ಕೇಂದ್ರ ಸರ್ಕಾರದ ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳ ವಿರುದ್ಧ ತಿರುಗಿಬಿದ್ದಿರುವ ರೈತರ ದೆಹಲಿ ಚಲೋ ಹೋರಾಟ 7ನೇ ದಿನಕ್ಕೆ ಕಾಲಿಟ್ಟಿದೆ. ರೈತರ ಈ ದಿಟ್ಟ ಹೋರಾಟಕ್ಕೆ ದೇಶ-ವಿದೇಶಗಳಿಂದಲೂ ಬೆಂಬಲದ ಮಹಾಪೂರ ಹರಿದುಬರುತ್ತಿದ್ದು ಇಂದು ಯುವ ದಲಿತ ನಾಯಕ, ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ರೈತರ ಪ್ರತಿಭಟನೆಗೆ ಧುಮುಕಿದ್ದಾರೆ.
मोदी जी, मासूम बच्चें और बूढ़ी दादियां भी सड़क पर उतर चुकी हैं। कितनी लाठियां बरसाओगे। ये लाठियां हमारी हड्डियां तोड़ सकती हैं पर हौसला नहीं। किसानों से नहीं जीत पाएंगे। किसान विरोधी कानूनों को वापस ले लीजिए। किसान आंदोलन को हमारा पूर्ण समर्थन है। @NarendraModi pic.twitter.com/GPgfnGBhmx
— Chandra Shekhar Aazad (@BhimArmyChief) November 27, 2020
ದೆಹಲಿ-ಉತ್ತರಪ್ರದೇಶ ಗಡಿ ಗಾಜಿಪುರ್-ಗಾಜಿಯಾಬಾದ್‌ನಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಚಂದ್ರಶೇಖರ್ ಆಜಾದ್ ಸೇರಿಕೊಂಡಿದ್ದಾರೆ. “ಮೋದಿಜಿ, ಮುಗ್ಧ ಮಕ್ಕಳು ಮತ್ತು ವೃದ್ಧ ಅಜ್ಜಿಯರು ಕೂಡ ರಸ್ತೆಗಿಳಿದಿದ್ದಾರೆ. ಅವರನ್ನು ಬಡಿಯಲು ನೀವು ಎಷ್ಟು ಕೋಲುಗಳನ್ನು ತರಬಹುದು? ಆ ಕೋಲುಗಳು ನಮ್ಮ ಎಲುಬುಗಳನ್ನು ಮುರಿಯಬಹುದು ಆದರೆ ನಮ್ಮ ರೈತರ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ. ರೈತ ವಿರೋಧಿ ಕಾನೂನುಗಳನ್ನು ಹಿಂತೆಗೆದುಕೊಳ್ಳಿ. ರೈತರ ಚಳವಳಿಗೆ ನಮ್ಮ ಸಂಪೂರ್ಣ ಬೆಂಬಲವಿದೆ” ಎಂದು ಆಜಾದ್ ಘೋಷಿಸಿದ್ದಾರೆ.
Delhi: Bhim Army Chief Chandrashekhar Azad joins farmers' protest at Ghazipur-Ghaziabad (Delhi-UP) border. pic.twitter.com/swTxbVbiwt
— ANI (@ANI) December 1, 2020
ನಿನ್ನೆ ಆಮ್ ಆದ್ಮಿ ಪಕ್ಷ ಕೂಡ ರೈತರ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿತ್ತು. ಎಲ್ಲೆಲ್ಲಿ ರೈತರು ಪ್ರತಿಭಟನೆ ನಡೆಸಲು ಬಯಸುತ್ತಾರೋ ಅಲ್ಲೆಲ್ಲಾ ಅನುಮತಿ ನೀಡಬೇಕು ಮತ್ತು ರೈತರಿಗೆ ಊಟ-ಉಳಿಯಲು ವ್ಯವಸ್ಥೆ ಮಾಡಬೇಕು ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸೂಚಿಸಿದ್ದರು. “ರೈತರ ಪರವಾಗಿ ನಿಲ್ಲುವುದನ್ನೇ ರಾಜಕಾರಣವೆನ್ನುವುದಾದರೆ, ಹೌದು ನಾವು ತಪ್ಪಿತಸ್ಥರೇ ಏನೀಗ ಎಂದು ಶಾಸಕ ರಾಘವ್ ಚಡ್ಡಾ’ ಘೋಷಿಸಿದ್ದರು.
ಇದನ್ನೂ ಓದಿ: ರೈತರ ಪರವಾಗಿ ನಿಲ್ಲುವುದನ್ನೇ ರಾಜಕಾರಣವೆನ್ನುವುದಾದರೆ, ಹೌದು ನಾವು ತಪ್ಪಿತಸ್ಥರೇ..!


