Homeಕರ್ನಾಟಕಇಬ್ಬರಿಗೆ ಖಾತೆ ಹಂಚಿಕೆ: ಅದೂ ಒಂದು ಬಿಕ್ಕಟ್ಟೇ!

ಇಬ್ಬರಿಗೆ ಖಾತೆ ಹಂಚಿಕೆ: ಅದೂ ಒಂದು ಬಿಕ್ಕಟ್ಟೇ!

- Advertisement -
- Advertisement -

| ಮಲ್ಲನಗೌಡರ್ |

ಈ ಸಮ್ಮಿಶ್ರ ಸರ್ಕಾರದ ಪ್ರತಿ ಹೆಜ್ಜೆಯಲ್ಲೂ ಬಿಕ್ಕಟ್ಟುಗಳೇ ಇವೆ. ನೇರವಾದ, ಸುಲಲಿತವಾಗಿ ಯಾವುದೂ ಆಗುತ್ತಿಲ್ಲ. ಮೈತ್ರಿ ಪಕ್ಷಗಳ ನಾಯಕರು ದಿನವೂ ರಾಜಕೀಯದ ಬಗ್ಗೆಯೇ ಹೆಚ್ಚು ತಲೆ ಕೆಡಿಸಿಕೊಂಡಿರುವುದರಿಂದ ಇಬ್ಬರು ಹೊಸ ಸಚಿವರಿಗೆ ಖಾತೆ ನೀಡುವುದು ಒಂದು ಸಣ್ಣ ಬಿಕ್ಕಟ್ಟೇ ಆಗಿರುವಂತಿದೆ.

ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ಸೇರಿದ ಇಬ್ಬರು ಪಕ್ಷೇತರರಿಗೆ 11-12 ದಿನವಾದರೂ ಖಾತೆ ಹಂಚಿಕೆ ಆಗಿಲ್ಲ. ಈಗ ವಿ. ಶಂಕರ್ ಕಾಂಗ್ರೆಸ್ ಸದಸ್ಯರು. ಅವರಿಗೆ ಕಾಂಗ್ರೆಸ್ ಪಾಲಿನ ಖಾತೆಯನ್ನೇ ಕೊಡದೇ ಬೇರೆ ದಾರಿಯೇ ಇಲ್ಲದಂತಾಗಿದೆ. ಮುಳಬಾಗಿಲು ಪಕ್ಷೇತರ ಶಾಸಕ ಎಚ್. ನಾಗೇಶರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆಯೇ ಬೇಕೆಂದು ಎಂದು ಪಟ್ಟು ಹಿಡಿದಿದ್ದಾರೆ.

ಆರಂಭದಲ್ಲಿ ತಾವು ನಿಭಾಯಿಸಿದ್ದ ಅರಣ್ಯ ಖಾತೆಯೇ ಬೇಕು ಎಂದು ಶಂಕರ್ ಪಟ್ಟು ಹಿಡಿದಿದ್ದಾರೆ. ರಮೇಶ ಜಾರಕಿಹೊಳಿ ನಿಭಾಯಿಸಿದ್ದ ಪೌರಾಡಳಿತ ಖಾತೆಯನ್ನು ನಂತರ ಕಾಗ್ರೆಸ್‍ನ ಸಿ.ಎಸ್ ಶಿವಳ್ಳಿ ನಿರ್ವಹಿಸಿದ್ದರು. ಅವರ ನಿಧನದ ನಂತರ ಖಾಲಿ ಇರುವ ಆ ಸ್ಥಾನವನ್ನು ಒಪ್ಪಲು ಶಂಕರ್ ಸಿದ್ದರಿಲ್ಲ. ಈಗ ಅರಣ್ಯ ಖಾತೆಗೆ ಪ್ರಬಲ ನಾಯಕ ಕಾಂಗ್ರೆಸ್‍ನ ಸತೀಶ ಜಾರಕಿಹೊಳಿ ಸಚಿವರಿದ್ದು ಅವರಿಂದ ಈ ಖಾತೆ ಕಿತ್ತು ಕೊಡಲೂ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್‍ನ ಹಿರಿಯ ನಾಯಕರೂ ಒಪ್ಪುವುದಿಲ್ಲ. ಶಂಕರ್‍ಗೆ ಅರಣ್ಯ ಸಚಿವ ಖಾತೆ ನೀಡಲು ಒಂದು ಮಟ್ಟಿನ ಪುನರಾರಚನೆ ಮಾಡಬೇಕು ಇದರಿಂದ ಸಚಿವರಲ್ಲಿ ಖಾತೆಗಾಗಿ ಮತ್ತೆ ಸ್ಪರ್ಧೆ ಏರ್ಪಡಬಹುದು. ಅದರಿಂದಾಗಿ ಶಂಕರ್ ಅವರು ಪೌರಾಡಳಿತ ಖಾತೆ ಒಪ್ಪದೇ ಬೇರೆ ದಾರಿಯೇ ಇಲ್ಲ. ಇಂಥದ್ದೇ ಖಾತೆ ಎಂದು ಒತ್ತಾಯಿಸುತ್ತಾ ಕೂತರೆ ಇನ್ನಷ್ಟು ದಿನ ಖಾತೆ ರಹಿತ ಸಚಿವರಾಗಿಯೇ ಮುಂದುವರೆಯಬೇಕಾಗುತ್ತೆ ಎಂದು ಸಿಎಂ ಸೂಚನೆ ನೀಡಿದ್ದಾರೆಂದು ಹೇಳಲಾಗುತ್ತಿದೆ.

ಬಿಎಸ್‍ಪಿಯ ಎನ್. ಮಹೇಶ್ ಸಚಿನ ಸ್ಥಾನಕ್ಕೆ ರಾಜಿನಾಮೆ ನೀಡಿದಾಗಿನಿಂದಲೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಖಾಲಿಯೇ ಇದೆ. ಸದ್ಯ ಅದನ್ನೇ ತಮಗೆ ನೀಡಲಿ ಎಂದು ನಾಗೇಶ ಪಟ್ಟು ಹಿಡಿದಿದ್ದಾರೆ. ಜೆಡಿಎಸ್ ಪಾಲಿನ ಖಾತೆಗಳಲ್ಲಿಯೇ ಮಹೇಶರಿಗೆ ನೀಡಲಾಗಿತ್ತು. ಈಗ ನಾಗೇಶರಿಗೆ ಕೊಡಲು ಹೋದರೆ, ಜೆಡಿಎಸ್‍ನ ಯಾವುದಾದರೂ ಸಚಿವರು ತಮಗೆ ಅದನ್ನು ಕೊಡಿ ಎಂದು ಬೇಡಿಕೆ ಇಡಬಹುದೇನೋ. ಬಹಳಷ್ಟು ಸಮಯದಿಂದ ಖಾಲಿಯೇ ಇರುವ ಶಿಕ್ಷಣ ಖಾತೆಯ ಬಗ್ಗೆ ಸರ್ಕಾರ ತಲೆ ಕೆಡಿಸಿಕೊಂಡಿಯೇ ಇಲ್ಲ. ಶಾಲೆಗಳು ಪುನರಾರಂಭವಾದರೂ ಅಧಿಕಾರಿಗಳ ನಿರ್ದೇಶನದಂತೆ ಎಲ್ಲವೂ ನಡೆಯುತ್ತಿದೆ. ನಾಗೇಶರಿಗೆ ಶಿಕ್ಷಣ ಖಾತೆ ಕೊಡದಿದ್ದರೆ, ಕುಮಾರಸ್ವಾಮಿ ತಮ್ಮಲ್ಲೇ ಇರವ ಹಲವು ಖಾತೆಗಳ ಪೈಕಿ ಒಂದನ್ನು ನೀಡಬೇಕಾಗುತ್ತದೆ.

 

ಶಂಕರ್ ಮತ್ತು ನಾಗೇಶರನ್ನು ಸಚಿವರನ್ನಾಗಿ ಮಾಡಿದ ಕಾಂಗ್ರೆಸ್‍ನ ನಾಯಕರಿಗೆ ಖಾತೆಗಳ ಬಗ್ಗೆ ಗಮನ ಹರಿಸಲು ಪೂರೈಸುತ್ತಿಲ್ಲ. ಅತೃಪ್ತ ಶಾಸಕರನ್ನು ಓಲೈಸುವ ಯತ್ನದಲ್ಲೂ ಕಾಂಗ್ರೆಸ್‍ಗೆ ಆಸಕ್ತಿ ಹೋದಂತಿದೆ. ಚಿಂಚೋಳಿಯ ಗೆಲುವಿನಿಂದ ಒಂದು ಸೀಟು ಹೆಚ್ಚು ಕಡಿಮೆ ಮಾಡಿಕೊಂಡಿರುವ ಬಿಜೆಪಿ ಸದಕ್ಕೆ ಶಂಕರ್, ನಾಗೇಶರ ಮೇಲೆ ಅಶೆ ಬಿಟ್ಟಿದೆ ಎಂಬುದು ಸತ್ಯ. ರೋಶನ್ ಬೇಗ್‍ರಿಂದ ಖಾಲಿಯಾದ ಸ್ಥಾನವನ್ನು ಶಂಕರ್ ಸೇರಿಸಿಕೊಳ್ಳುವ ಮೂಲಕ ಕಾಂಗ್ರೆಸ್ ಸಮಾಧಾನ ಹೊಂದಿದೆ.

ಸತೀಶ್ ಜಾರಕಿಹೊಳಿ

ಅರಣ್ಯ ಇಲಾಖೆಯ ನೇಮಕಾತಿಗಳಲ್ಲಿ ಶೇ 30ರಷ್ಟನ್ನು ಅರಣ್ಯವಾಸಿಗಳಿಗೆ ಮೀಸಲು ಇರುವಂತೆ ಕ್ರಮ ಕೈಗೊಂಡ ಸತೀಶ ಜಾರಕಿಹೊಳಿ ಆ ಖಾತೆಯನ್ನು ಬಿಟ್ಟು ಕೊಡಲಾರರು. ಹೀಗಾಗಿ ಶಂಕರ್ ಅನಿವಾರ್ಯವಾಗಿ ಪೌರಾಡಳಿತ ಖಾತೆ ಒಪ್ಪಿಕೊಳ್ಳಲೇ ಬೇಕಾಗಬಹುದು. ಸದ್ಯಕ್ಕೆ ಮೈತ್ರಿಯ ನಾಯಕರಿಗೆ ಶಂಕರ್ ಮತ್ತು ನಾಗೇಶರ ಖಾತೆಗಳ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಹೀಗಾಗಿ ಇನ್ನಷ್ಟು ಅವಧಿಗೆ ಶಂಕರ್ ಮತ್ತು ನಾಗೇಶ ಖಾತೆರಹಿತ ಸಚಿವರಾಗಿಯೇ ಮುಂದುವರೆಯಬೇಕು ಅಥವಾ ಈಗ ಸೂಚಿಸಿದ ಖಾತೆಗಳನ್ನು ಒಪ್ಪಿಕೊಳ್ಳಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ಚಿಂತಕ ಪರಕಾಲ ಪ್ರಭಾಕರ್‌ಗೆ ಚುನಾವಣಾ ಆಯೋಗದಿಂದ ನೋಟಿಸ್

ಅರ್ಥಶಾಸ್ತ್ರಜ್ಞ, ರಾಜಕೀಯ ವಿಶ್ಲೇಷಕ ಡಾ. ಪರಕಾಲ ಪ್ರಭಾಕರ್ ಅವರಿಗೂ ಈಗ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಡಿ ಚುನಾವಣಾ ಆಯೋಗದ ನೋಟಿಸ್ ಜಾರಿಯಾಗಿದೆ. ವೋಟರ್ ಐಡಿ ಪರಿಶೀಲನೆಯಲ್ಲಿ ‘Logical Discrepancy’ (ತಾರ್ಕಿಕ ಅಸಂಗತತೆ)...

ಕರ್ನಾಟಕ ಎಸ್‌ಐಆರ್: ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ ನೋಟಿಸ್ ನೀಡಿದ ಚುನಾವಣಾ ಆಯೋಗ

ಮಂಗಳೂರು: ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮ ವಿಶಿಷ್ಟ ಸೇವೆಯ ಮೂಲಕ ದೇಶ-ವಿದೇಶಗಳಲ್ಲಿ ಗುರುತಿಸಿಕೊಂಡಿರುವ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ...

SIR ಸೂತ್ರದಿಂದ ಬದಲಾಗುತ್ತಾ ಬೆಂಗಳೂರಿನ 28 ಕ್ಷೇತ್ರಗಳ ಗೆಲುವಿನ ಸಮೀಕರಣ?

ರಾಜ್ಯ ರಾಜಕೀಯದ ಶಕ್ತಿಕೇಂದ್ರವಾದ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ‘ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR)’ ಪ್ರಕ್ರಿಯೆಯು ಮಹತ್ವದ ರಾಜಕೀಯ ಮತ್ತು ಆಡಳಿತಾತ್ಮಕ ಚರ್ಚೆಯನ್ನು ಹುಟ್ಟುಹಾಕಿದೆ. ಎಸ್‌ಐಆರ್‌ಗೂ ಮುನ್ನ ನಗರದಲ್ಲಿದ್ದ ಸುಮಾರು 1.03...

ಮಣಿಪುರದಲ್ಲಿ ಹಿಂಸಾಚಾರಕ್ಕೆ 306 ಬಲಿ, 49 ಮಂದಿ ನಾಪತ್ತೆ: ವಿಧಾನಸಭೆಯಲ್ಲಿ ಗೃಹ ಸಚಿವರ ಸ್ಪಷ್ಟನೆ

ಇಂಫಾಲ್: ಮಣಿಪುರದಲ್ಲಿ 2023ರ ಮೇ ತಿಂಗಳಲ್ಲಿ ಭುಗಿಲೆದ್ದ ಜನಾಂಗೀಯ ಹಿಂಸಾಚಾರಕ್ಕೆ ಮೂರು ವರ್ಷಗಳಿಗೂ ಹೆಚ್ಚು ಕಾಲ ಕಳೆದಿದ್ದರೂ, ಅದರ ಪರಿಣಾಮದಿಂದ ರಾಜ್ಯ ಸಂಪೂರ್ಣವಾಗಿ ಹೊರಬಂದಿಲ್ಲ. ಹಿಂಸಾಚಾರ ಆರಂಭವಾದ ಬಳಿಕ ಇದುವರೆಗೆ ಕನಿಷ್ಠ 306...

ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ನಿಧಿ ದುರ್ಬಳಕೆ; ಜನವಸತಿಯೇ ಇಲ್ಲದ ಜಾಗದಲ್ಲಿ ರೂ. 50 ಲಕ್ಷದ ಸಿ.ಸಿ. ರಸ್ತೆ ನಿರ್ಮಾಣ!

ಸಮಾಜ ಕಲ್ಯಾಣ ಇಲಾಖೆಯ 'ಪ್ರಗತಿ ಕಾಲೋನಿ' ಯೋಜನೆಯ ನಿಧಿ ದುರ್ಬಳಕೆಯಾಗಿರುವ ಆರೋಪ ಕೇಳಿಬಂದಿದ್ದು, ಜನವಸತಿಯೇ ಇಲ್ಲದ ಜಾಗದಲ್ಲಿ ರೂ. 50 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಿರುವ ಪ್ರಕರಣ ಬೆಂಗಳೂರು...

SIR: ‘ಚುನಾವಣಾ ಆಯೋಗದಿಂದ ನೋಟಿಸ್‌’ ಇಲ್ಲದಿರುವ ದಾಖಲೆಗಳನ್ನು ಎಲ್ಲಿಂದಾ ತರೋದು? ಸಾರ್ವಜನಿಕರ ಪ್ರಶ್ನೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗವು ಬಳಸುತ್ತಿರುವ 'Logical Discrepancy' (ತಾರ್ಕಿಕ ವ್ಯತ್ಯಾಸ) ಎಂಬ ಸಾಫ್ಟ್‌ವೇರ್ ಆಧಾರಿತ ಪರಿಶೀಲನೆಯು ತಾಂತ್ರಿಕವಾಗಿ ದೋಷರಹಿತವೆಂದು ತೋರಿದರೂ, ವಾಸ್ತವದಲ್ಲಿ ಲಕ್ಷಾಂತರ ನೈಜ...

SIR ರಗಳೆ: ಕೊನೆಗೂ 43.81 ಲಕ್ಷ ಮತದಾರರ ನೋಟಿಸ್ ಪಟ್ಟಿ ಬಹಿರಂಗಪಡಿಸಿದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ಭಾರಿ ಸದ್ದು ಮಾಡುತ್ತಿರುವ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯಲ್ಲಿ ನೋಟಿಸ್‌ಗೆ ಗುರಿಯಾಗಿರುವ 43.81 ಲಕ್ಷ ಮತದಾರರ ಪಟ್ಟಿಯನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಕೊನೆಗೂ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ...

‘ಆರ್‌ಎಸ್‌ಎಸ್‌ ಅಡಗಿಕೊಂಡಿದೆ’: ಮೋಹನ್ ಭಾಗವತ್‌ ಯುಕೆ ಭೇಟಿ ವಿರೋಧಿಸಿ ಲಂಡನ್‌ನಲ್ಲಿ ಪ್ರತಿಭಟನೆ

ಲಂಡನ್: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರ ಯುನೈಟೆಡ್ ಕಿಂಗ್‌ಡಮ್‌ ಭೇಟಿಯನ್ನು ವಿರೋಧಿಸಿ ಲಂಡನ್‌ನ ಪಾರ್ಲಿಮೆಂಟ್ ಸ್ಕ್ವೇರ್‌ನಲ್ಲಿ ನೂರಾರು ಜನರು ಪ್ರತಿಭಟನೆ ನಡೆಸಿದ್ದಾರೆ. ಭಾಗವತ್ ಅವರ ಯುಕೆ ಪ್ರವಾಸದ...

ಪಂಚಾಯಿತಿಯಲ್ಲಿ ಅಸ್ಪೃಶ್ಯತೆ ಆಚರಣೆ-ಪ್ರತ್ಯೇಕ ಟೀ ಲೋಟ; ಆತ್ಮಹತ್ಯೆಗೆ ಯತ್ನಿಸಿದ ಪೌರಕಾರ್ಮಿಕ ಮಹಿಳೆ

ಕೆಲಸದ ಸ್ಥಳದಲ್ಲಿ ನಡೆಯುತ್ತಿದ್ದ ಅಸ್ಪೃಶ್ಯತೆ ಆಚರಣೆಯಿಂದ ಮನನೊಂದ 37 ವರ್ಷದ ದಲಿತ ನೈರ್ಮಲ್ಯ ಕಾರ್ಮಿಕರೊಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮತ್ಯೆಗೆ ಯತ್ನಿಸಿರುವ ಘಟನೆ ತಮಿಳುನಾಡಿನ ಮೇಲೂರು ಸಮೀಪದ ಕಂಬೂರ್ ಪಂಚಾಯತ್‌ನಲ್ಲಿ ಬೆಳಕಿಗೆ ಬಂದಿದೆ. ...

ಗೌರಿ, ಗಾಂಧಿಯನ್ನು ಕೊಂದದ್ದು ಬರೀ ಬುಲೆಟ್‌ಗಳಲ್ಲ, ಕೋಮುವಾದಿ ಸಿದ್ಧಾಂತ: ವಿದ್ಯಾರ್ಥಿ ನಾಯಕಿ ದಾನಿಶ್ ಅಲಿ

"ಗಾಂಧಿ, ಗೌರಿಯನ್ನು ಕೊಂದಿದ್ದು ಬರೀ ಬುಲೆಟ್‌ಗಳಲ್ಲ, ಅದು ಸಿದ್ಧಾಂತ ಎಂಬುದನ್ನು ನಾವು ನೆನಪಿಡಬೇಕು. ಈ ಸಿದ್ಧಾಂತಗಳ ವಿರುದ್ಧವಾಗಿ ನಾವು ಇಂದು ಹೋರಾಡಬೇಕಿದೆ” ಎಂದು ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) ವಿದ್ಯಾರ್ಥಿ ನಾಯಕಿ...