Homeಚಳವಳಿವರವರ ರಾವ್‌ ಕೃತಿ ಪ್ರಕಟಣೆ ವಿಳಂಬ: ಸರ್ಕಾರಕ್ಕೆ ಹೆದರಿತೇ ಪೆಂಗ್ವಿನ್‌ ಪ್ರಕಾಶನ ಸಂಸ್ಥೆ?

ವರವರ ರಾವ್‌ ಕೃತಿ ಪ್ರಕಟಣೆ ವಿಳಂಬ: ಸರ್ಕಾರಕ್ಕೆ ಹೆದರಿತೇ ಪೆಂಗ್ವಿನ್‌ ಪ್ರಕಾಶನ ಸಂಸ್ಥೆ?

ವರವರ ರಾವ್ ಅವರ ಕೆಲವು ಕವಿತೆಗಳನ್ನು ಪೆಂಗ್ವಿನ್ ಸಂಸ್ಥೆ ಸೆನ್ಸಾರ್‌ ಮಾಡಲು ಮುಂದಾಗಿದೆ ಎಂದು ದಿ ಕ್ವಿಂಟ್ ಜಾಲತಾಣ ವರದಿ ಮಾಡಿದೆ.

- Advertisement -
- Advertisement -

ತೆಲುಗು ಕವಿ ವರವರ ರಾವ್ ಅವರು ಕವಿತೆಗಳನ್ನು ಬರೆಯಲು ಪ್ರಾರಂಭಿಸಿದಾಗ ಅವರಿಗೆ 20 ವರ್ಷ. ಆರು ದಶಕಗಳ ನಂತರ, 81 ವರ್ಷ ವಯಸ್ಸಿನ ವರವರ ರಾವ್‌ ಅವರ ಕವನಗಳನ್ನು ಪ್ರಕಟಿಸಲು ಮುಂದಾಗಿದ್ದ ಪೆಂಗ್ವಿನ್ ರಾಂಡಮ್‌ ಹೌಸ್‌ ತನ್ನ ಯೋಜನೆಯನ್ನು ಸ್ಥಗಿತಗೊಳಿಸಿದೆ. ವರವರರಾವ್ ಅವರ ವಿರುದ್ಧ ಹೊರಿಸಲಾದ “ಆರೋಪಗಳ ಸ್ವರೂಪ”ದ ಕುರಿತು ಕಳವಳವನ್ನು ಪೆಂಗ್ವಿನ್‌ ವ್ಯಕ್ತಪಡಿಸಿರುವುದಾಗಿ ‘ದಿ ಕ್ವಿಂಟ್’ ವರದಿ ಮಾಡಿದೆ.

ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ರಾವ್ ಅವರನ್ನು ನವೆಂಬರ್ 2018ರಲ್ಲಿ ಬಂಧಿಸಲಾಯಿತು. ಈಗ ವೈದ್ಯಕೀಯ ಜಾಮೀನಿನ ಮೇಲೆ ಮುಂಬೈನಲ್ಲಿ ವಾಸವಿದ್ದಾರೆ.

65 ಕವಿತೆಗಳನ್ನು ಹೊಂದಿರುವ ‘ವರವರ ರಾವ್: ದಿ ರೆವಲ್ಯೂಷನರಿ ಪೊಯೆಟ್’ ಹೆಸರಲ್ಲಿ ಕೃತಿಯನ್ನು ಜೂನ್ ಮತ್ತು ಜುಲೈ 2021ರ ನಡುವೆ ಪ್ರಕಟಿಸಲು ನಿರ್ಧರಿಸಲಾಗಿತ್ತು. ಆದರೆ ಜುಲೈ 2021ರ ವೇಳೆಗೆ, ಪೆಂಗ್ವಿನ್ ತನ್ನ ಕಾನೂನು ತಂಡದ ಶಿಫಾರಸಿನ ಮೇರೆಗೆ, ‘ನ್ಯಾಯಾಲಯವು ಪ್ರಕರಣವನ್ನು ಪರಿಶೀಲಿಸಿದ ನಂತರವೇ ಪುಸ್ತಕ ಪ್ರಕಟಿಸಲು ನಿರ್ಧರಿಸಿದೆ’ ಎಂದು ತಿಳಿದುಬಂದಿದೆ.

ಪ್ರಕಾಶಕರು ಈ ವಿಷಯದ ಬಗ್ಗೆ ನಂತರದಲ್ಲಿ ಕಾನೂನು ಅಭಿಪ್ರಾಯವನ್ನು ತೆಗೆದುಕೊಳ್ಳಬೇಕಾಗಿದ್ದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ ಎಂದು ಪೆಂಗ್ವಿನ್‌ನ ವಿಶ್ವಾಸಾರ್ಹ ಮೂಲಗಳು ತಿಳಿಸಿರುವುದಾಗಿ ‘ದಿ ಕ್ವಿಂಟ್‌’ ಜಾಲತಾಣ ವರದಿ ಮಾಡಿದೆ.

ಇದನ್ನೂ ಓದಿರಿ: ಮತ್ತೆ ರೈತ ಮಹಾಪಂಚಾಯತ್‌ಗಳ ಆರಂಭ: ಮುಂಬೈ, ಲಕ್ನೋಗಳಲ್ಲಿ ಅಬ್ಬರಿಸಲಿರುವ ರೈತರು

ಕೋರೆಗಾಂವ್ ಕದನದ ದ್ವಿಶತಮಾನೋತ್ಸವ ಸ್ಮರಣಾರ್ಥ ಕಾರ್ಯಕ್ರಮದಂದು ನಡೆದ ಹಿಂಸಾಚಾರಕ್ಕೆ ಎಡಪಂಥೀಯ ಸಂಘಟನೆಗಳು ಮತ್ತು ಕಾರ್ಯಕರ್ತರು ಕಾರಣರು ಎಂದು ಆರೋಪಿಸಿ ಪ್ರಕರಣ ದಾಖಲಿಸಲಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪ್ರಕರಣದ ತನಿಖೆ ನಡೆಸುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನವು 2018 ಮತ್ತು 2019ರ ಅವಧಿಯಲ್ಲಿ ನಡೆದಿದ್ದರೂ, ವಿಚಾರಣೆ ಯಾವಾಗ ಪ್ರಾರಂಭವಾಗುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಪೆಂಗ್ವಿನ್ ತನ್ನ ಕಾನೂನು ತಂಡದ ಶಿಫಾರಸಿಗೆ ಅಂಟಿಕೊಂಡರೆ ರಾವ್ ಅವರ ಪುಸ್ತಕದ ಪ್ರಕಟಣೆಯು ಅನಿರ್ದಿಷ್ಟವಾಗಿ ಸ್ಥಗಿತಗೊಳ್ಳಬಹುದು ಎಂಬುದು ಸ್ಪಷ್ಟ. ಇದರ ನಡುವೆ ಪ್ರಕಟಣೆಯನ್ನು ವಿಳಂಬಗೊಳಿಸುವ ಮೊದಲು, “ಕಡಿಮೆ ವಿವಾದಾತ್ಮಕ” ಕವಿತೆಗಳನ್ನು ಆಯ್ಕೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ ಕ್ವಿಂಟ್‌ ತಿಳಿಸಿದೆ.

ರಾವ್ ಅವರ ಬರವಣಿಗೆಯು ತೀವ್ರ ಎಡಪಂಥವನ್ನು ಪ್ರತಿಪಾದಿಸಿದ್ದು, ಮಾನವ ಹಕ್ಕುಗಳ ಉಲ್ಲಂಘನೆಯ ವಿರುದ್ಧ ಧ್ವನಿ ಎತ್ತಿದೆ. ಪೆಂಗ್ವಿನ್‌ನ ಕಮಿಷನಿಂಗ್ ಎಡಿಟರ್ ಎಲಿಜಬೆತ್ ಕುರುವಿಲ್ಲಾ ಅವರು ಪ್ರಕಟಣೆಯ ವಿಳಂಬದ ಬಗ್ಗೆ ದಿ ಕ್ವಿಂಟ್‌ಗೆ ಪ್ರತಿಕ್ರಿಯಿಸಿದ್ದು, “ಕೋವಿಡ್ ಸಾಂಕ್ರಾಮಿಕದಿಂದಾಗಿ ರಾವ್ ಸೇರಿದಂತೆ ಹಲವರ ಕೃತಿಗಳನ್ನು ಪ್ರಕಟಿಸುವುದು ವಿಳಂಬವಾಗುತ್ತಿದೆ” ಎಂದಿದ್ದಾರೆ.

ರಾವ್ ಅವರ 100ಕ್ಕಿಂತ ಹೆಚ್ಚು ಕವಿತೆಗಳು ಜನಪ್ರಿಯವಾಗಿವೆ, ಪೆಂಗ್ವಿನ್ ಪ್ರಕಾಶಕರು 65 ಕವನಗಳನ್ನು ಪ್ರಕಟಣೆಗಾಗಿ ಪರಿಗಣಿಸಿದ್ದಾರೆ. ಈ ಪೈಕಿ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧನವಾದ ನಂತರ ಮೂರು ಕವಿತೆಗಳನ್ನು ಬರೆಯಲಾಗಿದೆ. ಯೆರವಾಡ ಜೈಲಿನಲ್ಲಿದ್ದಾಗ ಬರೆದ ಕವಿತೆಗಳನ್ನು ಪ್ರಕಾಶಕರು ಕೈಬಿಟ್ಟಿದ್ದಾರೆ.

ಉಳಿದ 62 ಕವಿತೆಗಳಲ್ಲಿ, ಪ್ರಕಾಶಕರು ಕಾನೂನು ತೊಡಕುಗಳನ್ನು ತಡೆಗಟ್ಟಲು ಸುಮಾರು ಹನ್ನೆರಡು ಕವನಗಳನ್ನು ಬಿಡಲು ಬಯಸಿದ್ದರು. ರಾವ್ ಅವರ ಕವಿತೆಗಳು ಎನ್ಐಎ ಪರಿಶೀಲನೆಗೆ ಒಳಗಾಗಬಹುದು. ಪುಸ್ತಕವು ಹೊರಬಂದರೆ ಪೆಂಗ್ವಿನ್ ಸಂಸ್ಥೆಯನ್ನು ಪರಿಶೀಲನೆಗೆ ಒಳಪಡಿಸಬಹುದು ಎಂಬುದು ಪ್ರಕಾಶಕರ ಭಯ ಎಂದು ಮೂಲಗಳು ಹೇಳಿವೆ.


ಇದನ್ನೂ ಓದಿರಿ: ಒರಿಸ್ಸಾ: ದಲಿತರ ಗುಡಿಸಲುಗಳಿಗೆ ಬೆಂಕಿ; ಹತ್ತು ಮಂದಿಗೆ ಗಾಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ತೆಲಂಗಾಣದಲ್ಲಿ ಮುಸ್ಲಿಮರಿಗೆ ನೀಡಿದ್ದ ಮೀಸಲಾತಿಯನ್ನು ರದ್ದುಪಡಿಸುತ್ತೇವೆ: ಅಮಿತ್‌ ಶಾ

0
ಲೋಕಸಭೆ ಚುನಾವಣೆ ಹಿನ್ನೆಲೆ ಮುಸ್ಲಿಮರನ್ನೇ ಟಾರ್ಗೆಟ್‌ ಮಾಡಿಕೊಂಡು ದ್ವೇಷದ ಹೇಳಿಕೆ ನೀಡುತ್ತಾ ಬಿಜೆಪಿ ನಾಯಕರು ಹಿಂದೂ ಸಮುದಾಯದ ಜನರ ಓಲೈಕೆ ರಾಜಕೀಯ ಮಾಡುತ್ತಿರುವುದು ವ್ಯಾಪಕವಾಗಿದೆ. ಇದರ ಮುಂದುವರಿದ ಭಾಗವಾಗಿ ತೆಲಂಗಾಣದಲ್ಲಿ ಕಾಂಗ್ರೆಸ್ ಮತ್ತು...