ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮಂಗಳವಾರ ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡಿದ್ದು, ರಾಜ್ಯದಲ್ಲಿ ಸುಮಾರು 30 ಆಮ್ ಆದ್ಮಿ ಪಕ್ಷದ ನಾಯಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಪಕ್ಷದ ನಾಯಕ ಪ್ರತಾಪ್ ಸಿಂಗ್ ಬಾಜ್ವಾ ಅವರ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ. “ಕಳೆದ ಮೂರು ವರ್ಷಗಳಿಂದ ಬಾಜ್ವಾ ಅದೇ ಹೇಳಿಕೆಯನ್ನು ನೀಡುತ್ತಿದ್ದಾರೆ ಮತ್ತು ಅವರು ಅದನ್ನು ಹೇಳಿಕೊಳ್ಳುತ್ತಲೇ ಇರಬಹುದು” ಎಂದು ಅವರು ಹೇಳಿದ್ದಾರೆ. ದೆಹಲಿಯಲ್ಲಿ
“30-40 ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಹಾರಲಿದ್ದಾರೆ ಎಂದು ಅವರು ಹೇಳುತ್ತಲೇ ಇದ್ದಾರೆ… ದೆಹಲಿಯಲ್ಲಿ ಅವರಿಗೆ ಎಷ್ಟು ಶಾಸಕರಿದ್ದಾರೆ ಎಂದು ಎಣಿಸಲು ನಾನು ಪ್ರತಾಪ್ ಸಿಂಗ್ ಬಾಜ್ವಾ ಅವರನ್ನು ಕೇಳುತ್ತೇನೆ” ಎಂದು ಅವರು ವ್ಯಂಗ್ಯವಾಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಫೆಬ್ರವರಿ 5 ರಂದು ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಹೀನಾಯ ಸೋಲಿನ ಕೆಲವೇ ದಿನಗಳ ನಂತರ, ಕಾಂಗ್ರೆಸ್ ಪಕ್ಷವೂ ಎಎಪಿಯ 30 ಶಾಸಕರೊಂದಿಗೆ ಸಂಪರ್ಕದಲ್ಲಿ ಇದೆ ಎಂದು ಹೇಳಿತ್ತು. ಇದರ ನಂತರ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಸಿಎಂ ಮಾನ್ ಅವರು ಸಭೆ ನಡೆಸಿದ್ದಾರೆ. ಈ ಸಭೆಯ ನಂತರ ಮುಖ್ಯಮಂತ್ರಿ ಹೇಳಿಕೆ ನೀಡಿದ್ದಾರೆ.
ಕಪುರ್ತಲಾ ಹೌಸ್‌ನಲ್ಲಿ ನಡೆದ ಸಭೆಯಲ್ಲಿ ಎಲ್ಲಾ 91 ಪಂಜಾಬ್ ಎಎಪಿ ಶಾಸಕರು ಮತ್ತು ದೆಹಲಿಯ ಮಾಜಿ ಸಚಿವ ಮನೀಶ್ ಸಿಸೋಡಿಯಾ ಸೇರಿದಂತೆ ಪಕ್ಷದ ಉನ್ನತ ನಾಯಕರು ಭಾಗವಹಿಸಿದ್ದರು. ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಾನ್, ಕೇಜ್ರಿವಾಲ್ ಮತ್ತು ಸಿಸೋಡಿಯಾ ದೆಹಲಿ ಚುನಾವಣೆಗೆ ನೀಡಿದ ಕೊಡುಗೆಗಳಿಗಾಗಿ ಪಂಜಾಬ್‌ನ ಎಎಪಿ ಘಟಕಕ್ಕೆ ಕೃತಜ್ಞತೆ ಸಲ್ಲಿಸಿದ್ದು, ಧನ್ಯವಾದಗಳನ್ನು ಅರ್ಪಿಸಿದ್ದಾರೆ ಎಂದು ಹೇಳಿದ್ದಾರೆ.
#WATCH | Delhi: Punjab CM Bhagwant Mann says, "… I would ask Pratap Singh Bajwa to count how many MLAs they have in Delhi… The law and order of Punjab is better than most states… We have to put in extra effort being a border state, and we are doing that…" pic.twitter.com/HsMLsAeETF
— ANI (@ANI) February 11, 2025
“ಪಂಜಾಬ್‌ನಲ್ಲಿ ಎಎಪಿ ಸರ್ಕಾರವು ಮೂಲಸೌಕರ್ಯಗಳನ್ನು ನಿರ್ಮಿಸಲು ಮತ್ತು ರಾಜ್ಯದಲ್ಲಿ ಟೋಲ್‌ಗಳ ಹೊರೆಯನ್ನು ಕಡಿಮೆ ಮಾಡಲು ಕೆಲಸ ಮಾಡುತ್ತಿದೆ. ನಾವು ನಮ್ಮ ಕೆಲಸವನ್ನು ಚುರುಕುಗೊಳಿಸಬೇಕಾಗಿದೆ. ದೆಹಲಿಯಲ್ಲಿ ಎಎಪಿ ಕೈಗೊಂಡ ಕೆಲಸವು ಕಳೆದ 75 ವರ್ಷಗಳಲ್ಲಿ ಎಂದಿಗೂ ಮಾಡಲಾಗಿಲ್ಲ. ಗೆಲುವು ಮತ್ತು ಸೋಲು ಆಟದ ಭಾಗವಾಗಿದೆ” ಎಂದು ಅವರು ಹೇಳಿದ್ದಾರೆ.
“ಪಂಜಾಬ್‌ನಲ್ಲಿ ದೆಹಲಿಯ ಅನುಭವವನ್ನು ನಾವು ಬಳಸುತ್ತೇವೆ. ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ. ನಮ್ಮ ಪಕ್ಷವು ತನ್ನ ಕೆಲಸಕ್ಕೆ ಹೆಸರುವಾಸಿಯಾಗಿದೆ. ಇಂದಿನ ಸಭೆಯಲ್ಲಿ, ಮುಂಬರುವ ಎರಡು ವರ್ಷಗಳಲ್ಲಿ, ಪಂಜಾಬ್ ಅನ್ನು ಇಡೀ ರಾಷ್ಟ್ರವು ನೋಡುವ ಮಾದರಿಯನ್ನಾಗಿ ಮಾಡುತ್ತೇವೆ ಎಂದು ನಿರ್ಧರಿಸಲಾಯಿತು. ಪಂಜಾಬ್ ಯಾವಾಗಲೂ ಎಲ್ಲಾ ಹೋರಾಟಗಳಲ್ಲಿ ಮುಂಚೂಣಿಯಲ್ಲಿದೆ” ಎಂದು ಅವರು ಪ್ರತಿಪಾದಿಸಿದ್ದಾರೆ.
ಪ್ರಸ್ತುತ, ಆಮ್ ಆದ್ಮಿ ಪಕ್ಷ (ಎಎಪಿ) ಅಧಿಕಾರದಲ್ಲಿರುವ ಏಕೈಕ ರಾಜ್ಯ ಪಂಜಾಬ್ ಆಗಿದೆ. ಪಂಜಾಬ್‌ನಲ್ಲಿ 2022 ರ ವಿಧಾನಸಭಾ ಚುನಾವಣೆಯಲ್ಲಿ, ಎಎಪಿ 117 ಸ್ಥಾನಗಳಲ್ಲಿ 92 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್‌ನಿಂದ ಅಧಿಕಾರವನ್ನು ಕಸಿದುಕೊಂಡಿತು. ಕಾಂಗ್ರೆಸ್ 18 ಸ್ಥಾನಗಳನ್ನು ಗೆದ್ದರೆ, ಶಿರೋಮಣಿ ಅಕಾಲಿ ದಳವು ಮೂವರು ಶಾಸಕರನ್ನು ಹೊಂದಿದೆ.
ಇದನ್ನೂಓದಿ: ಮಣಿಪುರ ಹಿಂಸಾಚಾರಕ್ಕೆ ಬಿರೇನ್ ಸಿಂಗ್ ಮಾತ್ರವಲ್ಲ, ಮೋದಿ, ಅಮಿತ್ ಶಾ ಕೂಡಾ ಕಾರಣ – ಡಿಎಂಕೆ ಸಂಸದೆ ಕನಿಮೊಳಿ
ಮಣಿಪುರ ಹಿಂಸಾಚಾರಕ್ಕೆ ಬಿರೇನ್ ಸಿಂಗ್ ಮಾತ್ರವಲ್ಲ, ಮೋದಿ, ಅಮಿತ್ ಶಾ ಕೂಡಾ ಕಾರಣ – ಡಿಎಂಕೆ ಸಂಸದೆ ಕನಿಮೊಳಿ


