Homeಚಳವಳಿಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಲಾಗಿದೆ: ದೆಹಲಿ ಗಲಭೆ ಪ್ರಕರಣದಲ್ಲಿ ಉಮರ್‌ ಖಾಲಿದ್

ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಲಾಗಿದೆ: ದೆಹಲಿ ಗಲಭೆ ಪ್ರಕರಣದಲ್ಲಿ ಉಮರ್‌ ಖಾಲಿದ್

- Advertisement -
- Advertisement -

ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ (ಜೆಎನ್‌ಯು) ಮಾಜಿ ವಿದ್ಯಾರ್ಥಿ ನಾಯಕ, 2020 ರ ದೆಹಲಿ ಗಲಭೆಯಲ್ಲಿ ಆರೋಪಿಯಾಗಿರುವ ಉಮರ್‌ ಖಾಲಿದ್ ಸೋಮವಾರ ಪ್ರಕರಣದ ಕುರಿತು ದೆಹಲಿ ನ್ಯಾಯಾಲಯಕ್ಕೆ ಹೇಳಿಕೆ ನೀಡಿದ್ದಾರೆ.

“ತಾನು ಕ್ರಿಮಿನಲ್ ಪಿತೂರಿ ಅಥವಾ ಭಯೋತ್ಪಾದನೆಗೆ ಸಂಬಂಧಿಸಿದ ಒಂದೇ ಒಂದು ಚಟುವಟಿಕೆನ್ನು ಮಾಡಿದ್ದೇನೆ ಎಂದು ಪೊಲೀಸ್‌ ಸಾಕ್ಷಿಗಳ ಹೇಳಿಕೆಗಳು ತೋರಿಸಿಲ್ಲ” ಎಂದು ಅವರು ಹೇಳಿದ್ದಾರೆ. ಈಶಾನ್ಯ ದೆಹಲಿಯಲ್ಲಿ ಫೆಬ್ರವರಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಅವರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (ಯುಎಪಿಎ) ಪ್ರಕರಣದಲ್ಲಿ ದಾಖಲಿಸಲಾಗಿದೆ.

ಪೊಲೀಸರ ಬಳಿ ಯಾವುದೇ ಸಾಕ್ಷ್ಯಾಧಾರಗಳಿಲ್ಲದ ಕಾರಣ ಸಂಚು ಪ್ರಕರಣವನ್ನು ಬೇರೊಬ್ಬರು ಬರೆದು ಅವರಿಗೆ ನೀಡಿದ್ದಾರೆ. ಅಲ್ಲದೆ, ಅರ್ಧ ಸತ್ಯದ ಮೇಲೆ ಅವರ ವಿರುದ್ಧ ಪ್ರಕರಣ ದಾಖಲಿಸಲು ಆಗುವುದಿಲ್ಲ ಎಂದು ಉಮರ್‌ ಖಾಲಿದ್ ಅವರ ಪರವಾಗಿ ನ್ಯಾಯಾಲಯದಲ್ಲಿ ವಾದಿಸಿದ ತ್ರಿದೀಪ್‌ ಪಾಯಸ್ ಅವರು ಹೇಳಿದ್ದಾರೆ.

ಇದನ್ನೂ ಓದಿ: ಜೈಲಿನೊಳಗಿಂದ ಹೋರಾಟಗಾರ ಉಮರ್‌ ಖಾಲಿದ್‌ ಬರೆದ ಹೃದಯಸ್ಪರ್ಶಿ ಪತ್ರ

ದೆಹಲಿ ಗಲಭೆಗೆ ಸಂಬಂಧಿಸಿದಂತೆ, ಉಮರ್ ಖಾಲಿದ್ ಮತ್ತು ಇತರ ಹಲವರ ವಿರುದ್ಧ ಕಠಿಣವಾದ ಭಯೋತ್ಪಾದನಾ ವಿರೋಧಿ ಕಾನೂನಾದ ‘ಯುಎಪಿಎ’ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜೊತೆಗೆ ಅವರನ್ನು ದೆಹಲಿ ಗಲಭೆಯ ‘ಮಾಸ್ಟರ್‌ಮೈಂಡ್‌ಗಳು’ ಎಂದು ಆರೋಪಿಸಲಾಗಿದೆ. ಈ ಗಲಭೆಯಲ್ಲಿ 53 ಜನರು ಮೃತಪಟ್ಟಿದ್ದರು ಮತ್ತು 700 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ವೈಯಕ್ತಿಕ ಸಾಕ್ಷಿ ಹೇಳಿಕೆಗಳನ್ನು ಉಲ್ಲೇಖಿಸಿದ ಉಮರ್‌ ಖಾಲಿದ್ ಅವರ ವಕೀಲ, ಸಾಕ್ಷಿಗಳಲ್ಲಿ ಒಬ್ಬರನ್ನು “ಸೃಷ್ಟಿಸಲಾಗಿರುವ ಸಾಕ್ಷಿ” ಎಂದು ಕರೆದಿದ್ದಾರೆ. ಈ ಸಾಕ್ಷಿಯು, ಜನವರಿ 23 ಮತ್ತು 24 ರಂದು ದೆಹಲಿಯ ಸೀಲಂಪುರ್ ಪ್ರದೇಶದಲ್ಲಿ ರಹಸ್ಯ ಸಭೆ ನಡೆದಿದೆ ಎಂದು ಹೇಳಿದ್ದು, ಖಾಲಿದ್ ಅದರ ಭಾಗವಾಗಿದ್ದರು ಎಂದು ಉಲ್ಲೇಖಿಸಿದೆ.

ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ವಕೀಲರು, ಇದು ರಹಸ್ಯ ಸಭೆಯಾಗಿದ್ದರೆ, ಭಾಗವಹಿಸುವವರು ತಮ್ಮ ಫೋಟೋ ತೆಗೆಯಲು ಮತ್ತು ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಲು ಬಿಡುತ್ತಿರಲಿಲ್ಲ ಎಂದು ಅವರು ವಾದಿಸಿದ್ದಾರೆ.

ನ್ಯಾಯಾಲಯವು ನವೆಂಬರ್ 16 ರಂದು ಮುಂದಿನ ವಾದಗಳನ್ನು ಆಲಿಸಲಿದೆ. ಉಮರ್‌ ಖಾಲಿದ್‌ ಅವರ ವಕೀಲ ಪಾಯಸ್‌ ಅವರು ವಾದಗಳನ್ನು ಪೂರ್ತಿಗೊಳಿಸಿದ ನಂತರ, ಅವರ ವಿರುದ್ದವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅಮಿತ್ ಪ್ರಸಾದ್ ಅವರು ವಾದ ಮಂಡಿಸಲಿದ್ದಾರೆ.

ಇದನ್ನೂ ಓದಿ: ಯಾರನ್ನೂ ಭೇಟಿಯಾಗಲು ಬಿಡುತ್ತಿಲ್ಲ, ಭದ್ರತೆಯ ಹೆಸರಲ್ಲಿ ಏಕಾಂತ ಶಿಕ್ಷೆ: ಉಮರ್‌ ಖಾಲಿದ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. Islamic terror organization ಅವರು ಕೊಟ್ಟಿರುವ ದೇಣಿಗೆ ‌‌ಸಾಕಾಗಿಲ್ಲವೇ ನಿಮಗೇ? ಇನ್ನೂ ಬೇಕೆಂಬ ದುರಾಸೆ ಇದ್ದರೆ, ದೇಶವಿರೋದಿಗಳು ಮತ್ತು ಹಿಂದೂ ವಿರೋಧಿಗಳ ಬಳಿ ಕೇಳಿ ಕೊಡುತ್ತಾರೆ.

LEAVE A REPLY

Please enter your comment!
Please enter your name here

- Advertisment -

Must Read

‘ಟೈಮ್ಸ್‌’ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಸಾಕ್ಷಿ ಮಲಿಕ್ ಸೇರಿ 8...

0
ಒಲಿಂಪಿಕ್ ಪದಕ ವಿಜೇತ ಭಾರತೀಯ ಕುಸ್ತಿಪಟು ಸಾಕ್ಷಿ ಮಲಿಕ್ ಸೇರಿ 8 ಮಂದಿ ಭಾರತೀಯರು ಟೈಮ್ಸ್‌ ನಿಯತಕಾಲಿಕದ 2024ರ 100 ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಸಾಕ್ಷಿ ಮಲಿಕ್‌ ಮಹಿಳಾ ಕುಸ್ತಿಪಟುಗಳ...