Homeಮುಖಪುಟಒರಿಸ್ಸಾ: ದಲಿತರ ಗುಡಿಸಲುಗಳಿಗೆ ಬೆಂಕಿ; ಹತ್ತು ಮಂದಿಗೆ ಗಾಯ

ಒರಿಸ್ಸಾ: ದಲಿತರ ಗುಡಿಸಲುಗಳಿಗೆ ಬೆಂಕಿ; ಹತ್ತು ಮಂದಿಗೆ ಗಾಯ

- Advertisement -
- Advertisement -

ಒರಿಸ್ಸಾ ರಾಜ್ಯದ ಪುರಿಯ ಬ್ರಹ್ಮಗಿರಿ ಪೊಲೀಸ್‌ ವ್ಯಾಪ್ತಿಗೆ ಒಳಪಡುವ ಸತಪಾದದ ನಾಥಪುರ್‌ ಗ್ರಾಮದಲ್ಲಿ ಭಾನುವಾರ ಎರಡು ಬಣಗಳ ನಡುವೆ ಘರ್ಷಣೆ ನಡೆದಿದೆ.

ಪರಸ್ಪರ ಬಾಂಬುಗಳನ್ನು ಎಸೆದಿರುವ ಗುಂಪು ಘರ್ಷಣೆಯಲ್ಲಿ ಕನಿಷ್ಠ 10 ಜನರು ಗಾಯಗೊಂಡಿದ್ದಾರೆ, ಇಬ್ಬರು ಗಂಭೀರರಾಗಿದ್ದಾರೆ, 20 ಗುಡಿಸಲುಗಳು ಬೆಂಕಿಗೆ ಆಹುತಿಯಾಗಿವೆ ಎಂದು ‘ಒರಿಸ್ಸಾ ಪೋಸ್ಟ್‌’ ವರದಿ ಮಾಡಿದೆ. ಘಟನೆ ಸಂಬಂಧ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊಗಳು ವೈರಲ್ ಆಗಿವೆ.

ಚಿಲಿಕಾದ ಕೃಷ್ಣಪ್ರಸಾದ್ ಬ್ಲಾಕ್‌ನ ಬ್ರಹ್ಮಪದ ಗ್ರಾಮದಿಂದ ಹೊರಹಾಕಲ್ಪಟ್ಟ ಸುಮಾರು 30 ದಲಿತ ಕುಟುಂಬಗಳು ಸುಮಾರು ಆರು ತಿಂಗಳಿಂದ ಸತಪದದ ನಾಥಪುರ್ ಗ್ರಾಮದ ಬಳಿ ಹುಲ್ಲುಗಾವಲು ಭೂಮಿಯಲ್ಲಿ ನೆಲೆಸಿದ್ದರು ಎಂದು ಮೂಲಗಳು ಹೇಳಿವೆ.

ಆದರೆ ಇದು ನಾಥಾಪುರ ಗ್ರಾಮಸ್ಥರಿಗೆ ಇಷ್ಟವಿರದ ಕಾರಣ ಎರಡು ಗುಂಪುಗಳ ನಡುವೆ ವೈಮನಸ್ಸು ಉಂಟಾಗಿತ್ತು. ದಲಿತರನ್ನು ತೆರವು ಮಾಡುವಂತೆ ನಾಥಾಪುರ ಗ್ರಾಮಸ್ಥರು ಸ್ಥಳೀಯ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ್ದರು. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ಘಟನೆ ನಡೆದಿದೆ ಎಂದು ಸದ್ಯದ ಮೂಲಗಳು ತಿಳಿಸಿವೆ.

ಹಲವು ಘರ್ಷಣೆಗಳ ನಂತರ ದಲಿತರು ಗೋಮಾಳವನ್ನು ತೆರವು ಮಾಡಲು ಒಪ್ಪಿದರು. ದಲಿತರು ಗೋಮಾಳದಲ್ಲಿ ಮನೆಗಳನ್ನು ಕಟ್ಟಿಕೊಳ್ಳಲು ಬಯಸಿದ್ದರು. ಸಮಸ್ಯೆ ಪರಿಹರಿಸುವ ಸಲುವಾಗಿ, ಎರಡು ಗುಂಪುಗಳ ನಡುವೆ ಭಾನುವಾರ ಸಭೆ ಕರೆಯಲಾಯಿತು. ನಾಥಪುರ ಗ್ರಾಮಸ್ಥರ ಗುಂಪು ಭಾನುವಾರ ದಲಿತರನ್ನು ಸಂಪರ್ಕಿಸಿತ್ತು.

ಗ್ರಾಮಸ್ಥರು ಹಾಗೂ ದಲಿತರು ಪರಸ್ಪರ ಬಾಂಬ್‌ ಎಸೆದಿದ್ದಾರೆ ಎಂದು ಒಡಿಸ್ಸಾ ಪೋಸ್ಟ್‌ ವರದಿ ಮಾಡಿದೆ. ಸುಮಾರು 20 ಗುಡಿಸಲುಗಳು ಸುಟ್ಟು ಹೋಗಿವೆ ಮತ್ತು ಎರಡೂ ಗುಂಪಿನ ಕನಿಷ್ಠ 10 ಜನರು ಗಂಭೀರ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಬ್ರಹ್ಮಗಿರಿ ನಿಲ್ದಾಣದಿಂದ ಅಗ್ನಿಶಾಮಕ ಟೆಂಡರ್ ಸ್ಥಳಕ್ಕೆ ತಲುಪಿ, ಬೆಂಕಿ ನಂದಿಸುವ ಪ್ರಯತ್ನ ಮಾಡಿತು. ಆ ಹೊತ್ತಿಗೆ ಗುಡಿಸಲುಗಳು ಸುಟ್ಟುಹೋಗಿವೆ. ಮತ್ತೊಂದೆಡೆ ದಲಿತರು ನ್ಯಾಯಕ್ಕಾಗಿ ಒತ್ತಾಯಿಸಿ ಪುರಿ-ಸತಪದ ರಸ್ತೆಯಲ್ಲಿ ಧರಣಿ ನಡೆಸಿದರು. ರಸ್ತೆಯ ಇಕ್ಕೆಲಗಳಲ್ಲಿ ನೂರಾರು ವಾಹನಗಳು ನಿಂತಿದ್ದವು.

ರಸ್ತೆ ತಡೆಯನ್ನು ಪೊಲೀಸರು ತೆರವು ಮಾಡಿದರು. ಕಾನೂನು ಸುವ್ಯವಸ್ಥೆ ಕಾಪಾಡಲು ಕನಿಷ್ಠ ಎರಡು ತುಕಡಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಗಾಯಾಳುಗಳನ್ನು ಪುರಿ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಕಟಕ್‌ನ ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪುರಿ ಪೊಲೀಸ್ ವರಿಷ್ಠಾಧಿಕಾರಿ ಕೆವಿ ಸಿಂಗ್ ಅವರು ಹೆಚ್ಚುವರಿ ಎಸ್ಪಿ ಮಿಹಾರ್ ಕುಮಾರ್ ಪಾಂಡಾ ಮತ್ತು ಸ್ಥಳೀಯ ಪೊಲೀಸ್ ಇನ್ಸ್‌ಪೆಕ್ಟರ್ ಘಟನಾ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಅವಲೋಕಿಸಿದರು.


ಇದನ್ನೂ ಓದಿರಿ: ದಿಂಡಗನೂರು: ದೇವಾಲಯ ಪ್ರವೇಶದ ಬಳಿಕ ದಲಿತರಿಗೆ ಅಘೋಷಿತ ಸಾಮಾಜಿಕ ಬಹಿಷ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ಶಿಫಾರಸು ಮಾಡಿದ ದೆಹಲಿ ಲೆಫ್ಟಿನೆಂಟ್ ಗವರ್ನರ್

0
ನಿಷೇಧಿತ ಭಯೋತ್ಪಾದಕ ಸಂಘಟನೆ 'ಸಿಖ್ಸ್ ಫಾರ್ ಜಸ್ಟೀಸ್' ನಿಂದ ತಮ್ಮ ಪಕ್ಷಕ್ಕೆ ದೇಣಿಗೆ ಪಡೆದ ಆರೋಪದ ಮೇಲೆ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ...