ಬಿಜೆಪಿ ಸಂಸದ ಮನೋಜ್ ತಿವಾರಿ ವಿರುದ್ಧ ಕ್ರಿಮಿನಲ್ ಮಾನಹಾನಿಗೆ ಸಂಬಂಧಿಸಿದಂತೆ ಆಪ್ ಮುಖಂಡ ಮನಿಶ್ ಸಿಸೋಡಿಯಾ ಪ್ರಕರಣ ದಾಖಲಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಸಮನ್ಸ್ ನೀಡಲಾಗಿತ್ತು. ಇದನ್ನು ರದ್ದುಗೊಳಿಸುವಂತೆ ಮನೋಜ್ ತಿವಾರಿ ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಮನವಿಯನ್ನು ಕೋರ್ಟ್ ಇಂದು ತಿರಸ್ಕರಿಸಿದೆ.
ಮನೋಜ್ ತಿವಾರಿ ತಮ್ಮ ವಿರುದ್ಧ ಆಧಾರರಹಿತ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದಾರೆ ಎಂದು ಅವರ ಮೇಲೆ ಆಮ್ ಆದ್ಮಿ ಪಕ್ಷದ ಮುಖಂಡ ಹಾಗೂ ದೆಹಲಿಯ ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಮಾನಹಾನಿ ಪ್ರಕರಣ ದಾಖಲಿಸಿದ್ದರು.
ಇದನ್ನೂ ಓದಿ: ಟಿಆರ್‌ಪಿ ಹಗರಣ: BARC ನ ಮಾಜಿ ಮುಖ್ಯ ನಿರ್ವಹಣಾಧಿಕಾರಿ ರೊಮಿಲ್ ರಾಮ್‌ಗರ‍್ಹಿಯಾ ಬಂಧನ
ದೆಹಲಿ ಸರ್ಕಾರದ ‘ಶಾಲಾ ತರಗತಿ ಕೊಠಡಿಗಳ’ ಯೋಜನೆಗೆ ಸಂಬಂಧಿಸಿದಂತೆ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದಕ್ಕಾಗಿ ಸಂಸದರಾದ ಮನೋಜ್ ತಿವಾರಿ, ಹನ್ಸ್ ರಾಜ್ ಹನ್ಸ್ ಮತ್ತು ಪ್ರವೀಶ್ ವರ್ಮಾ, ಶಾಸಕರಾದ ಮಂಜಿಂದರ್ ಸಿಂಗ್ ಸಿರ್ಸಾ ಮತ್ತು ವಿಜೇಂದರ್ ಗುಪ್ತಾ ಮತ್ತು ಬಿಜೆಪಿ ವಕ್ತಾರ ಹರೀಶ್ ಖುರಾನಾ ವಿರುದ್ಧ ಮನಿಶ್ ಸಿಸೋಡಿಯಾ ದೂರು ದಾಖಲಿಸಿದ್ದರು.
ಈ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯಕ್ಕೆ ಹಾಜರಾದ ನಂತರ ಆರೋಪಿಗಳಿಗೆ ಜಾಮೀನು ನೀಡಲಾಗಿತ್ತು.
ಇದನ್ನೂ ಓದಿ: ರೈತರು ಮಾತು ಕೇಳಲು ಇನ್ನೆಷ್ಟು ರೈತರ ಬಲಿಬೇಕು?: ಕೃಷಿ ಮಸೂದೆ ಹರಿದು ಆಕ್ರೋಶ ಹೊರಹಾಕಿದ…
ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಮತ್ತು ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಐಪಿಸಿಯ ಸೆಕ್ಷನ್ 499 ಮತ್ತು 500 ರ ಸೆಕ್ಷನ್ 49 ಮತ್ತು 35 ಮತ್ತು ಸಿಆರ್‌ಪಿಸಿಯ ಸೆಕ್ಷನ್ 200 ರ ಅಡಿಯಲ್ಲಿ ದೂರು ದಾಖಲಿಸಲಾಗಿದೆ.
ಈ ಪ್ರಕರಣದಲ್ಲಿ ಅಪರಾಧ ಸಾಬೀತಾದರೆ ಗರಿಷ್ಟ 2 ವರ್ಷಗಳವರೆಗೆ ಶಿಕ್ಷೆಗೆ ಗುರಿಯಾಗಬಹುದು. ಹಾಗಾಗಿ ತಮ್ಮ ವಿರುದ್ಧ ನೀಡಲಾಗಿರುವ ಸಮನ್ಸ್ ಅನ್ನು ರದ್ದುಗೊಳಿಸುವಂತೆ ಮನೋಜ್ ತಿವಾರಿ ಮನವಿ ಸಲ್ಲಿಸಿದ್ದರು.
ಇದನ್ನೂ ಓದಿ: ಜಿಯೋದಿಂದ ಹೊರನಡೆದ 26 ಲಕ್ಷ ಗ್ರಾಹಕರು: ರೈತರ ಬಾಯ್ಕಾಟ್ ಕರೆಗೆ Jio ಕಂಗಾಲು!


