Homeಮುಖಪುಟಅಶೋಕ್ ಲಾವಾಸರವರ ಭಿನ್ನಾಭಿಪ್ರಾಯನ್ನು ಬಹಿರಂಗಪಡಿಸುವುದರಿಂದ ಅವರ ಜೀವಕ್ಕೆ ಅಪಾಯ: ಚುನಾವಣಾ ಆಯೋಗ

ಅಶೋಕ್ ಲಾವಾಸರವರ ಭಿನ್ನಾಭಿಪ್ರಾಯನ್ನು ಬಹಿರಂಗಪಡಿಸುವುದರಿಂದ ಅವರ ಜೀವಕ್ಕೆ ಅಪಾಯ: ಚುನಾವಣಾ ಆಯೋಗ

- Advertisement -
- Advertisement -

| ನಾನುಗೌರಿ ಡೆಸ್ಕ್ |

ಚುನಾವಣಾ ಆಯೋಗದ ಸದಸ್ಯರಾಗಿದ್ದ ಅಶೋಕ್ ಲಾವಾಸರವರು ಮೋದಿ ಮತ್ತು ಅಮಿತ್ ಶಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳಿಗೆ ಕ್ಲಿನ್ ಚಿಟ್ ನೀಡುವುದಕ್ಕೆ ಭಿನ್ನಾಭಿಪ್ರಾಯ ದಾಖಲಿಸಿದ್ದುದು ನಿಮಗೆ ಗೊತ್ತಿಗೆ. ಮೂರು ಜನರ ಸಮಿತಿಯಲ್ಲಿ ಒಬ್ಬರಾಗಿದ್ದ ಅವರು ಮೋದಿ-ಶಾರವರ ಸುಮಾರು 11 ಪ್ರಕರಣಗಳಿಗೆ ಕ್ಲಿನ್ ಚಿಟ್ ನೀಡುವುದಕ್ಕೆ ತಮ್ಮ ವಿರೋಧ ದಾಖಲಿಸಿ ನೋಟ್ ಬರೆದಿದ್ದರು.

ಆ ದಾಖಲೆಗಳನ್ನು ಮಾಹಿತಿ ಹಕ್ಕಿನಡಿ ನೀಡುವಂತೆ ಪುಣೆ ಮೂಲಕ ವಿಹಾರ್ ದೃವೆ ಎಂಬ ಆರ್.ಟಿ.ಐ ಕಾರ್ಯಕರ್ತರು ಸಲ್ಲಿಸಿದ್ದ ಅರ್ಜಿಗೆ ಮಾಹಿತಿ ನೀಡಲು ಚುನಾವಣಾ ಆಯೋಗ ನಿರಾಕರಿಸಿದೆ. ಅಶೋಕ್ ಲಾವಾಸರವರ ಭಿನ್ನಾಭಿಪ್ರಾಯನ್ನು ಬಹಿರಂಗಪಡಿಸುವುದರಿಂದ ಅವರ ಜೀವಕ್ಕೆ ಅಪಾಯವಿದೆ ಎಂದು ಚುನಾವಣಾ ಆಯೋಗ ಸ್ಪಷ್ಟೀಕರಣ ಸಹ ನೀಡಿದೆ ಎಂದು ದಿ ವೈರ್ ವರದಿ ಮಾಡಿದೆ.

ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಮತ್ತು ಸದಸ್ಯರಾದ ಲವಾಸಾ ಮತ್ತು ಸುಶೀಲ್ ಚಂದ್ರರನ್ನು ಒಳಗೊಂಡ ಸಮಿತಿಯ ‘ಪೂರ್ಣ ಆಯೋಗ’ ವಿವಾದಾಸ್ಪದ ವಿಷಯಗಳ ಬಗ್ಗೆ ಚರ್ಚಿಸಿತ್ತು. ಯಾವುದೇ ದೂರಿನ ಬಗ್ಗೆ ಇಲ್ಲಿ ಚರ್ಚೆ ನಡೆದು ಒಮ್ಮತದ ಆದೇಶವನ್ನು ಸಾರ್ವಜನಿಕವಾಗಿ ಹೊರಹಾಕಲಾಗುವುದು. ಹಾಗೊಮ್ಮೆ ಒಮ್ಮತದ ತೀರ್ಮಾನಕ್ಕೆ ಬರಲಾಗದಿದ್ದರೆ, 2:1 ಅನುಪಾತದಲ್ಲಿ ಬಹುಮತದ ತೀರ್ಪನ್ನು ಅಂತಿಮ ಆದೇಶವಾಗಿ ಪರಿಗಣಿಸಲಾಗುತ್ತದೆ.

ಮೋದಿ ಮತ್ತು ಅಮಿತ್ ಶಾ ವಿರುದ್ಧ ಕೇಳಿ ಬಂದ ನೀತಿ ಸಂಹಿತೆ ಉಲ್ಲಂಘನೆಯ ಎಲ್ಲಾ ದೂರುಗಳ ವಿಚಾರಣೆಗಳ ಸಂದರ್ಭದಲ್ಲಿ ಅಶೋಕ್ ಲಾವಸಾ ಅವರು ಕ್ಲೀನ್ ಚಿಟ್ ಕೊಡುವುದಕ್ಕೆ ವಿರೋಧ ವ್ಯಕ್ತಪಡಿಸಿ ತಮ್ಮ ವಾದ ಮಂಡಿಸಿದ್ದರು ಎನ್ನಲಾಗಿದೆ. ಆ ವಾದವನ್ನು ಅಂತಿಮ ಆದೇಶದಲ್ಲಿ ಉಲ್ಲೇಖಿಸಿರಲಿಲ್ಲ. ಅದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಅವರಿಗೆ ಪತ್ರ ಬರೆದಿದ್ದ ಲಾವಾಸಾ “ತನ್ನ `ಅಲ್ಪಮತ’ ಅಭಿಪ್ರಾಯವನ್ನು ಆಯೋಗದ ಅಂತಿಮ ತೀರ್ಪಿನಲ್ಲಿ ಉಲ್ಲೇಖಿಸಲಾಗುತ್ತಿಲ್ಲವಾದ್ದರಿಂದ, ನಾನು ಅನಿವಾರ್ಯವಾಗಿ ಪೂರ್ಣ ಆಯೋಗದ ಸಭೆಗಳಿಂದ ದೂರ ಉಳಿಯಬೇಕಾಗಿದೆ” ಎಂದು ತಮ್ಮ ಅಸಮಾಧಾನ ಹೊರಹಾಕಿದ್ದರು.

ಏಪ್ರಿಲ್ 21ರಂದು ಗುಜರಾತ್‍ನ ಪಟಣ್‍ನಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡುತ್ತಾ ಮೋದಿಯವರು “ನಮ್ಮ ಸರ್ಕಾರ ಪಾಕಿಸ್ತಾನಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದರಿಂದಲೇ ಅದು ನಮ್ಮ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಸುರಕ್ಷಿತವಾಗಿ ಬಿಟ್ಟುಕಳಿಸಿತ್ತು” ಎಂದು ಹೇಳುವ ಮೂಲಕ ಸೇನೆಯನ್ನು ರಾಜಕೀಯಕ್ಕೆ ಬಳಸಿಕೊಂಡಿದ್ದರು. ಈ ಕುರಿತು ವಿಚಾರಣೆ ನಡೆಸಿದ ಚುನಾವಣಾ ಆಯೋಗ ಮೇ 4ರಂದು ಇದು ನೀತಿ ಸಂಹಿತೆಯ ಉಲ್ಲಂಘನೆಯಲ್ಲ ಎಂದು ಕ್ಲೀನ್ ಚಿಟ್ ನೀಡಿತ್ತು.

ಅದು, ಹೀಗೆ ಮೋದಿಯವರಿಗೆ ಕೊಟ್ಟ ಆರನೇ ಕ್ಲಿನ್‍ಚಿಟ್ ಆಗಿತ್ತು. ಇದಕ್ಕೂ ಮೊದಲು ಅವರು ನಾಂದೇಡ್‍ನಲ್ಲಿ ಮಾಡಿದ್ದ ಭಾಷಣದಲ್ಲಿ “ಕಾಂಗ್ರೆಸ್ ಒಂದು ಮುಳುಗುತ್ತಿರುವ ಟೈಟಾನಿಕ್” ಎಂದು ಉಲ್ಲೇಖಿಸಿದ್ದು ಸಹಾ ನೀತಿ ಸಂಹಿತೆ ಉಲ್ಲಂಘನೆಯಲ್ಲ ಎಂದು ಆಯೋಗ ಅಭಿಪ್ರಾಯ ಪಟ್ಟಿತ್ತು. ಏಪ್ರಿಲ್ 1ನೇ ತಾರೀಕು ವಾದ್ರಾದಲ್ಲಿ ಭಾಷಣ ಮಾಡುತ್ತಾ ರಾಹುಲ್ ಗಾಂಧಿ ಅಲ್ಪಸಂಖ್ಯಾತರು (ಮುಸ್ಲಿಂ) ಹೆಚ್ಚಾಗಿರುವ ಕೇರಳದ ವಯನಾಡಿನಲ್ಲಿ ಸ್ಪರ್ಧಿಸಿದ್ದನ್ನು ಮೋದಿ ಧಾರ್ಮಿಕ ತುಲನೆಯಲ್ಲಿ ಮಾತಾಡಿದ್ದಕ್ಕೂ ಆಯೋಗ ಕ್ಲೀನ್ ಚಿಟ್ ನೀಡಿತ್ತು. ಜೊತೆಗೆ,`ಮೊದಲ ಬಾರಿಗೆ ಮತ ಚಲಾಯಿಸುತ್ತಿರುವವರು ತಮ್ಮ ಮೊದಲ ಮತವನ್ನು ಪುಲ್ವಾಮಾದಲ್ಲಿ ಹುತಾತ್ಮರಾದವರಿಗೆ ಸಲ್ಲಿಸಲಾರರೆ?’ ಎಂದು ಮಾಡಿದ್ದ ಮೋದಿ ಭಾಷಣಕ್ಕೂ ಕ್ಲೀನ್‍ಚಿಟ್ ಪ್ರಾಪ್ತವಾಗಿತ್ತು.

ಮೋದಿಯವರು ಮಾಡಿದ ಭಾಷಣಗಳಿಗೆ ಸಂಬಂಧಿಸಿದ ಲಾವಸಾ ಅವರ ಭಿನ್ನಾಭಿಪ್ರಾಯದ ಟಿಪ್ಪಣಿಗಳನ್ನು ಕೋರಿರುವ ಪುಣೆ ಮೂಲದ ಆರ್‌ಟಿಐ ಕಾರ್ಯಕರ್ತ ವಿಹಾರ್ ದೃವೆಗೆ ನಿರಾಕರಿಸಿದೆ. ಮತ್ತು “ಯಾವುದೇ ವ್ಯಕ್ತಿಯ ಜೀವ ಅಥವಾ ದೈಹಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಅಥವಾ ಕಾನೂನು ಜಾರಿ ಅಥವಾ ಭದ್ರತಾ ಉದ್ದೇಶಗಳಿಗಾಗಿ ವಿಶ್ವಾಸದಿಂದ ನೀಡಲಾದ ಮಾಹಿತಿ ಅಥವಾ ಸಹಾಯದ ಮೂಲವನ್ನು ಗುರುತಿಸುವಂತಹ ಮಾಹಿತಿಯನ್ನು ಬಹಿರಂಗಪಡಿಸುವುದನ್ನು ವಿನಾಯಿತಿ ನೀಡುವ” ಆರ್‌ಟಿಐ ಕಾಯ್ದೆಯ ಒಂದು ವಿಭಾಗವನ್ನು ಚುನಾವಣಾ ಆಯೋಗ ಉಲ್ಲೇಖಿಸಿದೆ.

ಈ ಕುರಿತು ಪತ್ರಕರ್ತ ರವಿ ನಾಯರ್ ರವರು “ಚುನಾವಣಾ ಆಯೋಗ ಹೇಳುತ್ತಿರುವುದುನ್ನು ಸರಳೀಕರಿಸುವುದಾರೆ, ಮೋದಿ ಮತ್ತು ಷಾ ಅವರ ಮಾದರಿ ನೀತಿ ಸಂಹಿತೆ ಉಲ್ಲಂಘನೆಗಳಗೆ ಆಯೋಗ ಕೊಟ್ಟ ವೈಟ್‌ವಾಶ್ ಕುರಿತು ಲವಾಸಾ ಅವರ ಭಿನ್ನಾಭಿಪ್ರಾಯದ ಟಿಪ್ಪಣಿ ಪ್ರಕಟವಾದರೆ, ಸಂಬಂಧಪಟ್ಟ ಪಕ್ಷಗಳು ಅವನ ಜೀವಕ್ಕೆ ಅಪಾಯವನ್ನುಂಟು ಮಾಡಬಹುದು. ವಾವ್ ಎಂದು ವ್ಯಂಗ್ಯವಾಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಓಹ್! ವಿಷಯ ಹೀಗಿದೆ. ತಮ್ಮ ಜೀವಗಳಿಗೆ ಅಪಾಯ ಆಡಬಹುದು ಎಂದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿಲ್ಲ ಎಂದು ಆಯುಕ್ತರು ತಿಳಿಸಿದ್ದಾರೆ. ಭಲೆ ಭಲೆ.‌ಇಂಥಹ ಮಹನೀಯರು ಆಯುಕ್ತರಾಗಿ ನೇಮಕವಾಗಿದ್ದು ಯಾರ ಯಶಸ್ಸಿಗೆ ಎಂದು ಈಗ ಅರ್ಥ ಆಗುತ್ತಿದೆ.

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...