Homeಮುಖಪುಟಕಾಡುಗಳ್ಳ ದಿ. ವೀರಪ್ಪನ್ ಪುತ್ರಿ ಬಿಜೆಪಿಗೆ ಸೇರ್ಪಡೆ

ಕಾಡುಗಳ್ಳ ದಿ. ವೀರಪ್ಪನ್ ಪುತ್ರಿ ಬಿಜೆಪಿಗೆ ಸೇರ್ಪಡೆ

- Advertisement -
- Advertisement -

ತಮಿಳುನಾಡಿನ ಕೃಷ್ಣಗಿರಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಹತ್ಯೆಗೀಡಾದ ಕಾಡುಗಳ್ಳ ಎಂದೇ ಕುಖ್ಯಾತನಾದ ದಿವಗಂತ ವೀರಪ್ಪನ್ ಅವರ ಪುತ್ರಿ ವಿದ್ಯಾರಾಣಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಪಿಎಂಕೆ ಸೇರಿದಂತೆ ವಿವಿಧ ಪಕ್ಷಗಳಿಂದ ಹೊರಬಂದ ಸುಮಾರು 1,000 ಸದಸ್ಯರೊಂದಿಗೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಪಿ ಮುರಳೀಧರ್ ರಾವ್ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರಿದ್ದಾರೆ.

ನನ್ನ ತಂದೆಯ ಮಾರ್ಗಗಳು ತಪ್ಪಾಗಿರಬಹುದು, ಆದರೆ ಅವನು ಯಾವಾಗಲೂ ಬಡವರಿಗಾಗಿ, ದೀನ ದಲಿತರಿಗಾಗಿ ಬದುಕುತ್ತಿದ್ದರು. ಅದೇ ರೀತಿ ಪ್ರಧಾನಿ ನರೇಂದ್ರ ಮೋದಿಯವರ ಕಲ್ಯಾಣ ಯೋಜನೆಗಳಿಂದ ತಾನು ಪ್ರೇರಿತನಾಗಿದ್ದೆ, ಅದು ಪಕ್ಷಕ್ಕೆ ಸೇರಲು ಪ್ರೇರೇಪಿಸಿತು ಎಂದು ವಕೀಲೆಯು ಆಗಿರುವ 29 ವರ್ಷದ ವಿದ್ಯಾರಾಣಿ ತಿಳಿಸಿದ್ದಾರೆ.

“ಎರಡು ವರ್ಷಗಳ ಹಿಂದೆ ಕೇಂದ್ರ ಸಚಿವ ಪೊನ್ ರಾಧಾಕೃಷ್ಣನ್ ಅವರೊಂದಿಗಿನ ಭೇಟಿಯ ನಂತರ, ಅವರು ಪಕ್ಷಕ್ಕೆ ಸೇರಲು ಮತ್ತು ಜನರಿಗೆ ಸೇವೆ ಸಲ್ಲಿಸಲು ನನ್ನನ್ನು ಕೇಳಿದ್ದರು. ಅದು ಈಗ ಕಾರ್ಯಗತಗೊಳ್ಳುತ್ತಿದೆ. ಜಾತಿ ಮತ್ತು ಧರ್ಮವನ್ನು ಲೆಕ್ಕಿಸದೆ ಜನರನ್ನು ಶಿಕ್ಷಣದ ಮೂಲಕ ಉನ್ನತಿಗೇರಿಸಬೇಕೆಂಬುದು ನನ್ನ ಬಯಕೆಯಾಗಿದೆ ಎಂದು ಅವರು ಹೇಳಿದ್ದಾರೆ. ಅವರು ಕಳೆದ ಒಂದು ವರ್ಷದಿಂದ ಕೃಷ್ಣಗಿರಿನಲ್ಲಿ ಎಲ್ಲಾ ಹಂತದ ವಿದ್ಯಾರ್ಥಿಗಳಿಗಾಗಿ ಬೋಧನಾ ಕೇಂದ್ರವನ್ನು ನಡೆಸುತ್ತಿದ್ದಾರೆ.

“ನಾವು ಅವಳನ್ನು ಸರಿಯಾಗಿ ಬಳಸಿಕೊಳ್ಳುತ್ತೇವೆ. ಅವರ ಹುದ್ದೆಯನ್ನು ನಂತರ ನಿರ್ಧರಿಸಲಾಗುವುದು ”ಎಂದು ರಾಜ್ಯ ಕಾರ್ಯದರ್ಶಿ ಕೆ.ಎಸ್.ನರೇಂದ್ರನ್ ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಮತಾ ಕುರಿತು ಆಕ್ಷೇಪಾರ್ಹ ಟೀಕೆ; ಬಿಜೆಪಿ ಅಭ್ಯರ್ಥಿ ಅಭಿಜಿತ್ ಗಂಗೋಪಾಧ್ಯಾಯ ವಿರುದ್ಧ ಚುನಾವಣಾ ಆಯೋಗಕ್ಕೆ...

0
ಸಾರ್ವಜನಿಕ ರ‍್ಯಾಲಿಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಆಕ್ಷೇಪಾರ್ಹ ಟೀಕೆ ಮಾಡಿದ್ದಾರೆ ಎಂದು ಆರೋಪಿಸಿ ತಮ್ಲುಕ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಭಿಜಿತ್ ಗಂಗೋಪಾಧ್ಯಾಯ ವಿರುದ್ಧ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶುಕ್ರವಾರ ಚುನಾವಣಾ...