ಕೊರೋನಾ ವೈರಸ್‌ನ ಡೆಲ್ಟಾ ರೂಪಾಂತರಿ ತಳಿಯು ದೇಶದಲ್ಲಿ ಆತಂಕವನ್ನು ಸೃಷ್ಟಿಸಿದ್ದು ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್‌ಗೆ ಮೊದಲ ಸಾವು ಸಂಭವಿಸಿದೆ. 80 ವರ್ಷ ವಯಸ್ಸಿನ ವೃದ್ಧೆಯೊಬ್ಬರು ರತ್ನಗಿರಿ ಜಿಲ್ಲೆಯಲ್ಲಿ ಡೆಲ್ಟಾ ಪ್ಲಸ್ ವೈರಸ್ ಸೋಂಕಿಗೆ ಮೃತಪಟ್ಟಿದ್ದಾರೆ. ಮೃತ ಮಹಿಳೆ ವಿವಿಧ ಖಾಯಿಲೆಗಳಿಂದ ನರಳುತ್ತಿದ್ದರು ಎಂದು ಆಸ್ಪತ್ರೆ ಹೇಳಿದೆ.
ಇದುವರೆಗೆ ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್‌ಗೆ ಸಂಬಂಧಿಸಿದ 21 ಪ್ರಕರಣಗಳು ದಾಖಲಾಗಿವೆ. ಹೊಸ ಕೊರೋನಾ ರೂಪಾಂತರಿ ತಳಿಯ ವೈರಸ್‌ಗೆ ಮೊದಲು ಸಾವು ಸಂಭವಿಸಿದ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರ ಅನ್‌ಲಾಕ್ ಪ್ರಕ್ರಿಯೆಗಳನ್ನು ನಿಧಾನಗೊಳಿಸಲು ಮುಂದಾಗಿದ್ದು ಕೆಲವು ನಿರ್ಬಂಧಗಳನ್ನು ಮುಂದುವರೆಸುವುದಾಗಿ ಹೇಳಿದೆ.
ಶಾಪಿಂಗ್ ಮಾಲ್‌ಗಳು, ಬಾರ್‌ಗಳನ್ನು ತೆರೆಯಲು ಅವಕಾಶವಿರುವುದಿಲ್ಲ. ಸಂಜೆ 4 ಗಂಟೆಯವರೆಗೆ ಮಾತ್ರ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶವನ್ನು ನೀಡಲಾಗಿದೆ ಎಂದು ಮಹಾರಾಷ್ಟ್ರ ಸರ್ಕಾರ ತಿಳಿಸಿದೆ. ಥಾಣೆ ಮತ್ತು ಪುಣೆ ನಗರಗಳಲ್ಲಿ ಕಠಿಣ ನಿರ್ಬಂಧಗಳು ಮುಂದುವರೆಯಲಿವೆ ಎಂದು ಮಹಾರಾಷ್ಟ್ರ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಇದುವರೆಗೆ ಭಾರತದಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್‌ಗೆ 3 ಜನರು ಮೃತಪಟ್ಟಿದ್ದು ಮಧ್ಯಪ್ರದೇಶದಲ್ಲಿ 2 ಮತ್ತು ಮಹಾರಾಷ್ಟ್ರದಲ್ಲಿ 1 ಸಾವು ಸಂಭವಿಸಿದೆ.
ಕರ್ನಾಟಕ ಸೇರಿದಂತೆ ಭಾರತದ ಇತರ ರಾಜ್ಯಗಳಲ್ಲೂ ಡೆಲ್ಟಾ ಪ್ಲಸ್ ಕರೊನಾ ರೂಪಾಂತರಿ ತಳಿಯ ವೈರಸ್ ಪತ್ತೆಯಾಗಿದ್ದು ವೈದ್ಯರು ಮತ್ತು ತಜ್ಞರು ಹೊಸ ಮಾದರಿಯ ರೂಪಾಂತರಿ ವೈರಸ್ ಕುರಿತು ಕಠಿಣ ಎಚ್ಚರಿಕೆಗಳನ್ನು ನೀಡುತ್ತಿದ್ದಾರೆ.
ಇದನ್ನೂ ಓದಿ : ನೆರೆಹೊರೆ ನಿವಾಸಿಗಳಿಗೆ ಬೆದರಿಕೆ ಆರೋಪ: ನಟಿ ಪಾಯಲ್ ರೋಹ್ಟಗಿ ಬಂಧನ