ಇಂಗ್ಲೇಂಡ್‌ನ ಲೇಬರ್ ಪಕ್ಷದ ತನ್ಮಂಜಿತ್ ಸಿಂಗ್ ಧೇಸಿ ನೇತೃತ್ವದ 36 ಸಂಸದರ ಬಣವು ಭಾರತದಲ್ಲಿ ನಡೆಯುತ್ತಿರುವ ರೈತರ ಆಂದೋಲನವನ್ನು ಬೆಂಬಲಿಸಿದ್ದು, ಇಂಗ್ಲೇಂಡ್ ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್ ರಾಬ್ ಅವರನ್ನು ಭಾರತದೊಂದಿಗೆ ಚರ್ಚಿಸುವಂತೆ ಪತ್ರ ಬರೆದಿದ್ದಾರೆ.
ಭಾರತದಲ್ಲಿ ಇತ್ತೀಚೆಗೆ ಜಾರಿಗೆ ಬಂದ ಕೃಷಿ ಕಾನೂನುಗಳು ರೈತರು ಮತ್ತು ಕೃಷಿಯನ್ನು ಅವಲಂಬಿಸಿರುವವರನ್ನು ಶೋಷಿಸುತ್ತದೆ ಎಂದಿರುವ ಸಂಸದರ ತಂಡವು, ಕಾನೂನಿನ ವಿರುದ್ಧ ಭಾರತದ ಮೇಲೆ ಒತ್ತಡ ಹೇರಲು ಡೊಮಿನಿಕ್ ರಾಬ್ ಅವರನ್ನು ಕೇಳಿಕೊಂಡಿದ್ದಾರೆ.
ಇದನ್ನೂ ಓದಿ: ’ಐಕ್ಯ ಹೋರಾಟ ವೇದಿಕೆ’ಯಿಂದ ರೈತರ ಮೇಲಿನ ದೌರ್ಜನ್ಯ ವಿರೋಧಿಸಿ ರಾಜ್ಯವ್ಯಾಪಿ ಜನಾಂದೋಲನ ಹಾಗೂ ಅನಿರ್ದಿಷ್ಟಾವಧಿ ಪ್ರತಿಭಟನೆ
ಕಳೆದ ತಿಂಗಳು ಹಲವಾರು ಸಂಸದರು ಮೂರು ಹೊಸ ಕೃಷಿ ಕಾನೂನುಗಳ ಪರಿಣಾಮಗಳ ಬಗ್ಗೆ ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ಗೆ ಪತ್ರ ಬರೆದಿದ್ದಾರೆ ಎಂದು ಸಂಸದ ತನ್ಮಂಜಿತ್ ಸಿಂಗ್ ಧೇಸಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
Farmers from the Punjab and across India are peacefully protesting against #FarmersBill2020.
Following our October meet, further discussions and given strong sense of injustice felt by many constituents, cross-party letter from British MPs has been sent to the Foreign Secretary. pic.twitter.com/l8aZWiekor
— Tanmanjeet Singh Dhesi MP (@TanDhesi) December 4, 2020
“ಕಾನೂನು ಭಾರತದ ರಾಜ್ಯಗಳ ಮೇಲೆ ಭಾರಿ ಪರಿಣಾಮ ಬೀರಲಿದೆ. ಅಲ್ಲದೆ ಇದು ಇಂಗ್ಲೇಂಡಿನಲ್ಲಿರುವ ಸಿಖ್ ಮತ್ತು ಪಂಜಾಬ್‌ಗೆ ಸಂಬಂಧಿಸಿರುವವರಿಗೆ ನಿರ್ದಿಷ್ಟ ಕಾಳಜಿಯ ವಿಷಯವಾಗಿದೆ” ಎಂದು ಅವರು ಹೇಳಿದ್ದಾರೆ.
Many constituents, especially those emanating from the #Punjab, have contacted MPs to express solidarity with the farmers opposing #FarmersBill2020 in #India.
Dozens of MPs duly deliberated and signed a cross-party letter, seeking justice for the peacefully protesting farmers. pic.twitter.com/90OFP0ks2s
— Tanmanjeet Singh Dhesi MP (@TanDhesi) December 4, 2020
“ಪಂಜಾಬಿ ಸಮುದಾಯವು ರಾಜ್ಯದ ಆರ್ಥಿಕ ರಚನೆಯ ಬೆನ್ನೆಲುಬಾಗಿ ವ್ಯಾಪಕವಾಗಿ ಗುರುತಿಸಲ್ಪಟ್ಟಿದ್ದು, ರೈತರ ಕಳವಳಗಳು ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯದಲ್ಲಿ ಪ್ರಬಲ ವಿಷಯವಾಗಿದೆ. ಕಾನೂನಿಂದಾಗಿ ಪಂಜಾಬ್‌ನಲ್ಲಿ ಪರಿಸ್ಥಿತಿ ಹದಗೆಡುತ್ತಿದ್ದು, ಈ ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ತುರ್ತಾಗಿ ಚರ್ಚಿಸಬೇಕು” ಎಂದು ಡೊಮಿನಿಕ್ ರಾಬ್ ಅವರೊಂದಿಗೆ ಪತ್ರವು ಒತ್ತಾಯಿಸಿದೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾನೂನುಗಳನ್ನು ವಾಪಸ್ ಪಡೆಯಬೇಕೆಂದು ದೆಹಲಿಯ ಗಡಿಯಲ್ಲಿ ಕಳೆದ 10 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಕೇಂದ್ರ ಸರ್ಕಾರ ನಡೆಸಿರುವ ನಾಲ್ಕು ಸುತ್ತಿನ ಮಾತುಕತೆ ಮುರಿದು ಬಿದ್ದಿದ್ದು, ಆಕ್ರೋಶ ಭರಿತ ರೈತರು ಇನ್ನು ಮುಂದೆ ಕೇಂದ್ರ ಸರ್ಕಾರದೊಂದಿಗೆ ಮಾತುಕತೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ರೈತರು ತಮ್ಮ ಹೋರಾಟವನ್ನು ತೀವ್ರಗೊಳಿಸಲು ತೀರ್ಮಾನಿಸಿದ್ದು ಡಿಸೆಂಬರ್ 8 ರಂದು ಮಂಗಳವಾರ ಭಾರತ್ ಬಂದ್‌ಗೆ ಕರೆ ನೀಡಿದ್ದಾರೆ.
ಇದನ್ನೂ ಓದಿ: ರೈತರನ್ನು ರಾಷ್ಟ್ರ ವಿರೋಧಿಗಳಂತೆ ಬಿಂಬಿಸಬೇಡಿ: ಮಾಧ್ಯಮಗಳಿಗೆ ಎಡಿಟರ್ಸ್ ಗಿಲ್ಡ್ ಸಲಹೆ


