Homeಚಳವಳಿ’ಬಾಯ್ಕಟ್‌ ಮತ್ತು ಟ್ರೋಲ್‌’ ಹೊರತಾಗಿಯೂ ಲಾಭ ಗಳಿಸಿದ ದೀಪಿಕಾರ ಚಪಾಕ್...

’ಬಾಯ್ಕಟ್‌ ಮತ್ತು ಟ್ರೋಲ್‌’ ಹೊರತಾಗಿಯೂ ಲಾಭ ಗಳಿಸಿದ ದೀಪಿಕಾರ ಚಪಾಕ್…

ಚಪಾಕ್‌ ಕಮರ್ಷಿಯಲ್‌ ಚಿತ್ರವಲ್ಲ. ಹಾಗಾಗಿ ಇದನ್ನು ಕೇವಲ 1700 ಪರದೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಆದರೂ ಅದು ಹೂಡಿದ ಬಂಡವಾಳದ ಡಬಲ್‌ ಗಳಿಸಿದೆ.

- Advertisement -
- Advertisement -

ಖ್ಯಾತ ಬಾಲಿವುಡ್‌ ತಾರೆ ದೀಪಿಕಾ ಪಡುಕೋಣೆ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯಕ್ಕೆ ಹೆಜ್ಜೆ ಹಾಕಿ ಹಲ್ಲೆಗೊಳಗಾದ ಜೆಎನ್‌ಯುಎಸ್‌ಯು ಅಧ್ಯಕ್ಷೆ ಆಯಿಶೆ ಘೋಷ್‌ ಪರ ದೃಢವಾಗಿ ನಿಂತರು. ಆ ಮೂಲಕ ಬಹಳಷ್ಟು ಜನ ಅವರ ದಿಟ್ಟತವನ್ನು ಮೆಚ್ಚಿಕೊಂಡರು.

ಆದರೆ ಅದನ್ನು ಸಹಿಸದ ಹಲವಾರು ಬಲಪಂಥೀಯರು ಅವರನ್ನು ಟ್ರೋಲ್‌ ಮಾಡಿದ್ದಲ್ಲದೇ ಅವರ ಚಪಾಕ್‌ ಸಿನಿಮಾವನ್ನು ವಿಕ್ಷಸಬೇಡಿ ಎಂದು ಕರೆನೀಡಿದರು. ಆ ಚಿತ್ರದ ಕುರಿತು ಸುಳ್ಳು ಸುದ್ದಿಗಳನ್ನು ಹರಡಿದರು. ಚಿತ್ರದಲ್ಲಿ ಆರೋಪಿಯ ಹೆಸರನ್ನು ಮುಸ್ಲಿಂ ಬದಲಿಗೆ ಹಿಂದೂವನ್ನಾಗಿ ತಿರುಚಿದ್ದಾರೆ ಎಂದು ಸುಳ್ಳು ಹರಡಿದರು. ಚಪಾಕ್‌ ಚಿತ್ರದ ವಿರುದ್ಧ ಕೆಟ್ಟ ಭಾವನೆ ಮೂಡುವಂತೆ ಏನೆಲ್ಲಾ ಮಾಡಬಹುದು ಎಲ್ಲಾ ಮಾಡಿದರು. ಇಷ್ಟೆಲ್ಲದರ ಹೊರತಾಗಿಯೂ ಟ್ರೋಲ್‌ ಮಾಡಿದವರಿಗೆ ಕಹಿ ಸುದ್ದಿಯೆಂದರೆ ಚಪಾಕ್‌ ಸಿನಿಮಾ ಲಾಭ ಗಳಿಸಿದ್ದು ಅದೇ ದಾರಿಯಲ್ಲಿ ಮುಂದುವರೆದಿದೆ.

ಮೇಘನಾ ಗುಲ್ಜಾರ್ ನಿದೇರ್ಶನ ಮಾಡಿರುವ ಈ ಚಿತ್ರಕ್ಕೆ ಫಾಕ್ಸ್ ಸ್ಟಾರ್ ಸ್ಟುಡಿಯೋಸ್, ದೀಪಿಕಾ ಪಡುಕೋಣೆ, ಗೋವಂದ್ ಸಿಂಗ್ ಸಂಧು ಮತ್ತು ಮೇಘನಾ ಗುಲ್ಜಾರ್ ಹಣ ಹೂಡಿಕೆ ಮಾಡಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ವಿಕ್ರಂತ್ ಮಾಸ್ಸಿ ನಟಿಸಿರುವ ಚಪಾಕ್‌ ಚಿತ್ರವು ಮಾಧ್ಯಮಗಳು ಹೇಳುವಂತೆ ನಷ್ಟ ಅನುಭವಿಸಿಲ್ಲ ಬದಲಿಗೆ ಲಾಭದ ಹಾದಿಯಲ್ಲಿದೆ. ಹೇಗೆ ಇಲ್ಲಿದೆ ನೋಡಿ ಡಿಟೈಲ್ಸ್…

ಚಪಾಕ್ ಮಧ್ಯಮ ಬಜೆಟ್ ಚಿತ್ರವಾಗಿದ್ದು, ಮುದ್ರಣಗಳ ವೆಚ್ಚ ಮತ್ತು ಪ್ರಚಾರ ಸೇರಿದಂತೆ ಒಟ್ಟು 35 ಕೋಟಿ ರೂಗಳಲ್ಲಿ ತಯಾರಾಗಿದೆ. ಜನವರಿ 10ರಂದು ಬಿಡುಗಡೆಯಾದ ಸಿನಿಮಾ ಸೋಮವಾರದವರೆಗೆ (11 ದಿನಗಳಲ್ಲಿ) ಭಾರತದಲ್ಲಿ ಕೇವಲ ಟಿಕೆಟ್ ಮಾರಾಟದಿಂದಲೇ 32.48 ಕೋಟಿ ರೂ ಗಳಿಸಿದೆ. ಇನ್ನು ಈ ಚಿತ್ರವು ತನ್ನ ಸಂಗೀತ ಹಕ್ಕುಗಳನ್ನು 3 ಕೋಟಿ ರೂ.ಗೆ ಮತ್ತು ಅದರ ಡಿಜಿಟಲ್ + ಸ್ಯಾಟಲೈಟ್‌ ರೈಟ್ಸ್‌ ಅನ್ನು 23 ಕೋಟಿ ರೂ.ಗೆ ಮಾರಾಟ ಮಾಡಿದೆ. ಹಾಗಾಗಿ, ಚಿತ್ರ ಈಗಾಗಲೇ 58.48 ಕೋಟಿ ರೂ. ಗಳಿಸಿದಂತಾಗಿದೆ.

ಅಷ್ಟೆ ಅಲ್ಲದೇ, ವಿದೇಶದಲ್ಲಿ ಟಿಕೆಟ್ ಮಾರಾಟದಿಂದ ಚಪಾಕ್ 13 ಕೋಟಿ ರೂಗಳನ್ನು ಗಳಿಸಿದ್ದು ಅದನ್ನು ಸೇರಿಸಿದರೆ ಚಿತ್ರದ ಒಟ್ಟು ಗಳಿಕೆ 70 ಕೋಟಿ  ದಾಟುತ್ತದೆ. ಅಂದರೆ ನಿರ್ಮಾಣಕ್ಕೆ ಹಾಕಿದ ಎರಡು ಪಟ್ಟು ದುಡ್ಡನ್ನು ಕೇವಲ 11ದಿನಗಳಲ್ಲಿ ಗಳಿಸಿದ್ದು ಇನ್ನು ನೂರಾರು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದ್ದು ಮತ್ತಷ್ಟು ಲಾಭ ಗಳಿಸುವ ನಿರೀಕ್ಷೆಯಿದೆ. ಆದರೆ ಕೇವಲ ಹಣಗಳಿಕೆಯ ಸಿನಿಮಾದ ಯಶಸ್ಸನ್ನು ಸಾರುವುದಿಲ್ಲ ಅಲ್ಲವೇ? ಚಪಾಕ್‌ ಬಗ್ಗೆ ಲಕ್ಷಾಂತರು ಜನರು ಮೆಚ್ಚುಗೆಯ ಮಾತುಗಳನ್ನಾಡಿ ದೀಪಿಕಾಳ ಪ್ರಯತ್ನಕ್ಕೆ ಶಹಬ್ಬಾಶ್‌ ಹೇಳಿದ್ದಾರೆ.

ಇದು ದೀಪಿಕಾ ಅವರ ಹಿಂದಿನ ಚಿತ್ರ ಪದ್ಮಾವತ್ ರೀತಿಯ ಭಾರೀ ಹಣವನ್ನು ಗಳಿಸಿಲ್ಲ. ಆದರೆ ರಣವೀರ್ ಸಿಂಗ್ ಮತ್ತು ಶಾಹಿದ್ ಕಪೂರ್ ಜೊತೆಯಾಗಿ ನಟಿಸಿದ ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ಪದ್ಮಾವತ್‌ ಚಿತ್ರವನ್ನು ಬರೋಬ್ಬರಿ 200 ಕೋಟಿ ರೂ.ಗಳ ಬಜೆಟ್‌ನಲ್ಲಿ ನಿರ್ಮಿಸಲಾಗಿತ್ತು ಎಂಬುದನ್ನು ನಾವು ಮರೆಯಬಾರದು. ಆ ಚಿತ್ರ ಭಾರತವೊಂದರಲ್ಲಿಯೇ 3500 ಪರದೆಗಳಲ್ಲಿ ಬಿಡುಗಡೆಯಾಗಿತ್ತು. ಆದರೆ ಚಪಾಕ್‌ ಕಮರ್ಷಿಯಲ್‌ ಚಿತ್ರವಲ್ಲ. ಹಾಗಾಗಿ ಇದನ್ನು ಕೇವಲ 1700 ಪರದೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಆದರೂ ಅದು ಹೂಡಿದ ಬಂಡವಾಳದ ಡಬಲ್‌ ಗಳಿಸಿದೆ.

ಟ್ವಿಟ್ಟರ್‌ನಲ್ಲಿ ಬಾಯ್ಕಟ್‌ ಹೇಳಿ ಕೂಡಲೇ ಜನ ಅದನ್ನು ತಿರಸ್ಕರಿಸುತ್ತಾರೆ ಎಂಬುದು ಸುಳ್ಳು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಈ ಹಿಂದೆ ಇದೇ ರೀತಿ ಬಾಯ್ಕಟ್‌ಗೆ ಗುರಿಯಾಗಿದ್ದ ಪದ್ಮಾವತ್ (₹ 580 ಕೋಟಿ),  ಪಿಕೆ (₹ 850 ಕೋಟಿ), ದಂಗಲ್ (Cr 2000 ಕೋಟಿ), ವೀರ್‌ ದಿ ವೆಡ್ಡಿಂಗ್ (₹ 140 ಕೋಟಿ) ಚಿತ್ರಗಳು ಭಾರೀ ಲಾಭ ಮಾಡಿದ್ದವು ಎಂಬುದನ್ನು ನಾವು ಮರೆಯಬಾರದು.

ಅಲ್ಲದೆ, ಕೇಳಬೇಕಾದ ಪ್ರಶ್ನೆಯೆಂದರೆ, ಚಪಾಕ್‌ ವಿಷಯದಲ್ಲಿ ಏಕೆ ಟ್ರೋಲ್‌‌ ಮಾಡಲಾಯಿತು? ಹಲ್ಲೆಗೊಳಗಾದ ವಿದ್ಯಾರ್ಥಿಗಳ ಪರ ನಿಂತಿದ್ದು ದೀಪಿಕಾರವರ ವಯಕ್ತಿಕ ಹಕ್ಕು. ಅದು ಬಿಟ್ಟು ಚಿತ್ರದ ಬಗ್ಗೆ ಆಲೋಚಿಸಿದರೆ ಅದು ಮಹಿಳೆಯರ ಮೇಲೆ ಆಸಿಡ್ ದಾಳಿಯನ್ನು ಎತ್ತಿ ತೋರಿಸುವ ಸಾಮಾಜಿಕ ವಿಷಯದ ಕುರಿತ ಚಲನಚಿತ್ರವಾಗಿದೆ. ಆಸಿಡ್‌ ದಾಳಿಯಂತಹ ಭೀಕರ ಅಪರಾಧ ಮತ್ತು ಅದರ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಚಿತ್ರವಾಗಿದೆ. ಆಸಿಡ್‌ ಮಾರಾಟದ ನಿಷೇಧವನ್ನು ಅಥವಾ ಸುಲಭವಾಗಿ ಲಭ್ಯವಾಗಬಾರದೆಂದು ಪ್ರತಿಪಾದಿಸುವ ಚಿತ್ರವನ್ನು ವಿರೋಧಿಸುವ ಮೂಲಕ ನೀವು ಯಾರ ಪರ ನಿಲ್ಲುತ್ತಿದ್ದೀರಿ? ಟ್ರೋಲ್‌ ಮಾಡಿದವರು ದಯವಿಟ್ಟು ಆಲೋಚಿಸಿ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...