರಿ ಮರುಬಳಕೆ ಘಟಕದೊಳಗಿನ ವಿಷಕಾರಿ ಅಪಾಯಗಳನ್ನು ಬಹಿರಂಗಪಡಿಸಿದರು. ಈ ವರದಿಯು ಕಾರ್ಮಿಕರು ಮತ್ತು ಸುತ್ತಲಿನ ನಿವಾಸಿಗಳಿಗೆ ರಕ್ಷಣೆ ನೀಡಲು ಒತ್ತಾಯಿಸಿತು.

ವಿವರಣಾತ್ಮಕ ವರದಿ: ವೆಬ್ ಸ್ಪೇಸ್ ಟೆಲಿಸ್ಕೋಪ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ವರದಿ ಮಾಡಿದ್ದಕ್ಕಾಗಿ ಕ್ವಾಂಟಾ ಮ್ಯಾಗಜೀನ್‌ನ ಸಿಬ್ಬಂದಿಗೆ ಪ್ರಶಸ್ತಿ ನೀಡಲಾಗಿದೆ. ನಟಾಲಿ ವೋಲ್ಚೋವರ್ ಅವರನ್ನು ವಿಶೇಷವಾಗಿ ಗುರುತಿಸಲಾಗಿದೆ.

ಸ್ಥಳೀಯ ವರದಿ: ಬೆಟರ್ ಗವರ್ನಮೆಂಟ್ ಅಸೋಸಿಯೇಷನ್‌ನ ಮ್ಯಾಡಿಸನ್ ಹಾಪ್ಕಿನ್ಸ್ ಮತ್ತು ಚಿಕಾಗೋ ಟ್ರಿಬ್ಯೂನ್‌ನ ಸಿಸಿಲಿಯಾ ರೆಯೆಸ್ ಅವರು ಅಗ್ನಿಶಾಮಕ ಸುರಕ್ಷತೆಯ ಕುರಿತು ವರದಿ ಮಾಡಿದ್ದರು.

ರಾಷ್ಟ್ರೀಯ ವರದಿ: ಟ್ರಾಫಿಕ್ ಸ್ಟಾಪ್‌ಗಳ ಗೊಂದಲದ ಮಾದರಿಯ ಕುರಿತ ವರದಿಗಾಗಿ ದಿ ನ್ಯೂಯಾರ್ಕ್ ಟೈಮ್ಸ್‌ನ ಸಿಬ್ಬಂದಿಗೆ ಪ್ರಶಸ್ತಿ.

ಇದನ್ನೂ ಓದಿರಿ: ತೀವ್ರವಾದ ಪ್ರತಿಭಟನೆ: ಶ್ರೀಲಂಕಾ ಪ್ರಧಾನಿ ರಾಜೀನಾಮೆ

ಅಂತರಾಷ್ಟ್ರೀಯ ವರದಿ: ಇರಾಕ್, ಸಿರಿಯಾ ಮತ್ತು ಅಫ್ಘಾನಿಸ್ತಾನದಲ್ಲಿ ಅಮೇರಿಕನ್ ಮಿಲಿಟರಿ ತೊಡಗಿಸಿಕೊಂಡಿರುವ ವೈಮಾನಿಕ ದಾಳಿಗಳ ಕುರಿತ ವರದಿಗಾಗಿ ನ್ಯೂಯಾರ್ಕ್ ಟೈಮ್ಸ್‌ ಸಿಬ್ಬಂದಿಗೆ ಪ್ರಶಸ್ತಿ.

ಫೀಚರ್‌ ಬರವಣಿಗೆ: ಕುಟುಂಬಗಳ ನಷ್ಟದ ಲೆಕ್ಕಾಚಾರದ ಚಿತ್ರಣಕ್ಕಾಗಿ ದಿ ಅಟ್ಲಾಂಟಿಕ್‌ನ ಜೆನ್ನಿಫರ್ ಸೀನಿಯರ್‌ಗೆ ಪ್ರಶಸ್ತಿ.

ಕಾಮೆಂಟರಿ ವಿಭಾಗದಲ್ಲಿ ಕಾನ್ಸಾಸ್ ಸಿಟಿ ಸ್ಟಾರ್‌ನ ಮೆಲಿಂಡಾ ಹೆನ್ನೆಬರ್ಗರ್, ವಿಮರ್ಶೆಯ ವಿಭಾಗದಲ್ಲಿ ನ್ಯೂಯಾರ್ಕ್ ಟೈಮ್ಸ್‌ನ ಸಲಾಮಿಶಾ ಟಿಲೆಟ್, ಸಂಪಾದಕೀಯ ಬರವಣಿಗೆ ವಿಭಾಗದಲ್ಲಿ ಹೂಸ್ಟನ್ ಕ್ರಾನಿಕಲ್‌ನ ಲಿಸಾ ಫಾಲ್ಕೆನ್‌ಬರ್ಗ್, ಮೈಕೆಲ್ ಲಿಂಡೆನ್‌ಬರ್ಗರ್, ಜೋ ಹೋಲಿ ಮತ್ತು ಲೂಯಿಸ್ ಕರಾಸ್ಕೊಗೆ ನೀಡಲಾಗುತ್ತಿದೆ. ಜೊತೆಗೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಘೋಷಿಸಲಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...