| ನಾನುಗೌರಿ ಡೆಸ್ಕ್ |
ಮಹಿಳೆಯರ ಸುರಕ್ಷತೆಗಾಗಿ ದೇಶದಲ್ಲಿಯೇ ಅತಿದೊಡ್ಡ ಸಿಸಿಟಿವಿ ಕ್ಯಾಮರ ಅಳವಡಿಕೆಯ ಯೋಜನೆಗೆ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಸರ್ಕಾರ ಮುಂದಾಗಿದೆ. ಈಗಾಗಲೇ 1.4 ಲಕ್ಷ ಸಿಸಿ ಕ್ಯಾಮರಗಳ ಅಳವಡಿಕೆ ಕಾರ್ಯ ನಡೆಯುತ್ತಿದ್ದು ಇನ್ನು 1.5 ಲಕ್ಷ ಸಿಸಿಟಿವಿ ಕ್ಯಾಮರಗಳ ಅಳವಡಿಕೆಗೆ ಟೆಂಟರ್ ಕಾರ್ಯ ಪ್ರಗತಿಯಲ್ಲಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಈ ಕುರಿತು ಫೇಸ್ ಬುಕ್‍ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿರುವ ಅವರು, ಪ್ರಾಮಾಣಿಕ ರಾಜಕಾರಣಕ್ಕೆ ಯಾವುದು ಅಸಾಧ್ಯವಲ್ಲ, ದೆಹಲಿ ಜನತೆಗೆ ಶುಭಾಷಯಗಳು ಎಂದು ಬರೆದಿದ್ದಾರೆ.

ಸ್ಥಳೀಯರ ಅಗತ್ಯಕ್ಕೆ ತಕ್ಕ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮರ ಅಳವಡಿಸಲಾಗುತ್ತಿದೆ. ಇದೊಂದು ದೆಹಲಿ ಪೊಲೀಸ್ ಮತ್ತು ರಾ ಅಧಿಕಾರಿಗಳು ಇವುಗಳ ನಿರ್ವಹಣೆ ಮತ್ತು ನಿಯಂತ್ರಣ ಮಾಡಲಿದ್ದಾರೆ. ದೆಹಲಿ ಪೊಲೀಸ್ ಸ್ಟೇಷನ್ ಹೌಸ್ ಆಫೀಸರ್ ಗಳಿಗೆ ಸಿಸಿ ಕ್ಯಾಮೆರಗಳ ಲೈವ್ ಸಿಗುತ್ತಿರುತ್ತದೆ. ಕೇಂದ್ರೀಯ ನಿರ್ವಹಣಾ ವ್ಯವಸ್ಥೆ ಸದಾ ನಿಗಾ ಇಟ್ಟಿದ್ದು ಕ್ಯಾಮರಗಳು ಕೆಲಸ ಮಾಡುತ್ತಿವೆಯೇ, ಇಲ್ಲವೇ, ಏನಾದರೂ ಸಮಸ್ಯೆಯಿದೆಯೇ ಎಲ್ಲವೂ ತಿಳಿದು ತಕ್ಷಣದಲ್ಲಿ ಬಗೆಹರಿಸಬಹದು ಎಂದು ಅವರು ತಿಳಿಸಿದ್ದಾರೆ.
ಒಟ್ಟು ಇನ್ನ 50 ದಿನಗಳಲ್ಲಿ ದೆಹಲಿಯಾದ್ಯಂತ 3 ಲಕ್ಷ ಸಿಸಿಟಿವಿ ಕ್ಯಾಮರಗಳನ್ನು ಅಳವಡಿಸಲಿದ್ದೇವೆ ಎಂದು ದೆಹಲಿ ಮುಖ್ಯಮಂತ್ರಿ ಮನೀಶ್ ಸಿಸೋಡಿಯ ತಿಳಿಸಿದ್ದಾರೆ.


