Homeಕರೋನಾ ತಲ್ಲಣಶಾಲಾ ಶುಲ್ಕ ಮನ್ನಾ ಮಾಡುವ ಪಿಐಎಲ್ ತಿರಸ್ಕರಿಸಿದ ದೆಹಲಿ ಹೈಕೋರ್ಟ್

ಶಾಲಾ ಶುಲ್ಕ ಮನ್ನಾ ಮಾಡುವ ಪಿಐಎಲ್ ತಿರಸ್ಕರಿಸಿದ ದೆಹಲಿ ಹೈಕೋರ್ಟ್

ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಮತ್ತು ನ್ಯಾಯಮೂರ್ತಿ ಪ್ರತೀಕ್ ಜಲನ್ ಅವರ ಅಧ್ಯಕ್ಷತೆಯ ನ್ಯಾಯಾಲಯದ ವಿಭಾಗೀಯ ನ್ಯಾಯಪೀಠವು ಅರ್ಜಿಯನ್ನು ಮುಂದುವರಿಸಲು ನಿರಾಕರಿಸಿತು.

- Advertisement -
- Advertisement -

ಕೊರೊನಾ ಸಾಂಕ್ರಾಮಿಕದ ನಡುವೆ ಆಗಸ್ಟ್ ತಿಂಗಳಿಗೆ ಶಾಲೆಗಳು ವಿಧಿಸುವ ಬೋಧನಾ ಶುಲ್ಕವನ್ನು ಮನ್ನಾ ಮಾಡುವಂತೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ತಿರಸ್ಕರಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ. ಎನ್. ಪಟೇಲ್ ಮತ್ತು ನ್ಯಾಯಮೂರ್ತಿ ಪ್ರತೀಕ್ ಜಲನ್ ಅಧ್ಯಕ್ಷತೆಯ ನ್ಯಾಯಾಲಯದ ವಿಭಾಗೀಯ ನ್ಯಾಯಪೀಠವು ಅರ್ಜಿಯನ್ನು ಮುಂದುವರಿಸಲು ನಿರಾಕರಿಸಿತು.

“ನ್ಯಾಯಾಲಯದ ಕೆಲಸ ಕಾರ್ಯಗಳ ಬಗ್ಗೆ ಅಗೌರವ ತೋರುವ ಅರ್ಜಿ” ಎಂದು ಇಬ್ಬರ ನ್ಯಾಯಾಧೀಶರ ಪೀಠವು ಹೇಳಿದ್ದು, ಈ ಅರ್ಜಿ ವಜಾಗೊಳ್ಳುವ ಬಗ್ಗೆ ಮೌಲ್ಯಮಾಪನ ಮಾಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಅದರ ನಂತರ ಅರ್ಜಿದಾರ ಮತ್ತು ವಕೀಲ ಎನ್. ಪ್ರದೀಪ್ ಶರ್ಮಾ ಅವರು ಈ ಅರ್ಜಿಯನ್ನು ಹಿಂಪಡೆಯಲು ಕೋರಿದರು ಮತ್ತು ಕ್ಷಮೆಯಾಚಿಸಿದರು.

ಪ್ರತಿಕೂಲ ಪರಿಸ್ಥಿತಿಯ ಸಂದರ್ಭದಲ್ಲಿ, ಆನ್‌ಲೈನ್ ತರಗತಿಗಳನ್ನು ಒದಗಿಸಲು ಶಾಲೆಯು ಬೋಧನಾ ಶುಲ್ಕವನ್ನು ವಿಧಿಸುತ್ತದೆ ಎಂಬ ಷರತ್ತು ಶಾಲೆಯ ಪ್ರವೇಶ ನಮೂನೆಯಲ್ಲಿ ಇಲ್ಲ ಎಂದು ಅರ್ಜಿಯಲ್ಲಿ ವಾದ ಮಾಡಲಾಗಿತ್ತು.

“ಶಾಲಾ ನಿಯಮಗಳ ಕೈಪಿಡಿ ಪ್ರಕಾರ ನಮೂದಿಸದೆ, ನಿಜವಾದ ಶಿಕ್ಷಣವನ್ನು ನೀಡದೆ ಬೋಧನಾ ಶುಲ್ಕವನ್ನು ಒತ್ತಾಯಿಸುವುದು ಒಪ್ಪಂದದ ವಿಷಯದಲ್ಲಿ ಮತ್ತು ನೈಸರ್ಗಿಕ ನ್ಯಾಯದ ತತ್ವಕ್ಕೆ ವಿರುದ್ಧವಾಗಿ ಉಲ್ಲಂಘನೆಯಾಗಿದೆ” ಎಂದು ಅರ್ಜಿದಾರರು ಹೇಳಿದರು.

ಈ ವರ್ಷದ ಏಪ್ರಿಲ್‌ನಲ್ಲಿ, ಲಾಕ್‌ಡೌನ್ ಅವಧಿಯಲ್ಲಿ (ನರೇಶ್ ಕುಮಾರ್ ವರ್ಸಸ್ ಡಿಒಇ) ಶಾಲೆಗಳಿಗೆ ಬೋಧನಾ ಶುಲ್ಕ ಸೇರಿದಂತೆ ಯಾವುದೇ ಶುಲ್ಕವನ್ನು ಪಾವತಿಸುವುದರಿಂದ ಸಂಪೂರ್ಣ ವಿನಾಯಿತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತು.

ಮುಖ್ಯ ನ್ಯಾಯಮೂರ್ತಿ ಪಟೇಲ್ ಮತ್ತು ನ್ಯಾಯಮೂರ್ತಿ ಜಲನ್ ಅವರನ್ನು ಒಳಗೊಂಡ ಹೈಕೋರ್ಟ್‌ನ ವಿಭಾಗೀಯ ಪೀಠವು “ಶಾಲೆಗಳು ಆನ್‌ಲೈನ್ ಶಿಕ್ಷಣವನ್ನು ಒದಗಿಸುತ್ತಿರುವ ಸಂದರ್ಭದಲ್ಲಿ ಬೋಧನಾ ಶುಲ್ಕವನ್ನು ಪಡೆದುಕೊಳ್ಳುವುದನ್ನು ಲಾಕ್‌ಡೌನ್ ಅವಧಿಯಲ್ಲಿ ನಾವು ಒಪ್ಪಲು ಸಾಧ್ಯವಿಲ್ಲ. ಬೋಧನಾ ಶುಲ್ಕಕ್ಕೆ ವಿನಾಯಿತಿ ನೀಡಬೇಕು” ಎಂಬ ಅರ್ಜಿಯನ್ನು ತಿರಸ್ಕರಿಸಿದೆ. 

“ಆನ್ಲೈನ್ ನಲ್ಲಿ ಶಿಕ್ಷಣ ಒದಗಿಸುತ್ತಿರುವವರೆಗೂ ಶಾಲೆಗಳು ಅದಕ್ಕಾಗಿ ಬೋಧನಾ ಶುಲ್ಕವನ್ನು ಪಡೆಯಬಹುದು” ಎಂದು ಕೂಡ ವಿಭಾಗೀಯ ಪೀಠ ತಿಳಿಸಿದೆ.


ಇದನ್ನೂ ಓದಿ: ಮಂದಿರ ಭವ್ಯವಾಗಬಹುದು; ಪವಿತ್ರವಾಗಿರುವುದಿಲ್ಲ: ಜಿ ರಾಜಶೇಖರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾಗರಿಕ ಸಂಸ್ಥೆಗಳು, ಕಾಳಜಿಯುಳ್ಳ ನಾಗರಿಕರಿಂದ ಚುನಾವಣಾ ಆಯೋಗಕ್ಕೆ...

0
ರಾಜಸ್ಥಾನದಲ್ಲಿ ಭಾನುವಾರ (ಏ.21) ನಡೆದ ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸುಳ್ಳು ಸುದ್ದಿ ಮತ್ತು ದ್ವೇಷ ಹರಡಿದ್ದಾರೆ. ಈ ಹಿನ್ನೆಲೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಾಗರಿಕ ಸಂಸ್ಥೆಗಳು...