Homeಮುಖಪುಟಆತ್ಮೀಯ ಧರ್ಮೇಂದ್ರ ಪ್ರಧಾನ್ ಅವರೆ, ಐಐಟಿ, ಐಐಎಂಗಳನ್ನು ಒಂದು ಕ್ಷಣ ಮರೆತುಬಿಡಿ, ನಿಜವಾದ ಬಿಕ್ಕಟ್ಟು ಶಾಲಾ...

ಆತ್ಮೀಯ ಧರ್ಮೇಂದ್ರ ಪ್ರಧಾನ್ ಅವರೆ, ಐಐಟಿ, ಐಐಎಂಗಳನ್ನು ಒಂದು ಕ್ಷಣ ಮರೆತುಬಿಡಿ, ನಿಜವಾದ ಬಿಕ್ಕಟ್ಟು ಶಾಲಾ ಶಿಕ್ಷಣದಲ್ಲಿದೆ……

- Advertisement -
- Advertisement -

ನಮಗೆ ಹೊಸ  ಕೇಂದ್ರ ಶಿಕ್ಷಣ ಮಂತ್ರಿ ಬಂದಿದ್ದಾರೆ. ಅದೃಷ್ಟವಶಾತ್,  ಅವರು ಈಗ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಲ್ಲ! ಇನ್ನೂ ಒಳ್ಳೆಯದೆಂದರೆ, ಇನ್ನು ರಮೇಶ್ ಪೋಖ್ರಿಯಾಲ್ ಶಿಕ್ಷಣ ಸಚಿವರಾಗಿ ಮುಂದುವರೆಯುವುದಿಲ್ಲ! ಶಿಕ್ಷಣಕ್ಕೆ ಸಂಬಂಧಿಸಿದಂತೆ ನೈಜ ಸಂಗತಿಗಳ ಬಗ್ಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಇನ್ನು ನಾವು ನಿರೀಕ್ಷೆ ಮಾಡಬಹುದೇ?

ಆರೋಗ್ಯ ಮತ್ತು ಆರ್ಥಿಕತೆಯ ನಂತರ, ಸಾಂಕ್ರಾಮಿಕದಿಂದ ತೀವ್ರ ಸಂಕಷ್ಟಕ್ಕೆ ಈಡಾಗಿರುವುದು ಶಿಕ್ಷಣ. ದುಃಖಕರವೆಂದರೆ, ಶೈಕ್ಷಣಿಕ ಬಿಕ್ಕಟ್ಟಿನಲ್ಲಿ ಗೋಚರಿಸುವ ಆಯಾಮಗಳು ಮಾತ್ರ ರಾಜಕೀಯ ಗಮನ ಸೆಳೆಯುತ್ತವೆ. ಇವುಗಳಲ್ಲಿ ಕೆಲವು ಅಂಶಗಳತ್ತ ಹೊಸ ಶಿಕ್ಷಣ ಸಚಿವರು ಗಮನ ಹರಿಸುತ್ತಿದ್ದಾರೆ ಎಂದು ಮಾಧ್ಯಮ ವರದಿಗಳು ಸೂಚಿಸುತ್ತವೆ. ಮೊದಲ ದಿನವೇ ಅವರು ಕೆಲವು ಪ್ರಮುಖ ಉನ್ನತ ಶಿಕ್ಷಣ ಸಂಸ್ಥೆಗಳ ನಿರ್ದೇಶಕರು ಮತ್ತು ಉಪಕುಲಪತಿಗಳ ಪೂರ್ವ ನಿಯೋಜಿತ ಸಮ್ಮೇಳನದಲ್ಲಿ ಭಾಗವಹಿಸಿದರು. ಜೆಇಇ ಮತ್ತು ನೀಟ್ ಕ್ಯಾಲೆಂಡರ್ ಅವರ ಗಮನ ಸೆಳೆದಿದೆ. ಹೊಸ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸುವ ಬಗ್ಗೆ ಅವರು ಕಡ್ಡಾಯವಾಗಿ ಸದ್ದು ಮಾಡಿದ್ದಾರೆ.

ಆದರೆ ಶಿಕ್ಷಣ ಕ್ಷೇತ್ರದಲ್ಲಿ ನಿಜವಾದ ಬಿಕ್ಕಟ್ಟು ಇರುವುದು ಇಲ್ಲಲ್ಲ. ಇದು ಕಳೆದ ಒಂದು ವರ್ಷದಿಂದ ಶಾಲಾ ಮಕ್ಕಳು ಅನುಭವಿಸಿದ ಅಗಾಧವಾದ, ಆದರೆ ಅದೃಶ್ಯವಾದ ಶೈಕ್ಷಣಿಕ ನಷ್ಟದಲ್ಲಿದೆ. ಇಲ್ಲಿಯವರೆಗೆ ಸಚಿವರು ಅಥವಾ ಸಚಿವಾಲಯ ಕೂಡ ಅದರ ಬಗ್ಗೆ ಮಾತನಾಡಿಲ್ಲ. ಒಂದು ದೃಷ್ಟಿಯಲ್ಲಿ ಸಮಸ್ಯೆ ಹೊಸದಲ್ಲ. ಕಪಿಲ್ ಸಿಬಲ್ ಅವರ ಕಾಲದಿಂದಲೂ ಕೇಂದ್ರ ಶಿಕ್ಷಣ ಸಚಿವರು ‘ಉನ್ನತ ಶಿಕ್ಷಣ’ ಮಂತ್ರಿಗಳಂತೆ ವರ್ತಿಸುತ್ತಿದ್ದಾರೆ. ಐಐಟಿಗಳು, ಐಐಎಂಗಳು, ಕೇಂದ್ರೀಯ ವಿಶ್ವವಿದ್ಯಾಲಯಗಳು, ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳು ಮತ್ತು ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ಮ್ಯಾನೇಜ್‍ಮೆಂಟ್‍ ಅಧ್ಯಯನ ಸಂಸ್ಥೆಗಳ ಪ್ರವೇಶ ಪರೀಕ್ಷೆಗಳ ಗೀಳು ಈಗ ಒಂದು ದಶಕಕ್ಕೂ ಹೆಚ್ಚು ಕಾಲ ಸಚಿವಾಲಯದ ಪ್ರಾಧಾನ್ಯವಾಗಿದೆ.ಇದರೊಂದಿಗೆ ಜಾತ್ಯತೀತತೆ ಅಥವಾ ಭಾರತೀಯಕರಣದ ಬಗ್ಗೆ ಸಾಂದರ್ಭಿಕ ಸೈದ್ಧಾಂತಿಕ ಜಟಾಪಟಿಗಳು ನಡೆಯುತ್ತ ಬಂದಿವೆ. ಈ ಬಾರಿ ಸಮಸ್ಯೆ ಇನ್ನಷ್ಟು ಜಟಿಲವಾಗಿದೆ. ನೀತಿ ನಿರೂಪಣೆಯ ಅಂಚಿನಲ್ಲಿರುವ ಶಾಲಾ ಶಿಕ್ಷಣವು ಸಾರ್ವಜನಿಕ ಚರ್ಚೆಯಿಂದ ಮತ್ತಷ್ಟು ದೂರಕ್ಕೆ ತಳ್ಳಲ್ಪಟ್ಟಿದೆ. ಸಾಂಕ್ರಾಮಿಕವು “ಶಿಕ್ಷಣಿಕ ಹತ್ಯೆಯ” ಪ್ರಕ್ರಿಯೆಯನ್ನು ಹೆಚ್ಚು ಕಾಣುವಂತೆ ಮಾಡಿದೆ, ಆದರೆ ಈ ಮೊದಲು ನಿಧಾನವಾಗಿದ್ದರೂ ಶೈಕ್ಷಣಿಕ ಅವಕಾಶಗಳ ಹತ್ಯೆ, ಸ್ವಲ್ಪ ಸಮಯದಿಂದ ನಡೆಯುತ್ತಿದೆ. ಇದು ಹೊಸ ಸಚಿವರ ಗಮನವನ್ನು ಸೆಳೆಯಬೇಕು.

ಹೊಸ ಸಚಿವರಿಗೆ ಓದುವುದಕ್ಕೆ ಶಿಫಾರಸು

ಹೊಸ ಸಚಿವ ಧರ್ಮೇಂದ್ರ ಪ್ರಧಾನ್ ಇತ್ತೀಚಿನ ಕೆಲವು ಮಾಧ್ಯಮ ವರದಿಗಳನ್ನು ಓದುವ ಮೂಲಕ ಪ್ರಾರಂಭಿಸಬಹುದು. ಹರಿಯಾಣದ ವಿದ್ಯಮಾನದ ಪ್ರಕಾರ, ಈ ವರ್ಷ ಖಾಸಗಿ ಶಾಲೆಗಳಿಗೆ ದಾಖಲಾದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಆತಂಕಕಾರಿ ಕುಸಿತವನ್ನು ತೋರಿಸುತ್ತಿದೆ. ಈ ವರ್ಷ 12.5 ಲಕ್ಷ ವಿದ್ಯಾರ್ಥಿಗಳು ಖಾಸಗಿ ಶಾಲೆಗಳಿಗೆ ದಾಖಲಾಗಲಿಲ್ಲ, ಇದು ಕುಸಿತ ಶೇಕಡಾ 40ಕ್ಕಿಂತಲೂ ಹೆಚ್ಚಿದೆ. ಈ ಸಂಖ್ಯೆ ಕಳೆದ ವರ್ಷ 29.8 ಲಕ್ಷದಿಂದ ಈ ವರ್ಷ 17.3 ಲಕ್ಷಕ್ಕೆ ಇಳಿದಿದೆ. ಈ ಎಲ್ಲ ಅಥವಾ ಹೆಚ್ಚಿನ ವಿದ್ಯಾರ್ಥಿಗಳು ಶಾಲಾ ಶಿಕ್ಷಣದಿಂದ ಪೂರ್ತಿಯಾಗಿ ಹೊರಗುಳಿದಿದ್ದಾರೆ ಎಂದು ನಾವು ಭಾವಿಸಬಾರದು. ಎಲ್ಲಾ ಸಂಭವನೀಯತೆಗಳಲ್ಲಿ, ಖಾಸಗಿ ಶಾಲೆಗಳ ಹೆಚ್ಚಿನ ಶುಲ್ಕವನ್ನು ತಪ್ಪಿಸಲು ಈ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಸರ್ಕಾರಿ ಶಾಲೆಗಳಿಗೆ ಸ್ಥಳಾಂತರಗೊಂಡಿದ್ದಾರೆ. ಆದರೆ ಈ ಸಂಖ್ಯೆಯ ಒಂದು ಸಣ್ಣ ಭಾಗ, ಹೆಚ್ಚಾಗಿ ಹುಡುಗಿಯರು ಯಾವುದೇ ಶಾಲೆಗೆ ಹಿಂತಿರುಗುವುದಿಲ್ಲ ಎಂದು ಭಾವಿಸುವುದು ಸಮಂಜಸವಾಗಿದೆ. ಕುಟುಂಬ ಆದಾಯದಲ್ಲಿ ಆಗಿರುವ ತೀವ್ರ ಕುಸಿತದಿಂದ, ಸರ್ಕಾರಿ ಶಾಲೆಗೆ ಸೇರಿದ ಅನೇಕ ಹುಡುಗರನ್ನು ಕಾರ್ಮಿಕ ವಲಯಕ್ಕೆ ಪ್ರವೇಶಿಸುವಂತೆ ಮತ್ತು ಅನೇಕ ಹುಡುಗಿಯರು ಮನೆಗೆಲಸಕ್ಕೆ ಕಳಿಸುವಂತೆ ಮಾಡುವುದು ನಿಜ. ಅನೇಕ ಇತರ ಮಾಧ್ಯಮ ವರದಿಗಳು ಈ ವಿದ್ಯಮಾನವನ್ನು ದೃಢಿಪಡಿಸುತ್ತವೆ.

ಅವರಿಗೆ ಹೆಚ್ಚಿನ ಸಮಯವಿದ್ದರೆ, ಸಚಿವರು 2020ರ ವಾರ್ಷಿಕ ಶಿಕ್ಷಣ ಸ್ಥಿತಿ ವರದಿಯನ್ನು ಓದಬಹುದು. ಗ್ರಾಮೀಣ ಭಾರತದಲ್ಲಿ ಶಾಲಾ ಶಿಕ್ಷಣದ ಗುಣಮಟ್ಟದ ಕುರಿತಾದ ಈ ವರದಿಯು 2020ರಲ್ಲಿ ಕೋವಿಡ್‌ ನಿಂದಾಗಿರುವ ಸಮಸ್ಯೆ ಮತ್ತು ಮೊದಲ ಕೋವಿಡ್ ಅಲೆಯ ಲಾಕ್ಡೌನ್ ನಿಂದ ಶೈಕ್ಷಣಿಕ ನಷ್ಟದ ವ್ಯಾಪ್ತಿಯನ್ನು ದಾಖಲಿಸಿದೆ. ಆ ವರ್ಷದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಪಠ್ಯಪುಸ್ತಕಗಳನ್ನು ಹೊಂದಿದ್ದರೂ, ಅವರ ಶಿಕ್ಷಣಕ್ಕೆ ಸಿಕ್ಕ ಬೆಂಬಲ ಅತೀವ ಕಡಿಮೆಯಿತ್ತು ಎಂದು ಅದು ದಾಖಲಿಸುತ್ತದೆ. ಗ್ರಾಮೀಣ ಭಾರತದಲ್ಲಿ ಸ್ಮಾರ್ಟ್‍ಫೋನ್‌ಗಳು ತಮ್ಮ ವ್ಯಾಪ್ತಿಯನ್ನು ಹರಡಿಕೊಂಡಿವೆಯಾದರೂ, ಗ್ರಾಮೀಣ ಭಾರತದಲ್ಲಿ ಶಾಲೆಗೆ ಹೋಗುವ ಮಕ್ಕಳ ಶೇಕಡಾ 42ರಷ್ಟು ಕುಟುಂಬಗಳು ಇನ್ನೂ ಸ್ಮಾರ್ಟ್‍ಫೋನ್‍ ಹೊಂದಿಲ್ಲ. ಈ ಪ್ರಮಾಣವು ಬಡ ಕುಟುಂಬಗಳಿಗೆ ಶೇಕಡಾ 55 ರಷ್ಟಿತ್ತು. ಅವರು ಎಲೆಕ್ಟ್ರಾನಿಕ್ ಸಾಧನವನ್ನು ಹೊಂದಿದ್ದಾರೆಂದು ಊಹಿಸಿದರೆ, ಓದುವ ಸಾಮಗ್ರಿಗಳ ಲಭ್ಯತೆಯ ಸಮಸ್ಯೆ ಕೂಡ ಇರುತ್ತದೆ. ಕೇವಲ 35 ಪ್ರತಿಶತದಷ್ಟು ವಿದ್ಯಾರ್ಥಿಗಳು ತಮ್ಮ ಶಾಲೆಗಳಿಂದ ಯಾವುದೇ ಓದುವ ಅಥವಾ ಬೆಂಬಲ ಸಾಮಗ್ರಿಗಳನ್ನು ಪಡೆದರು. ಖಾಸಗಿ ಶಾಲೆಗಳಿಗೆ ಈ ಪ್ರಮಾಣವು ಶೇಕಡಾ 40ರಷ್ಟಿತ್ತು. ಹೆಚ್ಚುವರಿ ವಸ್ತುಗಳನ್ನು ಬಹುತೇಕ ಸಂಪೂರ್ಣವಾಗಿ ವಾಟ್ಸಾಪ್ ಮೂಲಕ ತಲುಪಿಸಲಾಯಿತು. ಆದ್ದರಿಂದ, ‘ವಾಟ್ಸಾಪ್ ವಿಶ್ವವಿದ್ಯಾಲಯ’ದಿಂದ, ನಾವು ಈಗ ‘ವಾಟ್ಸಾಪ್ ಶಾಲೆಗಳಿಗೆ’ ತೆರಳಿದ್ದೇವೆ.

ಆದ್ಯತೆಯ ವಿಷಯಗಳು ಯಾವುವು?

ಅನೇಕ ಇತರ ವರದಿಗಳು ಶಾಲಾ ಶಿಕ್ಷಣದ ಮೇಲೆ ಸಾಂಕ್ರಾಮಿಕ ರೋಗದ ಇತರ ವ್ಯಾಪಕ ಪರಿಣಾಮಗಳನ್ನು ದೃಢಿಪಡಿಸಿವೆ: ಶಾಲೆಗಳಿಂದ ಡ್ರಾಪ್‍ಔಟ್‍ ಸಂಖ್ಯೆ ಹೆಚ್ಚಿರುವುದು, ಖಾಸಗಿಯಿಂದ ಸರ್ಕಾರಿ ಶಾಲೆಗಳಿಗೆ ಸೇರುತ್ತಿರುವುದು, ಹುಡುಗರು ಬಾಲಕಾರ್ಮಿಕರಾಗುವುದು ಮತ್ತು ಹುಡುಗಿಯರು ಮನೆಗೆಲಸಕ್ಕೆ ಅಂಟಿಕೊಳ್ಳುವುದು ಹೆಚ್ಚುತ್ತಿದೆ ಎಂದು ವರದಿಗಳು ಹೇಳುತ್ತಿವೆ. ಮಧ್ಯಾಹ್ನದ ಬಿಸಿಯೂಟ ಯೋಜನೆ ಸ್ಥಗಿತಗೊಂಡ ಕಾರಣಕ್ಕೆ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಿದೆ ಮತ್ತು ಆರೋಗ್ಯದಲ್ಲಿ ಅಡ್ಡಪರಿಣಾಮ ಬೀರಿದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಕಳೆದ ಒಂದೂವರೆ ದಶಕ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯಲ್ಲಿ ಉಂಟಾದ ಶಾಲಾ ಶಿಕ್ಷಣದ ಪ್ರಗತಿ ಕಳೆದ ಒಂದೂವರೆ ವರ್ಷಗಳಲ್ಲಿ ನಾಶವಾಗಿವೆ. ಇದು ಕೇವಲ ಶಿಕ್ಷಣದ ಗುಣಮಟ್ಟದಲ್ಲಿನ ನಷ್ಟವಲ್ಲ, ಇದು ನಮ್ಮ ಕಾರ್ಮಿಕ ಬಲದ ಕೌಶಲ್ಯದ ನಷ್ಟವೂ ಆಗಿದೆ. ಶಿಕ್ಷಣ ಸಚಿವರು ಕೌಶಲ್ಯ ಅಭಿವೃದ್ಧಿಯ ಖಾತೆ ಕೂಡ  ಹೊಂದಿದ್ದರಿಂದ ಅವರು ಇದರ ಬಗ್ಗೆ ಕಾಳಜಿ ವಹಿಸಬೇಕು.

ಅವರಿಗೆ ಉನ್ನತ ಶಿಕ್ಷಣದಲ್ಲಿನ ಸವಾಲು ವಿಭಿನ್ನವಾಗಿ ಕಾಣಿಸಬಹುದು. ಆದರೆ ಇದು ಕೂಡ ಒಂದೇ ರೀತಿಯ ಗುಣಲಕ್ಷಣಗಳನ್ನು ಹೊಂದಿದೆ: ಕಾಲೇಜು ಅಥವಾ ವಿಶ್ವವಿದ್ಯಾಲಯದಿಂದ ಹೆಚ್ಚಿನ ಡ್ರಾಪ್ ಔಟ್‍, ಶೈಕ್ಷಣಿಕ ಸಾಮಗ್ರಿ ಅಥವಾ ಸಂಪನ್ಮೂಲುಗಳ ಲಭ್ಯತೆಯ ಕೊರತೆ (ವಿಶೇಷವಾಗಿ ಅನಾನುಕೂಲಕರ ಹಾಗೂ ತಳಮಟ್ಟದ

ಹಿನ್ನೆಲೆಯ ವಿದ್ಯಾರ್ಥಿಗಳಿಗೆ) ಮತ್ತು ಶಿಕ್ಷಕರ ಜೊತೆಗಿನ ಸಂಪರ್ಕವನ್ನು ಕಡಿಮೆ ಮಾಡಿರುವುದು.

 ಶಿಕ್ಷಣ ಸಚಿವರಿಗೆ ನನ್ನ ಮನವಿ: ಹೊಸ ಶಿಕ್ಷಣ ನೀತಿಯ ಬಗ್ಗೆ ನೀವು ಉತ್ಸುಕರಾಗಿದ್ದೀರಿ ಎಂದು ನನಗೆ ಅನಿಸಿದೆ. ಪಠ್ಯಕ್ರಮದಲ್ಲಿ ಕೇಸರಿ ಸಿದ್ಧಾಂತವನ್ನು ಹೆಚ್ಚಿಸಲು ಒತ್ತಡವಿರಬಹುದು ಎಂದು ನಾನು ಅರ್ಥ ಮಾಡಿಕೊಂಡಿದ್ದೇನೆ. ಮಧ್ಯಮ ವರ್ಗದ ಮಕ್ಕಳು ಹೆಚ್ಚು ಹೂಡಿಕೆ ಮಾಡಿರುವ ಪ್ರವೇಶ ಪರೀಕ್ಷೆಗಳನ್ನು ನಿರ್ವಹಿಸಲು ನಿಮ್ಮ ಮೇಲಿನ ಒತ್ತಡವನ್ನು ನಾನು ಊಹಿಸಬಲ್ಲೆ. ನೀವು ಮಾಡಲೇಬೇಕಿರುವ ಇವುಗಳಿಗೆ ಗಮನಹರಿಸಿ, ಆದರೆ ದಯವಿಟ್ಟು ನೀವು ಈ ಎಲ್ಲವನ್ನು ಹಿಂದಕ್ಕೆ ತಳ್ಳಿ  ಶಾಲಾ ಮಕ್ಕಳ ಶಿಕ್ಷಣದ ನೈಜ ಮತ್ತು ಮೂಕ ಬಿಕ್ಕಟ್ಟನ್ನು ನಿವಾರಿಸುವುದಕ್ಕೆ ಕೆಲಸ ಮಾಡಬಹುದೇ?

(ಯೋಗೇಂದ್ರ ಯಾದವ್ ಸ್ವರಾಜ್ ಭಾರತದ ರಾಷ್ಟ್ರೀಯ ಸಂಚಾಲಕರು)

ಕೃಪೆ: ದ ಪ್ರಿಂಟ್

ಕನ್ನಡಕ್ಕೆ: ಪಿ ಮಲ್ಲನಗೌಡರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಶಿಕ್ಷಣದಿಂದ ವಂಚಿತರನ್ನಾಗಿಸುದು ಇವರ ಮೂಲ ಉದ್ದೇಶವಾಗಿತ್ತು.

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...