ಶುಕ್ರವಾರ (ಅ.1) ಬೆಳಿಗ್ಗೆ ದೆಹಲಿಯ ವಾಯುಮಾಲಿನ್ಯದ ಮಟ್ಟವು ವಿಶ್ವ ಆರೋಗ್ಯ ಸಂಸ್ಥೆಯು ಸೂಚಿಸಿದ ‘ಸುರಕ್ಷಿತ’ ಮಿತಿಗಿಂತ ಸುಮಾರು 14 ಪಟ್ಟು ಹೆಚ್ಚಾಗಿತ್ತು ಎಂದು ದಿ ಹಿಂದೂ ವರದಿ ಮಾಡಿದೆ.
ಪಟಾಕಿ ನಿಷೇಧಿಸಿದ್ದರೂ, ದೀಪಾವಳಿ ಹಿನ್ನೆಲೆ ಗುರುವಾರ ತಡರಾತ್ರಿಯವರೆಗೆ ನಗರದಾದ್ಯಂತ ಜನರು ಪಟಾಕಿ ಸಿಡಿಸಿದ್ದಾರೆ. ಪರಿಣಾಮ ವಾಯುಮಾಲಿನ್ಯ ಮಟ್ಟ ವಿಶ್ವದಲ್ಲೇ ಅತೀ ಹೆಚ್ಚಿನ ಮಟ್ಟಕ್ಕೆ ಹೋಗಿತ್ತು. ಗುರುವಾರ ರಾತ್ರಿ ರಾಷ್ಟ್ರ ರಾಜಧಾನಿಯ ಜನರು ಆಚರಿಸಿರುವುದು ಕಳೆದ ಮೂರು ವರ್ಷಗಳಲ್ಲೇ ಅತ್ಯಂತ ಮಲಿನ ಅಥವಾ ಕಲುಷಿತಗೊಂಡ ದೀಪಾವಳಿಯನ್ನು ಎಂದು ವರದಿ ತಿಳಿಸಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಹಿತಿಯ ಪ್ರಕಾರ, ಶುಕ್ರವಾರ ಬೆಳಗ್ಗೆ 8 ಗಂಟೆಯ ಹೊತ್ತಿಗೆ ದೆಹಲಿಯಲ್ಲಿ PM2.5 (Key indicator of Air Quality) ಸರಾಸರಿ ಸಾಂದ್ರತೆಯು 209.3 μg/m3 (Micrograms Per cubic metre of air) ಆಗಿತ್ತು. ಬಳಿಕ 9 ಗಂಟೆಯ ಹೊತ್ತಿಗೆ ಅದು 362ಕ್ಕೆ ತಲುಪಿತ್ತು. 0.0025 mm ಗಿಂತ ಚಿಕ್ಕದಾದ ಉಸಿರಾಟದ ಗಾಳಿಯ ಕಣಗಳನ್ನು PM2.5 ಸೂಚಿಸುತ್ತದೆ.
ಪಿಟಿಐ ಪ್ರಕಾರ, ಬೆಳಿಗ್ಗೆ 7 ಗಂಟೆಯ ಹೊತ್ತಿಗೆ ಆನಂದ್ ವಿಹಾರ್‌ನಲ್ಲಿ ವಾಯು ಗುಣಮಟ್ಟ ಸೂಚ್ಯಂಕ ಮೌಲ್ಯ 395 ಅನ್ನು ದಾಖಲಿಸಿದರೆ, ಜಹಾಂಗೀರ್ಪುರಿಯಲ್ಲಿ 390 ಮತ್ತು ದ್ವಾರಕಾದಲ್ಲಿ 376 ಮತ್ತು ಅಯಾ ನಗರದಲ್ಲಿ 352 ದಾಖಲಾಗಿದೆ ಎಂದು ದಿ ಹಿಂದೂ ವರದಿ ಮಾಡಿದೆ.
ದೆಹಲಿಯ ವಾಯು ಗುಣಮಟ್ಟ PM2.5 ಮಾನದಂಡ ಪ್ರಕಾರ 24 ಗಂಟೆಗಳಲ್ಲಿ ಸುರಕ್ಷಿತ ಸಾಂದ್ರತೆ
60μg/m3 ಇರಬೇಕು. 15 μg/m3 ಸಾಂದ್ರತೆಯು ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಉತ್ತಮವಾದ್ದು. ಆದರೆ, ದೆಹಲಿಯ ವಾಯ ಗುಣಮಟ್ಟ 209.3 μg/m3ಗೆ ತಲುಪಿತ್ತು.
ಇದನ್ನೂ ಓದಿ : ಸಿಪಿಐ(ಎಂ) ಸಂಸದರಿಗೆ ‘ಫ್ಯಾಸಿಸಂ ವಿರೋಧಿ’ ಸಭೆಗೆ ತೆರಳಲು ಅನುಮತಿ ನಿರಾಕರಿಸಿದ ಕೇಂದ್ರ ಸರ್ಕಾರ!


