ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಕೊರೊನಾ ವಿರುದ್ದ ತುರ್ತು ಬಳಕೆಗಾಗಿ “2-ಡಿಯೋಕ್ಸಿ-ಡಿ-ಗ್ಲೂಕೋಸ್” (2-ಡಿಜಿ) ಔಷಧಕ್ಕೆ ಶನಿವಾರ ಅನುಮೋದನೆ ನೀಡಿದೆ. ಈ ಆ್ಯಂಟಿ-ಕೊರೊನಾ ಔಷಧವನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದೆ.
ಡಿಆರ್‌ಡಿಒ ಹೇಳಿಕೆಯ ಪ್ರಕಾರ, “2-ಡಿಯೋಕ್ಸಿ-ಡಿ-ಗ್ಲೂಕೋಸ್ (2-ಡಿಜಿ) ಔಷಧವನ್ನು ಡಿಆರ್‌ಡಿಒದ ಪ್ರಯೋಗಾಲಯವಾದ ‘ಇನ್ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸಿನ್ ಮತ್ತು ಅಲೈಡ್ ಸೈನ್ಸಸ್ (INMAS)’ ಜೊತೆಗೆ ಹೈದರಾಬಾದ್‌ನ ಡಾ. ರೆಡ್ಡಿ ಪ್ರಯೋಗಾಲಯದ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ.”
ಇದನ್ನೂ ಓದಿ: ಕೋಮು ಸಾಮರಸ್ಯ ಕದಡುವ ಯತ್ನ: ತೇಜಸ್ವಿ ಸೂರ್ಯ ವಿರುದ್ಧ ದೂರು ದಾಖಲಾಗಲಿದೆಯೇ?
ಈ ಔಷಧವು ಆಸ್ಪತ್ರೆಗೆ ದಾಖಲಾದ ರೋಗಿಗಳು ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಪೂರಕ ಆಮ್ಲಜನಕದ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಎಂದು ಕ್ಲಿನಿಕಲ್ ಪ್ರಯೋಗದ ಫಲಿತಾಂಶಗಳು ತೋರಿಸಿದೆ.
2-ಡಿಜಿ ಔಷಧದೊಂದಿಗೆ ಚಿಕಿತ್ಸೆ ಪಡೆದ ಹೆಚ್ಚಿನ ಕೊರೊನಾ ರೋಗಿಗಳ ಆರ್ಟಿ-ಪಿಸಿಆರ್ ಪರೀಕ್ಷೆಯು ನೆಗೆಟಿವ್ ತೋರಿಸಿದೆ ಎಂದು ತಿಳಿದು ಬಂದಿದೆ. ಪ್ರಸ್ತುತ ಸಾಂಕ್ರಾಮಿಕ ರೋಗದಿಂದಾಗಿ ಬಳಲುತ್ತಿರುವ ಜನರಿಗೆ ಈ ಔಷಧವು ಅಪಾರ ಪ್ರಯೋಜನವನ್ನು ನೀಡುತ್ತದೆ ಎಂದು ಡಿಆರ್‌ಡಿಒ ಹೇಳಿದೆ.
ಸಾಂಕ್ರಾಮಿಕದ ಮೊದಲ ಅಲೆಯ ಏಪ್ರಿಲ್ 2020 ರಲ್ಲಿ, INMAS-ಡಿಆರ್‌ಡಿಒ ವಿಜ್ಞಾನಿಗಳು ಹೈದರಾಬಾದ್‌ನ ಸೆಂಟರ್ ಫಾರ್ ಸೆಲ್ಯುಲಾರ್ ಮತ್ತು ಮಾಲಿಕ್ಯೂಲರ್ ಬಯಾಲಜಿ (ಸಿಸಿಎಂಬಿ) ಸಹಾಯದಿಂದ ಪ್ರಯೋಗಾಲಯ ಪ್ರಯೋಗಗಳನ್ನು ನಡೆಸಿದರು. ಈ ಔಷಧವು `SARS-CoV-2′ ವೈರಸ್ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಈ ವೈರಲ್‌ನ ಬೆಳವಣಿಗೆಯನ್ನು ತಡೆಯುತ್ತದೆ ಎಂದು ಕಂಡುಹಿಡಿದಿದೆ.
ಇದನ್ನೂ ಓದಿ: ಕೊರೊನಾ ಎರಡನೇ ಅಲೆ ಗ್ರಾಮೀಣ ಭಾರತಕ್ಕೆ: ಪ್ರಕರಣಗಳು ಮತ್ತು ಸಾವುಗಳು ನಾಲ್ಕು ಪಟ್ಟು ಹೆಚ್ಚಳ!
ಈ ಫಲಿತಾಂಶಗಳ ಆಧಾರದ ಮೇಲೆ, ಡಿಸಿಜಿಐ-ಸಿಡಿಎಸ್‌ಸಿಓ ‘2-ಡಿಜಿ’ ಯ ಎರಡನೆಯ ಹಂತದ ಕೊರೊನಾ ರೋಗಿಗಳ ಮೇಲಿನ ಕ್ಲಿನಿಕಲ್ ಪ್ರಯೋಗವನ್ನು ಮೇ 2020 ರಲ್ಲಿ ಅನುಮತಿಸಿತು.
ನಂತರ, ಡಿಸಿಜಿಐ 2020 ರ ನವೆಂಬರ್‌ನಲ್ಲಿ ಮೂರನೆ ಹಂತದ ಕ್ಲಿನಿಕಲ್ ಪ್ರಯೋಗಗಳಿಗೆ ಅನುಮತಿ ನೀಡಿತು. ದೆಹಲಿ, ಯುಪಿ, ಪಶ್ಚಿಮ ಬಂಗಾಳ, ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡಿನ 27 ಕೊರೊನಾ ಆಸ್ಪತ್ರೆಗಳಲ್ಲಿ 2020ರ ಡಿಸೆಂಬರ್ ರಿಂದ ಮಾರ್ಚ್ 2021ರ ವರೆಗೆ 220 ರೋಗಿಗಳ ಮೇಲೆ ಮೂರನೆ ಹಂತದ ಕ್ಲಿನಿಕಲ್ ಪ್ರಯೋಗವನ್ನು ನಡೆಸಲಾಯಿತು.
ಈ ಮೂರನೆ ಹಂತದ ಕ್ಲಿನಿಕಲ್ ಪ್ರಯೋಗದ ವಿವರವಾದ ಡೇಟಾವನ್ನು ಡಿಸಿಜಿಐಗೆ ನೀಡಲಾಗಿದೆ.
ಇದನ್ನೂ ಓದಿ: ಮೇ 10 ರಿಂದ ಲಾಕ್‌ಡೌನ್ – ‘ಜನ ಹೊಟ್ಟೆಗೆ ಏನು ತಿಂತಾರೆ?’; ಆಕ್ರೋಶ


