CAA, NRC ರದ್ದುಪಡಿಸುವಂತೆ, ಬಡ್ತಿ ಮೀಸಲಾತಿ ಮೂಲಭೂತ ಹಕ್ಕೆಂದು ಪರಿಗಣಿಸುವಂತೆ ಒತ್ತಾಯಿಸಿ ಭೀಮ್ ಆರ್ಮಿ ಕರೆ ನೀಡಿದ್ದ ರಾಷ್ಟ್ರವ್ಯಾಪಿ ಬಂದ್ ಬೆಂಬಲಿಸಿ ಸಾವಿರಾರು ಮಹಿಳಾ ಪ್ರತಿಭಟನಾಕಾರರು ನಿನ್ನೆ ರಾತ್ರಿ ದೆಹಲಿಯ ಜಾಫ್ರಾಬಾದ್ ಮೆಟ್ರೋ ನಿಲ್ದಾಣದ ಬಳಿ ಧರಣಿ ಆರಂಭಿಸಿದ್ದಾರೆ.
ನಿನ್ನೆ ರಾತ್ರಿ ಜಾಫ್ರಾಬಾದ್ ಮೆಟ್ರೋ ನಿಲ್ದಾಣದ ಬಳಿ ಸುಮಾರು 200 ಮಹಿಳೆಯರು ಧರಣಿ ಆರಂಭಿಸಿದರು. ಭಾರಿ ಪೊಲೀಸ್ ಉಪಸ್ಥಿತಿಯ ಮಧ್ಯೆ ಭಾರತದ ತ್ರಿವರ್ಣ ಧ್ವಜಗಳನ್ನು ಹಿಡಿದಿದ್ದ ಅವರು ಅಜಾದಿ ಘೋಷಣೆಗಳನ್ನು ಕೂಗುತ್ತಿದ್ದಂತೆ ಹೆಚ್ಚಿನ ಮಹಿಳೆಯರು ಮತ್ತು ಮಕ್ಕಳು ಅವರೊಂದಿಗೆ ಸೇರಿಕೊಂಡಿದ್ದರಿಂದ ರಾತ್ರಿಯಿಡೀ ಜನಸಂದಣಿ ಹೆಚ್ಚಾಯಿತು.
ಪ್ರತಿಭಟನೆಯಿಂದಾಗಿ ಇಂದು ಬೆಳಿಗ್ಗೆ ಮೆಟ್ರೋ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಯಿತು. ಈಶಾನ್ಯ ದೆಹಲಿಯ ಜಾಫ್ರಾಬಾದ್‌ನಲ್ಲಿ ವಾಹನ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದ್ದು, ರಸ್ತೆ ತಡೆಯನ್ನು ತೆರವುಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
Security Update
Entry & exit of Jaffrabad have been closed. Trains will not be halting at this station.
— Delhi Metro Rail Corporation (@OfficialDMRC) February 23, 2020
ಸುಪ್ರೀಂ ಕೋರ್ಟ್ ಈ ತಿಂಗಳ ಆರಂಭದಲ್ಲಿ “ಸರ್ಕಾರಿ ಉದ್ಯೋಗಗಳಲ್ಲಿ ಬಡ್ತಿ ಮೀಸಲಾತಿ ಮೂಲಭೂತ ಹಕ್ಕಲ್ಲ” ಎಂದು ಹೇಳಿತ್ತು. ಇದನ್ನು ವಿರೋಧಿಸಿ ಸುಪ್ರೀಂ ಕೋರ್ಟಿನಲ್ಲಿ ಭೀಮ್ ಆರ್ಮಿಯ ಚಂದ್ರಶೇಖರ್ ಅಜಾದ್ ಮೇಲ್ಮನವಿ ಸಲ್ಲಿಸಿದ್ದು ಇಂದು ರಾಷ್ಟ್ರಧ್ಯಂತ ಬಂದ್ ಕರೆ ನೀಡಿದ್ದಾರೆ.
ತೋಳುಗಳ ಮೇಲೆ ನೀಲಿ ಬಣ್ಣದ ಬ್ಯಾಂಡ್‌ಗಳೊಂದಿಗೆ, ನಿನ್ನೆ ರಾತ್ರಿ ಜಾಫ್ರಾಬಾದ್ ಮೆಟ್ರೋ ನಿಲ್ದಾಣದ ಬಳಿ ಸೇರಿದ ಮಹಿಳೆಯರು ಜೈ ಭೀಮ್ (ಲಾಂಗ್ ಲೈವ್ ಭೀಮ್) ಘೋಷಣೆಗಳನ್ನು ಕೂಗಿ ಭೀಮ್ ಆರ್ಮಿಯ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ.


